Car Subsidy Application-₹3.0 ಲಕ್ಷ ಸಬ್ಸಿಡಿಯಲ್ಲಿ ಕಾರು ಖರೀದಿ ಮಾಡಲು ಅರ್ಜಿ

ಕರ್ನಾಟಕ ವೀರಶೈವ ಅಂಗಾಯತ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್(taxi subsidy scheme in karnataka) ವಾಹನಗಳನ್ನು ಖರೀದಿ ಮಾಡಲು ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇದರ ಕುರಿತು ಈ ಅಂಕಣದಲ್ಲಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.



ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ 2025-26 ನೇ ಸಾಲಿನ ಸ್ವಾವಲಂಬಿ ಸಾರಥಿ ಯೋಜನೆಯಡಿ (swavalambi sarati) ಅರ್ಹ ಫಲಾನುಭವಿಗಳಿಗೆ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್ ವಾಹನವನ್ನು ಖರೀದಿ ಮಾಡಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಸಬ್ಸಿಡಿಯಲ್ಲಿ ವಾಹನವನ್ನು ಖರೀದಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ.

ಈ ಅಂಕಣದಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯಡಿ(Karnataka car subsidy)ವಾಹನ ಖರೀದಿಗೆ ಸಬ್ಸಿಡಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Last Date for Online Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:


ವೀರಶೈವ ಅಂಗಾಯತ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್(Car Subsidy Scheme) ವಾಹನಗಳನ್ನು ಖರೀದಿ ಮಾಡಲು ಸಹಾಯಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಪ್ರಮುಖ ದಿನಾಂಕಗಳ ವಿವರ ಹೀಗಿದೆ:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31 ಜುಲೈ 2025

Taxi subsidy-ಸಹಾಯಧನ ಮೊತ್ತ ಎಷ್ಟು?


ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅರ್ಹ ಫಲಾನುಭವಿಗಳಿಗೆ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್ ವಾಹನಗಳನ್ನು ಖರೀದಿ ಮಾಡಲು ಶೇ.50 ರಷ್ಟು ಅಥವಾ ಗರಿಷ್ಟ ₹3.00 ಲಕ್ಷಗಳವರೆಗೆ ಸಬ್ಸಿಡಿಯನ್ನು ಮಂಜೂರು ಮಾಡಿ ಬ್ಯಾಂಕ್‌ ಸಹಯೋಗದೊಂದಿಗೆ ಅಭ್ಯರ್ಥಿಗಳಿಗೆ ಸಾಲವನ್ನು ಒದಗಿಸಲಾಗುತ್ತದೆ.

Car subsidy-ಯಾವೆಲ್ಲ ನಾಲ್ಕು ಚಕ್ರದ ವಾಹನಗಳನ್ನು ಖರೀದಿ ಮಾಡಬಹುದು?


ಟ್ಯಾಕ್ಸಿ
ಸರಕು ಸಾಗಣಿಕೆ ವಾಹನ
ನಾಲ್ಕು ಚಕ್ರಗಳ ವಾಹನ
ಆಟೋ

Four wheeler subsidy scheme- ಯಾರೆಲ್ಲ ಅರ್ಜಿ ಸಲ್ಲಿಸಬಹುದು?


ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಸಬ್ಸಿಡಿಯಲ್ಲಿ ವಾಹನವನ್ನು ಖರೀದಿ ಮಾಡಲು ನಿಗಮದಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ವಿವರ ಈ ಕೆಳಗಿನಂತಿದೆ.

1) ಅರ್ಜಿದಾರರು ವೀರಶೈವ-ಲಿಂಗಾಯತ ನಿಗಮಕ್ಕೆ ಸೇರಿದವರಾಗಿರಬೇಕು.
2) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
3) ಅಭ್ಯರ್ಥಿಯ ವಯಸ್ಸು 21 ವರ್ಷದಿಂದ 45 ವರ್ಷದ ಒಳಗಿರಬೇಕು.
4) ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಭಾಗದಲ್ಲಿ ರೂ 98,000/- ಹಾಗೂ ನಗರ ಪ್ರದೇಶದಲ್ಲಿ ರೂ 1,20,000/- ಮಿತಿಯಲ್ಲಿರಬೇಕು.
7) ಅರ್ಜಿದಾರರ ಕುಟುಂಬದ ಸದಸ್ಯರು ರಾಜ್ಯ ಮತ್ತು ಕೇಂದ್ರ ಸರಕಾರಿದ ನೌಕರಿಯಲ್ಲಿರಬಾರದು.
6) ಲಘು ವಾಹನದ ಡ್ರೈವಿಂಗ್ ಲೆಸೈನ್ಸ್ ಅನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
8) ಈ ಹಿಂದೆ ನಿಗಮದಿಂದ ಈ ಯೋಜನೆಯಡಿ ಸೌಲಭ್ಯವನ್ನು ಪಡೆದಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

Swavalambi sarati online application-ಅರ್ಜಿ ಸಲ್ಲಿಸುವುದು ಹೇಗೆ:


ಅರ್ಹ ಮತ್ತು ಆಸಕ್ತ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನೇರವಾಗಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Swavalambi sarati Online Application Link-ಅರ್ಜಿ ಸಲ್ಲಿಸುವ ವಿಧಾನ ಹೇಗೆ?


ಅರ್ಹ ಅರ್ಜಿದಾರರ ಈ ಕೆಳಗಿನ ವಿಧಾನವನ್ನು ಅನುಸರಿಸಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ನಲ್ಲೇ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊಟ್ಟಮೊದಲಿಗೆ Apply Now ಇಲ್ಲಿ ಕ್ಲಿಕ್ ಮಾಡಿಸೇವಾ ಸಿಂಧು ಪೋರ್ಟಲ್ ಅನ್ನು ಭೇಟಿ ಮಾಡಬೇಕು.

Step-2: ತದನಂತರ ಈ ವೆಬ್ಸೈಟ್ ಗೆ ಪ್ರಥಮ ಬಾರಿಗೆ ಭೇಟಿ ಮಾಡುತ್ತಿರುವವರು ಈ ಪೇಜ್ ನಲ್ಲಿ ಕಾಣುವ "Register Here" ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿಯನ್ನು ಸಕ್ರಿಯಗೊಳಿಸಬೇಕು. ಬಳಿಕ ಬಳಕೆದಾರ ಐಡಿ ಮತು OTP ಅನ್ನು ನಮೂದಿಸಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

Swavalambi sarati documents- ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು:

1) ಅಭ್ಯರ್ಥಿಯ ಆಧಾರ್ ಕಾರ್ಡ ಪ್ರತಿ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
4) ಪೋಟೋ
5) ಡ್ರೈವಿಂಗ್ ಲೈಸೆನ್ಸ್
6) ರೇಶನ್ ಕಾರ್ಡ ಪ್ರತಿ.
7) ಮೊಬೈಲ್ ನಂಬರ್

Loan sanction process-ಸಾಲ ಮಂಜೂರಾತಿಯ ವಿಧಾನ:

ಜಿಲ್ಲಾ ವ್ಯವಸ್ಥಾಪಕರು ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಮಾನ್ಯ ಶಾಸಕರು/ಜಿಲ್ಲಾ ಪಂಚಾಯತ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇವರುಗಳ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯ ಮುಂದೆ ಮಂಡಿಸಿ, ಆಯಾ ಜಿಲ್ಲೆಗೆ/ವಿಧಾನಸಭಾ ಕ್ಷೇತ್ರಕ್ಕೆ ನಿಗಧಿಪಡಿಸಿದ ಗುರಿಯಂತೆ ಆಯ್ಕೆ ಸಮಿತಿಯ ಮೂಲಕ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ವಾಹನ ಖರೀದಿಸುವ ದರಪಟ್ಟಿಯೊಂದಿಗೆ ಸಾಲ ಮಂಜೂರಾತಿಗಾಗಿ ರಾಷ್ಟ್ರೀಕೃತ ಬ್ಯಾಂಕ್‌ ಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ.

ಸದರಿ ಬ್ಯಾಂಕ್‌ ಶಾಖೆಯವರು ಈ ಅರ್ಜಿಗಳನ್ನು ಪರಿಶೀಲಿಸಿ ಸಾಲ ಮಂಜೂರಾತಿಗೆ ಪರಿಗಣಿಸಿ ಸಾಲ ಮಂಜೂರು ಮಾಡಿ, ನಿಗಮಗಳಿಂದ ಸಹಾಯಧನ ಬಿಡುಗಡೆಗೆ ಕೋರಿರುವ ಪ್ರಸ್ತಾವನೆಗಳನ್ನು ಮಂಜೂರಾತಿ ಪತ್ರ/ಕ್ಲೈಮ್‌ ಪತ್ರದೊಂದಿಗೆ ಆನ್‌ ಲೈನ್‌ ನಲ್ಲಿ ಜಿಲ್ಲಾ ವ್ಯವಸ್ಥಾಪಕರಿಗೆ ಕಳುಹಿಸಲಾಗುತ್ತದೆ.

Swavalambi Sarati Helpline-ಸ್ವಾವಲಂಬಿ ಸಾರಥಿ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಗಮದ ಸಹಾಯವಾಣಿ ಸಂಖ್ಯೆ- 8022865522/9900012351

Lingayat Nigama-ಲಿಂಗಾಯತ ನಿಗಮದ ವೆಬ್ಸೈಟ್- Click Here
Lingayat Nigama Website-ಅಧಿಕೃತ ಜಾಲತಾಣ- Click Here
Previous Post Next Post