Best Savings Plan- ತಿಂಗಳಿಗೆ ಕೇವಲ ₹1,000 ಉಳಿತಾಯ ಮಾಡಿ ₹6.5 ಲಕ್ಷ ಹಣ ಗಳಿಸಿ

Best Savings Plan- ತಿಂಗಳಿಗೆ ಕೇವಲ ₹1,000 ಉಳಿತಾಯ ಮಾಡಿ ₹6.5 ಲಕ್ಷ ಹಣ ಗಳಿಸಿ

(SSY) ಯಡಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಪ್ರತಿ ರೂ ₹1,000/- ತಿಂಗಳು ರೂ ಉಳಿತಾಯ ಮಾಡಿ ₹6.5 ಲಕ್ಷ ಹಣ ಗಳಿಸಲು ಅವಕಾಶವಿದ್ದು ಇದರ ಕುರಿತು ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ 2015 ರಿಂದ ಕೇಂದ್ರ ಸರ್ಕಾರವು "ಸುಕನ್ಯಾ ಸಮೃದ್ಧಿ ಯೋಜನೆ/Sukanya Samriddhi Account"ಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಆರ್ಥಿಕ ಭದ್ರತೆ ಒದಗಿಸುವ ಗುರಿಯನ್ನು ಹೊಂದಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಸ್ತುತ ಈ ಅಂಕಣದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ(Post Office Savings Plan) ಯಾರೆಲ್ಲ ಖಾತೆಯನ್ನು ತೆರೆಯಬಹುದು? ಖಾತೆಯನ್ನು ತೆರೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಬಡ್ಡಿದರ ಎಷ್ಟು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Who Can Apply for Sukanya Samriddhi Account-ಸುಕನ್ಯಾ ಸಮೃದ್ಧಿ ಯೋಜನೆಯಡಿ ಯಾರೆಲ್ಲ ಖಾತೆ ತೆರೆಯಬಹುದು:

10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಅವಳ ಪೋಷಕರು ಖಾತೆಯನ್ನು ತೆರೆಯಲು ಅರ್ಹರು.

ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು.

ಒಂದು ಕುಟುಂಬದಲ್ಲಿ 2 ಜನ ಹೆಣ್ಣು ಮಕ್ಕಳ ಹೆಸರಿಗೆ ಖಾತೆಯನ್ನು ತೆರೆಯಲು ಅವಕಾಶವಿರುತ್ತದೆ.

Sukanya Samriddhi Account Application-ಖಾತೆಯನ್ನು ಎಲ್ಲಿ ತೆರೆಯಬೇಕು?

ಸುಕನ್ಯಾ ಸಮೃದ್ಧಿ ಯೋಜನೆಯಡಿ ಉಳಿತಾಯವನ್ನು ಮಾಡಲು ಆಸಕ್ತ ಅರ್ಜಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ನಿಗದಿತ ಮೊತ್ತವನ್ನು ಪಾವತಿ ಮಾಡಿ ಪ್ರತಿ ತಿಂಗಳು ಉಳಿತಾಯವನ್ನು ಈ ಯೋಜನೆಯ ಮೂಲಕ ಮಾಡಬಹುದು.

Sukanya Samriddhi Scheme Interest Rate-ಜನವರಿಯಲ್ಲಿ ಬಡ್ಡಿದರ ಹೆಚ್ಚಳ:

ಸುಕನ್ಯಾ ಸಮೃದ್ಧಿ ಯೋಜನೆಯಡಿ ಈ ಹಿಂದೆ ಕಡಿಮೆ ಬಡ್ಡಿಯನ್ನು ನೀಡಲಾಗುತ್ತಿತ್ತು ಪ್ರಸ್ತುತ ಈ ದರವನ್ನು ಶೇ 8.2% ಗೆ ಹೆಚ್ಚಳ ಮಾಡಿ ನೂತನ ಆದೇಶವನ್ನು ಕಳೆದ ಜನವರಿಯಲ್ಲಿ ಹೊರಡಿಸಲಾಗಿದೆ.

Required Documents-ಖಾತೆಯನ್ನು ತೆರೆಯಲು ಅವಶ್ಯಕ ದಾಖಲೆಗಳು:

ಸುಕನ್ಯಾ ಸಮೃದ್ಧಿ ಯೋಜನೆಯಡಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆದು ಹೂಡಿಕೆಯನ್ನು ಮಾಡಲು ಈ ಕೆಳಗೆ ತಿಳಿಸಿರುವ ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸುವುದು ಅವಶ್ಯಕವಾಗಿದೆ.

ಹೆಣ್ಣು ಮಗುವಿನ ಆಧಾರ್ ಕಾರ್ಡ/Aadhar

ಪೋಟೋ/Photo

ಜನನ ಪ್ರಮಾಣ ಪತ್ರ/Birth Certificate

ಪೋಷಕರ ಗುರುತಿನ ಚೀಟಿ/Parents Id

ಮೊಬೈಲ್ ನಂಬರ್/Mobile Number

Investment amount-ಎಷ್ಟು ಮೊತ್ತವನ್ನು ಹೂಡಿಕೆ ಮಾಡಬಹುದು?

ಒಂದು ವರ್ಷದಕ್ಕೆ ಈ ಯೋಜನೆಯಡಿ ಕನಿಷ್ಠ ರೂ 250/- ರಿಂದ ಗರಿಷ್ಠ ₹ 1.50 ಲಕ್ಷದ ವರೆಗೆ ಹೂಡಿಕೆಯನ್ನು ಮಾಡಲು ಅವಕಾಶವಿರುತ್ತದೆ.

Best Savings Plan In India-ತಿಂಗಳಿಗೆ ಕೇವಲ ₹1,000 ಉಳಿತಾಯ ಮಾಡಿ ₹6.5 ಲಕ್ಷ ಹಣ ಗಳಿಸಿ:

ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಗುವಿನ ಹೆಸರಿನಲ್ಲಿ ಅಂಚೆ ಇಲಾಖೆಯಲ್ಲಿ ಖಾತೆಯನ್ನು ತೆರೆದು ಕನಿಷ್ಠ 10 ವರ್ಷ ಅವಧಿಗೆ ಪ್ರತಿ ತಿಂಗಳು ರೂ 1,000/- ಹಣವನ್ನು ಉಳಿತಾಯ ಮಾಡಿ ಶೇ 8.2 ಬಡ್ಡಿದರವನ್ನು ಪಡೆಯುವುದರ ಮೂಲಕ 10 ವರ್ಷದವರಿಗೆ ಹೂಡಿಕೆ ಮಾಡಿ 10 ವರ್ಷದ ಬಳಿಕ ₹6.5 ಲಕ್ಷ ಹಣವನ್ನು ಪಡೆಯಲು ಅವಕಾಶವಿರುತ್ತದೆ.

Tax Free Investments-ತೆರಿಗೆ ವಿನಾಯಿತಿ ಸೌಲಭ್ಯವಿದೆ:

ಸುಕನ್ಯಾ ಸಮೃದ್ಧಿ ಯೋಜನೆಯಡಿ ಉಳಿತಾಯ ಮಾಡಿ ಕೊನೆಯಲ್ಲಿ ಪಡೆಯುವ ಮೊತ್ತಕ್ಕೆ ಕೇಂದ್ರ ಸರ್ಕಾರದಿಂದ ಆದಾಯ ತೆರಿಗೆಯಿಂದ ವಿನಾಯಿತಿ ಇರುವ ಕಾರಣ ಗ್ರಾಹಕರು ಈ ಮೊತ್ತಕ್ಕೆ ಆದಾಯ ತೆರಿಗೆ ಪಾವತಿಸಿರುವುದು ಅವಶ್ಯವಿರುವುದಿಲ್ಲ.

ಇನ್ನು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಲು ಇಲ್ಲಿ ಕ್ಲಿಕ್ ಮಾಡಿ-Click Here

ಅಥವಾ ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು(post office) ಭೇಟಿ ಮಾಡಿ ಈ ಯೋಜನೆಯ ಕುರಿತು ಮಾಹಿತಿಯನ್ನು ಪಡೆಯಬಹುದು.

Post a Comment

Previous Post Next Post

Top Post Ad

CLOSE ADS
CLOSE ADS
×