ಕೇಂದ್ರ ಸರ್ಕಾರ 2024ರಲ್ಲಿ ಘೋಷಿಸಿರುವ ಮಹತ್ವದ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯು (PM Surya Ghar: Muft Bijli Yojana) ಇತ್ತೀಚೆಗೆ ದೇಶದಾದ್ಯಾಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಯೋಜನೆಯ ಮೂಲಕ ಸರ್ಕಾರವು ಪ್ರತಿ ಮನೆಯ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಲು ಪ್ರೋತ್ಸಾಹಧನ ನೀಡುತ್ತಿದೆ ಮತ್ತು 20 ವರ್ಷಗಳ ವರೆಗೆ ಉಚಿತ ವಿದ್ಯುತ್ ಬಳಕೆ ಮಾಡುವ ಅವಕಾಶವನ್ನು ಕಲ್ಪಿಸಿದೆ.
ಯೋಜನೆಯ ಉದ್ದೇಶ ಮತ್ತು ಗುರಿ
ಈ ಯೋಜನೆಯ ಮುಖ್ಯ ಗುರಿ, ಮನೆ ಮಾಲೀಕರು ತಮ್ಮದೇ ಆದ ಚಾವಣಿಯ ಮೇಲೆ ಸೌರ ವಿದ್ಯುತ್ ಘಟಕ ಅಳವಡಿಸಿಕೊಂಡು ತಮ್ಮ ದಿನನಿತ್ಯದ ವಿದ್ಯುತ್ ಬಳಕೆಯನ್ನು ಸ್ವಯಂ ಪೂರೈಸುವುದು. ಇದರಿಂದ ವಿದ್ಯುತ್ ಬಿಲ್ಲಿನಲ್ಲಿ ಭಾರೀ ಉಳಿತಾಯವಾಗುವುದರ ಜೊತೆಗೆ ಪರಿಸರ ಸ್ನೇಹಿ ಶಕ್ತಿಯ ಬಳಕೆ ಹೆಚ್ಚಾಗುತ್ತದೆ.
ದೇಶದಾದ್ಯಾಂತ 1 ಕೋಟಿ ಮನೆಗಳಿಗೆ ಸೌರ ಘಟಕ ಅಳವಡಿಸುವ ಗುರಿ.
ಮನೆಗಳಿಗೆ 1-3 KW ಸಾಮರ್ಥ್ಯದ ಘಟಕಗಳು.
5 ವರ್ಷಗಳ ತಾಂತ್ರಿಕ ಉಚಿತ ನಿರ್ವಹಣೆ.
20 ವರ್ಷ ಉಚಿತ ವಿದ್ಯುತ್ ಪೂರೈಕೆ.
ಹೆಚ್ಚುವರಿ ವಿದ್ಯುತ್ ಮಾರಾಟದ ಮೂಲಕ ಆದಾಯ ಸಂಪಾದನೆ.
ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಯಡಿ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯುವ ಇಚ್ಛೆಯುಳ್ಳವರಿಗೆ ಮಹತ್ವದ ಮಾಹಿತಿ ಇಲ್ಲಿದೆ.
ಯೋಜನೆಯ ಪ್ರಮುಖ ಪ್ರಯೋಜನಗಳು
20 ವರ್ಷಗಳ ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ
ಸರಾಸರಿ ಬಳಕೆಗೆ ಶೂನ್ಯ ವಿದ್ಯುತ್ ಬಿಲ್ಲು
ಹೆಚ್ಚಾಗಿ ಉತ್ಪಾದಿತ ವಿದ್ಯುತ್ ಅನ್ನು ಡಿಸ್ಕಾಂಗೆ ಮಾರಾಟ ಮಾಡಬಹುದು
5 ವರ್ಷಗಳ ತಾಂತ್ರಿಕ ನಿರ್ವಹಣೆ ಉಚಿತ
ಸ್ಥಿರ ಬಳಕೆ ಮತ್ತು ದೀರ್ಘಾವಧಿ ಲಾಭ
₹30,000 ರಿಂದ ₹78,000 ವರೆಗೆ ಸರ್ಕಾರದಿಂದ ಸಬ್ಸಿಡಿ
ಘಟಕವಾರು ನಿರ್ಮಾಣ ವೆಚ್ಚ ಮತ್ತು ಸಬ್ಸಿಡಿ ವಿವರ
1 KW ಘಟಕ: ₹60,000 ರಿಂದ ₹80,000 ವರೆಗೆ ನಿರ್ಮಾಣ ವೆಚ್ಚವಾಗುವ 1 KW ಘಟಕದಿಂದ 100 ಯೂನಿಟ್ ಉತ್ಪಾದನೆ ಮಾಡಬಹುದು. ಇದಕ್ಕೆ ₹30,000 ಸರ್ಕಾರದಿಂದ ಸಹಾಯಧನ ಸಿಗಲಿದ್ದು; ವರ್ಷಕ್ಕೆ ₹9,600 ಉಳಿತಾಯವಾಗಲಿದೆ.
2 KW ಘಟಕ: ₹1,20,000 ರಿಂದ ₹1,60,000 ನಿರ್ಮಾಣವೆಚ್ಚವಾಗಲಿದ್ದು; ಇದರಿಂದ 200 ಯೂನಿಟ್ ಉತ್ಪಾದಿಸಬಹುದು. ₹60,000 ಸರ್ಕಾರದ ಸಬ್ಸಿಡಿ ದೊರೆಯುತ್ತದೆ. ವರ್ಷಕ್ಕೆ ₹21,600 ಉಳಿತಾಯವಾಗುತ್ತದೆ.
3 KW ಘಟಕ: ₹1,80,000 ರಿಂದ ₹2,40,000 ನಿರ್ಮಾಣ ವೆಚ್ಚವಾಗುವ ಈ ಘಟಕದಿಂದ 300 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು. ಸರ್ಕಾರ ₹78,000 ಸಹಾಯಧನ ನೀಡುತ್ತದೆ. ₹36,000 ವರೆಗೂ ವರ್ಷಕ್ಕೆ ಉಳಿತಾಯವಾಗುತ್ತದೆ.
ಆನ್‌ಲೈನ್ ಅರ್ಜಿ ಸಲ್ಲಿಸುವ ಸರಳ ಕ್ರಮ
ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಮನೆ ಮೇಲ್ಛಾವಣಿಯಲ್ಲಿ ಜಾಗ ಇರುವ ಮನೆ ಮಾಲೀಕರು ಆಧಾರ್ ಕಾರ್ಡ್, ಇತ್ತೀಚಿನ ವಿದ್ಯುತ್ ಬಿಲ್ ಹಾಗೂ ಬ್ಯಾಂಕ್ ಪಾಸ್ ಬುಕ್’ನೊಂದಿಗೆ ಈ ಕೆಳಗಿನ ವಿಧಾನ ಅನುಸರಿಸಿ ಸರಳವಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: pmsuryaghar.gov.in
Apply for Rooftop Solar ಆಯ್ಕೆ ಮಾಡಿ.
ನಿಮ್ಮ ರಾಜ್ಯ ಮತ್ತು ವಿದ್ಯುತ್ ಪೂರೈಕೆ ಸಂಸ್ಥೆ ಆಯ್ಕೆಮಾಡಿ.
ಗ್ರಾಹಕ ಐಡಿ (Consumer Number) ನಮೂದಿಸಿ.
ಅಗತ್ಯ ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅರ್ಜಿ ಸಲ್ಲಿಸಿ, ಗುರುತಿನ ಸಂಖ್ಯೆ ಪಡೆಯಿರಿ.
ಅರ್ಜಿ ಸ್ಥಿತಿಯನ್ನು ವೆಬ್‌ಸೈಟ್‌ನಲ್ಲಿ ನೋಡಬಹುದು.
ನೋಂದಣಿ ನಂತರ ನಿಮ್ಮ ಅರ್ಜಿ ಪರಿಶೀಲನೆಗೆ ಸಂಬAಧಿತ ಡಿಸ್ಕಾಂ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯು ನಿಮ್ಮನ್ನು ಸಂಪರ್ಕಿಸಿ ಸ್ಥಳ ಪರಿಶೀಲನೆ ನಡೆಸುತ್ತಾರೆ. ಘಟಕ ಅಳವಡಿಕೆ ಪೂರ್ಣಗೊಂಡ ಬಳಿಕ, ಸಬ್ಸಿಡಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಸೂರ್ಯ ಘರ್ ಯೋಜನೆಯು ಕೇವಲ ವಿದ್ಯುತ್ ಪೂರೈಕೆ ಯೋಜನೆಯಷ್ಟೆ ಅಲ್ಲ; ಅದು ನಿಮ್ಮ ಕುಟುಂಬದ ಆರ್ಥಿಕ ಭದ್ರತೆಗೂ ದಾರಿ ತೆಗೆಯುತ್ತದೆ. ಕಡಿಮೆ ಹೂಡಿಕೆ, ಉಚಿತ ವಿದ್ಯುತ್, ಸಬ್ಸಿಡಿ ಸಹಾಯ ಹಾಗೂ ಪರಿಸರ ಸ್ನೇಹಿ ಶಕ್ತಿಯ ಬಳಕೆ… ಇವೆಲ್ಲವೂ ಈ ಯೋಜನೆಯನ್ನು ಅತ್ಯುತ್ತಮ ಆಯ್ಕೆಯಾಗಿ ಮಾಡುತ್ತವೆ.
ಅರ್ಜಿ ಲಿಂಕ್ : Apply ಮಾಡಿ