PM-Kisan 20th Installment- ರೈತರ ಖಾತೆಗೆ ಈ ವಾರದಲ್ಲಿ ಪಿಎಂ ಕಿಸಾನ್ ₹2,000 ಹಣ ಜಮಾ | ಯಾರಿಗೆಲ್ಲ ಸಿಗಲಿದೆ ಹಣ? ಸಂಪೂರ್ಣ ಮಾಹಿತಿ ಇಲ್ಲಿದೆ

PM-Kisan 20th Installment- ರೈತರ ಖಾತೆಗೆ ಈ ವಾರದಲ್ಲಿ ಪಿಎಂ ಕಿಸಾನ್ ₹2,000 ಹಣ ಜಮಾ | ಯಾರಿಗೆಲ್ಲ ಸಿಗಲಿದೆ ಹಣ? ಸಂಪೂರ್ಣ ಮಾಹಿತಿ ಇಲ್ಲಿದೆ

ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಗುರಿಯೊಂದಿಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಜಾರಿಗೆ ತಂದಿದ್ದು, ಇದೀಗ 20ನೇ ಕಂತಿನ ಹಣ ಜಮಾ ಪ್ರಕ್ರಿಯೆ ಆರಂಭವಾಗುತ್ತಿದೆ. ಈ ವಾರದಲ್ಲಿ ಫಲಾನುಭವಿ ರೈತರ ಖಾತೆಗೆ ₹2,000 ಹಣ ನೇರವಾಗಿ ಜಮಾಗೊಳ್ಳಲಿದೆ.

ಪ್ರತಿ ವರ್ಷ ರೈತರ ಬ್ಯಾಂಕ್ ಖಾತೆಗೆ ₹6,000 ನಗದು ಸಹಾಯಧನವನ್ನು ಮೂರು ಕಂತುಗಳಲ್ಲಿ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದು ನೇರ ಲಾಭಾಂಶ ಜಮಾ ವ್ಯವಸ್ಥೆಯ (DBT) ಮೂಲಕ ಜಮಾಗೊಳ್ಳುತ್ತದೆ. ವರ್ಷದ ಮೂರು ಕಂತುಗಳ ವಿವರ ಹೀಗಿದೆ:

ಮೊದಲ ಕಂತು (₹2,000): ಏಪ್ರಿಲ್ – ಜುಲೈ

ಎರಡನೇ ಕಂತು (₹2,000): ಆಗಸ್ಟ್ – ನವೆಂಬರ್

ಮೂರನೇ ಕಂತು (₹2,000): ಡಿಸೆಂಬರ್ – ಮಾರ್ಚ್

20ನೇ ಕಂತಿನ ಬಿಡುಗಡೆ ಯಾವಾಗ?

2019ರಿಂದ ಆರಂಭವಾದ ಪಿಎಂ-ಕಿಸಾನ್ ಯೋಜನೆಯ 20ನೇ ಕಂತು ಇದೀಗ ಬಿಡುಗಡೆ ಆಗಬೇಕಿದ್ದು; 19ನೇ ಕಂತಿನ ಹಣವನ್ನು 2025ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಪ್ರಕಾರ, 20ನೇ ಕಂತಿನ ಹಣವನ್ನು ಜೂನ್ ಕೊನೆ ಅಂದರೆ ಇದೇ ವಾರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹಣ ಬಿಡುಗಡೆಯ ನಂತರ ರೈತರು ತಮ್ಮ ಬ್ಯಾಂಕ್ ಖಾತೆಯ ಸ್ಥಿತಿಯನ್ನು ಪರಿಶೀಲಿಸಬಹುದು.

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಪಿಎಂ-ಕಿಸಾನ್ 20ನೇ ಕಂತಿನ ಹಣವನ್ನು ರೈತರ ಖಾತೆಗೆ ಈ ವಾರ ಜಮಾ ಮಾಡಲು ಸಿದ್ಧತೆ ನಡೆಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಯಾರಿಗೆ ಸಿಗಲಿದೆ 20ನೇ ಕಂತಿನ ₹2,000?

ಈ ಕಂತಿನ ಹಣವನ್ನು ಪಡೆಯಲು ರೈತರು ಈ ಕೆಳಗಿನ ಅರ್ಹತಾ ಶರತ್ತುಗಳನ್ನು ಪೂರೈಸಿರಬೇಕು:

e-KYC ಪೂರ್ಣಗೊಂಡಿರಬೇಕು.

ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.

NPCI (National Payments Corporation of India) ಮ್ಯಾಪಿಂಗ್ ಆಗಿರಬೇಕು.

ಜಮೀನು ದಾಖಲೆಗಳು ಸರಿಯಾಗಿರಬೇಕು.

ರೈತರು ಸರ್ಕಾರಿ ಅಥವಾ ಖಾಸಗಿ ಉದ್ಯೋಗಿಳು ಆಗಿರಬಾರದು ಅಥವಾ ವಾರ್ಷಿಕ ಆದಾಯವು ₹10 ಲಕ್ಷಕ್ಕಿಂತ ಹೆಚ್ಚು ಇರಬಾರದು.

ನಿಮಗೆ ಹಣ ಬರುತ್ತಾ? ಹೀಗೆ ಚೆಕ್ ಮಾಡಿ…

PM-KISAN ವೆಬ್‌ಸೈಟ್‌ಗೆ ಭೇಟಿ ನೀಡಿ

Beneficiary List ಕ್ಲಿಕ್ ಮಾಡಿ

ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ

Get Report ಕ್ಲಿಕ್ ಮಾಡಿದರೆ, ಹಳ್ಳಿಯ ಅರ್ಹ ರೈತರ ಪಟ್ಟಿ ತೆರೆದುಕೊಳ್ಳುತ್ತದೆ. ಆ ಪಟ್ಟಿಯಲ್ಲಿರುವವರಿಗೆ ಖಚಿತವಾಗಿ 20ನೇ ಕಂತಿನ ಹಣ ಸಂದಾಯವಾಗಲಿದೆ.

ಹಣ ಜಮಾ ಸ್ಥಿತಿಯನ್ನು ಪರಿಶೀಲಿಸುವ ವಿಧಾನ

ಇನ್ನು ಪಿಎಂ ಕಿಸಾನ್ ಹಣ ಜಮಾ ವಿವರವನ್ನು ರೈತರು ತಮ್ಮ ಮೊಬೈಲ್‌ನಲ್ಲಿಯೇ ಪರಿಶೀಲಿಸಬಹುದಾಗಿದೆ. ಅದಕ್ಕಾಗಿ ಮೊದಲಿಗೆ PM-Kisan Status-2025 ವೆಬ್‌ಸೈಟ್‌ಗೆ ಹೋಗಿ

ನಿಮ್ಮ ರಿಜಿಸ್ಟ್ರೇಷನ್ ಸಂಖ್ಯೆ ಹಾಕಿ, ಕ್ಯಾಪ್ಚಾ ನಮೂದಿಸಿ, ನಿಮ್ಮ ಮೊಬೈಲ್‌ಗೆ ಬಂದ OTP ನಮೂದಿಸಿದರೆ, Latest Installments Details ವಿಭಾಗದಲ್ಲಿ ಕಂತಿನವಾರು ಈ ಯೋಜನೆಯ ಹಣ ಜಮಾ ವಿವರ ತೋರಿಸುತ್ತದೆ.

ರೈತರಿಗೆ ಒಂದಷ್ಟು ಸಲಹೆಗಳು

ನಿಮ್ಮ ಬ್ಯಾಂಕ್ ಖಾತೆ ಸಕ್ರಿಯವಾಗಿರಲಿ

ಆಧಾರ್, ಮೊಬೈಲ್ ಹಾಗೂ ಬ್ಯಾಂಕ್ ಲಿಂಕ್ ಸ್ಥಿತಿಯನ್ನು ಪರಿಶೀಲಿಸಿ

ಗ್ರಾಮ ಪಂಚಾಯತಿ, ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ದಾಖಲೆಗಳ ನವೀಕರಣ ಮಾಡಿ

e-KYC ಪೂರ್ಣಗೊಳಿಸಲು CSC ಸೆಂಟರ್‌ಗೆ ಭೇಟಿ ನೀಡಿ

ಯಾವುದೇ ತಾಂತ್ರಿಕ ತೊಂದರೆಗಳಿದ್ದರೆ ಸ್ಥಳೀಯ ಕೃಷಿ ಸಹಾಯಕ ಅಧಿಕಾರಿ ಅಥವಾ ಉಪ ತಹಶೀಲ್ದಾರರನ್ನು ಸಂಪರ್ಕಿಸಿ

ಮಹತ್ವದ ಸೂಚನೆ: e-KYC ಪೂರ್ಣಗೊಳಿಸದ ರೈತರಿಗೆ ಹಣ ಜಮಾ ಆಗದ ಸಾಧ್ಯತೆ ಇದ್ದು, ಅಂಥವರು ಅರ್ಹರ ಪಟ್ಟಿಯಿಂದವೂ ಹೊರಗುಳಿಯಬಹುದು. ಹಾಗಾಗಿ ಎಲ್ಲಾ ರೈತರು ತಮ್ಮ ದಾಖಲೆಗಳನ್ನು ತ್ವರಿತವಾಗಿ ನವೀಕರಿಸಿಕೊಳ್ಳಬೇಕು.


Post a Comment

Previous Post Next Post

Top Post Ad

CLOSE ADS
CLOSE ADS
×