Education Loan- ₹10 ಲಕ್ಷದಿಂದ ₹60 ಲಕ್ಷದ ವರೆಗೆ ಶಿಕ್ಷಣ ಸಾಲ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ

Education Loan- ₹10 ಲಕ್ಷದಿಂದ ₹60 ಲಕ್ಷದ ವರೆಗೆ ಶಿಕ್ಷಣ ಸಾಲ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಶಿಕ್ಷಣ ಸಾಲವು ವಿದ್ಯಾರ್ಥಿಗೆ ತನ್ನ ಕನಸಿನ ಶಿಕ್ಷಣವನ್ನು ಆರ್ಥಿಕ ಅಡಚಣೆ ಇಲ್ಲದೆ ಪಡೆಯಲು ನೆರವಾಗುವ ಯೋಜನೆಯಾಗಿದೆ. ಇದು ನೇರವಾಗಿ ಕಾಲೇಜು, ಹಾಸ್ಟೆಲ್, ಪುಸ್ತಕ, ಲ್ಯಾಪ್‌ಟಾಪ್, ಯೂನಿಫಾರಂ, ಪ್ರವಾಸ, ಪರೀಕ್ಷಾ ಶುಲ್ಕ ಮೊದಲಾದವುಗಳ ಖರ್ಚನ್ನು ಭರಿಸಲು ಸಹಾಯ ಮಾಡುತ್ತದೆ.

ವಿಶೇಷವಾಗಿ ವೈದ್ಯಕೀಯ, ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಕಾನೂನು, ಇತರ ವೃತ್ತಿಪರ ಕೋರ್ಸ್’ಗಳು ಅಥವಾ ವಿದೇಶದ ಶಿಕ್ಷಣಕ್ಕಾಗಿ ಹೆಚ್ಚಿನ ಹಣ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ‘ಶಿಕ್ಷಣ ಸಾಲ’ ವಿದ್ಯಾರ್ಥಿಗಳಿಗೆ ಹೊಸ ಭವಿಷ್ಯವನ್ನು ಕಟ್ಟಿಕೊಡುತ್ತಿದೆ.

ಶಿಕ್ಷಣ ಸಾಲ ಪಡೆಯಲು ಅರ್ಹತೆಗಳು

ವಿದ್ಯಾರ್ಥಿಯು ಭಾರತೀಯ ನಾಗರಿಕನಾಗಿರಬೇಕು.

ಸರ್ಕಾರ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಲ್ಲಿ ಪ್ರವೇಶ ಪಡೆದಿರಬೇಕು.

ಮ್ಯಾನೇಜ್‌ಮೆಂಟ್ ಕೋಟಾದ ಪ್ರವೇಶಕ್ಕಿದ್ದರೆ, ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕ ಗಳಿಸಿರಬೇಕು.

ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಮಂಡಳಿಯಿಂದಲೇ ಕೋರ್ಸ್ ಆಗಿರಬೇಕು.

ವಿದ್ಯಾರ್ಥಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅಗತ್ಯವಿದೆ.

ಇತ್ತೀಚಿನ ಫೋಟೋ, ವಿಳಾಸ ದೃಢೀಕರಣ, ಪ್ರವೇಶ ಪತ್ರ, ಶುಲ್ಕದ ಬಿಲ್

ಶೈಕ್ಷಣಿಕ ಸಾಲ ಎಷ್ಟು ಸಿಗುತ್ತದೆ?

ಭಾರತದಲ್ಲಿ ಅಧ್ಯಯನಕ್ಕೆ ಗರಿಷ್ಠ: ₹10 ಲಕ್ಷ

ವಿದೇಶದ ಶಿಕ್ಷಣಕ್ಕಾಗಿ ಗರಿಷ್ಠ: ₹60-75 ಲಕ್ಷ (ಕೆಲವು ಬ್ಯಾಂಕ್‌ಗಳಲ್ಲಿ ₹1.5 ಕೋಟಿ ವರೆಗೆ)

₹4 ಲಕ್ಷದ ವರೆಗೆ ಸಾಲಕ್ಕೆ ಯಾವುದೇ ಮಾರ್ಜಿನ್ ಹಣ ಇಲ್ಲ. ₹4 ಲಕ್ಷ ಮೇಲ್ಪಟ್ಟಾದರೆ ಭಾರತದಲ್ಲಿ ವ್ಯಾಸಂಗ – 5% ಮಾರ್ಜಿನ್ ಹಣ ಹಾಗೂ ವಿದೇಶದಲ್ಲಿ ವ್ಯಾಸಂಗ – 15% ಮಾರ್ಜಿನ್ ಹಣ ಪಾವತಿಸಬೇಕು.

ಶೈಕ್ಷಣಿಕ ಸಾಲವು ಪ್ರತಿಭಾವಂತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ವರದಾನವಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ...

Education Loan Complete Guide 2025

ಸಾಲ ಮರುಪಾವತಿ ಹೇಗೆ?

ಪದವಿ ಪೂರ್ಣಗೊಂಡ 1 ವರ್ಷದ ನಂತರ ಅಥವಾ ಉದ್ಯೋಗ ದೊರಕಿದ 6 ತಿಂಗಳ ನಂತರ ಮರುಪಾವತಿ ಮಾಡಲು ಅವಕಾಶವಿರುತ್ತದೆ. ಸಾಮಾನ್ಯವಾಗಿ 5-7 ವರ್ಷಗಳ ಒಳಗೆ ಸಾಲ ತೀರಿಸಬಹುದಾಗಿದೆ. ಕೆಲವು ಬ್ಯಾಂಕ್‌ಗಳು 15 ವರ್ಷಗಳ ವರೆಗೆ ಕಾಲಾವಕಾಶ ನೀಡುತ್ತವೆ.

ಅರ್ಜಿ ಸಲ್ಲಿಸುವ ವಿಧಾನ

ನೇರವಾಗಿ ಬ್ಯಾಂಕ್‌ಗೆ ಭೇಟಿ ನೀಡಿ ಅಥವಾ ಅವರ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಖರ್ಚು ಪಟ್ಟಿಯುಳ್ಳ ಎಸ್ಟಿಮೇಟ್, ಪ್ರವೇಶ ಪತ್ರ, ಗುರುತಿನ ದಾಖಲೆ, ಶಿಕ್ಷಣ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಇತ್ಯಾದಿ ದಾಖಲೆಗಳನ್ನು ಸಲ್ಲಿಸಿಬೇಕು.

ಪ್ರೊಸೆಸಿಂಗ್ ಫೀ ಪಾವತಿಸಬೇಕು. ಕೆಲವು ಬ್ಯಾಂಕ್‌ಗಳಲ್ಲಿ ಇದನ್ನು ಮನ್ನಾ ಮಾಡುತ್ತಾರೆ. ಅರ್ಜಿ ಪರಿಶೀಲನೆಯ ನಂತರ ಸಾಲ ಮಂಜೂರಾಗಿ ನೇರವಾಗಿ ವಿದ್ಯಾಸಂಸ್ಥೆಗೆ ಹಣ ವರ್ಗಾಯಿಸಲಾಗುತ್ತದೆ.

ಪರ್ಯಾಯವಾಗಿ ಕೇಂದ್ರ ಸರ್ಕಾರದ ವಿದ್ಯಾರ್ಥಿ ಸಾಲ ಪೋರ್ಟಲ್ Vidya Lakshmi Portal ಮೂಲಕ ಎಲ್ಲಾ ಬ್ಯಾಂಕ್‌ಗಳಿಗೆ ಒಂದೇ ಅರ್ಜಿ ಸಲ್ಲಿಸಬಹುದಾಗಿದೆ. ಲೇಖನದ ಕೊನೆಯಲ್ಲಿ ಅರ್ಜಿ ಸಲ್ಲಿಕೆ ಲಿಂಕ್ ನೀಡಲಾಗಿದೆ.

ವಿದೇಶಿ ಶಿಕ್ಷಣಕ್ಕೂ ಸಾಲ ಸೌಲಭ್ಯ

ವಿದೇಶದಲ್ಲಿ ಪದವಿ ಅಥವಾ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದರೆ ಬ್ಯಾಂಕ್‌ಗಳು ಹೆಚ್ಚಿನ ಮೊತ್ತದ ಸಾಲವನ್ನು ಮಂಜೂರು ಮಾಡುತ್ತವೆ. ಪಾಸ್‌ಪೋರ್ಟ್, ವೀಸಾ, ಪ್ರವೇಶ ಪತ್ರ ಇತ್ಯಾದಿ ದಾಖಲೆಗಳು ಅಗತ್ಯವಾಗುತ್ತವೆ.

ಶೈಕ್ಷಣಿಕ ಸಾಲಕ್ಕೆ ಪ್ರಸ್ತುತ ಬಡ್ಡಿದರಗಳು (2025ರ ಪ್ರಕಾರ)

ಎಸ್‌ಬಿಐ (SBI): 7.9-10.9%

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): 4-12%

ಬ್ಯಾಂಕ್ ಆಫ್ ಬರೋಡಾ (BOB): 7.9-14.25%

ಕೆನರಾ ಬ್ಯಾಂಕ್ (Canara Bank): 8.35-11.75%

ಎಚ್‌ಡಿಎಫ್‌ಸಿ ಬ್ಯಾಂಕ್ (HDFC): 10.5% ರಿಂದ ಆರಂಭ

ಐಸಿಐಸಿಐ ಬ್ಯಾಂಕ್ (ICICI): 10.25% ರಿಂದ ಆರಂಭ

ಏಕ್ಸಿಸ್ ಬ್ಯಾಂಕ್ (Axis Bank): 9.58-12.75%

ಕರ್ನಾಟಕ ಬ್ಯಾಂಕ್ (Karnataka Bank): 10.48% ರಿಂದ ಆರಂಭ

ಬಡ್ಡಿದರಗಳು ವಿದ್ಯಾರ್ಥಿಯ ಕ್ರೆಡಿಟ್ ಸ್ಕೋರ್, ಕೋರ್ಸ್ ಮತ್ತು ಸಂಸ್ಥೆಯ ಪ್ರಕಾರದ ಅನ್ವಯ ಬದಲಾಗಬಹುದು. ಪ್ರೊಸೆಸಿಂಗ್ ಫೀ ಹಾಗೂ ಇತರ ಶುಲ್ಕಗಳಲ್ಲಿಯೂ ವ್ಯತ್ಯಾಸವಿರಬಹುದು.

ಕೇಂದ್ರ ಸರ್ಕಾರದಿಂದ ಬಡ್ಡಿದರದ ರಿಯಾಯಿತಿ

ಸರಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ಶಿಕ್ಷಣ ಅವಧಿಯ ಬಡ್ಡಿದರದ ಭಾಗವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಈ ಯೋಜನೆಗಾಗಿ ಶ್ರೇಣಿಯ ಆಧಾರಿತ ಆದಾಯ ಪ್ರಮಾಣಪತ್ರ ಅಗತ್ಯವಿರುತ್ತದೆ.

ಬ್ಯಾಂಕ್‌ಗಳ ಬಡ್ಡಿದರ ಹಾಗೂ ಶರತ್ತುಗಳನ್ನು ಹೋಲಿಸಿ ಸೂಕ್ತ ಆಯ್ಕೆಮಾಡಿ. ಪ್ರಮಾಣಿತ ಕಾಲೇಜು/ಯುನಿವರ್ಸಿಟಿಯಲ್ಲಿಯೇ ಪ್ರವೇಶ ಪಡೆಯಿರಿ.ಮರುಪಾವತಿಗೆ ನಿಮ್ಮ ಕುಟುಂಬದ ಆರ್ಥಿಕ ಸಾಮರ್ಥ್ಯವನ್ನು ಗಮನಿಸಿ. ಸಾಲದ ಪ್ರೊಸೆಸಿಂಗ್ ಸಮಯದಲ್ಲಿ ಎಲ್ಲಾ ದಾಖಲೆಗಳನ್ನು ಪೂರೈಸಿ.

ವಿದ್ಯಾರ್ಥಿಗಳು ತಮ್ಮ ಕನಸಿನ ಶಿಕ್ಷಣಕ್ಕಾಗಿ ಹಣದ ಕೊರತೆಯಿಂದ ಹಿಂಜರಿಯುವ ಅಗತ್ಯವಿಲ್ಲ. ಶಿಕ್ಷಣ ಸಾಲದ ಸಹಾಯದಿಂದ ಇಂದು ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್, ವಿದೇಶಿ ವಿದ್ಯಾಭ್ಯಾಸ ಮುಂತಾದ ವಿಷಯಗಳಲ್ಲಿ ಪ್ರಗತಿಪಥದಲ್ಲಿ ಸಾಗುತ್ತಿದ್ದಾರೆ. ಆದ್ದರಿಂದ, ಈ ಆಯ್ಕೆಯನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಿ…

Vidya Lakshmi Portal Link: Apply Now


Post a Comment

Previous Post Next Post

Top Post Ad

CLOSE ADS
CLOSE ADS
×