Free Residential School-ಉಚಿತ ವಸತಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

Free Residential School-ಉಚಿತ ವಸತಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಕೆಜಿಬಿವಿ, ಕೆಕೆಜಿಬಿವಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ವಸತಿ ಶಾಲೆ / ನಿಲಯಗಳಲ್ಲಿ ವಿದ್ಯಾರ್ಥಿಗಳ(Free Residential Schools) ಪ್ರವೇಶಾತಿಗೆ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಬಂಧಪಟ್ಟ ಕಚೇರಿಯಿಂದ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು 2025 ಮೇ 02 ರಿಂದ 20 ರವರೆಗೆ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಿಗದಿಪಡಿಸಿದ್ದು, ಪ್ರವೇಶಾತಿ(Karanataka Government Residential School) ಬಯಸುವ ತರಗತಿಗಳಿಗೆ ಆಯಾ ವಸತಿ ಶಾಲೆಗಳಲ್ಲಿ ಆಪ್‍ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಸಮಗ್ರ ಶಿಕ್ಷಣ ಕರ್ನಾಟಕದ ವಿದ್ಯಾವಾಹಿನಿ ತಂತ್ರಾಂಶದ ಆನ್‍ಲೈನ್ ಲಿಂಕ್ https://vidyavahini.karnataka.gov.in ಅಥವಾ ಆಪ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಕೂರ್ಮಾ ರಾವ್ ಮಿಟ್ಟಿರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಲೇಖನದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಮುಖ ದಿನಾಂಕದ ವಿವರ, ಶಾಲೆಗಳ ದಾಖಲಾತಿ ನಿಯಮಗಳು,ವಸತಿ ಶಾಲೆಯ ವಿಶೇಷತೆಗಳು, ಅರ್ಜಿ ಸಲ್ಲಿಸುವ ವಿಧಾನ, ಸೇರಿದಂತೆ ಸಂಪೂರ್ಣ ಅಗತ್ಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Free Residential School Admission Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮೇ 2, 2025 ರಿಂದ ಪ್ರಾರಂಭವಾಗಿ, ಮೇ 20, 2025ರಂದು ಮುಕ್ತಾಯವಾಗಲಿದೆ.
  • 25ನೇ ಮೇ 2025 ರಂದು ಮೊದಲ ಸುತ್ತಿನ ಸೀಟು ಆಯ್ಕೆ ಪ್ರಕಟಣೆ ಮತ್ತು ದಾಖಲಾತಿ.
  • ಜೂನ್ 2, 2025 ರಂದು ಎರಡನೇ ಸುತ್ತಿನ ಸೀಟು ಆಯ್ಕೆ ಪ್ರಕಟಣೆ ಮತ್ತು ದಾಖಲಾತಿ.
  • ನಂತರ ಭರ್ತಿಯಾಗದ ಸೀಟುಗಳನ್ನು ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲಾಗುತ್ತದೆ.

Free Residential School Admission Rules-ಶಾಲೆಗಳ ದಾಖಲಾತಿ ನಿಯಮಗಳು:

ಪ.ಜಾ/ಪ.ಪಂ. ಹಿಂದುಳಿದ ವರ್ಗ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಹೆಣ್ಣುಮಕ್ಕಳಿಗೆ 75% ರಷ್ಟು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಬಾಲಕಿಯರಿಗೆ, ಅನಾಥ ಹೆಣ್ಣು ಮಕ್ಕಳು, ದೇವದಾಸಿ ಪದ್ದತಿಯಿಂದ ರಕ್ಷಿಸಲ್ಪಟ್ಟವರು, ಬಾಲ ಕಾರ್ಮಿಕ ಮಕ್ಕಳ ಮಾರಾಟ ಮತ್ತು ಸಾಗಣಿಕೆಯಿಂದ ರಕ್ಷಿಸಲ್ಟಟ್ಟ ಶಿಕ್ಷಣ ವಂಚಿತ ಹೆಣ್ಣುಮಕ್ಕಳಿಗೆ 25% ರಷ್ಟು ಪ್ರವೇಶದಲ್ಲಿ ಮೀಸಲಾತಿಯನ್ನು ನೀಡಲಾಗುತ್ತಿದೆ.

ಶಾಲೆಗೆ ಸೇರಿಲ್ಲದ ಹಾಗೂ ಶಾಲೆ ಬಿಟ್ಟ ಬಾಲಕಿಯರಿಗೆ ಪ್ರಾಧಾನ್ಯತೆ ನೀಡಿ ನಂತರ ಇತರೆ ಬಾಲಕಿಯರನ್ನು ದಾಖಲು ಮಾಡುವುದು.

Karnataka Residential School Facility-ವಸತಿ ಶಾಲೆಯ ವಿಶೇಷತೆಗಳು:

  • ಉತ್ತಮ ಗುಣಮಟ್ಟದ ಪೌಷ್ಟಿಕಯುಕ್ತ ಆಹಾರ ಪೂರೈಕೆ.
  • ವಿದ್ಯಾರ್ಥಿ ವೇತನ.
  • ವಸತಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ.
  • ಸ್ವಾಸ್ಥಪಾಲನೆ: ಸಾಬೂನು, ಎಣ್ಣೆ, ಟೂತ್ ಪೇಸ್ಟ್, ಸ್ಯಾನಿಟರಿ ನ್ಯಾಪ್ಕಿನ್ ಗಳು ಇತ್ಯಾದಿ.
  • ಲೇಖನ ಸಾಮಗ್ರಿಗಳು: ನೋಟ್ ಪುಸ್ತಕ, ಪೆನ್ನು ಮತ್ತು ಪೆನ್ಸಿಲ್, ಜಾಮಿಟ್ರಿಬಾಕ್ಸ್ ಇತ್ಯಾದಿಗಳನ್ನು ಒದಗಿಸಲಾಗುವುದು.
  • ವೈದ್ಯಕೀಯ ತಪಾಸಣೆ: ಸ್ಥಳೀಯ ವೈದ್ಯರು ಮತ್ತು ಆಸ್ಪತ್ರೆಗಳ ಬೆಂಬಲದೊಂದಿಗೆ ಕೆಜಿಬಿವಿ ಗಳಲ್ಲಿ ನಿಯಮಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
  • ನಿರ್ದಿಷ್ಟ ಕೌಶಲ್ಯ ತರಬೇತಿ ಸಂಗೀತ, ಯೋಗ, ಕರಾಟೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯಕ್ತಿತ್ವ ವಿಕಸನದ ಶಿಕ್ಷಣ.
  • ವೃತ್ತಿ ಕೌಶಲ್ಯಗಳಾದ ಹೊಲಿಗೆ, ಕಸೂತಿ, ಬೊಂಬೆ ತಯಾರಿಕೆ, ಮೊಬೈಲ್ ಹಾಗೂ ಇತರೆ ಎಲೆಕ್ಟಾçನಿಕ್ಸ್ ಉಪಕರಣಗಳ ದುರಸ್ತಿ ಕಲಿಕೆಗೆ ಅವಕಾಶ.
  • ನಿಧಾನ ಕಲಿಕೆಯ ಮಕ್ಕಳ ಕಲಿಕೆಗಾಗಿ ಪೂರಕ ಕ್ರಮಗಳು.
  • ಇಲಾಖೆಯ ವಿವಿಧ ಸೌಲಭ್ಯಗಳ ವಿಸ್ತರಣೆ, ಅತಿಥಿ ಉಪನ್ಯಾಸ, ವಿಚಾರ ಸಂಕಿರಣ.

Online Apply Method-ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನೇರವಾಗಿ ವಸತಿ ಶಾಲೆಗಳನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Karanataka Government Residential School List-ಜಿಲ್ಲಾವಾರು ಶಾಲೆಗಳ ವಿವರವನ್ನು ತಿಳಿಯುವ ವಿಧಾನ:

ಶಾಲೆ ಪ್ರವೇಶಕ್ಕೆ ಆಸಕ್ತಿಯನ್ನು ಹೊಂದಿರುವವರು ಕರ್ನಾಟಕದಲ್ಲಿ ಯಾವೆಲ್ಲ ಜಿಲ್ಲೆಗಳಲ್ಲಿ ಈ ಶಾಲೆಗಳು ಪ್ರಸ್ತುತ ಚಾಲ್ತಿಯಲ್ಲಿವೆ ಎನ್ನುವ ಮಾಹಿತಿಯನ್ನು ತಿಳಿಯಲು ಅವಕಾಶವಿದ್ದು ಇದಕ್ಕಾಗಿ ಈ "Residential School List" ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಚೆಕ್ ಮಾಡಬಹುದು.

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ಜಾಲತಾಣ- Click here

Post a Comment

Previous Post Next Post

Top Post Ad

CLOSE ADS
CLOSE ADS
×