Vidyadhan Scholarship 2025- ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 75.000 ರೂ. ವರೆಗೂ ಆರ್ಥಿಕ ನೆರವು | ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಂದ ‘ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನ-2025’ಕ್ಕೆ (Vidyadhan Scholarship 2025) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.2025ನೇ ಸಾಲಿನ ಸರೋಜಿನಿ ದಾಮೋದರನ್ ಫೌಂಡೇಶನ್ (Sarojini Damodaran Foundation- SDF) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕರ್ನಾಟಕದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ‘ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನ- 2025’ಕ್ಕೆ ಅರ್ಜಿ ಆಹ್ವಾನಿಸಿದೆ.

ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದ ಶೈಕ್ಷಣಿಕವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಈ ಸ್ಕಾಲರ್‌ಶಿಪ್ ಪ್ರಥಮ ಮತ್ತು ದ್ವಿತೀಯ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಅಂಕದ ಆಧಾರದ ಮೇಲೆ ಪದವಿ ಶಿಕ್ಷಣಕ್ಕೂ 75,000 ರೂ. ವರೆಗೂ ಆರ್ಥಿಕ ನೆರವು ನೀಡುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಏನಿದು ವಿದ್ಯಾಧನ್ ಸ್ಕಾಲರ್‌ಶಿಪ್

1999ರಲ್ಲಿ ಇನ್ಫೋಸಿಸ್‌ನ ಸಹಸಂಸ್ಥಾಪಕರಾದ ಎಸ್.ಡಿ. ಶಿಬುಲಾಲ್ ಮತ್ತು ಕುಮಾರಿ ಶಿಬುಲಾಲ್ ಅವರು ಸರೋಜಿನಿ ದಾಮೋದರನ್ ಪ್ರತಿಷ್ಠಾನದ (Sಆಈ) ಮೂಲಕ ‘ವಿದ್ಯಾಧನ್ ಯೋಜನೆ’ಯನ್ನು ಸ್ಥಾಪಿಸಿದ್ದಾರೆ. ಇಂದಿನ ವರೆಗೆ ಈ ಪ್ರತಿಷ್ಠಾನವು ದೇಶದ 20ಕ್ಕೂ ಹೆಚ್ಚು ರಾಜ್ಯಗಳ 50,000ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿದೆ.

2014ರಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದ ಈ ಯೋಜನೆಯಡಿ ಈಗಾಗಲೇ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. 2025ನೇ ಸಾಲಿನಲ್ಲಿ ದೇಶದಾದ್ಯಂತ 1 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಗುರಿಯನ್ನು ಪ್ರತಿಷ್ಠಾನ ಹೊಂದಿದೆ.

ಅರ್ಹತಾ ಮಾನದಂಡಗಳೇನು?

ವಿದ್ಯಾರ್ಥಿಗಳು ಕರ್ನಾಟಕದಿಂದ 2025ರಲ್ಲಿ ನಡೆದ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಎಲ್ಲಾ ವಿಷಯಗಳಲ್ಲಿ ಕನಿಷ್ಠ 90% ಅಥವಾ A+ ಗ್ರೇಡ್ ಹೊಂದಿರಬೇಕು.

ವಿದ್ಯಾರ್ಥಿ ಅಂಗವೈಕಲ್ಯ ಹೊಂದಿದ್ದರೆ ಶೇಕಡಾ 75ರಷ್ಟು ಅಂಕ ಪಡೆದಿರಬೇಕು.

ಕುಟುಂಬದ ವಾರ್ಷಿಕ ಆದಾಯವು ರೂ. 2 ಲಕ್ಷಕ್ಕಿಂತ ಕಡಿಮೆಯಿರಬೇಕು.

75.000 ರೂ. ವರೆಗೂ ಆರ್ಥಿಕ ನೆರವು

ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಪಿಯುಸಿ ಅಧ್ಯಯನದ ಅವಧಿಯಲ್ಲಿ ವರ್ಷಕ್ಕೆ 10,000 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಬಳಿಕ ಅವರ ಪದವಿಯನ್ನು ಮುಂದುವರಿಸಲು ಪದವಿಗೆ ಅನುಗುಣವಾಗಿ ವರ್ಷಕ್ಕೆ 15,000 ರೂಪಾಯಿಯಿಂದ 75.000 ರೂಪಾಯಿ ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು

SSLC ಅಂಕಪಟ್ಟಿ (2025)

ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ

ವಿದ್ಯಾರ್ಥಿಯ ಪಾಸ್‌ಪೋರ್ಟ್ ಸೈಜ್ ಫೋಟೋ

ಅಂಗವೈಕಲ್ಯ ಪ್ರಮಾಣಪತ್ರ (ಅಂಗವೈಕಲ್ಯವಿದ್ದಲ್ಲಿ)

ವಿದ್ಯಾರ್ಥಿಯ ಇ-ಮೇಲ್ ವಿಳಾಸ

ಬ್ಯಾಂಕ್ ಖಾತೆ ವಿವರಗಳು (ಆಡಿಟ್ ನಂತರ)

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಹ ಅಭ್ಯರ್ಥಿಗಳನ್ನು ಮೊದಲನೇ ಹಂತದಲ್ಲಿ ಆನ್‌ಲೈನ್ ಅರ್ಜಿ ಪರಿಶೀಲನೆ ನಡೆಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ, ಲೆಕ್ಕಶಾಸ್ತ್ರ, ಭಾಷಾ ಸಾಮರ್ಥ್ಯದ ಆಧಾರದ ಮೇಲೆ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ.

ನಂತರ ಫೌಂಡೇಶನ್‌ನ ಸ್ವಯಂಸೇವಕರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಮಾಹಿತಿ ಪರಿಶೀಲನೆ ಮಾಡುತ್ತಾರೆ. ಈ ಎಲ್ಲ ಹಂತಗಳನ್ನು ಪೂರೈಸಿದ ಪ್ರತಿಭಾವಂತರು ಅಂತಿಮವಾಗಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುತ್ತಾರೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಗಳನ್ನು vidyadhan.org ಮೂಲಕ ಅಥವಾ ಗೂಗಲ್ ಪ್ಲೇ ಸ್ಟೋರ್‌ನಲ್ಲಿ SDF Vidya ಆಪ್ ಬಳಸುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು ಹೀಗಿವೆ:

ಅರ್ಜಿ ಸಲ್ಲಿಕೆ ಪ್ರಾರಂಭ: 19-05-2025

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 08-07-2025

ಹೆಚ್ಚಿನ ವಿವರಗಳಿಗಾಗಿ, ವಿದ್ಯಾರ್ಥಿಗಳು vidyadhan.karnataka@sdfoundationindia.com ಅನ್ನು ಸಂಪರ್ಕಿಸಬಹುದು ಅಥವಾ +91 8068333500 ನಲ್ಲಿ ವಿದ್ಯಾಧನ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.


Previous Post Next Post