ಕ್ಲೌಡ್ ಗೇಮಿಂಗ್ ಪ್ರಿಯರಿಗಾಗಿ ಜಿಯೋ ಹೊಸದಾಗಿ 5 ಪ್ರೀಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದು, ₹48ರಿಂದ ಆರಂಭವಾಗುವ ಈ ಆಫರ್‌ಗಳು ಉಚಿತ ಕ್ಲೌಡ್ ಮೆಂಬರ್‌ಶಿಪ್‌ನೊಂದಿಗೆ ಲಭ್ಯವಿವೆ.ಜಿಯೋದಿಂದ 5 ಹೊಸ ಪ್ರೀಪೇಯ್ಡ್ ಪ್ಲಾನ್‌ಗಳು.JioGames Cloud ಸಬ್‌ಸ್ಕ್ರಿಪ್ಷನ್ ಉಚಿತ,Cloud Gaming ಗೆ ಹೆಚ್ಚಿನ ಡೇಟಾ, OTT ಅಕ್ಸೆಸ್ ಕೂಡ ಲಭ್ಯ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Jio Recharge Plans:
ಆಧುನಿಕ ಗೇಮಿಂಗ್ ಪ್ರಪಂಚದಲ್ಲಿ ದೊಡ್ಡ ಹೆಜ್ಜೆ ಹಾಕಿರುವ ಜಿಯೋ, ತನ್ನ ಬಳಕೆದಾರರಿಗೆ ಅತ್ಯಾಧುನಿಕ ಕ್ಲೌಡ್ ಗೇಮಿಂಗ್ (Cloud Gaming) ಅನುಭವ ನೀಡಲು ಹೊಸ 5 ಪ್ರೀಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ.
First Recharge Plan
₹48 ರೂಪಾಯಿಯಿಂದ ಆರಂಭವಾಗುವ ಈ ಪ್ಯಾಕ್‌ಗಳಲ್ಲಿ JioGames Cloud ನ ಉಚಿತ ಸದಸ್ಯತ್ವವಿದೆ.
Second Recharge Plan
₹98 ರ ಪ್ಲಾನ್‌ನಲ್ಲಿ 7 ದಿನಗಳವರೆಗೆ ಗೇಮಿಂಗ್ ಆನಂದಿಸಲು ಅವಕಾಶ ಇದೆ. ಈ ಪ್ಯಾಕ್‌ಗಳಲ್ಲಿ ಹೆಚ್ಚಿನ ಡೇಟಾ ದೊರಕದೇ ಇರಬಹುದಾದರೂ, ಈಗಾಗಲೇ ಸಕ್ರಿಯ ಪ್ರೀಪೇಯ್ಡ್ ಪ್ಲಾನ್ ಇದ್ದರೆ ಮಾತ್ರ ಈ ಡೇಟಾ ವೋಚರ್‌ಗಳು ಕಾರ್ಯನಿರ್ವಹಿಸುತ್ತವೆ. (Jio prepaid plans)
Third Recharge Plan
ಹೆಚ್ಚು ಡೇಟಾ ಬೇಕಾದರೆ ₹298 ಪ್ಯಾಕ್ ಸೂಕ್ತ. ಇದರಲ್ಲಿ 3GB ಡೇಟಾ ದೊರಕುತ್ತದೆ ಮತ್ತು 28 ದಿನಗಳವರೆಗೆ JioGames Cloud ಬಳಸಬಹುದು. ಇದು ಗೇಮಿಂಗ್ ಪ್ರಿಯರಿಗೆ ಉಪಯುಕ್ತ.
Fourth Recharge Plan
₹495 ಪ್ಯಾಕ್‌ನಲ್ಲಿ, ಹೈ-ಎಂಡ್ ಡೇಟಾ ಜೊತೆಗೆ OTT ಸೇವೆಗಳನ್ನೂ ಸೇರಿಸಲಾಗಿದೆ. ಇದರಲ್ಲಿ JioCinema (Hotstar Mobile), JioTV, FanCode, JioAICloud ಸಬ್‌ಸ್ಕ್ರಿಪ್ಷನ್ ಉಚಿತವಾಗಿ ದೊರಕುತ್ತದೆ. ಇದಲ್ಲದೆ, ಪ್ರತಿದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ.
Fifth Recharge Plan
ಹೆಚ್ಚು ಸ್ಪೀಡ್ ಮತ್ತು ಡೇಟಾ ಬೇಕಾದವರಿಗೆ ₹545 ಪ್ಯಾಕ್ ಭರ್ಜರಿ ಆಯ್ಕೆ. ಪ್ರತಿದಿನ 2GB ಡೇಟಾ ಜೊತೆಗೆ 5GB ಬೋನಸ್ ಲಭ್ಯವಿದ್ದು, 5G ಅನಿಯಮಿತ ಡೇಟಾ ಕೂಡ ಇದರಲ್ಲಿ ಸೇರಿದೆ. (5G Unlimited)
ಇದರ ವಿಶೇಷತೆ ಏನೆಂದರೆ, JioGames Cloud ನ ಮೂಲಕ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಸೆಟ್‌ಟಾಪ್ ಬಾಕ್ಸ್‌ನಲ್ಲಿ ಗೇಮ್‌ಗಳನ್ನು ಡೌನ್‌ಲೋಡ್ ಮಾಡದೆ ನೇರವಾಗಿ ಸ್ಟ್ರೀಮ್ ಮಾಡಬಹುದು. ಇದರರ್ಥ, ಯಾವುದೇ high-end device ಇಲ್ಲದಿದ್ದರೂ ಕ್ಲೌಡ್‌ನಿಂದ ಗೇಮ್ ಆಡಬಹುದು.
ಜಿಯೋಗೇಮ್ಸ್ ಕ್ಲೌಡ್ ಕ್ಲೌಡ್-ಆಧಾರಿತ ಗೇಮಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇದು ಬಳಕೆದಾರರಿಗೆ ಆಟವನ್ನು ಡೌನ್‌ಲೋಡ್ ಮಾಡದೆಯೇ ನೇರವಾಗಿ ಸ್ಟ್ರೀಮಿಂಗ್ ಮೂಲಕ ಆಟಗಳನ್ನು ಆಡಲು ಅನುವು ಮಾಡಿಕೊಡುತ್ತದೆ.
ಭಾರತದಲ್ಲಿ ಮೊಬೈಲ್ ಗೇಮಿಂಗ್ ಕ್ರೇಜ್ ವೇಗವಾಗಿ ಬೆಳೆಯುತ್ತಿದೆ. ಈ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು, ರಿಲಯನ್ಸ್ ಜಿಯೋ ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಕಂಪನಿಯು ಗೇಮಿಂಗ್-ಕೇಂದ್ರಿತ 5 ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.