Chanakya Niti: ಜನರ ನಿಜ ಸ್ವರೂಪ ಅರ್ಥ ಮಾಡಿಕೊಳ್ಳಲು ಚಾಣಕ್ಯರ ಸೈಕಾಲಜಿ ತಂತ್ರಗಳು

ಆಚಾರ್ಯ ಚಾಣಕ್ಯರು ಜನರ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಕೆಲವು ಮಾನಸಿಕ ತಂತ್ರಗಳನ್ನು ತಿಳಿಸಿದ್ದಾರೆ. ಒಬ್ಬ ವ್ಯಕ್ತಿಯ ನಿಜವಾದ ಸ್ವಭಾವ ಅವರ ಕ್ರಿಯೆಗಳಲ್ಲಿ ಅಡಗಿದೆ, ಮಾತುಗಳಲ್ಲಿ ಅಲ್ಲ. ಕಣ್ಣುಗಳು, ದುರ್ಬಲರೊಂದಿಗಿನ ವರ್ತನೆ, ನಗು ಮತ್ತು ಮೌನದ ಮೂಲಕ ವ್ಯಕ್ತಿತ್ವವನ್ನು ಅರ್ಥೈಸಬಹುದು.

ನೀವು ಎಂದಾದರೂ ಸ್ನೇಹಿತರಿಂದ ದ್ರೋಹಕ್ಕೊಳಗಾಗಿದ್ದೀರಾ? ಪಾಲುದಾರರು ಸುಳ್ಳು ಹೇಳಿದ್ದಾರಾ? ಕೆಲಸದಲ್ಲಿ ಕುಶಲತೆ, ಕಪಟತೆ ಬಳಸಿದ್ದೀರಾ? ಎದುರಾಗುವ ಜನ ಮಾತನಾಡುವ ಮೊದಲೇ ಅವರ ಉದ್ದೇಶ ಅರ್ಥ ಮಾಡಿಕೊಳ್ಳಲು ನಿಮಗೆ ಸಾಧ್ಯವಾ? ರಾಜಕೀಯ ಮತ್ತು ಮಾನವ ನಡವಳಿಕೆಯ ಕುರಿತು ಪರಮ ಜ್ಞಾನಿಯಾದ ಪ್ರಾಚೀನ ಭಾರತೀಯ ವಿದ್ವಾಂಸ ಆಚಾರ್ಯ ಚಾಣಕ್ಯ, ಜನರ ನಿಜವಾದ ಸ್ವರೂಪವನ್ನು ಡಿಕೋಡ್ ಮಾಡಲು ಕೆಲವು ಕಾಲಾತೀತ ಮಾನಸಿಕ ತಂತ್ರಗಳನ್ನು ತಿಳಿಸಿದ್ದಾರೆ. ನಕಲಿ ನಗು, ಗುಪ್ತ ಕಾರ್ಯಸೂಚಿಗಳು ಮತ್ತು ಸಕ್ಕರೆ ಲೇಪಿತ ಸುಳ್ಳುಗಳಿಂದ ತುಂಬಿರುವ ಈ ಜಗತ್ತಿನಲ್ಲಿ, ಚಾಣಕ್ಯನ ಬುದ್ಧಿವಂತಿಕೆಯ ಸೂತ್ರಗಳು ನಿಮಗೆ ನೆರವಾಗುವ ಅಸ್ತ್ರಗಳಾಗಬಹುದು. ಇವನ್ನು ಬಳಸಿಕೊಂಡು ನೀವು ಜನರನ್ನು ಪುಸ್ತಕದಂತೆ ಓದುವುದು ಹೇಗೆ ಎಂಬುದು ಇಲ್ಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

1) ಜನ ಏನು ಮಾಡುತ್ತಾರೆ ಎಂದು ನೋಡಿ, ಅವರ ಮಾತನ್ನು ನಂಬಬೇಡಿ

ಹೌದು. ಒಬ್ಬ ವ್ಯಕ್ತಿಯ ನಿಜ ಇರುವುದು ಅವನ ಮಾತುಗಳಲ್ಲಿ ಅಲ್ಲ. ಬದಲಾಗಿ ಕ್ರಿಯೆಗಳಲ್ಲಿ. ಜನರು ನೀವು ಕೇಳಲು ಬಯಸುವುದನ್ನೇ ನಿಮಗೆ ಹೇಳುತ್ತಾರೆ. ಆದರೆ ಅವರ ಕ್ರಿಯೆಗಳು ಅವರು ನಿಜವಾಗಿಯೂ ಏನು ಎಂದು ಬಹಿರಂಗಪಡಿಸುತ್ತವೆ. ನಿಮ್ಮ ಸ್ನೇಹಿತ ಬೆಂಬಲ ನೀಡುವ ಭರವಸೆ ನೀಡುತ್ತಾನೆ, ಆದರೆ ನಿಮಗೆ ಸಹಾಯ ಬೇಕಾದಾಗ ಕಣ್ಮರೆಯಾಗುತ್ತಾನೆ. ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತೇನೆ ಎನ್ನುತ್ತಾನೆ, ಆದರೆ ನಿಮ್ಮ ಭಾವನೆಗಳಿಗೆ ಎಂದಿಗೂ ಆದ್ಯತೆ ನೀಡುವುದಿಲ್ಲ. ನಿಮ್ಮ ಸಹೋದ್ಯೋಗಿ ನಿಮ್ಮನ್ನು ಗೌರವಿಸುವಂತೆ ನಟಿಸುತ್ತಾನೆ, ಆದರೆ ನೀವು ಮಾಡಿದ ಕೆಲಸಕ್ಕೆ ತಾನು ಕ್ರೆಡಿಟ್‌ ತೆಗೆದುಕೊಳ್ಳುತ್ತಾನೆ. ಅಂದರೆ, ಇವರ ಮಾತುಗಳನ್ನು ನಿರ್ಲಕ್ಷಿಸಿ. ಕ್ರಿಯೆಗಳನ್ನು ಗಮನಿಸಿ. ಯಾರಾದರೂ ತಮ್ಮ ಮಾತುಗಳಿಗೆ ಪದೇ ಪದೇ ದ್ರೋಹ ಬಗೆದರೆ, ಅವರು ನಂಬಿಕೆಗೆ ಅರ್ಹರಲ್ಲ.

2) ಅವರ ಕಣ್ಣುಗಳನ್ನು ಗಮನಿಸಿ. ಅವು ಆತ್ಮದ ಕಿಟಕಿ

ಯಾರಾದರೂ ಸುಳ್ಳು ಹೇಳುತ್ತಿದ್ದಾರೆಯೇ ಅಥವಾ ಏನನ್ನಾದರೂ ಮರೆಮಾಡುತ್ತಿದ್ದಾರೆಯೇ ಎಂದು ತಿಳಿಯಲು ಬಯಸುವಿರಾ? ಅವರ ಕಣ್ಣುಗಳನ್ನು ನೋಡಿ. ನಡುಗುವ ಕಣ್ಣುಗಳು, ನಿರಂತರವಾಗಿ ಮಿಟುಕಿಸುತ್ತಿರುವುದು, ಅಥವಾ ದೂರ ನೋಡುತ್ತಿರುವುದು- ಅವರು ಸತ್ಯವನ್ನು ಮರೆಮಾಡುತ್ತಿದ್ದಾರೆ ಎಂದು ತಿಳಿಸುತ್ತದೆ. ಹಿಗ್ಗಿದ ಕಣ್ಣಿನ ಪಾಪೆಗಳು ಅವರು ಉತ್ಸುಕರಾಗಿದ್ದಾರೆ ಅಥವಾ ಸುಳ್ಳು ಹೇಳುತ್ತಿದ್ದಾರೆ ಎಂದು ತಿಳಿಸುತ್ತದೆ. ಕಣ್ಣು ಮಿಟುಕಿಸುತ್ತಿರುವುದು ಅಥವಾ ಸುದೀರ್ಘಕಾಲ ನಿಮ್ಮ ಕಣ್ಣಲ್ಲಿ ಕಣ್ಣಿಡುವುದು- ಅವರು ನಿಮ್ಮನ್ನು ಜಾಣ್ಮೆಯಿಂದ ನಿರ್ವಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ಪ್ರಾಮಾಣಿಕ ವ್ಯಕ್ತಿಯ ಕಣ್ಣುಗಳು ಸ್ಥಿರವಾಗಿರುತ್ತವೆ, ಶಾಂತವಾಗಿರುತ್ತವೆ ಮತ್ತು ತೆರೆದಿರುತ್ತವೆ. ಭಾವನೆಗಳನ್ನು ನಕಲಿ ಮಾಡುವವರು ಯಾವಾಗಲೂ ನೋಟ ಜಾರಿಸುತ್ತಾರೆ.

3) ಅವರು ದುರ್ಬಲರನ್ನು ಹೇಗೆ ನಡೆಸಿಕೊಳ್ಳುತ್ತಾರೆ?

ಒಬ್ಬ ವ್ಯಕ್ತಿಯ ನಿಜವಾದ ಸ್ವಭಾವವು ಅವರು ಸಮಾನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರಲ್ಲಿ ಇಲ್ಲ. ಆದರೆ ದುರ್ಬಲರನ್ನು ಅವರು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರಲ್ಲಿದೆ. ಅವರು ವೇಟರ್‌ಗಳ ಜತೆ, ಭದ್ರತಾ ಸಿಬ್ಬಂದಿಯೊಂದಿಗೆ, ಚಾಲಕರು ಅಥವಾ ಸಹಾಯಕರ ಬಳಿ, ಅವರಿಗೆ ನೀಡಲು ಏನೂ ಇಲ್ಲದ ಅಪರಿಚಿತರ ಹತ್ತಿರ, ಮಕ್ಕಳು ಮತ್ತು ಪ್ರಾಣಿಗಳ ಜೊತೆಗೆ ಹೇಗೆ ನಡೆದುಕೊಳ್ಳುತ್ತಾರೆ ನೋಡಿ. ಶಕ್ತಿಶಾಲಿಗಳನ್ನು ಮಾತ್ರ ಗೌರವಿಸುವವರಾಗಿದ್ದರೆ, ನೀವು ಅವರ ಜೀವನದಲ್ಲಿ ಮಹತ್ವ ಕಳೆದುಕೊಂಡ ಕ್ಷಣದಿಂದಲೇ ನಿಮಗೆ ದ್ರೋಹ ಮಾಡುತ್ತಾರೆ. ಮೂಲಭೂತ ದಯೆ ಅವರಲ್ಲಿ ಇಲ್ಲದಿದ್ದರೆ ಅಂಥವರ ಬಳಿ ಇರಬೇಡಿ. ವೇಟರ್‌ಗಳೊಂದಿಗೆ ಅಸಭ್ಯವಾಗಿ ವರ್ತಿಸುವ ಆದರೆ ನಿಮ್ಮ ಜೊತೆ ಸವಿಯಾಗಿರುವ ವ್ಯಕ್ತಿಯನ್ನು ಎಂದಿಗೂ ನಂಬಬೇಡಿ.

4) ಅವರ ನಗುವಿನ ಹಿಂದಿನ ಗುಪ್ತ ಅರ್ಥ

ಹೌದು, ಒಬ್ಬ ವ್ಯಕ್ತಿಯ ನಗು ಕೂಡ ಅವರ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸಬಹುದು. ನಿಜವಾದ ನಗು ನಾಭಿಯಿಂದಲೇ ಬರುತ್ತದೆ, ಇಡೀ ಮುಖವನ್ನು ಒಳಗೊಂಡಿರುತ್ತದೆ ಮತ್ತು ನಿಜವಾದ ಸಂತೋಷವನ್ನು ತೋರಿಸುತ್ತದೆ. ಬಲವಂತದ ನಗುವಿನಲ್ಲಿ ಬಾಯಿ ಮಾತ್ರ ಚಲಿಸುತ್ತದೆ, ಕಣ್ಣುಗಳು ಸತ್ತಿರುತ್ತವೆ. ಆ ವ್ಯಕ್ತಿ ಏನನ್ನೋ ಮರೆಮಾಡುತ್ತಿದ್ದಾನೆ. ಯಾರಾದರೂ ನಿಮ್ಮ ವೈಫಲ್ಯಗಳನ್ನು ನೋಡಿ ನಗುತ್ತಿದ್ದರೆ ಅದು ಅಣಕಿಸುವ ನಗು. ಅವರು ನೀವು ಸೋಲುವುದನ್ನು ನೋಡಲು ರಹಸ್ಯವಾಗಿ ಬಯಸುತ್ತಾರೆ. ಯಾವಾಗಲೂ ಇತರರನ್ನು ನೋಡಿ ನಗುವ ಆದರೆ ತಮ್ಮನ್ನು ಹಾಸ್ಯ ಮಾಡಿಕೊಳ್ಳದ ವ್ಯಕ್ತಿ ದುರಹಂಕಾರಿ ಮತ್ತು ಅಸುರಕ್ಷಿತ.

5) ಮೌನಿ ಜನರು ಅತ್ಯಂತ ಅಪಾಯಕಾರಿ

ವ್ಯಕ್ತಿಯ ಶಕ್ತಿ ಅವನ ಮೌನದಲ್ಲಿದೆ. ಕಡಿಮೆ ಮಾತನಾಡುವವರು ಮತ್ತು ಹೆಚ್ಚು ಗಮನಿಸುವವರು ನಿಜವಾಗಿಯೂ ನಿಯಂತ್ರಣ ಹೊಂದಿರುವವರು ಎಂದು ಚಾಣಕ್ಯ ಎಚ್ಚರಿಸಿದ್ದಾರೆ. ಕೋಣೆಯಲ್ಲಿ ಹೆಚ್ಚು ಜೋರಾಗಿ ಮಾತನಾಡುವ ವ್ಯಕ್ತಿ ಸಾಮಾನ್ಯವಾಗಿ ಅಸುರಕ್ಷಿತನಾಗಿರುತ್ತಾನೆ. ಮೌನ ವೀಕ್ಷಕ ಎಲ್ಲರ ದೌರ್ಬಲ್ಯಗಳನ್ನು ವಿಶ್ಲೇಷಿಸುವವನು. ಅವನು ಮಾತನಾಡುವುದಕ್ಕಿಂತ ಹೆಚ್ಚು ಕೇಳುವವನು, ನಿಮ್ಮ ಬಗ್ಗೆ ನಿಮಗೆ ತಿಳಿದಿರುವುದಕ್ಕಿಂತ ಹೆಚ್ಚು ಆತ ತಿಳಿದಿರುತ್ತಾನೆ.

ಚಾಣಕ್ಯನ ತಂತ್ರ: ಪರಿಸ್ಥಿತಿಯನ್ನು ನಿಯಂತ್ರಿಸಲು ಬಯಸುವಿರಾ? ಕಡಿಮೆ ಮಾತನಾಡಿ, ಹೆಚ್ಚು ಗಮನಿಸಿ. ಜನರು ಅದನ್ನು ಅರಿತುಕೊಳ್ಳದೆ ತಮ್ಮ ರಹಸ್ಯಗಳನ್ನು ಬಹಿರಂಗಪಡಿಸುತ್ತಾರೆ.

6) ನಿಮ್ಮೊಂದಿಗೆ ಗಾಸಿಪ್ ಮಾಡುವ ಜನರು ನಿಮ್ಮ ಬಗ್ಗೆಯೂ ಗಾಸಿಪ್ ಮಾಡುತ್ತಾರೆ

ಇನ್ನೊಬ್ಬರ ರಹಸ್ಯಗಳನ್ನು ಹರಡಲು ಇಷ್ಟಪಡುವವರನ್ನು ನೀವು ಆಗಾಗ ಭೇಟಿಯಾಗುತ್ತಿರುತ್ತೀರಿ. ಅವರ ಮಾತು ಕೇಳಲು ಖುಷಿಯಾಗಬಹುದು. ಆದರೆ ಅವರು ಅಪಾಯಕಾರಿಯೂ ಹೌದು. ಚಾಣಕ್ಯನ ಸೂತ್ರವಿದು- ಯಾರಾದರೂ ನಿಮ್ಮೊಂದಿಗೆ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಅವರು ನಿಮ್ಮ ಬಗ್ಗೆಯೂ ಇತರರೊಂದಿಗೆ ಕೆಟ್ಟದಾಗಿ ಮಾತನಾಡುತ್ತಾರೆ. ಜನರ ಬಗ್ಗೆಯಲ್ಲ, ವಿಚಾರಗಳ ಬಗ್ಗೆ ಮಾತನಾಡುವ ಜನ ನಿಮ್ಮ ಸುತ್ತ ಇರಲಿ. ಗಾಸಿಪ್ ಮಾಡುವವರು ಎಂದಿಗೂ ವಿಶ್ವಾಸಾರ್ಹರಲ್ಲ.

ಈ ಶಕ್ತಿಗಳನ್ನು ಬುದ್ಧಿವಂತಿಕೆಯಿಂದ ಬಳಸಿ. ನಕಲಿ ಸ್ನೇಹಿತರು ನಿಮಗೆ ದ್ರೋಹ ಮಾಡುವ ಮೊದಲು ಅವರನ್ನು ಗುರುತಿಸಿ. ವಿಷಕಾರಿ ಸಂಬಂಧಗಳು ನಿಮ್ಮನ್ನು ಬರಿದಾಗಿಸುವ ಮೊದಲು ಗುರುತಿಸಿ. ನಿಮ್ಮ ಜೀವನದಲ್ಲಿರಲು ನಿಷ್ಠಾವಂತ, ಬಲವಾದ ಜನರನ್ನು ಆರಿಸಿ. ಜನರು ನಿಮ್ಮನ್ನು ಮೋಸಗೊಳಿಸಲು ಬಿಡಬೇಡಿ. ಚಾಣಕ್ಯನ ಮಾನಸಿಕ ತಂತ್ರಗಳನ್ನು ಕರಗತ ಮಾಡಿಕೊಳ್ಳಿ ಮತ್ತು ನಿಮ್ಮ ಜೀವನದ ಮೇಲೆ ಹಿಡಿತ ಸಾಧಿಸಿ.


Previous Post Next Post