ಇಂದು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವುದು ಸಾಮಾನ್ಯವಾಗಿದೆ. ವೇತನ ಖಾತೆ, ಪಿಂಚಣಿ ಖಾತೆ, ಉಳಿತಾಯ ಖಾತೆ, ಆನ್‌ಲೈನ್ ಬ್ಯಾಂಕಿAಗ್ ಖಾತೆ ಇತ್ಯಾದಿ. ಕೆಲವು ಖಾತೆಗಳು ನಿರಂತರ ಬಳಕೆಯಲ್ಲಿರುತ್ತವೆ. ಮತ್ತೆ ಕೆಲವು ಖಾತೆಗಳು ಅಷ್ಟಾಗಿ ಬಳಕೆಯಲ್ಲಿ ಇರುವುದಿಲ್ಲ.
ಇಂತಹ ಅನಗತ್ಯ ಖಾತೆಗಳನ್ನು ನಿರ್ವಹಿಸುವುದು ಕಷ್ಟಕರ. ಮಾತ್ರವಲ್ಲ, ಅವು ನಮಗೆ ದಂಡಗಳ ರೂಪದಲ್ಲಿ ನಷ್ಟವನ್ನೂ ಉಂಟು ಮಾಡುತ್ತವೆ. ಹಾಗಾದರೆ ಅನಗತ್ಯ ಬ್ಯಾಂಕ್ ಖಾತೆಗಳನ್ನು ಕ್ಲೋಸ್ ಮಡುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅನಗತ್ಯ ಖಾತೆಗಳನ್ನು ಏಕೆ ಕ್ಲೋಸ್ ಮಾಡಬೇಕು?
ಹಲವಾರು ಬ್ಯಾಂಕ್‌ಗಳು ಪ್ರತಿ ತಿಂಗಳೂ ನಿಗದಿತ ಮೌಲ್ಯದ ಮಿನಿಮಮ್ ಬ್ಯಾಲೆನ್ಸ್ ಇರಿಸಬೇಕೆಂದು ಒತ್ತಾಯಿಸುತ್ತವೆ. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಮಿನಿಮಂ ಬ್ಯಾಲೆನ್ಸ್ ನಿರ್ವಹಣೆ ದಂಡ ತಪ್ಪಿಸಲು ಇಂತಹ ಖಾತೆಗಳನ್ನು ಕ್ಲೋಸ್ ಮಾಡುವುದು ಸೂಕ್ತ.
ಅನಗತ್ಯ ಬ್ಯಾಂಕ್ ಖಾತೆಗಳು ನಿಷ್ಕ್ರಿಯತೆಯಲ್ಲಿದ್ದರೂ ಡೆಬಿಟ್ ಕಾರ್ಡ್ ಅಥವಾ ಎಸ್‌ಎಂಎಸ್ ಅಲರ್ಟ್ಗಳಿಗೆ ವರ್ಷಕ್ಕೊಮ್ಮೆ ಶುಲ್ಕ ವಿಧಿಸಬಹುದು. ಇನ್ನು ಐಟಿ ರಿಟರ್ನ್ ಫೈಲ್ ಮಾಡುವಾಗ ಎಲ್ಲ ಖಾತೆಗಳ ಮಾಹಿತಿ ಕೊಡಬೇಕಾಗುತ್ತದೆ. ಇಂತಹ ಶುಲ್ಕ ಮತ್ತು ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಈ ಖಾತೆಗಳನ್ನು ಮುಚ್ಚುವುದು ಉತ್ತಮ.
ಬ್ಯಾಂಕ್ ಖಾತೆ ಮುಚ್ಚುವ ಮೊದಲು ಇವುಗಳನ್ನು ಗಮನಿಸಿ
ಬ್ಯಾಂಕ್ ಖಾತೆ ಮುಚ್ಚುವ ಮೊದಲು ಯುಪಿಐ ಸೇವೆಗಳಿಂದ ಡಿಲಿಂಕ್ ಮಾಡಿ. ಅಂದರೆ ಖಾತೆಯನ್ನು PhonePe, Google Pay, Paytm, Swiggy ಮುಂತಾದ ಅಪ್ಲಿಕೇಶನ್‌ಗಳಿಂದ ಡಿಲಿಂಕ್ ಮಾಡುವುದು ಅತ್ಯವಶ್ಯಕ.
ಅದೇ ರೀತಿ LIC ಪ್ರೀಮಿಯಂ, ಲೋನ್ EMI, OTT ಸಬ್ಸ್ಕ್ರಿಪ್ಷನ್‌ಗಳು ಕ್ಲೋಸ್ ಮಾಡಲು ಬಯಸಿರುವ ಬ್ಯಾಂಕ್ ಖಾತೆಯಿಂದ ಕಟ್ ಆಗುತ್ತಿದ್ದರೆ ಅವುಗಳನ್ನು ಬೇರೆ ಖಾತೆಗೆ ವರ್ಗಾಯಿಸಿ. ಈ ಖಾತೆಯಿಂದ ಯಾವುದಾದರೂ ಸಾಲ ಅಥವಾ ಶುಲ್ಕ ಬಾಕಿಯಾಗಿದ್ದರೆ ಅದನ್ನು ಮುಗಿಸಿ.
ಇದರ ಜೊತೆಗೆ ಐಟಿ ದಾಖಲೆ, ಭವಿಷ್ಯ ಲೆಕ್ಕಾಚಾರಗಳಿಗಾಗಿ ಇತ್ತೀಚಿನ 6 ತಿಂಗಳು ಅಥವಾ 1 ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು Pಆಈ ಅಥವಾ ಪ್ರಿಂಟ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ…
ಹೆಚ್ಚುವರಿ ಶುಲ್ಕ ಮತ್ತು ಇತರ ಕಿರಿಕಿರಿಗೆ ಕಾರಣವಾಗುವ ಅನಗತ್ಯ ಬ್ಯಾಂಕ್ ಖಾತೆಗಳನ್ನು ಕ್ಲೋಸ್ ಮಡುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬ್ಯಾಂಕ್ ಖಾತೆ ಕ್ಲೋಸ್ ಮಾಡುವ ವಿಧಾನ
ಮುಖ್ಯವಾಗಿ ಯಾವುದೇ ಬ್ಯಾಂಕ್ ಖಾತೆಗಳನ್ನು ಆನ್‌ಲೈನ್ ಮೂಲಕ ಮುಚ್ಚಲು ಅವಕಾಶವಿಲ್ಲ. ನೀವು ಖಾತೆ ತೆರೆದ ಶಾಖೆಗೆ ಹೋಗಿ ಅಧಿಕೃತ ವಿನಂತಿ ಸಲ್ಲಿಸಬೇಕು.
ಶಾಖೆಯಿಂದ ಖಾತೆ ಕ್ಲೋಸಿಂಗ್ ಫಾರ್ಮ್ ಪಡೆಯಿರಿ. ಈ ಫಾರ್ಮ್ ಕೆಲವು ಬ್ಯಾಂಕ್‌ಗಳ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. ಜಂಟಿ ಖಾತೆಗಳಿದ್ದರೆ ಎಲ್ಲಾ ಖಾತೆದಾರರ ಸಹಿ ಬೇಕಾಗುತ್ತದೆ.
ಫಾರ್ಮ್’ನಲ್ಲಿ ಈ ವಿವರಗಳನ್ನು ಭರ್ತಿ ಮಾಡಿ; ಖಾತೆದಾರರ ಹೆಸರು, ಖಾತೆ ಸಂಖ್ಯೆ, ಸಂಪರ್ಕ ಸಂಖ್ಯೆ, ವಿಳಾಸ, ಖಾತೆ ಮುಚ್ಚುವ ಕಾರಣ ದಿನಾಂಕ ಹಾಗೂ ಸಹಿಗಳನ್ನು ಭರ್ತಿ ಮಾಡಿ.
ಪಾಸ್‌ಬುಕ್, ಚೆಕ್ ಬುಕ್, ಡೆಬಿಟ್ ಕಾರ್ಡ್, ಗುರುತಿನ ಪುರಾವೆ (ಆಧಾರ್ / ಪ್ಯಾನ್), ವಿಳಾಸ ಪುರಾವೆ (ವಿದ್ಯುತ್ ಬಿಲ್, ಪಾಸ್‌ಪೋರ್ಟ್ ಮುಂತಾದವು) ಇತ್ಯಾದಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ಮುಚ್ಚುವ ಶುಲ್ಕದ ವಿವರ
ಖಾತೆ ತೆರೆದು ಕೇವಲ 14 ದಿನದೊಳಗೆ ಕ್ಲೋಸ್ ಮಾಡಲು ಹೋದರೆ ಬಹುತೇಕ ಬ್ಯಾಂಕುಗಳು ಯಾವುದೇ ಶುಲ್ಕ ವಿಧಿಸುವುದಿಲ್ಲ. 14 ದಿನದ ನಂತರ ಕ್ಲೋಸ್ ಮಾಡಲು ಹೋದರೆ ನಿಗದಿತ ಶುಲ್ಕ ಪಾವತಿಸಬೇಕು. 14 ದಿನಗಳ ನಂತರ ಖಾತೆ ಕ್ಲೋಸ್ ಮಾಡಲು ವಿವಿಧ ಬ್ಯಾಂಕುಗಳು ವಿಧಿಸುವ ಶುಲ್ಕದ ವಿವರ ಈ ಕೆಳಗಿನಂತಿದೆ:
SBI : ₹500 + GST
HDFC : ₹500 + Txn Charges
ICICI : ₹500 + Txn Charges
Canara Bank: ₹200 ರಿಂದ ₹300
Axis Bank: ₹500
ಈ ದರಗಳು ಕಾಲಾನುಗುಣವಾಗಿ ಬದಲಾಗಬಹುದು. ಖಾತೆ ಮುಚ್ಚುವ ಮೊದಲು ಸಂಬAಧಿತ ಬ್ಯಾಂಕ್ ಶಾಖೆಯಲ್ಲಿಯೇ ದೃಢಪಡಿಸಿಕೊಳ್ಳಿ.
7ರಿಂದ 10 ದಿಗಳಲ್ಲಿ ಖಾತೆ ಕ್ಲೋಸ್
ಗಮನಾರ್ಹವೆಂದರೆ, ಕೆಲವೊಂದು ಬ್ಯಾಂಕ್‌ಗಳಲ್ಲಿ ನಿಮ್ಮ ಖಾತೆ 24 ತಿಂಗಳು ಮತ್ತು ಅದಕ್ಕಿಂತ ಹೆಚ್ಚು ಕಾಲ ನಿರಂತರವಾಗಿ ನಿಷ್ಕ್ರಿಯವಾಗಿದ್ದರೆ ಬ್ಯಾಂಕ್ ಆ ಖಾತೆಯನ್ನು ‘Dormant Account’ ಎಂದು ಪರಿಗಣಿಸಿ ತಾನೇ ಮುಚ್ಚಲು ಪ್ರಾರಂಭಿಸಬಹುದು.
ನೀವೇ ಖಾತೆ ಕ್ಲೋಸ್ ಪ್ರಕ್ರಿಯೆ ಪ್ರಾಂಭಿಸಿದರೆ, 7 ರಿಂದ 10 ಕೆಲಸದ ದಿನಗಳಲ್ಲಿ ಪ್ರಕ್ರಿಯೆ ಪೂರ್ಣವಾಗಬಹುದು. ನಿಮ್ಮ ಖಾತೆ ಪೂರ್ತಿ ಮುಚ್ಚಿದ ನಂತರ ತಾತ್ಕಾಲಿಕವಾಗಿ ಯಾವುದೇ ಬಾಕಿ ಸೇವಾ ಶುಲ್ಕ ಅಥವಾ ಇನ್‌ಟರಸ್ಟ್ ಕಟ್ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ.
ಹೆಚ್ಚು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವುದರಿಂದ ಹೆಚ್ಚಿನ ಹೊಣೆ ಮತ್ತು ಅನಗತ್ಯ ಶುಲ್ಕಗಳ ತೊಂದರೆ ಬರುವ ಸಾಧ್ಯತೆ ಇದೆ. ಹಾಗಾಗಿ, ನೀವು ನಿಯಮಿತವಾಗಿ ಬಳಸದೆ ಇರುವ ಅಥವಾ ಮರೆತು ಹೋಗಿರುವ ಖಾತೆಗಳನ್ನು ಮುಚ್ಚುವುದು ಉತ್ತಮ. ಖಾತೆ ಮುಚ್ಚುವುದು ಒಮ್ಮೆ ಮಾತ್ರದ ಕೆಲಸ. ಆದರೆ ಇದು ನಿಮಗೆ ಸಾಲದ ಅರ್ಜಿ, ಐಟಿ ದಾಖಲೆ ಅಥವಾ ಇತರೆ ಆರ್ಥಿಕ ವಿಷಯಗಳಲ್ಲಿ ಸುಧಾರಣೆಗೆ ಅನುಕೂಲವಾಗುತ್ತದೆ.