Bangalore university-ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿವಿಧ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Bangalore university-ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿವಿಧ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿವಿಧ ಸ್ನಾತಕ ಪದವಿಗಳನ್ನು(Bangalore university admission)ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಈ ವರ್ಷದ ಶಾಲಾ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಇದರ ಕುರಿತು ಅರ್ಜಿ ಸಲ್ಲಿಸಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಬೆಂಗಳೂರು ನಗರ ವಿಶ್ವವಿದ್ಯಾನಿಲಯವು(Bangalore university) “ಜ್ಞಾನಜ್ಯೋತಿ-ಸೆಂಟ್ರಲ್ ಕಾಲೇಜ್ ಕ್ಯಾಂಪಸ್” ಆವರಣದಲ್ಲಿ ವಿವಿಧ ಸ್ನಾತಕ ಪದವಿ ಕೋರ್ಸುಗಳಿಗೆ ಹಾಗೂ ಬೆಂಗಳೂರು ನಗರದ ಮಲ್ಲೇಶ್ವರಂನ 13ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ವಿಶ್ವವಿದ್ಯಾನಿಲಯದ ಮಹಿಳಾ ಮಹಾವಿದ್ಯಾಲಯದ ಸ್ನಾತಕ ಕೋರ್ಸುಗಳ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಯಾವೆಲ್ಲ ಪದವಿಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Bangalore university admission-2025:

 ಜ್ಞಾನಜ್ಯೋತಿ-ಸೆಂಟ್ರಲ್ ಕಾಲೇಜ್ ಕ್ಯಾಂಪಸ್‌ನಲ್ಲಿ ಲಭ್ಯವಿರುವ ಸ್ನಾತಕ ಕೋರ್ಸುಗಳು: 

1) ಬಿ.ಸಿ.ಎ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ & ಮೆಷಿನ್ ಲರ್ನಿಂಗ್) 

1) ಬಿ.ಸಿ.ಎ (ಡೇಟಾ ಸೈನ್ಸ್) 

1) ಬಿ.ಎಸ್ಸಿ (ಗಣಕ ವಿಜ್ಞಾನ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ) 

1) ಬಿ.ಎಸ್ಸಿ (ಫ್ಯಾಷನ್ & ಅಪ್ಯಾರಲ್ ಡಿಸೈನ್) 

1) ಬಿ.ಬಿ.ಎ (ಬಿಸಿನೆಸ್ ಅನಾಲಿಟಿಕ್ಸ್) 

ಇಂಡಸ್ಟ್ರಿ ಇಂಟಿಗ್ರೇಟೆಡ್ ಪ್ರೋಗ್ರಾಂಗಳು: 

1) ಬಿ.ಕಾಂ (ಫೈನಾನ್ಸ್ & ಅಕೌಂಟಿಂಗ್) 

1) ಬಿ.ಕಾಂ (ಫೈನಾನ್ಷಿಯಲ್ ಟೆಕ್ನಾಲಜಿ) - ಸೆಲ್ಫ್ ಫೈನಾನ್ಸ್

1) ಬಿ.ಎ (ಆಂಗ್ಲ, ಫ್ರೆಂಚ್, ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ) - ಯಾವುದೇ 3 ವಿಷಯಗಳ ಸಂಯೋಜನೆ

ಮಲ್ಲೇಶ್ವರಂನ ಮಹಿಳಾ ಮಹಾವಿದ್ಯಾಲಯದ ಕೋರ್ಸುಗಳು: 

1) ಬಿ.ಸಿ.ಎ (ಸಾಮಾನ್ಯ) 

1) ಬಿ.ಬಿ.ಎ (ಸಾಮಾನ್ಯ) 

1) ಬಿ.ಕಾಂ (ಸಾಮಾನ್ಯ) 

1) ಬಿ.ಎಸ್ಸಿ (ಗಣಕ ವಿಜ್ಞಾನ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ) 

1) ಬಿ.ಎ (ಆಂಗ್ಲ, ಫ್ರೆಂಚ್, ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ) - ಯಾವುದೇ 3 ವಿಷಯಗಳ ಸಂಯೋಜನೆ

ಅರ್ಜಿ ಸಲ್ಲಿಕೆ ಮತ್ತು ಮಾಹಿತಿ:

ಆಸಕ್ತ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಜಾಲತಾಣ www.bcu.ac.in ಮೂಲಕ ಮಾಹಿತಿ ಪಡೆಯಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 

Online Apply Method-ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ವಿಧಾನ:

ಅರ್ಹ ವಿದ್ಯಾರ್ಥಿಗಳು Apply Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ "Admission" ಬಟನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಪ್ರವೇಶ ಪಡೆಯಲು ಆಸಕ್ತಿಯಿರುವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

ಪ್ರವೇಶಾತಿ ವಿವರ: 

ಪ್ರವೇಶ ಪ್ರಕ್ರಿಯೆಯು 2025ರ ಏಪ್ರಿಲ್ 21ರಿಂದ ಆರಂಭವಾಗಿದೆ. 

ಹೆಚ್ಚಿನ ವಿವರಗಳಿಗೆ www.bcu.ac.in ಗೆ ಭೇಟಿ ನೀಡಿ. 

Post a Comment

Previous Post Next Post

Top Post Ad

CLOSE ADS
CLOSE ADS
×