Farm Pond Subsidy-ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ

Farm Pond Subsidy-ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ

ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ಗರಿಷ್ಟ ಶೇ 90% ರಿಂದ ಶೇ 80% ರವರೆಗೆ ಸಬ್ಸಿಡಿಯಲ್ಲಿ ಕೃಷಿ ಹೊಂಡವನ್ನು(Krishi Honda subsidy) ನಿರ್ಮಾಣ ಮಾಡಿಕೊಳ್ಳಲು ಅರ್ಹ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು, ಈ ಲೇಖನದಲ್ಲಿ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಕೃಷಿ ಭಾಗ್ಯ ಯೋಜನೆಯಡಿ(Krishi Bhagya) ಕೃಷಿ ಹೊಂಡವನ್ನು ನಿರ್ಮಾಣ ಸೇರಿದಂತೆ ಒಟ್ಟು ಘಟಕಗಳಿಗೆ ಸಬ್ಸಿಡಿಯನ್ನು ಪಡೆಯಲು ಅವಕಾಶವಿದ್ದು ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ನೀರಿನ ಕೊರತೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕೃಷಿ ಹೊಂಡ ನಿರ್ಮಾಣವು ರೈತರಿಗೆ ನೆರವಾಗಲಿದೆ.

ಕೃಷಿ ಹೊಂಡ ನಿರ್ಮಾಣಕ್ಕೆ ಹೊಂಡದ(Farm Pond Scheme) ಅಳತೆವಾರು ಎಷ್ಟು ಸಬ್ಸಿಡಿಯನ್ನು ಪಡೆಯಬಹುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲಾತಿಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Krishi Bhagya Yojane-2025: ಕೃಷಿ ಭಾಗ್ಯ ಯೋಜನೆ ಯೋಜನೆಯ ಉದ್ದೇಶ ಮತ್ತು ಸವಲತ್ತುಗಳು:

ಬೇಸಿಗೆ ಸಮಯದಲ್ಲಿ ನೀರಿನ ಕೊರತೆಯನ್ನು ತಗ್ಗಿಸಿ ಬೆಳೆಯನ್ನು ಬೆಳೆಯಲು ನೀರನ್ನು ಒದಗಿಸಲು ರೈತರಿಗೆ ನೆರವಾಗಲು ಈ ಯೋಜನೆಯಡಿ ಕೃಷಿ ಭಾಗ್ಯ ಒಟ್ಟಾರೆ ಪ್ಯಾಕೇಜ್‌ನಲ್ಲಿ 6 ಕಡ್ಡಾಯ ಘಟಕಗಳಿದ್ದು, ಫಲಾನುಭವಿ ರೈತರು ಎಲ್ಲಾ ಘಟಕಗಳನ್ನು ತಪ್ಪದೇ ಅಳವಡಿಸಿಕೊಳ್ಳಬೇಕಾಗಿರುತ್ತದೆ ಅವುಗಳ ವಿವರ ಹೀಗಿದೆ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ಕೃಷಿ ಹೊಂಡಕ್ಕೆ ಪಾಲಿಥೀನ್ ಹೊದಿಕೆ, ಹೊಂಡದಿಂದ ನೀರನ್ನು ಎತ್ತಲು ಡೀಸಲ್ ಪಂಪ್ ಸೆಟ್, ಸ್ಪಿಂಕ್ಲರ್ ಸೆಟ್ ಮತ್ತು ಹೊಂಡಕ್ಕೆ ಸುತ್ತಲು ತಂತಿ ಬೇಲಿ ಹಾಕಿಕೊಳ್ಳಲು ಸಬ್ಸಿಡಿ ಪಡೆಯಬಹುದು.

Farm Pond Size-ಅಳತೆವಾರು ಕೃಷಿ ಹೊಂಡದ ಮಾಹಿತಿ(ಮೀಟರ್ ಗಳಲ್ಲಿ):

1) 10 x 10 x 3

2) 12 x 12 x 3

3) 15 x 15 x 3

4) 18 x 18 x 3

5) 21 x 21 x 3

Farm Pond Subsidy-ಅಳತೆವಾರು ಕೃಷಿ ಹೊಂಡಕ್ಕೆ ಸಬ್ಸಿಡಿ:

Farm pond size

ಗಮನಿಸಿ: ಈ ಮೇಲಿನ ಸಬ್ಸಿಡಿ ಹಣದಲ್ಲಿ ಬದಲಾವಣೆಯನ್ನು ಮಾಡಲಾಗಿದ್ದು ಹೊಂಡ ನಿರ್ಮಾಣಕ್ಕೆ ಸಹಾಯಧನವನ್ನು ಹೆಚ್ಚಳ ಮಾಡಲಾಗಿದೆ.

ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ/ Farm pond polythene :

ಕೃಷಿ ಹೊಂಡದಲ್ಲಿ ಸಂಗ್ರಹಣೆಯಾದ ನೀರು ಇಂಗಿ ಹೋಗದಂತೆ ತಡೆಗಟ್ಟಲು ಕೆಂಪು ಮಣ್ಣಿನಲ್ಲಿ ನಿರ್ಮಿಸಲಾದ ಕೃಷಿ ಹೊಂಡಕ್ಕೆ ಪಾಲಿಥೀನ್ ಹೊದಿಕೆ ಅಳವಡಿಸುವುದು ಕಡ್ಡಾಯವಾಗಿರುತ್ತದೆ.

ಕ್ಷೇತ್ರ ಬದು ನಿರ್ಮಾಣ :

ರೈತರ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಪೋಲಾಗದಂತೆ ಅದೇ ಜಮೀನಿನಲ್ಲಿ ಇಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ಸಂಗ್ರಹಿಸಲು ಅನುವಾಗುವಂತೆ ರೈತರ ಜಮೀನಿನಲ್ಲಿ ಕ್ಷೇತ್ರ ಬದು ನಿರ್ಮಾಣ ಮಾಡುವುದು

ತಂತಿ ಬೇಲಿ:

ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ನಿರ್ಮಿಸಿಕೊಳ್ಳುವ ಕೃಷಿ ಹೊಂಡದಲ್ಲಿ ಯಾವುದೇ ಜಾನುವಾರು / ಜನರು ಆಕಸ್ಮಿಕವಾಗಿ ಬಿದ್ದು ಅವಘಡಗಳು/ಪ್ರಾಣ ಹಾನಿ ಸಂಭವಿಸದಂತೆ ತಡೆಯಲು ಕಡ್ಡಾಯವಾಗಿ ತಂತಿ ಬೇಲಿ ಘಟಕವನ್ನು ಅಳವಡಿಸಿಕೊಳ್ಳಬೇಕಾಗಿರುತ್ತದೆ ಹಾಗೂ ಸಂತರದಲ್ಲೂ ಸರಿಯಾಗಿ ನಿರ್ವಹಣೆ ಮಾಡಬೇಕಾಗಿರುತ್ತದೆ.

ಡೀಸಲ್ ಪಂಪ್ ಸೆಟ್/Diesel pump set:

ಕೃಷಿ ಹೊಂಡದಿಂದ ನೀರನ್ನು ಎತ್ತಲು ಡೀಸೆಲ್ ಪಂಪ್ ಸೆಟ್ ಅನ್ನು ಸಹಾಯಧನದಲ್ಲಿ ರೈತರು ಪಡೆಯಬಹುದು.

ಲಘು ನೀರಾವರಿ/Irrigation:

ಕೃಷಿ ಹೊಂಡದಿಂದ ನೀರನ್ನು ಎತ್ತಿದ ಬಳಿಕ ರೈತರು ತಮ್ಮ ಬೆಳೆಗಳಿಗೆ ನೀರನ್ನು ಒದಗಿಸಲು ಲಘು ನೀರಾವರಿ ಘಟಕವನ್ನು ಸಹ ಸಹಾಯಧನದಲ್ಲಿ ಪಡೆಯಬಹುದು.

Farm Pond Application- ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ರೈತರು ಅಗತ್ಯ ದಾಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Documents For Krishi Honda-ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು:

1) ಆಧಾರ್ ಕಾರ್ಡ ಪ್ರತಿ/Adhar Card

2) ಪೋಟೋ/Photo

3) ಪಹಣಿ/ಊತಾರ್/RTC

4) ಬ್ಯಾಂಕ್ ಪಾಸ್ ಬುಕ್/Bank Pass book

5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ(ಅನ್ವಯಿಸಿದ್ದಲ್ಲಿ ಮಾತ್ರ)

6) NOC ಪ್ರಮಾಣ ಪತ್ರ

7) ಬಾಂಡ್ ಪೇಪರ್/Bond Paper

Krishi Honda Application process-ಅರ್ಜಿ ವಿಲೇವಾರಿ ಪ್ರಕ್ರಿಯೆ:

ರೈತರು ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಕೃಷಿ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ನಡೆಸಿ ಅರ್ಹ ರೈತರ ದಾಖಲೆಗಳನ್ನು ಕೆ-ಕಿಸಾನ್ ತಂತ್ರಾಂಶದ ಮೂಲಕ ಆನ್ಲೈನ್ ನಲ್ಲಿ ದಾಖಲಿಸುತ್ತಾರೆ ಅನುದಾನ ಲಭ್ಯತೆಯ ಆಧಾರದ ಮೇಲೆ ರೈತರಿಗೆ ಕೃಷಿ ಹೊಂಡವನ್ನು ತೆಗೆಸಲು ವರ್ಕ್ ಆಡರ್ ಅನ್ನು ನೀಡುತ್ತಾರೆ ಇದಾದ ಬಳಿಕ ರೈತರು ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಬೇಕು ಈ ಮಧ್ಯದಲ್ಲಿ ಹೊಂಡದ ಪ್ರತಿ ಹಂತದಲು ಸಹ ಜಿಪಿಎಸ್ ಪೋಟೋವನ್ನು ದಾಖಲಿಸಲಾಗುತ್ತದೆ.

For More Information-ಹೆಚ್ಚಿನ ಮಾಹಿತಿಗಾಗಿ:

ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್- Click here

ಕೆ-ಕಿಸಾನ್ ತಂತ್ರಾಂಶ- Click here

Farm Pond guideline 2024-25/ಕೃಷಿ ಭಾಗ್ಯ ಮಾರ್ಗಸೂಚಿ: Download Now

Post a Comment

Previous Post Next Post

Top Post Ad

CLOSE ADS
CLOSE ADS
×