ನೀವು ಶ್ರೀಮಂತರಾಗುವ ಮುನ್ನ ಶ್ರೀಕೃಷ್ಣ ಈ ಸೂಚನೆಗಳನ್ನು ನೀಡುತ್ತಾನೆ.

ನೀವು ಶ್ರೀಮಂತರಾಗುವ ಮುನ್ನ ಶ್ರೀಕೃಷ್ಣ ಈ ಸೂಚನೆಗಳನ್ನು ನೀಡುತ್ತಾನೆ.

ನಮ್ಮ ಜೀವನದಲ್ಲಾಗಿರಬಹುದು ಅಥವಾ ಬ್ರಹ್ಮಾಂಡದಲ್ಲೇ ಆಗಿರಬಹುದು ಯಾವುದಾದರೂ ಘಟನೆ ನಡೆಯುವ ಮುನ್ನ ದೇವರು ನಮಗೆ ಸೂಚನೆಗಳನ್ನು ನೀಡುತ್ತಾನೆ ಎಂದು ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದು ನಮಗೆ ಶುಭ ಸೂಚನೆಯನ್ನು ನೀಡುವಂತಿರಬಹುದು ಅಥವಾ ಅಶುಭ ಸೂಚನೆಯನ್ನು ನೀಡುವಂತಿರಬಹುದು. ಅವುಗಳು ನಮಗೆ ನಾನಾ ಸೂಚನೆಗಳನ್ನು ನೀಡುತ್ತದೆ. ಅದೇ ರೀತಿ ಸಾಕ್ಷಾತ್‌ ಶ್ರೀಕೃಷ್ಣ ಪರಮಾತ್ಮ ಕೂಡ ಲಕ್ಷ್ಮಿ ದೇವಿ ನಮಗೆ ಒಲಿಯುವ ಮುನ್ನವಾಗಿರಬಹುದು ಅಥವಾ ದುರಾದೃಷ್ಟವು ಕಳೆದು ಅದೃಷ್ಟ ಬರುವಾಗ ಆಗಿರಬಹುದು ಪರಮಶ್ರೇಷ್ಠನಾದ ದೇವರು ಯಾವೆಲ್ಲಾ ಸೂಚನೆಗಳನ್ನು ನೀಡುತ್ತಾನೆ ಎಂಬುದನ್ನು ನಾರದ ಮಹರ್ಷಿಗಳಿಗೆ ಹೇಳಿದ್ದನು. ಆ ಸೂಚನೆಗಳ ಕುರಿತು ನಿಮಗೆ ಈ ಲೇಖನ ಮಾಹಿತಿಯನ್ನು ನೀಡುವುದು.

ಮೊದನಲೇ ಸೂಚನೆ

ಶ್ರೀಕೃಷ್ಣನು ಅದೃಷ್ಟ ಆರಂಭವಾಗುವ ಮುನ್ನ ನಮಗೆ ನೀಡುವ ಮೊದಲನೇ ಸೂಚನೆಯೆಂದರೆ ಬ್ರಹ್ಮ ಮುಹೂರ್ತದಲ್ಲಿ ನಮಗೆ ಎಚ್ಚರವಾಗುವುದು. ನಮ್ಮ ಅದೃಷ್ಟ ಬೆಳಗುವ ಮುನ್ನ ನಮಗೆ ಬ್ರಹ್ಮ ಮುಹೂರ್ತದಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾಗುತ್ತದೆ. ಹಾಗೂ ದೇವರ ನಾಮಗಳನ್ನು ಪಠಿಸುವುದಾಗಿದೆ. ಬ್ರಹ್ಮ ಮುಹೂರ್ತದಲ್ಲಿ ಎದ್ದ ವ್ಯಕ್ತಿಯು ದೇವರ ನಾಮವನ್ನು ಸ್ಮರಿಸಲು ಪ್ರಾರಂಭಿಸುತ್ತಾನೆ. ಇದು ಆ ವ್ಯಕ್ತಿಯ ಒಳ್ಳೆಯ ದಿನಗಳು ಪ್ರಾರಂಭವಾಗಲಿದೆ ಎಂಬುದರ ಶುಭ ಸೂಚನೆಯಾಗಿದೆ.

ಎರಡನೇ ಸೂಚನೆ

ಕೆಲವೊಮ್ಮೆ ಕೆಲವೊಂದು ಕನಸುಗಳು ಕೂಡ ನಮಗೆ ಮುಂಬರುವ ಒಳ್ಳೆಯ ದಿನಗಳ ಕುರಿತು ಸೂಚನೆಯನ್ನು ನೀಡುತ್ತದೆ. ಅಂತಹ ಕನಸುಗಳು ಭವಿಷ್ಯದಲ್ಲಿ ನಮ್ಮ ಭಾಗ್ಯದ ಬಾಗಿಲು ತೆರೆಯುವುದರ ಬಗ್ಗೆ ಸೂಚನೆಯನ್ನು ನೀಡುತ್ತದೆ. ಶ್ರೀಕೃಷ್ಣನು ನಿಮಗೆ ಭಾಗ್ಯದ ಬಾಗಿಲು ತೆರೆಯುವ ಮುನ್ನ ಇಂತಹುದ್ದೇ ಒಂದು ಶುಭ ಕನಸನ್ನು ನೀಡುತ್ತಾನೆ. ಯಾರೋ ನಿಮ್ಮ ಕೈಗಳನ್ನು ಹಿಡದು ನಡೆಸಿದಂತೆ ಅಥವಾ ಯಾರೋ ನಿಮ್ಮ ಕೈಯನ್ನು ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವಂತೆ ಕನಸು ಬೀಳುತ್ತದೆ. ಇಂತಹ ಕನಸು ದೇವರೇ ನಿಮ್ಮ ಕೈಯನ್ನು ಹಿಡಿದುಕೊಂಡು ನಡೆಸುತ್ತಿದ್ದಾನೆ ಎಂಬುದನ್ನು ಹೇಳುತ್ತದೆ.

ಮೂರನೇ ಸೂಚನೆ

ಶ್ರೀಕೃಷ್ಣನು ನಮಗೆ ಒಳ್ಳೆಯ ದಿನಗಳು ಆರಂಭವಾಗುವ ಮುನ್ನ ನಮ್ಮ ಮನಸ್ಸನ್ನು ನಿಯಂತ್ರಿಸುತ್ತಾನೆ. ಶಾಂತಯುತವಾದ ಮನಸ್ಸನ್ನು ನೀಡುತ್ತಾನೆ. ತಾಳ್ಮೆಯನ್ನು ಹೆಚ್ಚು ಮಾಡುತ್ತಾನೆ. ಅತಿಯಾದ ಕೋಪವುಳ್ಳ ವ್ಯಕ್ತಿ ಯಾವಾಗ ಇದ್ದಕ್ಕಿದ್ದಂತೆ ತಾಳ್ಮೆಯಿಂದಿರಲು, ಕೋಪವನ್ನು ಬಿಡುತ್ತಾನೋ ಅಂತಹ ವ್ಯಕ್ತಿಯ ಒಳ್ಳೆಯ ದಿನಗಳು ಆರಂಭವಾಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾವ ವ್ಯಕ್ತಿಯ ಮೇಲೆ ದೇವರ ಆಶೀರ್ವಾದ ಬೀಳಲು ಪ್ರಾರಂಭವಾಗುತ್ತದೆಯೋ ಅಂತಹ ಸಂದರ್ಭದಲ್ಲಿ ಅವನು ಶಾಂತಿಯನ್ನು, ತಾಳ್ಮೆಯನ್ನು ಹೊಂದುತ್ತಾನೆ. 

ನಾಲ್ಕನೇ ಸೂಚನೆ

ನಿಮ್ಮ ಮನೆಗೆ ಲಕ್ಷ್ಮಿ ದೇವಿಯು ಆಗಮಿಸುವ ಮುನ್ನ, ಸುಖ - ಸಂಪತ್ತು ನಿಮ್ಮ ಮನೆಗೆ ಬರುವ ಮುನ್ನ ಗೋಮಾತೆಯು ಇದ್ದಕ್ಕಿದ್ದಂತೆ ನಿಮ್ಮ ಮನೆಗೆ ಬರುತ್ತಾಳೆ. ಅಂದರೆ ಹಸು ನಿಮ್ಮ ಮನೆಗೆ ಬಂದು ತಿನ್ನಲು ಆಹಾರವನ್ನು ಕೇಳುತ್ತದೆ. ಇದರೊಂದಿಗೆ ಗೋವುಗಳಲ್ಲದೇ ಆಂಜನೇಯ ಸ್ವಾಮಿಯ ರೂಪವಾದ ಮಂಗಗಳು ಕೂಡ ನಿಮ್ಮ ಮನೆಗೆ ಬರಬಹುದು. ಹಸು ಮತ್ತು ಮಂಗಗಳು ಬಂದು ನಿಮ್ಮ ಬಳಿ ಆಹಾರವನ್ನು ತೆಗೆದುಕೊಮಡು ಹೋದರೆ ದೇವರ ಆಶೀರ್ವಾದವಿರುವ ಸಂಕೇತವಾಗಿದೆ. ಮಕ್ಕಳು ನಿಮ್ಮ ಮನೆಯ ಬಾಗಿಲಲ್ಲಿ ಬಂದು ಖಷಿಯಿಂದ ಆಟವನ್ನು ಆಡುತ್ತಿದ್ದರೂ ಅದು ನಿಮ್ಮ ಶುಭ ದಿನದ ಸೂಚನೆಯಾಗಿದೆ.

ಐದನೇ ಸೂಚನೆ

ದೇವರ ಪೂಜೆಯನ್ನು ಮಾಡುವಾಗ ದೇವರು ಮುಗುಳ್ನಗು ನೀಡಿದಂತೆ ಅನುಭವವಾದರೆ ಅದು ದೇವರು ನಿಮಗೆ ಶುಭ ಸೂಚನೆಯನ್ನು ನೀಡುವುದಾಗಿದೆ. ದೇವರ ಪೂಜೆಯನ್ನು ಮಾಡುವಾಗ ದೇವರು ನಕ್ಕಂತೆ ಎಣಿಸಿದರೆ ದೇವರು ನಿಮ್ಮನ್ನು ಆಶೀರ್ವದಿಸುತ್ತಿದ್ದಾನೆ. ಮುಂದಿನ ದಿನಗಳಲ್ಲಿ ನಿಮ್ಮ ಕಷ್ಟಗಳು ದೂರಾಗಿ ಅದೃಷ್ಟ ಬಾಗಿಲು ನಿಮಗಾಗಿ ತೆರೆಯಲಿದೆ ಎಂಬುದನ್ನು ಇದು ಸೂಚಿಸುತ್ತದೆ.

Post a Comment

Previous Post Next Post

Top Post Ad

CLOSE ADS
CLOSE ADS
×