E-Swathu Download-ಉಚಿತವಾಗಿ ನಿಮ್ಮ ಆಸ್ತಿಯ ಇ-ಸ್ವತ್ತಿನ ವಿವರ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ

ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಆಸ್ತಿಯ ಇ-ಸ್ವತ್ತಿನ(E-Swathu) ವಿವರವನ್ನು ತಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಲು ಸಂಬಂಧಪಟ್ಟ ಇಲಾಖೆಯಿಂದ(Grama Panchayat) ಅಧಿಕೃತ ವೆಬ್ಸೈಟ್ ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದ್ದು ಇದರ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.

ಗ್ರಾಮೀಣ ಪ್ರದೇಶದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಸಾರ್ವಜನಿಕರು ತಮ್ಮ ಆಸ್ತಿಯ(E-Swathu Online Status) ಅಧಿಕೃತ ವಿವರವನ್ನು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು ಈ ಅಂಕಣದಲ್ಲಿ ಗ್ರಾಮೀಣ ಭಾಗದ ಆಸ್ತಿಗಳಿಗೆ ನೀಡುವ ಇ-ಸ್ವತ್ತು ದಾಖಲೆಯ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.ಮನೆ/ನಿವೇಶನ/ಖಾಲಿ ಜಾಗವನ್ನು ಹೊಂದಿರುವ ನಾಗರಿಕರು ಕಡ್ಡಾಯವಾಗಿ ಇ-ಸ್ವತ್ತು ಪ್ರಮಾಣ ಪತ್ರE-Swathu Document) ದಾಖಲೆಯನ್ನು ಹೊಂದುವುದು ಅತೀ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ಈಗಾಗಲೇ ಇ-ಸ್ವತ್ತು ದಾಖಲೆಯನ್ನು ಪಡೆದಿರುವವರು ಮತ್ತು ತಮ್ಮ ಆಸ್ತಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಡಿಜಿಟಲ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡು ಆನ್ಲೈನ್ ನಲ್ಲಿ ಚೆಕ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.ಇದೆ ತರಹದ ನೇಮಕಾತಿ,ವಿದ್ಯಾರ್ಥಿವೇತನ,ಕೇಂದ್ರ/ರಾಜ್ಯ ಯೋಜನೆಗಳಿಗಾಗಿ ನಮ್ಮ ಟೆಲಿಗ್ರಾಮ ಚಾನಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

Property Status Check-ಉಚಿತವಾಗಿ ಆಸ್ತಿಯ ಇ-ಸ್ವತ್ತಿನ ವಿವರವನ್ನು ಪಡೆಯುವ ವಿಧಾನ:

ಪಂಚಾಯತ್ ರಾಜ್ ಇಲಾಖೆಯ ಅಧಿಕೃತ e-swathu ಜಾಲತಾಣವನ್ನು ಪ್ರವೇಶ ಮಾಡಿ ನಾಗರಿಕರು ತಮ್ಮ ಆಸ್ತಿಯ ಮಾಲೀಕತ್ವದ ವಿವರವನ್ನು ಮನೆಯಲ್ಲೇ ಕುಳಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಾಗರಿಕರು ತಮ್ಮ ಮನೆ/ಖಾಲಿ ಜಾಗದ ಇ-ಸ್ವತ್ತು ದಾಖಲೆಯಲ್ಲಿನ ಮಾಲೀಕರ ವಿವರವನ್ನು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಪಡೆಯಬಹುದು.

Step-1: ಮೊಟ್ಟ ಮೊದಲಿಗೆ Property Status Check ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಇ-ಸ್ವತ್ತು ತಂತ್ರಾಂಶವನ್ನು ಪ್ರವೇಶ ಮಾಡಬೇಕು.

Step-2: ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ “ಆಸ್ತಿಗಳ ಶೋಧನೆ/Search Your Propert” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ “ಆಸ್ತಿಗಳ ಶೋಧನೆ” ಪುಟ ತೆರೆದುಕೊಳ್ಳುತ್ತದೆ ಈ ಪೇಜ್ ನಲ್ಲಿ “Select Property Form” ಕಾಲಂ ನಲ್ಲಿ Form-9/Form-11B/Survey No ಆಯ್ಕೆಯಗಳ ಮೇಲೆ ಟಿಕ್ ಮಾಡಿ ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ಮತ್ತು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಕೆಳಗಡೆ ಗೋಚರಿಸುವ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿರುವ ಎಲ್ಲಾ ಇ-ಸ್ವತ್ತಿನ ಐಡಿ, ಆಸ್ತಿ ಮಾಲೀಕರ ಹೆಸರುಗಳ ವಿವರ ತೆರೆದುಕೊಳ್ಳುತ್ತದೆ.

Online Property Status-ತಮ್ಮ ಆಸ್ತಿಯ ವಿವರವನ್ನು ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳುವ ವಿಧಾನ:

ಗ್ರಾಮೀಣ ಭಾಗದಲ್ಲಿ ವಾಸವಿದ್ದು ಗ್ರಾಮೀಣ ಭಾಗದಲ್ಲಿ ಖಾಲಿ ಜಾಗ ಅಥವಾ ಮನೆ/ನಿವೇಶನವನ್ನು ಹೊಂದಿರುವವರು ಗ್ರಾಮ ಪಂಚಾಯತಿಯಲ್ಲಿ ತಮ್ಮ ಆಸ್ತಿಯನ್ನು ನೋಂದಣಿಯನ್ನು ಮಾಡಿಕೊಂಡು ಡಿಜಿಟಲ್ ದಾಖಲೆಯನ್ನು ಪಡೆಯಬೇಕು.

ಇದಕ್ಕಾಗಿ ಪಂಚಾಯತ್ ರಾಜ್ ಇಲಾಖೆಯಿಂದ “e-swathu” ಎನ್ನುವ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದ್ದು ಇದೇ ಜಾಲತಾಣದ ಮೂಲಕ ಎಲ್ಲಾ ಆಸ್ತಿಗಳ ವಿವರವನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲಾಗುತ್ತದೆ. ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಆಸ್ತಿಯ ಡಿಜಿಟಲ್ ದಾಖಲೆಯ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬಹುದು.

Step-1: ಮೊದಲಿಗೆ ಈ E-swathu Status ತಂತ್ರಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಬಂಧಪಟ್ಟ ಇ-ಸ್ವತ್ತು ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ನಂತರ ಈ ಪೇಜ್ ನಲ್ಲಿ “Citizen Corner/ನಾಗರಿಕರಿಗಾಗಿ” ಬಟನ್ ಮೇಲೆ ಕ್ಲಿಕ್ ಮಾಡಿ “Check Property Status” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಇ-ಸ್ವತ್ತಿನ ಅಧಿಕೃತ ವಿವರವನ್ನು ಪಡೆಯಬಹುದು.

ಗಮನಿಸಿ: ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಆಸ್ತಿಯ ವಿವರವನ್ನು ಚೆಕ್ ಮಾಡಿದಾಗ ಆಸ್ತಿಯ ಡಿಜಿಟಲ್ ವಿವರ ಲಭ್ಯವಾಗದೇ ಇದ್ದರೆ ನಿಮ್ಮ ಆಸ್ತಿಯ ಇ-ಸ್ವತ್ತು ಅಗಿರುವುದಿಲ್ಲ ಎಂದು ಇದನ್ನು ಪಡೆಯಲು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿ ಅರ್ಜಿಯನ್ನು ಸಲ್ಲಿಸಿ ಈ ದಾಖಲೆಯನ್ನು ಪಡೆಯಬೇಕು.

Documents For e-swathu-ಇ-ಸ್ವತ್ತು ಪಡೆಯಲು ಅವಶ್ಯವಿರುವ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ

2) ಪೋಟೋ

3) ಆಸ್ತಿಯೊಂದಿಗೆ ಅರ್ಜಿದಾರರ ಪೋಟೋ

4) ಜಂಟಿ ಮಾಲೀಕರ ಆಧಾರ್ ಕಾರ್ಡ ಪ್ರತಿ ಮತ್ತು ಪೋಟೋ

5) ಆಸ್ತಿ ತೆರಿಗೆ ಪಾವತಿ ರಶೀದಿ

6) ಮನೆ ವಿದ್ಯುತ್ ಬಿಲ್

Previous Post Next Post