ರಾಜ್ಯದ ರೈತರಿಗೆ ಬಂಪರ್ ಗುಡ್ ನ್ಯೂಸ್ ಕೃಷಿ ಪಂಪ್ಸೆಟ್‌ಗೆ 1 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಸೌರ ಪಂಪ್ಸೆಟ್‌ಗಳಿಗೆ ಬಂಪರ್ ಸಹಾಯಧನ! ಸೌರ ಪಂಪ್ಸೆಟ್‌ಗೆ ಶೇ. 80% ಸಹಾಯಧನ.ಕೃಷಿ ಕ್ಷೇತ್ರವು (Agricultural field) ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಜೀವನದ ಪ್ರಮುಖ ಅಂಶವಾಗಿದ್ದು, ರೈತರ ಅನುಕೂಲಕ್ಕಾಗಿ ಸರ್ಕಾರವು ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರವು ರೈತರಿಗಾಗಿ ಮಹತ್ವದ ಘೋಷಣೆಯನ್ನು ಮಾಡಿದ್ದು, ಕೃಷಿ ಪಂಪ್ಸೆಟ್‌ಗಳಿಗೆ (Solar Pumpsets) ಆರ್ಥಿಕ ನೆರವು ನೀಡುವ ಮಹತ್ವದ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ನಮ್ಮ ದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಸರಬರಾಜು ಸದಾ ಚರ್ಚೆಗೆ ಒಳಗಾಗುವ ವಿಷಯವಾಗಿದ್ದು, ಅನೇಕ ರೈತರು ನಿರ್ವಹಣಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ಯೋಚಿಸಿದ ಸರ್ಕಾರವು, ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ “ಕುಸುಮ್ ಬಿ” ಮತ್ತು “ಕುಸುಮ್ ಸಿ” ಯೋಜನೆ (Kusum B and Kusum C Schemes) ಗಳಡಿ ವಿಶೇಷ ಸಹಾಯಧನ ನೀಡಲು ಮುಂದಾಗಿದೆ. ಇದು ರೈತರ ಕೃಷಿ ಚಟುವಟಿಕೆಗಳಿಗೆ ಬೆಂಬಲ ನೀಡುವುದರ ಜೊತೆಗೆ ದೀರ್ಘಕಾಲಿಕವಾಗಿ ಪರಿಸರ ಸ್ನೇಹಿ ಕೃಷಿ ಅಭ್ಯಾಸಗಳನ್ನು ಉತ್ತೇಜಿಸುತ್ತದೆ.

ಈ ಯೋಜನೆಯ ಸಹಾಯಧನದ ವಿವರ ಹೀಗಿದೆ :

ನೂತನ “ಕುಸುಮ್ ಬಿ” ಯೋಜನೆಯಡಿ, 3 ಹೆಚ್‌ಪಿ ಸಾಮರ್ಥ್ಯದ ಸೌರ ಕೃಷಿ ಪಂಪ್ಸೆಟ್‌ಗಳಿಗೆ (Solar Agricultural pumpset) ಶೇ.50% ಸಹಾಯಧನ ನೀಡಲಾಗುತ್ತಿದೆ. ಇದರ ಅರ್ಥ, 3 ಹೆಚ್‌ಪಿ ಪಂಪ್ ಅಳವಡಿಸಲು ₹2 ಲಕ್ಷ ವೆಚ್ಚವಾದರೆ, ರೈತರು ₹1 ಲಕ್ಷ ಸಹಾಯಧನ ಪಡೆಯಲು ಅರ್ಹರಾಗುತ್ತಾರೆ. ಅದೇ ರೀತಿ, ಹೆಚ್ಚು ಸಾಮರ್ಥ್ಯದ ಪಂಪ್ಸೆಟ್‌ಗಳ ಖರ್ಚು ₹3 ಲಕ್ಷವಾಗಿದ್ದರೆ, ₹1.5 ಲಕ್ಷ ಸಹಾಯಧನ ಒದಗಿಸಲಾಗುತ್ತದೆ.

ಕುಸುಮ್-ಸಿ ಯೋಜನೆಯಡಿ, ರೈತರು ತಮ್ಮ ಖಾಸಗಿ ಅಥವಾ ಸರ್ಕಾರಿ ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್‌ಗೆ (Grid) ಪೂರೈಸಬಹುದಾದ ಸೌಲಭ್ಯವನ್ನು ಪಡೆಯಬಹುದು. ಈ ಮೂಲಕ ರೈತರು ಸತತ ಆದಾಯವನ್ನು ಸಂಪಾದಿಸಬಹುದು ಮತ್ತು ನವೀನೀಕರಣ ಶಕ್ತಿಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆಗುತ್ತದೆ.

ಯಾವ ರೈತರು ಈ ಯೋಜನೆಗೆ ಅರ್ಜಿ ಹಾಕಬಹುದು?

ಸೌರ ಕೃಷಿ ಪಂಪ್ಸೆಟ್‌ಗಳ ಅನುಕೂಲ ಪಡೆಯಲು, ರೈತರು ಈ ಅರ್ಹತೆಯನ್ನು (Qualifications) ಪೂರೈಸಬೇಕು:

  • ಅರ್ಜಿದಾರರು ಭೂಮಿಯ ಮಾಲೀಕರು ಆಗಿರಬೇಕು.
  • ಆಧಾರ್ ಕಾರ್ಡ್, ಆರ್‌ಟಿಸಿ (ಭೂಮಿ ದಾಖಲೆ), ಮತ್ತು ಬ್ಯಾಂಕ್ ಖಾತೆ ವಿವರಗಳು ಅಗತ್ಯ.
  • ಪಂಪ್ಸೆಟ್ ಅಳವಡಿಸಲು ಅಗತ್ಯವಿರುವ ಭೂಮಿಯ ಸ್ಥಳ ಲಭ್ಯತೆ ಇರಬೇಕು.

ಅರ್ಜಿಯ ಪ್ರಕ್ರಿಯೆ (Apllication processes)ಮತ್ತು ನೋಂದಣಿ ಹೇಗೆ ಮಾಡಬೇಕು?:

  • ಸೌಲಭ್ಯ ಪಡೆಯಲು ರೈತರು ತಕ್ಷಣವೇ ಆನ್ಲೈನ್ ಪೋರ್ಟಲ್ (https://souramitra.com) ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು.
  • ಮೇಲೆ ನೀಡಲಾಗಿರುವ ವೆಬ್‌ಸೈಟ್ ಗೆ ತೆರಳಬೇಕು.
  • ನಂತರ ಆಧಾರ್ ಸಂಖ್ಯೆ, ಭೂಮಿ ದಾಖಲೆ (RTC), ಬ್ಯಾಂಕ್ ವಿವರಗಳನ್ನು ಸಲ್ಲಿಸಿ
  • ಅರ್ಜಿಯನ್ನು ದೃಢೀಕರಿಸಿ
  • ಅನುಮೋದನೆಗೊಂಡ ಬಳಿಕ, ಸೌಲಭ್ಯ ಲಭ್ಯವಾಗುತ್ತದೆ

ರಾಜ್ಯ ಸರ್ಕಾರದ (state government) ಇಂಧನ ಸಚಿವರು ಈ ಬಗ್ಗೆ ಮಾತನಾಡಿ, “ರೈತರು ವಿದ್ಯುತ್ ಪಂಪ್ಸೆಟ್‌ಗಳ ಪರ್ಯಾಯವಾಗಿ ಸೋಲಾರ್ ಪಂಪ್ಸೆಟ್ ಅಳವಡಿಸಿಕೊಂಡರೆ, ಕೃಷಿಯಲ್ಲಿ ಉಳಿತಾಯ ಹೆಚ್ಚುವುದು ಹಾಗೂ ದೀರ್ಘಕಾಲಿಕ ಲಾಭದಾಯಕ ಆಯ್ಕೆ ಸಿಗುತ್ತದೆ. ಸರ್ಕಾರ (Government) ಈ ನಿಟ್ಟಿನಲ್ಲಿ ಶೇ. 80% ಸಹಾಯಧನ ಒದಗಿಸಲು ಬದ್ಧವಾಗಿದೆ.” ಎಂದು ತಿಳಿಸಿದ್ದಾರೆ.

ಸೌರ ಪಂಪ್ಸೆಟ್ ಯೋಜನೆಯಿಂದ ರೈತರಿಗೆ ಬಹುಮುಖ ಲಾಭ

▪️ ವಿದ್ಯುತ್ ಭಾರದಿಂದ ಮುಕ್ತಿ :

ಡೀಸೆಲ್ ಪಂಪ್ಸ್ ಅವಲಂಬನೆಯ ಅಗತ್ಯ ಇರುವುದಿಲ್ಲ.

▪️ ಉಳಿತಾಯದ ಕೃಷಿ :

ನಿರಂತರ ನೀರಿನ ಪೂರೈಕೆ, ಶೇ. 80% ಸಬ್ಸಿಡಿ.

▪️ ಅತಿರಿಕ್ತ ಆದಾಯ :

ಕುಸುಮ್-ಸಿ ಯೋಜನೆಯಡಿ, ರೈತರು ಸ್ವಂತವಾಗಿ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡಬಹುದು.

▪️ ಗಮನಿಸಿ (Notice) :

ಈ ಮಹತ್ವದ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://souramitra.com ಪೋರ್ಟಲ್‌ಗೆ ಭೇಟಿ ನೀಡಿ. ನಿಮ್ಮ ಭವಿಷ್ಯ ಇಂದು ನಿಮ್ಮ ಕೈಯಲ್ಲಿದೆ!



Previous Post Next Post