13,999 ಸಾಕು! 6000mAh ಬ್ಯಾಟರಿ.. 256GB ಸ್ಟೋರೇಜ್.. ಈ Moto 5G ಫೋನಿನ ದರ ಭಾರೀ ಇಳಿಕೆ

ನೀವು ದೊಡ್ಡ ಬ್ಯಾಟರಿ, ಅದ್ಭುತ ಕ್ಯಾಮೆರಾ ಮತ್ತು ಹೆಚ್‌ಡಿ ಡಿಸ್ಪ್ಲೇ ಹೊಂದಿರುವ 5G ಫೋನನ್ನು ಕಡಿಮೆ ಬೆಲೆಗೆ ಖರೀದಿಸಬಹುದು. 14,000 ರೂ.ಗಳ ಒಳಗೆ ಹೊಸ ಫೋನ್‌ ಖರೀದಿಸಲು ಬಯಸಿದರೆ, ಈ ಮೊಟೊ ಸ್ಮಾರ್ಟ್‌ಫೊನ್ ಉತ್ತಮ ಆಯ್ಕೆಯಾಗಿದೆ. ಹೌದು, ಕಂಪನಿಯು ತನ್ನ ಮೊಟೊ G64 5G (Moto G64 5G) ಫೋನಿನ ದರವನ್ನು ಕಡಿತ ಮಾಡಿದೆ. ಪ್ರಸ್ತುತ ಈ ಫೋನಿನ ಎಲ್ಲಾ ರೂಪಾಂತರಗಳನ್ನು ಬಿಡುಗಡೆ ಬೆಲೆಗಿಂತ ಕಡಿಮೆಗೆ ಖರೀದಿಸಬಹುದು. ಬನ್ನಿ, ಈ ಫೋನಿನ ಮೂಲ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಮೊಟೊ G64 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7025 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.5 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 12GB RAM + 256GB ಸ್ಟೋರೇಜ್, 6000mAh ದೊಡ್ಡ ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಒಳಗೊಂಡಿದೆ.

Moto G64 5G Price Drop

ಮೊಟೊ G64 5G ಹೊಸ ಬೆಲೆ ಮತ್ತು ರಿಯಾಯಿತಿ

  • 8GB RAM + 128GB ಸ್ಟೋರೇಜ್ ಬೆಲೆ = 14,999 ರೂ.
  • ಹೊಸ ಬೆಲೆ = 13,999 ರೂ.
  • 12GB RAM + 256GB ಸ್ಟೋರೇಜ್ ಬೆಲೆ = 16,999 ರೂ.
  • ಹೊಸ ಬೆಲೆ = 15,999 ರೂ.

ಮೊಟೊ G64 5G ಫೋನ್ 8GB RAM ಮತ್ತು 12GB RAM ಮಾದರಿಯಲ್ಲಿ ಮಾರಾಟವಾಗುತ್ತಿದೆ. ಎರಡೂ ರೂಪಾಂತರಗಳ ಬೆಲೆಯನ್ನು 1,000 ರೂ. ಇಳಿಕೆ ಮಾಡಲಾಗಿದೆ. ರಿಯಾಯಿತಿಯೊಂದಿಗೆ ಕ್ರಮವಾಗಿ 13,999 ರೂ. ಮತ್ತು 15,999 ರೂ.ಗಳಿಗೆ ಖರೀದಿಸಬಹುದು. ಮೊಟೊ G64 5G ಮೊಬೈಲ್ ಹೊಸ ದರದಲ್ಲಿ ಮಾರಾಟವಾಗುತ್ತಿದ್ದು, ಇದನ್ನು ಕಂಪನಿಯ ವೆಬ್‌ಸೈಟ್ ಮತ್ತು ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ಈ ಮೊಬೈಲ್ ಮಿಂಟ್ ಗ್ರೀನ್, ಪರ್ಲ್ ಬ್ಲೂ ಮತ್ತು ಐಸ್ ಲಿಲಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಮೊಟೊ G64 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಮೊಟೊ G64 5G ಫೊನ್ 6.5 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 120Hz ರಿಫ್ರೆಶ್ ದರ ಬೆಂಬಲ ಹೊಂದಿದೆ.

ಮೀಡಿಯಾಟೆಕ್‌ ಪ್ರೊಸೆಸರ್

ಮೊಟೊ G64 5G ಸ್ಮಾರ್ಟ್‌ಫೊನ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 7025 ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 8GB RAM + 128GB ಮತ್ತು 12GB RAM + 256GB ಸ್ಟೋರೇಜ್‌ ಆಯ್ಕೆ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1 TB ವರೆಗೆ ಸ್ಟೋರೇಜ್‌ ವಿಸ್ತರಿಸಬಹುದು.

ಡ್ಯುಯಲ್ ಕ್ಯಾಮೆರಾ ಸೆಟಪ್

ಮೊಟೊ G64 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು OIS ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಮೊಬೈಲ್, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿದೆ.

ದೊಡ್ಡ ಬ್ಯಾಟರಿ

ಮೊಟೊ G64 5G ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಟೊ ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಇದರೊಂದಿಗೆ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸಹ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಎನ್‌ಎಫ್‌ಸಿ ಮತ್ತು ಬ್ಲೂಟೂತ್ 5.3 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.



Previous Post Next Post