ಆಧಾರ್ ಕಾರ್ಡನಲ್ಲಿ ಪೋಷಕರ ಹೆಸರನ್ನು ತೆಗೆದು ಹಾಕಿ ಗಂಡನ ಹೆಸರನ್ನು ಸೇರಿಸಲು ಹೊಸದಾಗಿ ಮದುವೆ ಅದ ದಂಪತಿಗಳು ಅಥವಾ ಇಲ್ಲಿಯವರೆಗೆ ಆಧಾರ್ ಕಾರ್ಡನಲ್ಲಿ(Aadhar card) ಹೆಸರನ್ನು ಸೇರಿಸದವರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎನ್ನುವ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರಕಾರದ ಕೆಲವೊಂದು ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಆಧಾರ್ ಕಾರ್ಡನಲ್ಲಿ(Aadhar Card Details) ದಾಖಲಿಸಿರುವ ವಿವರವು ಸರಿಯಾಗಿ ದಾಖಲಾಗಿರುವುದು ಕಡ್ಡಾಯವಾಗಿರುತ್ತದೆ ಈ ಕಾರಣದಿಂದ ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ ವಿವರವನ್ನು ತಪ್ಪದೇ ಸರಿಯಾಗಿ ದಾಖಲಿಸಿಕೊಳ್ಳಬೇಕು.
ನಮ್ಮ ದೇಶದ ನಾಗರಿಕರು ಅತೀ ಅಗತ್ಯವಾಗಿ ಹೊಂದಿರಬೇಕಾದ ಕೆಲವು ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ ಒಂದು ಬಹು ಮುಖ್ಯ ದಾಖಲೆಯಾಗಿದ್ದು ಈ ದಾಖಲೆಯನ್ನು ಪ್ರತಿಯೊಬ್ಬ ಪ್ರಜೆಯು ಹೊಂದಿರುವುದು ಕಡ್ಡಾಯವಾಗಿದೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಈ ಕಾರ್ಡ ಹೊಂದಿರುವುದು ಅತ್ಯಗತ್ಯ.
ಬಹುತೇಕ ಜನರಿಗೆ ಆಧಾರ್ ಕಾರ್ಡನಲ್ಲಿ ತನ್ನ ಗಂಡ/ಪತಿ ಹೆಸರನ್ನು ಸೇರಿಸಲು ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿರುತ್ತದೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
UIDAI-ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದಿಂದ ನಿರ್ವಹಣೆ:
ಕೇಂದ್ರ ಸರಕಾರದ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ದಿಂದ ನಮ್ಮ ದೇಶದ ಪ್ರತಿಯೊಬ್ಬ ಆಧಾರ್ ಕಾರ್ಡದಾರರ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿಸಂಗ್ರಹಣೆ ಮಾಡಿರಲಾಗಿರುತ್ತದೆ ಅರ್ಹ ಅರ್ಜಿದಾರರನ್ನು ಗುರುತಿಸುವಿಕೆ, ಹೊಸ ಆಧಾರ್ ಕಾರ್ಡ ವಿತರಣೆ, ಆಧಾರ್ ಕಾರ್ಡನಲ್ಲಿ ದಾಖಲಿಸಿರುವ ವಿವರದ ತಿದ್ದುಪಡಿ, ಆಧಾರ್ ಕಾರ್ಡದಾರರ ಮಾಹಿತಿಯನ್ನು ಕಾಲ ಕಾಲಕ್ಕೆ ನವೀಕರಣ ಮಾಡುವ ಕಾರ್ಯ ಸೇರಿದಂತೆ ಈ ಕಾರ್ಡ ಕುರಿತು ಸಂಪೂರ್ಣ ನಿರ್ವಹಣೆಯನ್ನು ಈ ಪ್ರಾಧಿಕಾರವು ನಿರ್ವಹಿಸುತ್ತದೆ.
Documents For Aadhar update-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:
1) ಗಂಡನ ಆಧಾರ್ ಕಾರ್ಡ ಪ್ರತಿ
2) ಪೋಟೋ
3) ಮದುವೆ ಪ್ರಮಾಣ ಪತ್ರ
4) ಮದುವೆ ಆಮಂತ್ರಣ ಪ್ರತಿ
5) ಮೊಬೈಲ್ ನಂಬರ್
How to Apply-ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಪ್ರಥಮದಲ್ಲಿ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆಧಾರ್ ಕಾರ್ಡ ಸೇವಾ ಕೇಂದ್ರವನ್ನು/ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಧಾರ್ ಕಾರ್ಡ ನಲ್ಲಿ ಉಪನಾಮ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಬಹುದು.
Application fee-ಅರ್ಜಿ ಶುಲ್ಕ:
ಆಧಾರ್ ಕಾರ್ಡನಲ್ಲಿ ಉಪನಾಮ ತಿದ್ದುಪಡಿ/ಸೇರಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 50 ರೂ ಶುಲ್ಕವನ್ನು ನಿಗದಿಪಡಿಸಲಾಗಿದೆ.
Time limit-ತಿದ್ದುಪಡಿಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಒಮ್ಮೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ವಿಲೇವಾರಿಗೆ 10-15 ದಿನ ಸಮಯ ಅವಶ್ಯಕತೆ ಇರುತ್ತದೆ.
Online Aadhar update Status check-ಆನ್ಲೈನ್ ಮೂಲಕ ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ:
ಅರ್ಜಿದಾರರ ಒಮ್ಮೆ ಆಧಾರ್ ಸೇವಾ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂದು ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಇದ್ದು ಚೆಕ್ ಮಾಡಿಕೊಳ್ಳಬಹುದು.
Step-1: ಮೊಟ್ಟ ಮೊದಲಿಗೆ Aadhar update Status ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರಕಾರದ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ನಿಮ್ಮ ತಿದ್ದುಪಡಿ ಅರ್ಜಿಯನ್ನು ಸಲ್ಲಿಸಿದ ಬಳಿಕ ನೀಡಿರುವ ಸ್ವೀಕೃತಿ ಪ್ರತಿಯಲ್ಲಿರುವ ಸ್ವೀಕೃತಿ ಸಂಖ್ಯೆ ಮತ್ತು ಸಮಯ/ದಿನಾಂಕವನ್ನು ಹಾಕಿ OTP ಅನ್ನು ನಮೂದಿಸಿ ನಿಮ್ಮ ಅರ್ಜಿಯು ಯಾವ ಹಂತದಲ್ಲಿ ಇದೆ ಎಂದು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.
Tags:
Aadhar card