HPCL Recruitment 2025: 234 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

HPCL Recruitment 2025: 234 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

HPCL Recruitment 2025: ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಲೇ ಇವೆ. ಹಾಗೆಯೇ ಇದೀಗ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ 234 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಗಮನಿಸಬೇಕಾದ ಅಂಶಗಳು ಹಾಗೂ ಆಯ್ಕೆಯಾದವರಿಗೆ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈಗಾಗಲೇ ಅರ್ಜಿ ಸಲ್ಲಿಕೆ ಜನವರಿ 15, 2025ರಿಂದ ಆರಂಭವಾಗಿದ್ದು, ಫೆಬ್ರವರಿ 14 ಕೊನೆ ದಿನವಾಗಿದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್‌ಸ್ಟ್ರುಮೆಂಟೇಶನ್ ಮತ್ತು ಕೆಮಿಕಲ್ ವಿಭಾಗಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಜೂನಿಯರ್ ಎಕ್ಸಿಕ್ಯೂಟಿವ್ (ಇನ್‌ಸ್ಟ್ರುಮೆಂಟೇಶನ್)- 37 ಹುದ್ದೆಗಳು, ಜೂನಿಯರ್ ಎಕ್ಸಿಕ್ಯೂಟಿವ್ (ಕೆಮಿಕಲ್)- 02, ಜೂನಿಯರ್ ಎಕ್ಸಿಕ್ಯೂಟಿವ್ (ಮೆಕ್ಯಾನಿಕಲ್)- 130, ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್)- 65 ಸೇರಿದಂತೆ ಒಟ್ಟು 234 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ.

HPCL Recruitment 2025 Applications Invited for 234 Posts

ಆಯ್ಕೆಯಾದ ಅಭ್ಯರ್ಥಿಗಳುಗೆ ಮಾಸಿಕ ವೇತನ 30,000-1,20,000 ರೂಪಾಯಿವರೆಗೆ ಇರಲಿದೆ. ವಯೋಮಿತಿ ವಿಚಾರಕ್ಕೆ ಬಂದರೆ, 25 ವರ್ಷದೊಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು. ಅಭ್ಯರ್ಥಿಗಳು 3 ವರ್ಷ ಡಿಪ್ಲೋಮಾ ಇನ್ ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರ್, ಕೆಮಿಕಲ್ ಇಂಜಿನಿಯರ್, ಮೆಕನಿಕಲ್ ಇಂಜಿನಿಯರ್, ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಪೂರ್ಣಗೊಳಿಸಿರಬೇಕು.

ಸಾಮಾನ್ಯ (ಯುಆರ್) 96, ಇಡಬ್ಲುಎಸ್ 23, ಒಬಿಸಿ 63, ಎಸ್ಸಿ 35 ಹಾಗೂ ಎಸ್ಟಿ ವರ್ಗದವರಿಗೆ 17 ಉದ್ಯೋಗಗಳು ಇವೆ. ಅರ್ಜಿ ಶುಲ್ಕದ ವಿಚಾರಕ್ಕೆ ಬಂದ್ರೆ, ಸಾಮಾನ್ಯ (ಯುಆರ್), ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು ಜಿಎಸ್ಟಿ ಸೇರಿ 1,180 ರೂಪಾಯಿ ಪಾವತಿಸಬೇಕಾಗುತ್ತದೆ. ಎಸ್ಸಿ, ಎಸ್ಟಿ, ವಿಶೇಷ ಚೇತನರು, ಮಾಜಿ ಸೈನಿಕರಿಗೆ ಅರ್ಜಿ ಶುಲ್ಕದಲ್ಲಿ ವಿನಾಯತಿ ನೀಡಲಾಗಿದೆ.

Karnataka High Court Recruitment 2025: ಕರ್ನಾಟಕ ಹೈಕೋರ್ಟ್‌ನಲ್ಲಿ ಉದ್ಯೋಗಾವಕಾಶ

ಆಯ್ಕೆ ಪ್ರಕ್ರಿಯೆಯ ವಿಚಾರಕ್ಕೆ ಬಂದರೆ, ಅಭ್ಯರ್ಥಿಗಳಿಗೆ ಕಂಪ್ಯೂಟರ್ ಬೇಸಡ್ ಟೆಸ್ಟ್, ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ, ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ, https://www.hindustanpetroleum.com/documents/pdf/Recruitment_of_Junior_Executive_Officer_2024-25_English_15012025.pdf 

ಹಾಗೂ ಅರ್ಜಿ ಸಲ್ಲಿಕೆಗೆ https://www.hindustanpetroleum.com/ ವೆಬ್‌ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

10 ಹುದ್ದೆಗಳಿಗೆ ಅರ್ಜಿ ಆಹ್ವಾನ: ಕೊಡಗು ಜಿಲ್ಲೆಯ ಈ ಭಾಗಗಳಲ್ಲಿ ಖಾಲಿಯಿರುವ ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವೀಚಾರಕರ ಒಟ್ಟು 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸುವವರು ಗಮನಿಸಬೇಕಾದ ಅಂಶಗಳು ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎಂದು ಇಲ್ಲಿ ತಿಳಿಯಿರಿ.

ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ ಮಾಡುವ ಬಗ್ಗೆ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲೆಯ ಬೇರೆ-ಬೇರೆ ತಾಲೂಕುಗಳಲ್ಲಿ ಈ ಉದ್ಯೋಗಗಳು ಖಾಯಿಯಿವೆ. ಸದ್ಯ ಇವುಗಳ ಭರ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ ಫೆಬ್ರುವರಿ 13, 2025 ಆಗಿದೆ.

ವಿರಾಜಪೇಟೆ-ಚೆಂಬೆಬೆಳ್ಳೂರು, ಚೆನ್ನಯ್ಯನ ಕೋಟೆ, ಆರ್ಜಿ, ಪೊನ್ನಂಪೇಟೆ-ಬಾಳೆಲೆ, ಕುಟ್ಟ, ಗೋಣಿಕೊಪ್ಪ, ಕೆ.ಬಾಡಗ, ಸೋಮವಾರಪೇಟೆ-ಶನಿವಾರ ಸಂತೆ, ನಿಡ್ತ, ಕುಶಾಲನಗರ-ಶಿರಂಗಾಲ ಇಲ್ಲಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳನ್ನು ನೇಮಕಾತಿ ಕುರಿತು ಅರ್ಜಿ ಆಹ್ವಾನಿಸಲಾಗಿದೆ.

ಮಾಸಿಕ ವೇತನ ಎಷ್ಟು?: 

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 18,606 ರೂಪಾಯಿ ಇರಲಿದೆ. ವಿದ್ಯಾರ್ಹತೆ ವಿಚಾರಕ್ಕೆ ಬಂದರೆ, ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಸರ್ಟಿಫಿಕೇಶನ್‌ ಕೋರ್ಸ್‌ ಇನ್ ಲೈಬ್ರರಿ ಸೈನ್ಸ್‌ನಲ್ಲಿ ಪ್ರಮಾಣ ಪತ್ರ ಪಡೆದಿರಬೇಕು. ಮಾನ್ಯತೆ ಪಡೆದ ಸಂಸ್ಥೆಯಲ್ಲಿ 3 ತಿಂಗಳ ಕಂಪ್ಯೂಟರ್ ಕೋರ್ಸ್‌ ಮಾಡಿರಬೇಕು.


Post a Comment

Previous Post Next Post

Top Post Ad

CLOSE ADS
CLOSE ADS
×