ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ Big Saving Days ಸೇಲ್‌ನಲ್ಲಿ Redmi Note 13 Pro 5G ಸ್ಮಾರ್ಟ್‌ಫೋನ್ ಮೇಲೆ ₹20,000 ರಿಯಾಯಿತಿ ಲಭ್ಯ. 200MP ಕ್ಯಾಮೆರಾ, 5100mAh ಬ್ಯಾಟರಿ ಹೊಂದಿರುವ ಈ ಫೋನ್ HDFC ಕಾರ್ಡ್ ಬಳಸಿ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ.
ಕಳೆದ ಕೆಲವು ದಿನಗಳಿಂದ ಇ-ಕಾಮರ್ಸ್ ಪ್ಲಾಟ್‌ಫಾರಂ ಫ್ಲಿಪ್‌ಕಾರ್ಟ್‌ನಲ್ಲಿ Big Saving Days ಸೇಲ್ ಆರಂಭವಾಗಿದೆ. ಈ ಸೇಲ್ ಡಿಸೆಂಬರ್ 25ರಂದು ಲೈವ್ ಇರಲಿದೆ. ಈ ಸೇಲ್ ಸ್ಮಾರ್ಟ್‌ಫೋನ್ ಮೇಲೆ ಅಧಿಕ ರಿಯಾಯ್ತಿಗಳು ಲಭ್ಯವಾಗಲಿವೆ. ಐಫೋನ್, ಸ್ಯಾಮ್‌ಸಂಗ್ ಸೇರಿದಂತೆ ಹಲವು 5ಜಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯ್ತಿ ನೀಡಲಾಗುತ್ತಿದೆ. ರೆಡ್‌ಮಿ ಕಂಪನಿಯ ಸ್ಮಾರ್ಟ್‌ಫೋನ್ ಮೇಲೆ 20,000 ರೂಪಾಯಿವರೆಗೆ ಡಿಸ್ಕೌಂಟ್ ನೀಡಲಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಬೆಲೆ 18,329 ರೂಪಾಯಿ ಆಗಿದೆ.
200MP ಕ್ಯಾಮೆರಾ ಹೊಂದಿರುವ REDMI Note 13 Pro 5G ಸ್ಮಾರ್ಟ್‌ಫೋನ್ ಮೇಲೆ ಹೆಚ್ಚುವರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಇತ್ತೀಚೆಗಷ್ಟೆ REDMI Note 14 ಸಿರೀಸ್ ಲಾಂಚ್ ಆಗಿದ್ದು, ಹಳೆಯ ಸಿರೀಸ್ ಹೆಚ್ಚುವರಿ ಆಫರ್‌ಗಳನ್ನು ಘೋಷಣೆ ಮಾಡಲಾಗುತ್ತಿದೆ. REDMI Note 13 Pro 5G ಸ್ಮಾರ್ಟ್‌ಫೋನ್‌ನ್ನು ಯಾವುದೇ ಆಫರ್ ಇಲ್ಲದೇ ನೀವು 18,239 ರೂಪಾಯಿಯಲ್ಲಿ ಖರೀದಿಸಬಹುದು. ಆದ್ರೆ ಇದರ ಮೂಲ ಬೆಲೆ 238,999 ರೂಪಾಯಿ ಆಗಿದೆ. ಅಂದ್ರೆ ಈ ಸ್ಮಾರ್ಟ್‌ಫೋನ್ ಮೇಲೆ ಗ್ರಾಹಕರಿಗೆ ನೇರವಾಗಿ ಶೇ.36ರಷ್ಟು ರಿಯಾಯ್ತಿ ಸಿಗುತ್ತಿದೆ.
ಒಂದು ವೇಳೆ ಖರೀದಿದಾರರು HDFC Bank Pixel Credit Card EMI ಮೂಲಕ ಖರೀದಿಸಿದ್ರೆ 1,250 ರೂಪಾಯಿ ಡಿಸ್ಕೌಂಟ್ ಸಿಗುತ್ತದೆ. ಆದರೆ ಫೋನ್ ಖರೀದಿಯಲ್ಲಿ ಎಕ್ಸ್‌ಚೇಂಜ್ ಆಫರ್ ಘೋಷಣೆ ಮಾಡಿಲ್ಲ.
Redmi Note 13 Pro 5G ಫೀಚರ್ಸ್
ಈ 5G ಸ್ಮಾರ್ಟ್‌ಫೋನಿನ ವಿಶೇಷತೆಗಳನ್ನು ನೋಡುವದಾದ್ರೆ 6.67 ಇಂಚಿನ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್ ಜೊತೆ ಸ್ಮೂತ್ ಸ್ಕ್ರಾಲಿಂಗ್ ಅನುಭವ ಬಳಕೆದಾರರರಿಗೆ ಲಭ್ಯವಾಗುತ್ತದೆ. ಇನ್ನು Redmi Note 13 Pro 5G ಸ್ಮಾರ್ಟ್‌ಫೋನ್ ಉತ್ತಮ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. 8MP ಮತ್ತು 2MPಯ ಲೆನ್ಸ್ ಜೊತೆ 200MP ಗುಣಮಟ್ಟದ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 16MPಯ ಫ್ರಂಟ್ ಕ್ಯಾಮೆರಾ ಹೊಂದಿದೆ.
ಈ ಡಿವೈಸ್‌ನಲ್ಲಿ 2.4GHz ಕಾರ್ಯನಿರ್ವಹಿಸುತ್ತದೆ. ಸ್ನ್ಯಾಪ್ ಡ್ರಾಗನ್ 7s Gen 2 ಅಕ್ಟಾ-ಕೋರ್ ಪ್ರೊಸೆಸರ್ ಒಳಗೊಂಡಿದೆ. 8GB RAM ಇದರ ಬೇಸ್ ವರ್ಷನ್ ಆಗಿದೆ. 5100mAh ಪವರ್‌ಫುಲ್ ಬ್ಯಾಟರಿ ಜೊತೆ 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಒಮ್ಮೆ 100% ಚಾರ್ಜ್ ಮಾಡಿದ್ರೆ ದೀರ್ಘಕಾಲದವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ.