ರಾಜ್ಯ ಸರಕಾರದಿಂದ ರೈತರಿಗೆ ಅತೀ ಕಡಿಮೆ ಬೆಲೆಯಲ್ಲಿ ಸಬ್ಸಿಡಿಯನ್ನು ಒದಗಿಸಿ ಹನಿ ಮತ್ತು ತುಂತುರು ನೀರಾವರಿ ಘಟಕವನ್ನು ಸ್ಥಾಪನೆ ಮಾಡಿಕೊಳ್ಳಲು ರೂ ₹255 ಕೋಟಿ ಅನುದಾನವನ್ನು ವ್ಯಯಿಸಲಾಗಿದ್ದು ಈ ಘಟಕಗಳನ್ನು ಸಬ್ಸಿಡಿಯಲ್ಲಿ ಪಡೆಯಲು ರೈತರು ಯಾವ ಕ್ರಮ ಅನುಸರಿಸಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ಪ್ರತಿಯೊಬ್ಬ ರೈತರಿಗೂ ಸರಕಾರಿ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸುವ ಉದ್ದೇಶದಿಂದ ನಮ್ಮ ಪುಟದಿಂದ ಪ್ರತಿ ನಿತ್ಯ ಉಪಯುಕ್ತ ಯೋಜನೆಗಳ ಮಾಹಿತಿಯನ್ನು ಪ್ರಕಟಿಸುತ್ತಾ ಬಂದಿದ್ದೆವೇ ಇಂದು ಸಹ ರೈತರಿಗೆ ಅನುಕೂಲಕರ ಯೋಜನೆಯಲ್ಲಿ ಒಂದಾದ ಹನಿ ಮತ್ತು ತುಂತುರು ನೀರಾವರಿ ಘಟಕಕ್ಕೆ ಸಬ್ಸಿಡಿ ಪಡೆಯುವುದು ಹೇಗೆ ಎಂದು ವಿವರಿಸಲಾಗಿದೆ.
ಕೃಷಿ ಇಲಾಖೆಯಿಂದ ತುಂತುರು ನೀರಾವರಿ ಘಟಕಕ್ಕೆ ಸಬ್ಸಿಡಿ ಪಡೆಯಲು ಅವಕಾಶವಿದ್ದರೆ ಅದೇ ರೀತಿ ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ ಘಟಕಕ್ಕೆ ಸಬ್ಸಿಡಿ ಪಡೆಯಲು ರೈತರಿಗೆ ಅವಕಾಶವಿರುತ್ತದೆ ಈ ಸಹಾಯಧನವನ್ನು ಪಡೆಯಲು ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು? ಅರ್ಜಿ ಸಲ್ಲಿಕೆ ವಿಧಾನ ಹೇಗಿರುತ್ತದೆ ಇತ್ಯಾದಿ ಮಾಹಿತಿಯನ್ನು ಕೆಳಗೆ ತಿಳಿಸಲಾಗಿದೆ.
ಹನಿ ಮತ್ತು ತುಂತುರು ನೀರಾವರಿ ಘಟಕವನ್ನು ಏಕೆ ಅಳವಡಿಸಿಕೊಳ್ಳಬೇಕು?
ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಮತ್ತು ಕಡಿಮೆ ನೀರನ್ನು ಬಳಸಿ ತೋಟಗಾರಿಕೆ ಮತ್ತು ಕೃಷಿ ಬೆಳೆಗಳನ್ನು ಬೆಳೆಯಲು ಈ ಹನಿ ಮತ್ತು ತುಂತುರು ನೀರಾವರಿ ಘಟಕವನ್ನು ರೈತರು ಅಳವಡಿಕೆ ಮಾಡಿಕೊಳ್ಳಬೇಕು. ಈ ಘಟಕಗಳನ್ನು ಬೆಳೆಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಬಳಸುವುದರಿಂದ ಅತೀ ಹೆಚ್ಚು ನೀರನ್ನು ಬೆಳೆಯನ್ನು ಬೆಳೆಯಲು ಬಳಸುವುದನ್ನು ತಪ್ಪಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
ಹನಿ ನೀರಾವರಿಗೆ ಸಹಾಯಧನ ಪಡೆಯುವುದು ಹೇಗೆ?
ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರು ತಮ್ಮ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿಮ್ಮ ಹತ್ತಿರ/ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳ ಸಮೇತ ಅರ್ಜಿಯನ್ನು ಸಲ್ಲಿಸಿ ಹನ್ ನೀರಾವರಿಗೆ ಶೇ 90% ರಷ್ಟು ಸಹಾಯಧನವನ್ನು ಪಡೆಯಬಹುದು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸಹಾಯಧನ ಒದಗಿಸಲಾಗುತ್ತದೆ:
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿಯನ್ನು(Drip irrigation Subsidy Scheme) ಅಳವಡಿಸಿಕೊಳ್ಳಲು ಎಲ್ಲಾ ವರ್ಗದ ರೈತರು ಸಹ ತೋಟಗಾರಿಕೆ ಬೆಳೆಗಳಿಗೆ ನೀರಾವರಿಯನ್ನು ಅಳವಡಿಸಿಕೊಳ್ಳಲು ಶೇಕಡ 90% ರಷ್ಟು ಸಹಾಯಧನ ಪಡೆಯಬಹುದು.
ತುಂತುರು ನೀರಾವರಿ ಘಟಕಕ್ಕೆ ಸಹಾಯಧನ ಪಡೆಯುವುದು ಹೇಗೆ?
ಅರ್ಹ ಅರ್ಜಿದಾರರು ತಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಈ ಅಂಕಣದಲ್ಲಿ ತಿಳಿಸಿರುವ ದಾಖಲೆಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಿ ಶೇ 90% ರಷ್ಟು ಸಹಾಯಧನದಲ್ಲಿ ಎಲ್ಲಾ ವರ್ಗದ ರೈತರು ತುಂತುರು ನೀರಾವರಿ ಘಟಕಕ್ಕೆ ಸಹಾಯಧನವನ್ನು ಪಡೆಯಬಹುದು.
Who can apply-ಯಾರೆಲ್ಲ ಅರ್ಜಿ ಸಲ್ಲಿಸಬಹುದುಇ:
ಸಹಾಯಧನದಲ್ಲಿ ಹನಿ ಮತ್ತು ತುಂತುರು ನೀರಾವರಿ ಘಟಕವನ್ನು ಪಡೆಯಲು ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನನ್ನು ಇರಬೇಕಾಗುತ್ತದೆ.
ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮಾತ್ರ ಈ ಯೋಜನೆಯಡಿ ಸಬ್ಸಿಡಿ ನೀಡಲಾಗುತ್ತದೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಕಳೆದ 7 ವರ್ಷದಲ್ಲಿ ಈ ಯೋಜನೆಯಡಿಯಲ್ಲಿ ಸಬ್ಸಿಡಿಯನ್ನು ಅರ್ಜಿದಾರರು ಪಡೆದಿರಬಾರದು.
Documents-ಒದಗಿಸಬೇಕಾದ ದಾಖಲೆಗಳು:
(1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
(2) ಕೃಷಿ ಜಮೀನಿನ ಪಹಣಿ/RTC ಪ್ರತಿ
(3) ಬ್ಯಾಂಕ್ ಪಾಸ್ ಬುಕ್
(4) ಪೋಟೊ
(5) ಹಿಡುವಳಿ ಪ್ರಮಾಣ ಪತ್ರ
(6) ಬಾವಿ/ಕೊಳವೆ ಬಾವಿ ಪ್ರಮಾಣ ಪತ್ರ
(7) ರೂ 20 ಬಾಂಡ್ ಪೇಪರ್
(8) ಮೊಬೈಲ್ ಸಂಖ್ಯೆ
Important links
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್- APPLY NOW
ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್- CLICK HERE
ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್- CLICK HERE