Champions Trophy-2025 ವೇಳಾಪಟ್ಟಿ ಬಿಡುಗಡೆ ಮಾಡಿದ ಐಸಿಸಿ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Champions Trophy-2025 ವೇಳಾಪಟ್ಟಿ ಬಿಡುಗಡೆ ಮಾಡಿದ ಐಸಿಸಿ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ನವದೆಹಲಿ: ಬಹು ನರೀಕ್ಷಿತ ಚಾಂಪಿಯನ್ಸ್‌ ಟ್ರೋಫಿ 2025ರ ವೇಳಾಪಟ್ಟಿ ಅಂತಿಮವಾಗಿ ಪ್ರಕಟವಾಗಿದೆ. ವಿಶೇಷ ಎಂದರೆ ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.ಅಂದುಕೊಂಡಂತೆ ಆಗಿದ್ದರೇ ಈಗಾಗಲೇ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಬಿಡುಗಡೆಯಾಗಬೇಕಿತ್ತು. ಆದರೆ ಪಂದ್ಯಾವಳಿಯ ಆಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲ ಉಂಟಾಗಿತ್ತು. ಪಾಕ್‌ನಲ್ಲಿ ಭಾರತ ಆಡದಿರಲು ಪಟ್ಟು ಹಿಡಿದಿದ್ದ ಭಾರತ, ಬಳಿಕ ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ನಿರ್ಧರಿಸಲಾಯಿತು.

ಎರಡೂ ದೇಶಗಳ ಕೋರಿಕೆ ಮೇರೆಗೆ ಪಂದ್ಯಾವಳಿ ಆಯೋಜಿಸಲು ಮುಂದಾದ ಐಸಿಸಿ ಈಗ ಟೂರ್ನಿ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಮುಂಬರುವ ಫೆಬ್ರವರಿ 19, 2025 ರಿಂದ ಆರಂಭವಾಗಲಿರುವ ಟೂರ್ನಿ ಮಾ.9 ರಂದು ಫೈನಲ್ಸ್‌ ಆಡುವ ಮೂಲಕ ಮುಕ್ತಾಯ ಕಾಣಲಿದೆ. ಇನ್ನು ನ್ಯೂಜಿಲೆಂಡ್‌ ವಿರುದ್ಧ ಪಾಕ್‌ ಉದ್ಘಾಟನಾ ಪಂದ್ಯ ಆಡಲಿದೆ. ಜೊತೆಗೆ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಫೆ.23 ರಂದು ನಡೆಯಲಿದೆ.

ಟೂರ್ನಿಯಲ್ಲಿ ಒಟ್ಟು 8 ತಂಡಗಳು ಆಡಲಿದ್ದು, ಅವುಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.

ಎ ಗುಂಪು: ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್‌

ಬಿ ಗುಂಪು: ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್‌, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ

ಈ ಟೂರ್ನಿಯಲ್ಲಿ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.(ಒಂದು ವೇಳೆ ಭಾರತ ಫೈನಲ್ಸ್‌ ತಲುಪಿದರೇ ಫೈನಲ್ಸ್‌ ಪಂದ್ಯ ದುಬೈಗೆ ಹಸ್ತಾಂತರವಾಗಲಿದೆ). ಫೈನಲ್‌ ಪಂದ್ಯಕ್ಕೆ ಮೀಸಲು ದಿನವನ್ನು ಇಡಲಾಗಿದ್ದು, ಸೆಮಿಸ್‌ಗೆ ಮೀಸಲು ದಿನವಿಲ್ಲ. ಇನ್ನು ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮದ್ಯಾಹ್ನ 2.30 ಗಂಟೆಗೆ ಆರಂಭವಾಗಲಿದೆ.

ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಇಂತಿದೆ.

ಫೆ.19 ಪಾಕಿಸ್ತಾನ vs ನ್ಯೂಜಿಲೆಂಡ್‌ (ಸ್ಥಳ: ಕರಾಚಿ)

ಫೆ.20 ಭಾರತ vs ಬಾಂಗ್ಲಾದೇಶ (ಸ್ಥಳ: ದುಬೈ)

ಫೆ.21 ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ (ಸ್ಥಳ: ಕರಾಚಿ)

ಫೆ.22 ಆಸ್ಟ್ರೇಲಿಯಾ vs ಇಂಗ್ಲೆಂಡ್‌ (ಸ್ಥಳ: ಲಾಹೋರ್‌)

ಫೆ.23 ಭಾರತ vs ಪಾಕಿಸ್ತಾನ (ಸ್ಥಳ: ದುಬೈ)

ಫೆ.24 ನ್ಯೂಜಿಲೆಂಡ್‌ vs ಬಾಂಗ್ಲಾದೇಶ (ಸ್ಥಳ: ರಾವಲ್ಪಿಂಡಿ)

ಫೆ.25 ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ (ಸ್ಥಳ: ರಾವಲ್ಪಿಂಡಿ)

ಫೆ.26 ಇಂಗ್ಲೆಂಡ್‌ vs ಅಫ್ಘಾನಿಸ್ತಾನ (ಸ್ಥಳ: ಲಾಹೋರ್‌)

ಫೆ.27 ಪಾಕಿಸ್ತಾನ vs ಬಾಂಗ್ಲಾದೇಶ (ಸ್ಥಳ: ರಾವಲ್ಪಿಂಡಿ)

ಫೆ.28 ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ (ಸ್ಥಳ:ಲಾಹೋರ್‌)

ಮಾ.1 ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್‌ (ಸ್ಥಳ: ಕರಾಚಿ)

ಮಾ.2 ಭಾರತ vs ನ್ಯೂಜಿಲೆಂಡ್‌ (ಸ್ಥಳ: ದುಬೈ)

ಮಾ.4 ಸೆಮಿಫೈನಲ್ಸ್‌ (ಸ್ಥಳ: ದುಬೈ)

ಮಾ.5 ಎರಡನೇ ಸೆಮಿಫೈನಲ್ಸ್‌ (ಸ್ಥಳ: ಲಾಹೋರ್‌)

ಮಾ.9 ಫೈನಲ್ಸ್‌ (ಲಾಹೋರ್‌/ದುಬೈ)

ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮದ್ಯಾಹ್ನ 2.30 ಗಂಟೆಗೆ ಆರಂಭವಾಗಲಿದೆ.

ನವದೆಹಲಿ: ಇದೇ ಫೆಬ್ರವರಿ 2025 ರಿಂದ ಆರಂಭವಾಗಲಿರುವ ಐಸಿಸಿ (ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್‌) ಚಾಂಪಿಯನ್‌ ಟ್ರೋಫಿ 2025 ಟೂರ್ನಿ ಆರಂಭವಾಗಲಿದೆ.

ಭಾರೀ ವಿವಾದದ ನಡುವೆಯೂ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಗಳ ಸ್ಥಳಾಂತರ ಸೇರಿದಂತೆ ಹಲವು ಗೊಂದಲಗಳ ನಡುವೆಯೂ ಪಾಕಿಸ್ತಾನ ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಗಾಗಿ ಭಾರೀ ಸಿದ್ದತೆ ಮಾಡಿಕೊಳ್ಳುತ್ತಿದೆ.

ಇತ್ತ ಟೂರ್ನಿಗೆ ಎಷ್ಟು ತಂಡಗಳು ಅರ್ಹತೆ ಪಡೆದುಕೊಂಡಿವೆ. ಅವುಗಳು ಯಾವುವು? ಈ ತಂಡಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಲಾಗಿದೆ. ಇನ್ನು ಭಾರತದೊಂದಿಗೆ ಸೆಣೆಸಾಡಲಿರುವ ತಂಡಗಳಾವುವು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಟೂರ್ನಿಗೆ ಅರ್ಹತೆ ಪಡೆದ ತಂಡಗಳಿವು: ಪಾಕಿಸ್ತಾನ ಸಾರಥ್ಯದಲ್ಲಿ ನಡೆಯಲಿರುವ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಅಚ್ಚರಿಯಂಬಂತೆ ಈ ಬಾರಿ ನಿರೀಕ್ಷಿತ ತಂಡಗಳೆರೆಡು ಅಹರ್ತೆ ಪಡೆಯುವಲ್ಲಿ ವಿಫಲವಾಗಿದೆ.

ಜಿಂಬಾಬ್ವೆ, ಐರ್ಲೆಂಡ್‌ ತಂಡಗಳ ಜೊತೆಗೆ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಐಸಿಸಿ ಟೂರ್ನಿ ಆಡದೇ ವೆಸ್ಟ್‌ ಇಂಡೀಸ್‌ ತಂಡ ಹೊರಗುಳಿದಿದೆ. ಇದೊಂದಿಗೆ ಶ್ರೀಲಂಕಾ ತಂಡ ಕೂಡಾ ಈ ಬಾರಿಯ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಇನ್ನು ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಪಡೆದ ತಂಡಗಳೆಂದರೆ, ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ್‌ ತಂಡಗಳು ಅರ್ಹತೆ ಪಡೆದಿವೆ.

ಯಾವ್ಯಾವ ಗುಂಪಿನಲ್ಲಿ ಯಾವ್ಯಾವ ತಂಡಗಳಿವೆ ಗೊತ್ತಾ?

ಐಸಿಸಿ ಚಾಂಪಿಯನ್‌ ಟ್ರೋಫಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಮೊದಲ ಗುಂಪಿನಲ್ಲಿ ಭಾರತದೊಂದಿಗೆ ಬದ್ಧ ವೈರಿ ಪಾಕಿಸ್ತಾನ ತಂಡ ಕಾಣಸಿಕೊಂಡಿದೆ. ಇದರೊಂದಿಗೆ ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ತಂಡಗಳು ಆಡಲಿವೆ.

ಇತ್ತ ಬಿ ಗುಂಪಿನಲ್ಲಿ ಆಶಷ್‌ ವೈರಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೇಂಡ್‌ ತಂಡಗಳಿದ್ದರೇ, ಇದರೊಂದಿಗೆ ದಕ್ಷಿಣ ಆಫ್ರಿಕಾ ಹಾಗೂ ಕ್ರಿಕೆಟ್‌ ಶಿಶು ಅಫ್ಘಾನಿಸ್ತಾನ್‌ ತಂಡಗಳು ಕಾಣಿಸಿಕೊಂಡಿವೆ.

A ಗುಂಪು: ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್‌

B ಗುಂಪು: ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ

ಭಾರತ ತಂಡದ ಪಂದ್ಯಗಳು ಯಾವಾಗ ಗೊತ್ತಾ?: 

ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಫೆ. 20, 2025 ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಎರಡನೇ ಪಂದ್ಯವನ್ನು ಫೆ. 23ರಂದು ಪಾಕಿಸ್ತಾನ ವಿರುದ್ಧ ಆಡಿದರೇ, ತನ್ನ ಕೊನೆಯ ಪಂದ್ಯವನ್ನು ಮಾ. 2ರಂದು ನ್ಯೂಜಿಲೆಂಡ್‌ ವಿರುದ್ಧ ಆಡಲಿವೆ. (ಭಾರತ ತಂಡದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ)

ರೋಹಿತ್‌ ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕು: ರವಿಶಾಸ್ತ್ರಿ

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌-ಗವಾಸ್ಕರ್‌ ಟೂರ್ನಿಯಲ್ಲಿ ರೋಹಿತ್‌ ತನ್ನ ಆಟದ ವೈಖರಿಯನ್ನು ಬದಲಾಯಿಸಬೇಕಿದೆ ಎಂದು ಮಾಜಿ ಟೀಂ ಇಂಡಿಯಾ ಕೋಚ್‌ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಪಿತೃತ್ವದ ರಜೆಯಿಂದಾಗಿ ಮೊದಲ ಟೆಸ್ಟ್‌ ಪಂದ್ಯವನ್ನು ಆಡದ ರೋಹಿತ್‌ ಶರ್ಮಾ, ಎರಡು ಹಾಗೂ ಮೂರನೇ ಟೆಸ್ಟ್‌ನಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದರು. ಕ್ರಮವಾಗಿ ಅವರು 10, 3, 6 ರನ್‌ ಗಳಿಸಿ ಔಟಾಗಿದ್ದರು.

ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಬ್ಯಾಟ್‌ ಬೀಸಿದ್ದ ಕೆ.ಎಲ್‌ ರಾಹುಲ್‌ಗೆ ಓಪನಿಂಗ್‌ ಸ್ಥಾನ ಬಿಟ್ಟುಕೊಟ್ಟ ರೋಹಿತ್‌ ಮಧ್ಯಮ ಕ್ರಮಾಂಕದಲ್ಲಿಯೂ ಯಶಸ್ಸು ಕಾಣಲಿಲ್ಲ. ಇದರಿಂದಾಗಿ ರೋಹಿತ್‌ ತೀವ್ರ ಒತ್ತಡಕ್ಕೆ ಒಳಗಾಗಿದ್ದು, ರೋಹಿತ್‌ ಮುಂದಿನ ದಿನಗಳಲ್ಲಿ ಆಟವಾಡುವ ಬಗ್ಗೆ ಮಾಜಿ ಕೋಚ್‌ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

ರೋಹಿತ್‌ ಶರ್ಮಾ ಸ್ಪಷ್ಟ ಮನಸ್ಥಿತಿಯೊಂದಿಗೆ ಕ್ರೀಸ್‌ಗೆ ಇಳಿಯಬೇಕು. ತನ್ನ ರಣನೀತಿಯನ್ನು ಬದಲಾಯಿಸುವುದರೊಂದಿಗೆ ಹೆಚ್ಚು ಆಕ್ರಮಣಕಾರಿಯಾಗಿ ಆಟ ಆಡಬೇಕು ಎಂದಿದ್ದಾರೆ.

ರೋಹಿತ್‌ ಬ್ಯಾಟಿಂಗ್‌ ಆಡುವ ಮುನ್ನ ರಕ್ಷಣಾತ್ಮಕವಾಗಿ, ಆಕ್ರಮಣಕಾರಿಯಾಗಿ ಆಡಬೇಕು ಎಂಬ ಬಗ್ಗೆ ಗೊಂದಲದಲ್ಲಿರಬಾರದು. ರೋಹಿತ್‌ ತಮ್ಮ ಸಹಜ ಆಟದ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ನಿಯಂತ್ರಣ ಸಾಧಿಸಬೇಕು. ಇದರೊಂದಿಗೆ ಅವರು ತಮ್ಮ ಲಯಕ್ಕೆ ಮರಳಲು ಸಹಕಾರಿಯಾಗುತ್ತದೆ ಎಂದು ರೋಹಿತ್‌ ಶರ್ಮಾಗೆ ಒಂದಷ್ಟು ಸಲಹೆಗಳನ್ನು ರವಿಶಾಸ್ತ್ರಿ ನೀಡಿದ್ದಾರೆ.

ಐಪಿಎಲ್‌ ಆಯ್ತು ಈಗ ಲಿಸ್ಟ್‌-ಎ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಸೂರ್ಯವಂಶಿ

ನವದೆಹಲಿ: ಕ್ರಿಕೆಟ್‌ ಲೋಕದ ಮನರಂಜನಾ ಟೂರ್ನಿಯಾದ ಐಪಿಎಲ್‌ನ ಈ ಬಾರಿಯ ಐಪಿಎಲ್‌ ಮೆಗಾಹರಾಜು-2025ರಲ್ಲಿ ದಾಖಲೆ ಬರೆದಿದ್ದ ವೈಭವ್‌ ಸೂರ್ಯವಂಶಿ, ಇದೀಗ ಲಿಸ್ಟ್‌-ಎ ನಲ್ಲಿಯೂ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.

ಹೌದು ಕೇವಲ 13 ವರ್ಷದ ಸೂರ್ಯವಂಶಿ, ಐಪಿಎಲ್‌ ಹರಾಜು-2025ರಲ್ಲಿ ರಾಜಸ್ಥಾನ್‌ ಪರವಾಗಿ 1.10 ಕೋಟಿ ರೂಗೆ ಮಾರಾಟವಾಗುವ ಮೂಲಕ ಐಪಿಎಲ್‌ ಆಡುತ್ತಿರುವ ವಿಶ್ವದ ಅತಿ ಕಿರಿಯ ಕ್ರಿಕೆಟಿಗ ಎಂಬ ವಿಶ್ವದಾಖಲೆ ಬರೆದಿದ್ದರು. ಇದರ ಬೆನ್ನಲ್ಲೇ ಲಿಸ್ಟ್‌-ಎ ಗೂ ಪಾದಾರ್ಪಣೆ ಮಾಡಿದ ಸೂರ್ಯವಂಶಿ ಇಲ್ಲಿಯೂ ವಿನೂತನ ದಾಖಲೆ ಬರೆದಿದ್ದಾರೆ.

ಹೈದರಾಬಾದಿನ ನೆಕ್ಸೆಟ್‌ ಜೆನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಜಯ್‌ ಹಜಾರೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಲಿಸ್ಟ್‌-ಎ ಟೂರ್ನಿ ಆಡಿದ ಅತಿ ಕಿರಿಯ ಆಟಗಾರ ಎಂಬ ಹಗ್ಗಳಿಕೆಗೆ ವೈಭವ್‌ ಸಾಕ್ಷಿಯಾದರು.

ಇಂದು ಮಧ್ಯಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಬಿಹಾರ್‌ ತಂಡವನ್ನು ಪ್ರತಿನಿಧಿಸಿದ ವೈಭವ್‌ (13 ವರ್ಷ, 269 ದಿನಗಳು) ಈ ಹಿಂದೆ 1999/2000ರಲ್ಲಿ ಲಿಸ್ಟ್‌-3ಗೆ ಪಾದಾರ್ಪಣೆ ಮಾಡಿದ್ದ ಅಲಿ ಅಕ್ಬರ್‌ (14 ವರ್ಷ, 51 ದಿನಗಳು) ದಾಖಲೆ ಮುರಿದಿದ್ದಾರೆ.

ತನ್ನ ಚೊಚ್ಚಲ ಪಂದ್ಯವನ್ನಾಡಿದ ವೈಭವ್‌, ಕೇವಲ 2 ಎಸೆತಗಳಲ್ಲಿ ಎದುರಿಸಿ 1 ಬೌಂಡರಿ ಸಹಿತ 4 ರನ್‌ ಗಳಿಸಿ ಔಟಾದರು. ಬಿಹಾರ 197 ಸರ್ವಪತನ ಕಂಡರೇ, ರಜತ್‌ ಪಟಿದರ್‌ ಅವರ ಮಧ್ಯಪ್ರದೇಶ ತಂಡ ಕೇವಲ 24.5 ಓವರ್‌ಗಳಲ್ಲಿ ಚೇಸ್‌ ಮಾಡಿ ಗೆದ್ದು ಬೀಗಿತು.

Post a Comment

Previous Post Next Post

Top Post Ad

CLOSE ADS
CLOSE ADS
×