Jio: ಗ್ರಾಹಕರಿಗೆ ಜಿಯೋ ಬಂಪರ್ ಕೊಡುಗೆ; ಕಡಿಮೆ ಬೆಲೆಯಲ್ಲಿ 3 ಅದ್ಭುತ ಪ್ಲ್ಯಾನ್, ಐದು ದಿನವಷ್ಟೇ ಈ ಆಫರ್

Jio: ಗ್ರಾಹಕರಿಗೆ ಜಿಯೋ ಬಂಪರ್ ಕೊಡುಗೆ; ಕಡಿಮೆ ಬೆಲೆಯಲ್ಲಿ 3 ಅದ್ಭುತ ಪ್ಲ್ಯಾನ್, ಐದು ದಿನವಷ್ಟೇ ಈ ಆಫರ್

ರಿಲಯನ್ಸ್ ಜಿಯೋ ತನ್ನ ಕಂಪನಿಯ 8ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಲು ಈ ಕೊಡುಗೆಗಳನ್ನು ಪರಿಚಯಿಸಲಾಗಿದೆ.



ದೇಶದ ಅತಿದೊಡ್ಡ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಒಂದಾದ ಜಿಯೋ ಕಾಲಕಾಲಕ್ಕೆ ವಿಶೇಷ ಕೊಡುಗೆಗಳನ್ನು ನೀಡುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ತನ್ನ ಛಾಪನ್ನು ತೋರಿಸುತ್ತಿರುವ ಮತ್ತು ಗ್ರಾಹಕರ ಬೆಂಬಲ ಗಳಿಸುತ್ತಿರುವ ಜಿಯೋ ನೆಟ್‌ವರ್ಕ್ ಇತ್ತೀಚೆಗೆ ಇನ್ನೂ ಮೂರು ಅತ್ಯಾಕರ್ಷಕ ಕೊಡುಗೆಗಳನ್ನು ಘೋಷಿಸಿದೆ.

ರಿಲಯನ್ಸ್ ಜಿಯೋ ತನ್ನ ಕಂಪನಿಯ 8ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಲು ಈ ಕೊಡುಗೆಗಳನ್ನು ಪರಿಚಯಿಸಲಾಗಿದೆ. ಈ ಪ್ಲ್ಯಾನ್ಗಳ ವಿವರಗಳನ್ನು ನೋಡೋಣ.

ರೂ. 899, ರೂ. 999 ತ್ರೈಮಾಸಿಕ ಯೋಜನೆಗಳು ಹಾಗೂ ರೂ. 3599 ವಾರ್ಷಿಕ ಯೋಜನೆಯ ಮೂರು ಪ್ರಯೋಜನಗಳನ್ನು ರಿಲಯನ್ಸ್ ಜಿಯೋ ಘೋಷಿಸಿದೆ. ಸೆಪ್ಟೆಂಬರ್ 5 ಮತ್ತು 10ರ ನಡುವೆ ರೀಚಾರ್ಜ್ ಮಾಡುವ ಜಿಯೋ ಚಂದಾದಾರರು ಮಾತ್ರ ಈ ಕೊಡುಗೆಯನ್ನು ಪಡೆಯುತ್ತಾರೆ.

ಇತ್ತೀಚಿನ ಆಫರ್ ಪ್ರಕಾರ 899 ರೂಪಾಯಿ ರೀಚಾರ್ಜ್ ಮಾಡಿದ್ರೆ ನೀವು ದಿನಕ್ಕೆ 2GB ಡೇಟಾ ಮತ್ತು 90 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಅದೇ ರೀತಿ 999 ರೂಪಾಯಿ ಯೋಜನೆಯಲ್ಲಿ ನೀವು ದಿನಕ್ಕೆ 2GB ಡೇಟಾ ಮತ್ತು 98 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ.

ವಾರ್ಷಿಕ ಯೋಜನೆ ಪಡೆಯಲು 3599 ರೂಪಾಯಿ ರೀಚಾರ್ಜ್ ಮಾಡಿದರೆ 365 ದಿನಗಳ ಮಾನ್ಯತೆಯೊಂದಿಗೆ 2.5 GB ದೈನಂದಿನ ಡೇಟಾವನ್ನು ಪಡೆಯಬಹುದು ಎಂದು ರಿಲಯನ್ಸ್ ಜಿಯೋ ಘೋಷಣೆ ಮಾಡಿದೆ.

3 ಯೋಜನೆಗಳೊಂದಿಗೆ ಜಿಯೋ ಇತರ ಕೆಲವು ಪ್ರಯೋಜನಗಳನ್ನು ಉಚಿತವಾಗಿ ನೀಡುತ್ತಿದೆ. 10 OTT ಚಂದಾದಾರಿಕೆಯು 28 ದಿನಗಳ ಮಾನ್ಯತೆಯೊಂದಿಗೆ ರೂ.175 ಮೌಲ್ಯದ 10 GB ಡೇಟಾ ಪ್ಯಾಕ್‌ ಕೂಡ ಸಿಗಲಿದೆ. Zomato 3 ತಿಂಗಳ ಗೋಲ್ಡ್ ಮೆಂಬರ್ಶಿಪ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. 2999 ರೂಪಾಯಿಗಿಂತ ಹೆಚ್ಚು ರೀಚಾರ್ಜ್ ಮಾಡಿದ್ರೆ 500 ರೂ. AJIO ವೋಚರ್‌ಗಳನ್ನು ಸಹ ನೀಡಲಾಗುತ್ತದೆ.

ಜಿಯೋ ಎಂಟು ವರ್ಷಗಳ ಹಿಂದೆ ಭಾರತ ಡಿಜಿಟಲ್ ಕ್ಷೇತ್ರದಲ್ಲಿ ಮುಂದುವರಿಯಬೇಕೆಂಬ ದೂರ ದೃಷ್ಟಿಯೊಂದಿಗೆ ಎಲ್ಲರಿಗೂ ಹೆಚ್ಚಿನ ವೇಗದ ಡೇಟಾ ಮತ್ತು ಡಿಜಿಟಲ್ ಸೇವೆಗಳನ್ನು ಸಿಗುವಂತೆ ಮಾಡಿತು. ಕಂಪನಿಯು ಈಗ 490 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ಭಾರತದ ಡಿಜಿಟಲ್ ಕ್ರಾಂತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ.

Post a Comment

Previous Post Next Post

Top Post Ad

CLOSE ADS
CLOSE ADS
×