Life insurance yojana-2024: ಅಪಘಾತ ವಿಮೆ ಇಲ್ಲದಿದ್ದರೂ ಸಿಗುತ್ತೆ ಈ ಯೋಜನೆಯಡಿ 2 ಲಕ್ಷ

Life insurance yojana-2024: ಅಪಘಾತ ವಿಮೆ ಇಲ್ಲದಿದ್ದರೂ ಸಿಗುತ್ತೆ ಈ ಯೋಜನೆಯಡಿ 2 ಲಕ್ಷ

Life insurance yojana-ಮೋಟಾರು ವಾಹನಗಳ ಕಾಯಿದೆಯಡಿ ರಸ್ತೆ ಅಪಘಾತಕ್ಕೆ(accident insurance) ಸಂಬಂಧಿಸಿದಂತೆ ವಿವಿಧ ಯೋಜನೆಗಳಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಪರಿಹಾರವನ್ನು ನೀಡಲಾಗುತ್ತದೆ ಅದರೆ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಪರಿಹಾರವನ್ನು ಹೇಗೆ ಪಡೆಯಬಹುದು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.



ಹಿಟ್ ಅಂಡ್ ರನ್ ಪ್ರಕರಣದಲ್ಲಿ ಗಾಯಗೊಂಡವರು ಮತ್ತು ವೃತಪಟ್ಟವರ ವಾರಸುದಾರರಿಗೆ ಈ ಯೋಜನೆಯಡಿ ಪರಿಹಾರವನ್ನು ಪಡೆಯಬಹುದು, ಏನಿದು ಹಿಟ್ ಅಂಡ್ ರನ್? ಪರಿಹಾರ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಇತ್ಯಾದಿ ವಿವರ ಈ ಕೆಳಗಿನಂತಿದೆ.

Life insurance yojana- ಹಿಟ್ ಅಂಡ್ ರನ್ ಪ್ರಕರಣ ಎಂದರೇನು?

ಹಿಟ್ ಅಂಡ್ ರನ್ ಪ್ರಕರಣಗಳು ಎಂದರೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ವಾಹನ ಸವಾರನು ನಿಲ್ಲಿಸದೇ ಪರಾರಿ ಅದ ಸಮಯದಲ್ಲಿ ಅಪಘಾತದಿಂದ ವ್ಯಕ್ತಿಗೆ ಗಂಬೀರ ಗಾಯ ಮತ್ತು ಸಾವುಗೆ ಕಾರಣವಾಗುದಕ್ಕೆ ಹಿಟ್ ಅಂಡ್ ರನ್ ಪ್ರಕರಣಗಳು ಎನ್ನುತ್ತಾರೆ.

accident insurance amount-ಹಿಟ್ ಅಂಡ್ ರನ್ ಪ್ರಕರಣಕ್ಕೆ ಪರಿಹಾರದ ಹಣ ಪಡೆಯಬಹುದೇ?

ಹೌದು, ಹಿಟ್ ಅಂಡ್ ರನ್ ಪ್ರಕರಣಕ್ಕೆ ಅಪಘಾತ ಪರಿಹಾರ ಹಣವನ್ನು ಮೋಟಾರು ವಾಹನಗಳ ಕಾಯಿದೆಯಡಿ ಅಪಘಾತ ಪರಿಹಾರವನ್ನು ಪಡೆಯಬಹುದು.

accident insurance- ಎಷ್ಟು ಪರಿಹಾರ ನೀಡಲಾಗುತ್ತದೆ?

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನಗಳ ಕಾಯಿದೆಯಡಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ರೂ 50,000 ಮತ್ತು ಮರಣ ಹೊಂದಿದ ವ್ಯಕ್ತಿಯ ವಾರಸುದಾರರಿಗೆ ರೂ 2.00 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ.

accident insurance scheme-ಈ ಯೋಜನೆ ಕುರಿತು ಇದೆ ಮಾಹಿತಿ ಕೊರತೆ: 

ಪ್ರತಿ ವರ್ಷ ನಮ್ಮ ದೇಶದಲ್ಲಿ 60,000 ಕ್ಕೂ ಅಧಿಕ ಹಿಟ್ ಅಂಡ್ ರನ್ ಅಪಘಾತ ಅಗುತ್ತಿದ್ದು ಇದರಲ್ಲಿ ಕೇವಲ ಒಂದು ವರ್ಷಕ್ಕೆ 3,000 ಕ್ಕೂ ಕಡಿಮೆ ಜನರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಪರಿಹಾರವನ್ನು ಪಡೆದಿರುತ್ತಾರೆ.

accident insurance application-ಈ ಯೋಜನೆಯ ಪ್ರಯೋಜನ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಅಥವಾ ಮೃತನ ವಾರಸುದಾರರು ಅಪಘಾತ ನಡೆದ ಸ್ಥಳ ವ್ಯಾಪ್ತಿಯ ತಹಸಿಲ್ದಾರ್ ಅಥವಾ ಉಪ ವಿಭಾಗಾಧಿಕಾರಿಗಳಿಗೆ ಪರಿಹಾರ ಕೋರುವ ಮನವಿಯ ಅರ್ಜಿಯೊಂದಿಗೆ ಅಪಘಾತದ ವರದಿ ಮತ್ತು ಮರಣೋತ್ತರ ಪರೀಕ್ಷೆ ವರದಿ ಹಾಗೂ ಅಗತ್ಯ ದಾಖಲೆಗಳ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು.

accident insurance documents-ಅರ್ಜಿ ಸಲ್ಲಿಸಬೇಕಾಗುವ ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.

2) ಬ್ಯಾಕ್ ಪಾಸ್ ಬುಕ್ ಪ್ರತಿ.

3) ಮರಣೋತರ ಪರೀಕ್ಷೆ ವರದಿ.

4) ಅರ್ಜಿ ನಮೂನೆ.

5) ಪೋಲಿಸ್ ಇಲಾಖೆಯಿಂದ ನೀಡುವ ಅವಘಾತ ವರದಿ. 

accident insurance application process-ಅರ್ಜಿ ವಿಲೇವಾರಿ ಪ್ರಕ್ರಿಯೆ:

ಅಪಘಾತ ಪಡಿಸಿದ ವಾಹನ ಪತ್ತೆಯಾದಲ್ಲಿ ಸಮಯದಲ್ಲಿ ವ್ಯಕ್ತಿಗಳಿಗೆ ವಿಮಾ ಕಂಪನಿಗಳಿಂದ ಪರಿಹಾರ ದೊರೆಯುತ್ತದೆ ಅದರೆ ಅಪಘಾತ ಪಡಿಸಿದ ವಾಹನ ಪತ್ತೆಯಾಗದೇ ಇದ್ದ ಸಮಯದಲ್ಲಿ ಈ ಮೇಲೆ ತಿಳಿಸಿರುವ ವಿಧಾನ ಮತ್ತು ದಾಖಲೆಗಳ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ ಬಳಿಕ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆಯಾಗಿ ಈ ಸಮಿತಿ ಸಭೆಯಲ್ಲಿ ಎಲ್ಲಾ ಅರ್ಜಿಗಳನ್ನು ಮಂಡಿಸಿ ಅರ್ಹ ಫಲಾನುಭವಿಗಳಿಗೆ ಪರಿಹಾರವನ್ನು ನೀಡಲು ವಿಮಾ ಕಂಪನಿಗಳಿಗೆ ಸರಕಾರದಿಂದ ಆದೇಶ ಹೊರಡಿಸಲಾಗುತ್ತದೆ.

accident insurance committee- ಸಮಿತಿಯಲ್ಲಿ ಯಾರೆಲ್ಲ ಇರುತ್ತಾರೆ?

ಈ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಸದಸ್ಯರಾಗಿ ರಾಜ್ಯ ಸರಕಾರದಿಂದ ನಾಮ ನಿರ್ದೇಶನಗೊಂಡ ಪರಿಹಾರ ವಿಚಾರಣಾ ಅಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ, ಜಿಲ್ಲಾ ವೈದ್ಯಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ರಸ್ತೆ ಸುರಕ್ಷಾ ವಿಷಯದಲ್ಲಿ ಪರಿಣಿತರಾದ ಜಿಲ್ಲಾಧಿಕಾರಿಗಳಿಂದ ನಾಮ ನಿರ್ದೇಶನಗೊಂಡ ಒಬ್ಬ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಯೊಬ್ಬರು ಮತ್ತು ವಿಮಾ ಕಂಪನಿಯ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

Post a Comment

Previous Post Next Post
CLOSE ADS
CLOSE ADS
×