Bheema OTT: ಕೊನೆಗೂ ಓಟಿಟಿಗೆ ಲಗ್ಗೆ ಇಟ್ಟ ದುನಿಯಾ ವಿಜಯ್ 'ಭೀಮ': ಎಲ್ಲಿ ನೋಡಬಹುದು

Bheema OTT: ಕೊನೆಗೂ ಓಟಿಟಿಗೆ ಲಗ್ಗೆ ಇಟ್ಟ ದುನಿಯಾ ವಿಜಯ್ 'ಭೀಮ': ಎಲ್ಲಿ ನೋಡಬಹುದು

ಸೊರಗಿ ಬೆಂಡಾಗಿ ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ದುನಿಯಾ ವಿಜಯ್ 'ಭೀಮ' ಹೊಸ ಹುರುಷು ನೀಡಿತ್ತು. ಜನರು ಥಿಯೇಟರ್‌ಗೆ ಬರುತ್ತಿಲ್ಲ ಅನ್ನುವ ಸಮಯದಲ್ಲಿ ಮೊದಲ ಹಿಟ್ ದಾಖಲಿಸಿತ್ತು. ಚಿತ್ರಮಂದಿರಕ್ಕೆ ಮತ್ತೆ ಜನರನ್ನು ಕರೆದುಕೊಂಡು ಬರುವಲ್ಲಿ ಈ ಸಿನಿಮಾ ಯಶಸ್ವಿಯಾಗಿತ್ತು. ಸುಮಾರು ಮೂರು ವಾರಗಳ ಕಾಲ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿದೆ.



ದುನಿಯಾ ವಿಜಯ್ ನಟಿಸಿ, ಎರಡನೇ ಬಾರಿ ನಿರ್ದೇಶನ ಕೂಡ ಮಾಡಿದ್ದರು. ಮೊದಲು ನಿರ್ದೇಶಿಸಿದ್ದ 'ಸಲಗ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಹಾಗೇ ಎರಡನೇ ನಿರ್ದೇಶನ ಸಿನಿಮಾ ಕೂಡ ಗೆದ್ದು ಚಿತ್ರರಂಗಕ್ಕೆ ಜೀವ ಕೊಟ್ಟಿದ್ದು ಸತ್ಯ. ಆದ್ರೆ, ಕ್ರೈಂ ಹಿನ್ನೆಲೆಯುಳ್ಳ ಸಿನಿಮಾ ಆಗಿದ್ದರಿಂದ ಬ್ಯುಸಿನೆಸ್ ವಿಚಾರದಲ್ಲಿ ಕೊಂಚ ಮಟ್ಟಿಗೆ ಹಿನ್ನೆಡೆಯಾಗಿತ್ತು.

Duniya Vijay movie Bheema is finally available for streaming on OTT

'ಭೀಮ' ಬಿಡುಗಡೆಗೂ ಮುನ್ನ ಓಟಿಟಿ ಹಾಗೂ ಸ್ಯಾಟಲೈಟ್‌ ಹಕ್ಕುಗಳು ಮಾರಾಟ ಆಗಿರಲಿಲ್ಲ. ಈಗ ಕೊನೆಗೂ ಓಟಿಟಿ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ದುನಿಯಾ ವಿಜಯ್ 'ಭೀಮ' ಓಟಿಟಿಗೆ ಲಗ್ಗೆ ಇಟ್ಟಿದೆ. ಸಿನಿಮಾ ಬಿಡುಗಡೆಯಾಗಿ ಹೆಚ್ಚು ಕಡಿಮೆ ಒಂದು ತಿಂಗಳ ಬಳಿಕ ಓಟಿಟಿಗೆ ಲಗ್ಗೆ ಇಟ್ಟಿದೆ. ಅಷ್ಟಕ್ಕೂ 'ಭೀಮ' ಸಿನಿಮಾವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು? ತಿಳಿಯಲು ಮುಂದೆ ಓದಿ.

ದುನಿಯಾ ವಿಜಯ್ 'ಭೀಮ' ಗೆಲುವಿಗೆ 5 ಪ್ರಮುಖ ಕಾರಣಗಳೇನು?; ಬ್ಲ್ಯಾಕ್‌ ಕೋಬ್ರಾ ಗೆದ್ದಿದ್ದು ಎಲ್ಲಿ?

'ಭೀಮ' ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಲು ಸಾಧ್ಯವಾಗದೇ ಇದ್ದವರು ಓಟಿಟಿಯಲ್ಲಿ ನೋಡುವುದಕ್ಕೆ ಬಯಸಿದ್ದರು. ಯಾವಾಗ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆಗುತ್ತೋ ಅಂತ ಕಾಯುತ್ತಿದ್ದರು. ಕೊನೆಗೂ 'ಭೀಮ' ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಈಗಾಗಲೇ ಭೀಮ ಸ್ಟ್ರೀಮಿಂಗ್ ಆಗುತ್ತಿದೆ. ಬೆಂಗಳೂರಿನ ಡ್ರಗ್ ಮಾಫಿಯಾ ಸ್ಟೋರಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Duniya Vijay movie Bheema is finally available for streaming on OTT

ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿದ್ದ ಈ ಸಿನಿಮಾ ಬೆಂಗಳೂರಿನ ಡ್ರಗ್ಸ್‌ ಮಾಫಿಯಾದ ಕಥೆ ಹೇಳಿತ್ತು. ಯುವಕರು ಹೇಗೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಅನ್ನೋದನ್ನು ಹಸಿ ಹಸಿಯಾಗಿ ತೋರಿಸಿದ್ದರು. ಈ ಸಿನಿಮಾಗೆ ಬೆಂಗಳೂರು ಸೇರಿದಂತೆ ಎ ಹಾಗೂ ಬಿ ಸೆಂಟರ್‌ಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಅಲ್ಲ ಅನ್ನೋ ಅಪಾಧನೆ ಹೊರತಾಗಿಯೂ ಸಿನಿಮಾ ಥಿಯೇಟರ್‌ನಲ್ಲಿ ಗೆದ್ದಿತ್ತು.

'ಭೀಮ' ಸಿನಿಮಾ ಓಟಿಟಿಯಲ್ಲಿ ರಿಲೀಸ್‌ಗೆ ಬಗ್ಗೆ ಹೆಚ್ಚು ಪ್ರಸಾರ ಮಾಡಿಲ್ಲ. ಸದ್ದಿಲ್ಲದೆ ಸೈಲೆಂಟ್ ಆಗಿ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್‌ನಲ್ಲಿ 'ಭೀಮ' ಸಿನಿಮಾವನ್ನು ನೋಡಲು ಮಿಸ್ ಮಾಡಿಕೊಂಡವರು ಓಟಿಟಿಯಲ್ಲಿ ನೋಡಬಹುದು.

ದುನಿಯಾ ವಿಜಯ್ ನಟನೆಯ 'ಭೀಮ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೂರು ವಾರಗಳಲ್ಲಿ ಈ ಸಿನಿಮಾ ಬರೋಬ್ಬರಿ 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹೀಗಾಗಿ ನಿರ್ಮಾಪಕರು ಚಿತ್ರಮಂದಿರಗಳಿಂದಲೇ ಲಾಭದಲ್ಲಿ ಇದ್ದರು. ಈ ವರ್ಷ ಕನ್ನಡ ಚಿತ್ರರಂಗಕ್ಕೆ ಮೊದಲ ಹಿಟ್ ಕೊಟ್ಟ ಸಿನಿಮಾವನ್ನು ಇನ್ನೂ ನೋಡದವರು ಓಟಿಟಿ ವೇದಿಕೆಯಲ್ಲಿ ನೋಡಬಹುದಾಗಿದೆ.

1 Comments

Previous Post Next Post
CLOSE ADS
CLOSE ADS
×