Akrama-sakrama yojane- ರಾಜ್ಯ ಸರಕಾರದಿಂದ ರೈತರಿಗೆ ಸಿಹಿಸುದ್ದಿ! ಅಕ್ರಮ ಕೃಷಿ ಪಂಪ್ ಸೆಟ್ ಸಕ್ರಮ ಯೋಜನೆ

Akrama-sakrama yojane- ರಾಜ್ಯ ಸರಕಾರದಿಂದ ರೈತರಿಗೆ ಸಿಹಿಸುದ್ದಿ! ಅಕ್ರಮ ಕೃಷಿ ಪಂಪ್ ಸೆಟ್ ಸಕ್ರಮ ಯೋಜನೆ

Akrama sakrama yojane:-ರಾಜ್ಯ ಸರಕಾರದಿಂದ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಈ ಹಿಂದೆ ಜಾರಿಯಲ್ಲಿದ ಜನಪ್ರಿಯ ಯೋಜನೆಯಲ್ಲಿ ಒಂದಾದ ಅಕ್ರಮ ಕೃಷಿ ಪಂಪ್ ಸೆಟ್ ಸಕ್ರಮ(Akrama sakrama yojane) ಯೋಜನೆಯನ್ನು ಮರು ಜಾರಿಗೊಳಿಸವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.


ರೈತರ ವಿವಿಧ ಬೇಡಿಕೆಗಳನ್ನು ಸರಕಾರಕ್ಕೆ ಮುಟ್ಟಿಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ರೈತ ಮುಖಂಡರಾದ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ ರೈತಾಪಿ ವರ್ಗದ ಪ್ರಮುಖ ಹಾಗೂ ತುರ್ತು ಅಗತ್ಯವಿರುವ ಬೇಡಿಕೆಗಳ ಕುರಿತು ಮುಖ್ಯಮಂತ್ರಿರವರೊಂದಿಗೆ ಚರ್ಚೆ ನಡೆಸಿದ್ದಾರೆ.

ಇದರನ್ವಯ ಈ ಸಭೆಯ ನಂತರ ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ ಮರು ಜಾರಿ ಸೇರಿ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದು ಮಾಡುವುದಕ್ಕೆ ಸರ್ಕಾರ ಬದ್ದವಾಗಿದೆ. ವಿಧಾನ ಪರಿಷತ್‌ನಲ್ಲಿ ಪಕ್ಷ ಬಹುಮತ ಸಾಧಿಸಿದ ನಂತರ ತಿದ್ದುಪಡಿ ವಿಧೇಯಕ ಮಂಡಿಸಿ ಹಿಂದಿನ ಕಾಯ್ದೆ ಮರು ಸ್ಥಾಪಿಸಲಾಗುತ್ತದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ರೈತರ ಆಧಾ‌ರ್ ಸಂಖ್ಯೆ ಜೋಡಣೆ ಮಾಹಿತಿಯಿಲ್ಲ. ಈ ಬಗ್ಗೆ ವಿವರ ಪಡೆದು ಸೂಕ್ತ ಕ್ರಮವಹಿಸುವೆ ಎಂಬ ಭರವಸೆ ನೀಡಿದರು. ಇನ್ನುಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಕ್ರಮವಹಿಸಲಾಗುತ್ತದೆ ಎಂದರು. 

ಬರ, ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ವೈಜ್ಞಾನಿಕ ಮಾನದಂಡಗಳ ಅನ್ವಯ ಪರಿಹಾರ ಕೊಡಬೇಕು. ಖಾಸಗಿ ಫೈನಾನ್ಸ್, ಬ್ಯಾಂಕ್ ಸಾಲ ವಸೂಲಿ ನೆಪದಲ್ಲಿ ರೈತರಿಗೆ ಕಿರುಕುಳ ನೀಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. 

Krishi pumpset akrama-sakrama yojane: ರೈತ ಸಂಘಟನೆಗಳ ಪ್ರಮುಖ ಬೇಡಿಕೆಗಳ ವಿವರ ಹೀಗಿದೆ:

1) ಕೃಷಿ ಪಂಪ್ ಸೆಟ್ ಅಕ್ರಮ-ಸಕ್ರಮ ಯೋಜನೆ ಮರು ಜಾರಿಗೆ ಮನವಿ.

2) ಭೂ ಸುಧಾರಣ ಕಾಯ್ದೆ ರದ್ದುಪಡಿಸುವಿಕೆ.

3) ಸಾಲ ಮರು ಪಾವತಿ ಕಿರುಕುಳಕ್ಕೆ ಕಡಿವಾಣ ಹಾಕುವುದು.

4) ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸುವುದು.

5) ಜಿಂದಾಲ್ ಕಂಪನಿಗೆ ನೀಡಿರುವ ಜಮೀನನ್ನು ಹಿಂಪಡೆಯಲು ಮನವಿ.

1) ಕೃಷಿ ಪಂಪ್ ಸೆಟ್ ಅಕ್ರಮ-ಸಕ್ರಮ ಯೋಜನೆ ಮರು ಜಾರಿಗೆ ಮನವಿ:

ಈ ಹಿಂದೆ ಇಂದನ ಇಲಾಖೆಯಿಂದ ಅನುಷ್ಥಾನ ಮಾಡಲಾಗುತ್ತಿದ್ದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಕೃಷಿ ಚಟುವಟಿಕೆಗೆ ನೀರನ್ನು ಹಾಯಿಸಲು ಮೋಟಾರ್ ಬಳಕೆ ಮಾಡುತ್ತಿದ್ದ ರೈತರ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲು ಇದ್ದ ಅಕ್ರಮ-ಸಕ್ರಮ ಯೋಜನೆಯನ್ನು ಮರು ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಇದರ ಜೊತೆಗೆ ಕೃಷಿ ಪಂಪ್ ಸೆಟ್ ಗೆ ಆಧಾರ್ ಜೋಡಣೆ(pumpset adhar link) ನಿಲ್ಲಿಸುವಂತೆ ಈ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

2) ಭೂ ಸುಧಾರಣ ಕಾಯ್ದೆ ರದ್ದುಪಡಿಸುವಿಕೆ:

ಭೂ ಸುಧಾರಣ ಕಾಯ್ದೆ ರೈತರ ಜಮೀನು ಕಡಿಮೆಯಾಗುವುದರ ಜೊತೆಗೆ ಕೃಷಿ ಚಟುವಟಿಕೆಗೆ ತೊಡಕು ಉಂಟಾಗುವುದರಿಂದ ಈ ಕಾಯ್ದೆಯನ್ನು ತಕ್ಷಣದಿಂದ ರದ್ದು ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ.

3) ಸಾಲ ಮರು ಪಾವತಿ ಕಿರುಕುಳಕ್ಕೆ ಕಡಿವಾಣ ಹಾಕುವುದು:

ಕೆಲವು ಫೈನಾನ್ಸ್ ಕಂಪನಿ ಹಾಗೂ ಬ್ಯಾಂಕಿನವರು ರೈತರಿಗೆ ಸಾಲವನ್ನು ನೀಡಿ ಸಾಲ ಮರು ಪಾವತಿಗೆ ಹೆಚ್ಚು ಕಿರುಕುಳ ನೀಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತಿದ್ದು ಇದಕ್ಕೆ ಕಡಿವಾಣ ಹಾಕಲು ಸೂಕ್ತ ಮತ್ತು ಕಠಿಣ ನಿಯಮ ಜಾರಿಗೆ ತರಲು ಮನವಿ ಸಲ್ಲಿಸಿದ್ದಾರೆ.

4) ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸುವುದು:

ಬೆಳೆ ಹಾನಿಯಾದ ಬಳಿಕ ರೈತರಿಗೆ ಸಮಯಕ್ಕೆ ಸರಿಯಾಗಿ ವಿಳಂಬ ಮಾಡಲು ಪರಿಹಾರವನ್ನು ನೀಡಬೇಕು ಜೊತೆಗೆ ವೈಜ್ಞಾನಿಕ ರೈತ ಪರ ನಿಯಮಗಳನ್ನು ಅನುಸರಿಸಿ ಸೂಕ್ತ ಪರಿಹಾರ ಮೊತ್ತವನ್ನು ರೈತರಿಗೆ ನೀಡಬೇಕು ಎಂದು ಸಹ ಮನವಿ ಸಲ್ಲಿಸಿದ್ದಾರೆ.

5) ಜಿಂದಾಲ್ ಕಂಪನಿಗೆ ನೀಡಿರುವ ಜಮೀನನ್ನು ಹಿಂಪಡೆಯಲು ಮನವಿ:

ಜಿಂದಾಲ್ ಗೆ ನೀಡಿದ 3667 ಎಕರೆ ಜಮೀನು ಹಿಂಪಡೆಯಬೇಕು ಎಂದು ರೈತರು ಮುಖಂಡರು/ರೈತರು ಒತ್ತಾಯಿಸಿದ್ದಾರೆ.



Post a Comment

Previous Post Next Post
CLOSE ADS
CLOSE ADS
×