ರಾಜ್ಯ ಸರ್ಕಾರದಿಂದ ಸಿಗಲಿದೆ 15,000 ರೂ. | Subsidy For Package Tour By Karnataka Govt

ರಾಜ್ಯ ಸರ್ಕಾರದಿಂದ ಸಿಗಲಿದೆ 15,000 ರೂ. | Subsidy For Package Tour By Karnataka Govt

Subsidy For Package Tour By Karnataka Govt:-ಎಲ್ಲರಿಗೂ ನಮಸ್ಕಾರ, ನೀವೇನಾದರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಬೇಕೆಂದುಕೊಂಡಿದ್ದೀರಾ..? ಹಾಗಿದ್ದರೇ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ರಾಜ್ಯ ಸರ್ಕಾರವು ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಕಡಿಮೆ ವೆಚ್ಚದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ (Subsidy For Package Tour) ಭೇಟಿ ನೀಡಲು ಭಾರತ್‌ ಗೌರವ್ ದ್ವಾರಕಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.



ಈ ಯಾತ್ರೆಗೆ ಎಷ್ಟು ಹಣ ಬೇಕಾಗುತ್ತದೆ..? ಸರ್ಕಾರವು ಎಷ್ಷು ಹಣವನ್ನು ನೀಡುತ್ತದೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿ ಓದಿರಿ. ಈ ಯಾತ್ರೆಗಳಿಗೆ ಹೋಗಲು ಬಯಸುವವರು ಈ ಕೆಳಗೆ ನೀಡಿರುವ ವೆಬ್‌ಸೈಟ್‌ ನಲ್ಲಿ ಬುಕ್‌ ಮಾಡಿಕೊಳ್ಳಬಹುದು‌.

ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಕರ್ನಾಟಕ – ಭಾರತ್‌ ಗೌರವ್ ದ್ವಾರಕಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದ್ವಾರಕಾ, ನಾಗೇಶ್ವರ, ಸೋಮನಾಥ ಹಾಗೂ ತ್ರಯಂಬಕೇಶ್ವರ ದೇವಾಲಯಗಳಿಗೆ ಭೇಟಿಗೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ.

ರಾಜ್ಯ ಸರ್ಕಾರದಿಂದ ಎಷ್ಟು ಹಣ?

ಒಟ್ಟು 30,000 ರೂ. ಪ್ಯಾಕೇಜ್‌ ಇದಾಗಿದ್ದು, ಇದರಲ್ಲಿ 15,000 ರೂ. ಅನ್ನು ರಾಜ್ಯ ಸರ್ಕಾರದ ವತಿಯಿಂದ ನೀಡುತ್ತಾರೆ. ಇನ್ನುಳಿದ 15,000 ರೂ. ಅನ್ನು ಯಾತ್ರಾರ್ಥಿಗಳು ಬುಕ್ಕಿಂಗ್‌ (Subsidy For Package Tour) ಮಾಡುವ ಸಮಯದಲ್ಲಿ ಪಾವತಿಸಬೇಕಾಗುತ್ತದೆ.

Subsidy For Package Tour ಸೌಲಭ್ಯಗಳು:

  • ಈ ಪ್ಯಾಕೇಜ್‌ನಲ್ಲಿ 3 ಟೈರ್ ಎ.ಸಿ. ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರಲಿದೆ.
  • ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುವುದು.
  • ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ ಇರಲಿದೆ.

ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳು:

  • ಬೆಂಗಳೂರು (SMVT)
  • ದಾವಣಗೆರೆ
  • ಹಾವೇರಿ
  • ಬೆಳಗಾವಿ
  • ಅರಸಿಕೆರೆ
  • ಬೀರೂರು
  • ತುಮಕೂರು

ಪ್ರವರ್ಗ ʼಸಿʼ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು /ನೌಕರರು ಭಾರತ್‌ ಗೌರವ್‌ ದ್ವಾರಕಾ ಯಾತ್ರೆಗೆ ಹೊಗಲು ಬಯಸುವವರು ಅಗತ್ಯ ದಾಖಲೆಗಳೊಂದಿಗೆ ಆಯುಕ್ತರ ಕಚೇರಿಗೆ ನೇರವಾಗಿ ಭೇಟಿ ನೀಡಿ ಸೆಪ್ಟೆಂಬರ್‌ 20ರ ಒಳಗಾಗಿ ಮನವಿ ಸಲ್ಲಿಸಬೇಕು.

ಬುಕ್ಕಿಂಗ್‌ಗಾಗಿ irctctourism.com/Karnatakbgaura… ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಥವಾ ಹೆಚ್ಚಿನ ಮಾಹಿತಿಗಾಗಿ 9003140710, 8595931292, 8595931294, 9731641611, 8595931293, 8595931291 ಗೆ ಕರೆ ಮಾಡಿ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು.


Post a Comment

Previous Post Next Post
CLOSE ADS
CLOSE ADS
×