ಎಸ್‌ಎಸ್‌ಸಿ ಎಂಟಿಎಸ್‌ ಹುದ್ದೆಗಳ ಸಂಖ್ಯೆ ಹೆಚ್ಚಿಸಿ ಅರ್ಜಿಗೆ ದಿನಾಂಕ ವಿಸ್ತರಣೆ

ಎಸ್‌ಎಸ್‌ಸಿ ಎಂಟಿಎಸ್‌ ಹುದ್ದೆಗಳ ಸಂಖ್ಯೆ ಹೆಚ್ಚಿಸಿ ಅರ್ಜಿಗೆ ದಿನಾಂಕ ವಿಸ್ತರಣೆ

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ ಎಸ್‌ಎಸ್‌ಸಿ ಎಂಟಿಎಸ್ ಹುದ್ದೆಗಳ ಸಂಖ್ಯೆ ಹೆಚ್ಚಿಸಿದೆ. ಅಲ್ಲದೇ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಣೆ ಮಾಡಿದೆ. ಎಸ್‌ಎಸ್‌ಎಲ್‌ಸಿ ಪಾಸಾಗಿದ್ದು, ಸರ್ಕಾರಿ ಉದ್ಯೋಗ ಪಡೆಯಲು ನೀವು ಬಯಸುತ್ತಿದ್ದಲ್ಲಿ ಈಗಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.




ಕೇಂದ್ರ ಸರ್ಕಾರದ ಇಲಾಖೆ, ಸಂಸ್ಥೆ, ಕಚೇರಿಗಳಿಗೆ ನೇಮಕ ಮಾಡುವ ಮಲ್ಟಿಟಾಸ್ಕಿಂಗ್ ಸ್ಟಾಫ್‌ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜತೆಗೆ, ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕವನ್ನು ಇದೀಗ ಆಯೋಗವು ವಿಸ್ತರಣೆ ಮಾಡಿದೆ.

ದಿನಾಂಕ 27-06-2024 ರಂದು ಬಿಡುಗಡೆ ಮಾಡಿದ್ದ ಅಧಿಸೂಚನೆಯಲ್ಲಿ ಎಂಟಿಎಸ್‌ ಹುದ್ದೆಗಳ ಸಂಖ್ಯೆ 4887 ಎಂದು ತಿಳಿಸಲಾಗಿತ್ತು. ಇದೀಗ ಸದರಿ ಹುದ್ದೆಗಳ ಸಂಖ್ಯೆ ಹೆಚ್ಚಿಸಿ, 6144 ಹುದ್ದೆ ಎಂದು ಓದಿಕೊಳ್ಳಲು ಆಯೋಗ ತಿಳಿಸಿದೆ. ಇದರ ಪ್ರಕಾರ 2024ನೇ ಸಾಲಿನ ಎಂಟಿಎಸ್‌ ಮತ್ತು ಹವಾಲ್ದಾರ್ ಹುದ್ದೆಗಳ ಪರೀಕ್ಷೆ ಮೂಲಕ ಭರ್ತಿ ಮಾಡುವ ಒಟ್ಟು ಹುದ್ದೆಗಳ ಸಂಖ್ಯೆ ವಿವರ ಕೆಳಗಿನಂತಿದೆ ನೋಡಿ.

ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ಸಂಭಾವ್ಯ ಹುದ್ದೆಗಳ ಸಂಖ್ಯೆ.

ಹುದ್ದೆ ಹೆಸರು                                              ಹುದ್ದೆಗಳ ಸಂಖ್ಯೆ

ಮಲ್ಟಿ ಟಾಸ್ಕಿಂಗ್ (ನಾನ್‌ ಟೆಕ್ನಿಕಲ್ ) ಸ್ಟಾಫ್‌      6144
ಹವಾಲ್ದಾರ್ ಇನ್ ಸಿಬಿಐಸಿ, ಸಿಬಿಎನ್              3439
ಒಟ್ಟು ಹುದ್ದೆಗಳ ಸಂಖ್ಯೆ                              9583

ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಸಿಬ್ಬಂದಿ ನೇಮಕಾತಿ ಆಯೋಗವು ಎಸ್‌ಎಸ್‌ಸಿ ಮಲ್ಟಿಟಾಸ್ಕಿಂಗ್ ಸ್ಟಾಫ್ (ನಾನ್‌ ಟೆಕ್ನಿಕಲ್) ಮತ್ತು ಹವಾಲ್ದಾರ್ (ಸಿಬಿಐಸಿ ಮತ್ತು ಸಿಬಿಎನ್‌) ಹುದ್ದೆಗಳ ನೇಮಕಾತಿ ಸಂಬಂಧ, ಇದೀಗ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಇನ್ನು ಅರ್ಜಿ ಸಲ್ಲಿಸದಿದ್ದಲ್ಲಿ ಈಗ ಆಗಸ್ಟ್‌ 03 ರ ರಾತ್ರಿ 11 ಗಂಟೆವರೆಗೆ ಅರ್ಜಿ ಸಲ್ಲಿಸಬಹುದು. ಹಾಗೂ ಆನ್‌ಲೈನ್‌ ಮೂಲಕ ಅಪ್ಲಿಕೇಶನ್‌ ಶುಲ್ಕ ಪಾವತಿ ಮಾಡಲು ಆಗಸ್ಟ್‌ 04 ರ ರಾತ್ರಿ 11 ಗಂಟೆವರೆಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಅರ್ಜಿಗೆ ಜುಲೈ 31 ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು.

ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ಅರ್ಜಿಗೆ ಪರಿಷ್ಕೃತ ವೇಳಾಪಟ್ಟಿ

ಅರ್ಜಿ ಸಲ್ಲಿಸಲು ವಿಸ್ತರಣೆ ಮಾಡಲಾದ ಕೊನೆ ದಿನಾಂಕ 03-08-2024 ರ ರಾತ್ರಿ 11 ಗಂಟೆವರೆಗೆ
ಆನ್‌ಲೈನ್‌ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ 04-08-2024 ರ ರಾತ್ರಿ 11 ಗಂಟೆವರೆಗೆ
ಅರ್ಜಿ ಮಾಹಿತಿ ತಿದ್ದುಪಡಿಗೆ ಅವಕಾಶ ನೀಡುವ ದಿನಾಂಕ 16-08-2024 ರಿಂದ 17-08-2024 ರ ರಾತ್ರಿ 11 ಗಂಟೆವರೆಗೆ.

ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ಹುದ್ದೆಗೆ ಶೈಕ್ಷಣಿಕ ಅರ್ಹತೆಗಳೇನು?

ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು.

ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ಹುದ್ದೆಗೆ ವಯಸ್ಸಿನ ಅರ್ಹತೆಗಳೇನು?

ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್‌/ ಹವಾಲ್ದಾರ್ ಇನ್‌ ಸಿಬಿಎನ್ (ಕಂದಾಯ ಇಲಾಖೆ) ಹುದ್ದೆಗಳಿಗೆ ಗರಿಷ್ಠ 25 ವರ್ಷ ದಾಟಿರಬಾರದು.
ಹವಾಲ್ದಾರ್ ಇನ್ ಸಿಬಿಐಸಿ (ಕಂದಾಯ ಇಲಾಖೆ) / ಕೆಲವು ಎಂಟಿಎಸ್ ಹುದ್ದೆಗಳಿಗೆ ಗರಿಷ್ಠ 27 ವರ್ಷ ದಾಟಿರಬಾರದು.

ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ಹುದ್ದೆಗೆ ಅಪ್ಲಿಕೇಶನ್ ಹಾಕುವುದು ಹೇಗೆ?

  • ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್‌ https://ssc.gov.in ಗೆ ಭೇಟಿ ನೀಡಿ.
  • ತೆರೆದ ವೆಬ್‌ ಪುಟದಲ್ಲಿ 'Quick Links >> Apply' ಆಯ್ಕೆ ಮಾಡಿ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. Multi Tasking (Non-Technical) Staff Examination,2024 >> Apply ಆಯ್ಕೆ ಮಾಡಿ ಕ್ಲಿಕ್ ಮಾಡಿ.
  • ಈ ಹಂತದಲ್ಲಿ 'New User ? Register Now' ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಮೊದಲು ರಿಜಿಸ್ಟ್ರೇಷನ್‌ ಪಡೆಯಿರಿ.
  • ನಂತರ ಆನ್‌ಲೈನ್‌ ಅರ್ಜಿ ನಮೂನೆಯಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.

ಅಪ್ಲಿಕೇಶನ್‌ ಸಲ್ಲಿಸಲು ನಿಗದಿತ ಶುಲ್ಕ ರೂ.100.

Post a Comment

Previous Post Next Post
CLOSE ADS
CLOSE ADS
×