Mobile Charging Tips: ಸ್ಪೀಡ್ ಚಾರ್ಜರ್ ಎಲ್ಲ ಯಾಕೆ, ಈ ಟ್ರಿಕ್ಸ್ ಇದ್ರೆ ಸಾಕು! ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತೆ

Mobile Charging Tips: ಸ್ಪೀಡ್ ಚಾರ್ಜರ್ ಎಲ್ಲ ಯಾಕೆ, ಈ ಟ್ರಿಕ್ಸ್ ಇದ್ರೆ ಸಾಕು! ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತೆ

ನಿಮ್ಮ ಬಳಿ ವೇಗದ ಚಾರ್ಜರ್ ಇಲ್ಲದಿದ್ದರೂ, ಕೆಲವು ಟ್ರಿಕ್ಸ್ಗಳಿಂದ ನಿಮ್ಮ ಮೊಬೈಲ್ ಅನ್ನು ವೇಗವಾಗಿ ಚಾರ್ಜ್ ಮಾಡಬಹುದು. ಏನೆಂದು ಇಲ್ಲಿದೆ ನೋಡಿ.




ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಫೋನ್ ಬಳಸುತ್ತಿದ್ದಾರೆ. ಎಲ್ಲರಿಗೂ ಫೋನ್ ಬೇಕು. ಅದ್ರಲ್ಲೂ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ವಿವಿಧ ಬ್ರಾಂಡ್ಗಳೊಂದಿಗೆ ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಯಾವುದೇ ಮೊಬೈಲ್‌ ಖರೀದಿಸುವಾಗ ಹೆಚ್ಚಿನ ಗಮನವು ಅದರ ಬ್ಯಾಟರಿ ಸಾಮರ್ಥ್ಯದ ಮೇಲೆ ಇರುತ್ತದೆ.

ಮೊಬೈಲ್ ಎಷ್ಟೇ ಚೆನ್ನಾಗಿದ್ದರೂ ಚಾರ್ಜ್ ಮಾಡದಿದ್ದರೆ ಕೆಲಸ ಮಾಡುವುದಿಲ್ಲ. ಸ್ಮಾರ್ಟ್‌ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಲು ಕಂಪನಿಗಳು ಅದರೊಂದಿಗೆ ಫಾಸ್ಟ್ ಚಾರ್ಜಿಂಗ್ ಚಾರ್ಜರ್‌ಗಳನ್ನು ಸಹ ನೀಡುತ್ತಿವೆ. ಕೆಲವು ಕಂಪನಿಗಳು 50 ವ್ಯಾಟ್ ಚಾರ್ಜರ್‌ಗಳನ್ನು, ಕೆಲವು 64 ವ್ಯಾಟ್ ಚಾರ್ಜರ್‌ಗಳನ್ನು ತಯಾರಿಸುತ್ತವೆ. ಇದನ್ನು ಬಳಸಿಕೊಂಡು ಮೊಬೈಲ್ ಅನ್ನು 30 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಅಥವಾ 10 ನಿಮಿಷಗಳಲ್ಲಿ ಅರ್ಧ ಚಾರ್ಜ್ ಮಾಡಬಹುದು ಎಂದು ಕಂಪನಿಗಳು ಹೇಳುತ್ತವೆ.

ಆದರೆ ನಿಮ್ಮ ಬಳಿ ವೇಗದ ಚಾರ್ಜರ್ ಇಲ್ಲದಿದ್ದರೂ, ಕೆಲವು ಟ್ರಿಕ್ಸ್ಗಳಿಂದ ನಿಮ್ಮ ಮೊಬೈಲ್ ಅನ್ನು ವೇಗವಾಗಿ ಚಾರ್ಜ್ ಮಾಡಬಹುದು.

ಏರೋಪ್ಲೇನ್ ಮೋಡ್ ಅತ್ಯುತ್ತಮ ಟ್ರಿಕ್: 

ಪ್ರತಿ ಸ್ಮಾರ್ಟ್‌ಫೋನ್‌ನಲ್ಲಿ ಏರೋಪ್ಲೇನ್ ಮೋಡ್ ಇರುತ್ತದೆ. ಜನರು ವಿಮಾನದಲ್ಲಿ ಪ್ರಯಾಣಿಸಬೇಕಾದಾಗ ಮಾತ್ರ ಇದನ್ನು ಬಳಸಲಾಗುತ್ತದೆ. ವಾಸ್ತವವಾಗಿ, ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಿದಾಗ, ಫೋನ್ ನೆಟ್‌ವರ್ಕ್ ಸಂಪೂರ್ಣವಾಗಿ ಆಫ್ ಆಗುತ್ತದೆ. ಏರೋಪ್ಲೇನ್ ಮೋಡ್ ಆನ್ ಆದ ತಕ್ಷಣ, ಫೋನ್‌ನ ಇಂಟರ್ನೆಟ್, ಜಿಪಿಎಸ್ ಮತ್ತು ನೆಟ್‌ವರ್ಕ್ ಸೇವೆಗಳು ಸಂಪೂರ್ಣವಾಗಿ ನಿಲ್ಲುತ್ತವೆ. ಇದರ ನಂತರ ಫೋನ್ ವೇಗವಾಗಿ ಚಾರ್ಜ್ ಮಾಡಲು ಪ್ರಾರಂಭಿಸುತ್ತದೆ. ಆದರೆ, ಈ ಹಂತದಲ್ಲಿ ನೀವು ಕರೆಗಳನ್ನು ಸಹ ಸ್ವೀಕರಿಸಲಾಗುವುದಿಲ್ಲ.

ಕಂಪನಿ ಚಾರ್ಜರ್ ಬಳಸಿ: 

ಕಡಿಮೆ ಸಮಯದಲ್ಲಿ ವೇಗವಾಗಿ ಮೊಬೈಲ್ ಚಾರ್ಜ್ ಮಾಡಲು, ಯಾವಾಗಲೂ ಕಂಪನಿ ಚಾರ್ಜರ್ ಅನ್ನೇ ಬಳಸಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಲೋಕಲ್ ಮತ್ತು ನಕಲಿ ಚಾರ್ಜರ್‌ನಿಂದ ಮೊಬೈಲ್ ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ ಮತ್ತು ನಿಮ್ಮ ಫೋನ್ ಕೂಡ ತುಂಬಾ ನಿಧಾನವಾಗಿ ಚಾರ್ಜ್ ಆಗುತ್ತದೆ. ಕಂಪನಿ ನೀಡುವ ಚಾರ್ಜರ್ ಅನ್ನು ಮಾತ್ರ ಬಳಸುವುದು ಉತ್ತಮ.


ಆ್ಯಪ್ಸ್ ಕ್ಲಿಯರ್ ಮಾಡಿ: 

ಫೋನ್ ಆನ್ ಆಗಿರುವಾಗ, ಬ್ಯಾಗ್ರೌಂಡ್ನಲ್ಲಿ ಅನೇಕ ಅಪ್ಲಿಕೇಶನ್‌ಗಳು ಸಹ ರನ್ ಆಗುತ್ತವೆ. ಈ ಅಪ್ಲಿಕೇಶನ್‌ಗಳು ರನ್ ಆಗ್ಬೇಕಾದ್ರೆ ಚಾರ್ಜ್ ಸಹ ಕಡಿಮೆಯಾಗುತ್ತದೆ. ಅದೇ ರೀತಿ ಫೋನ್ ಚಾರ್ಜ್ ಮಾಡುವಾಗ, ಆ ಸಮಯದಲ್ಲಿಯೂ ಸಹ ಬ್ಯಾಗ್ರೌಂಡ್ನಲ್ಲಿ ಹಲವಾರು ಅಪ್ಲಿಕೇಶನ್‌ಗಳು ಆನ್ ಆಗಿರುತ್ತವೆ. ಇದರಿಂದ ಮೊಬೈಲ್ ಚಾರ್ಜ್ ವೇಗವಾಗಿ ಖಾಲಿಯಾಗುತ್ತದೆ ಮತ್ತು ವೇಗವಾಗಿ ಚಾರ್ಜ್ ಆಗುವುದಿಲ್ಲ. ಆದ್ದರಿಂದ ಬಳಸಿದ ಅಪ್ಲಿಕೇಶನ್ಗಳನ್ನು ಆಗಲೇ ಕ್ಲಿಯರ್ ಮಾಡಿದ್ರೆ ಉತ್ತಮ.

ಫೋನ್ ಅಪ್ಡೇಟ್ ಮಾಡಿ: 

ನೀವು ಬಳಸೋ ಮೊಬೈಲ್ ಅನ್ನು ಆಗಾಗ ಅಪ್ಡೇಟ್ ಮಾಡ್ತಾ ಇರಿ. ಇದರಿಂದ ನಿಮ್ಮ ಮೊಬೈಲ್ ಫೀಚರ್ ಸಹ ಏನಾದರೊ.ದು ಬದಲಾವಣೆಯಾಗುತ್ತಿರುತ್ತದೆ. ಒಂದು ವೇಳೆ ಫೋನ್ ಅಪ್ಡೇಟ್ ಮಾಡದೇ ಇದ್ದರೆ ಬ್ಯಾಟರಿ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಆಗಾಗ ಮೊಬೈಲ್ ಅಪ್ಡೇಟ್ ಮಾಡುತ್ತಿರಬೇಕು.

ಚಾರ್ಜಿಂಗ್ ಅಪ್ಲಿಕೇಶನ್‌ಗಳನ್ನು ಬಳಸಬೇಡಿ: 

ಅನೇಕ ಜನರು ಚಾರ್ಜಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ ಏಕೆಂದರೆ ಅದು ಅವರ ಫೋನ್ ವೇಗವಾಗಿ ಚಾರ್ಜ್ ಆಗಲು ಸಹಾಯ ಮಾಡುತ್ತದೆ ಎಂದುಕೊಂಡಿರುತ್ತಾರೆ, ಆದರೆ ವಾಸ್ತವವಾಗಿ ಅದರಿಂದ ಏನು ಯೂಸ್ ಇಲ್ಲ. ಈ ರೀತಿಯ ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಚಾರ್ಜಿಂಗ್ ಅನ್ನು ನಿಧಾನಗೊಳಿಸುತ್ತದೆ.


Post a Comment

Previous Post Next Post
CLOSE ADS
CLOSE ADS
×