Measure your land ನಿಮ್ಮ ಜಮೀನು ಮೊಬೈಲ್ ನಲ್ಲಿ ಹೀಗೆ ಅಳತೆ ಹೀಗೆ ಮಾಡಿ

Measure your land ನಿಮ್ಮ ಜಮೀನು ಮೊಬೈಲ್ ನಲ್ಲಿ ಹೀಗೆ ಅಳತೆ ಹೀಗೆ ಮಾಡಿ

Measure your land : ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಹೌದು, ರೈತರು ಕೇವಲ ಒಂದೇ ನಿಮಿಷದಲ್ಲಿ ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ತಮ್ಮ ಎಲ್ಲಾ ಸರ್ವೆ ನಂಬರ್ ಗಳನ್ನು ಅಳತೆ ಮಾಡಬಹುದು.
ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.




  • ಪಹಣಿಯಲ್ಲಿರುವಂತೆ ಕೆಲವು ಸಲ ಜಮೀನಿನ ಅಳತೆ ಇರುವುದಿಲ್ಲ. ಹೆಚ್ಚು ಕಡಿಮೆ ಇರುತ್ತದೆ. ಹಾಗಾಗಿ ರೈತರು ತಮ್ಮ ಪಹಣಿಯಲ್ಲಿರುವಂತೆ ಜಮೀನನ ಅಳತೆ ಸರಿಯಾಗಿದೆಯೋ ಇಲ್ಲವೋ ಅಥವಾ ಹೆಚ್ಚು ಕಡಿಮೆ ಇದೆ ಎಂಬುದನ್ನು ಚೆಕ್ ಮಾಡಬಹುದು.
  • ರೈತರು ನಿಜವಾಗಿ ತಮ್ಮ ಜಮೀನು ಎಷ್ಟು ಎಕರೆ ಹೊಂದಿದೆ ಎಂಬುದು ಗೊತ್ತಿರುವುದಿಲ್ಲ. ಅಂತಹ ರೈತರು ಯಾರ ಸಹಾಯವೂ ಇಲ್ಲದೆ,  ಯಾರ ಬಳಿಯೂ ಹೋಗದೆ ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಜಮೀನಿನ ಅಳತೆ  (Measure your land) ಮಾಡಬಹುದು.

Measure your land ರೈತರು ತಮ್ಮ ಜಮೀನು ಮೊಬೈಲ್ ನಲ್ಲೇ ಅಳತೆ ಮಾಡುವುದು ಹೇಗೆ ?

ರೈತರು ತಮ್ಮ ಜಮೀನಿನ ಅಳತೆ ಮಾಡಲು ಈ

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.  ಲಿಂಕ್ ಕ್ಲಿಕ್ ಮಾಡಿದ ಮೇಲೆ ರೈತರಿಗೆ  Dishaank  ಆ್ಯಪ್ ಓಪನ್ ಆಗುತ್ತದೆ. ಆಗ ರೈತರಿಗೆ ಕಾಣುವ  install ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮ್ಮ ಮೊಬೈಲಿಗೆ ದಿಶಾಂಕ್ ಆ್ಯಪ್ ಇನಸ್ಟಾಲ್ ಆಗುತ್ತದೆ. ನಂತರ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನೀವು ಕನ್ನಡ ಭಾಷೆ ಆಯ್ಕೆ ಮಾಡಿಕೊಂಡ ನಂತರ ನಮ್ಮ ಹೆಸರು, ಮೇಲ್ ಐಡಿ ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಓಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುವುದು. ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ಹಾಕಿ ನೋಂದಾಯಿಸಿ ಮೇಲೆ ಕ್ಲಿಕ್ ಮಾಡಬೇಕು.

ಆಗ ನೀವು ಯಾವ ಸರ್ವೆ ನಂಬರಿನಲ್ಲಿ ನಿಂತಿದ್ದೀರೋ  ಅಲ್ಲಿ ಪೈಂಟ್ ಕಾಣುತ್ತದೆ.  ನೀವು ನಿಮ್ಮ ಮೊಬೈಲ್ ನಲ್ಲಿ ಝೂಮ್ ಮಾಡಿ ವೀಕ್ಷಿಸಿದರೆ ನೀವು ಎಲ್ಲಿ ನಿಂತಿದ್ದೀರಿ ಎಂಬುದನ್ನು ತೋರಿಸುತ್ತದೆ. ನಿಮಗೆ ಕಾಣುವ ಪೈಂಟ್ ಮೇಲ ಒತ್ತಬೇಕು.  ನಂತರ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಆಗ ನಿಮಗೆ ಸರ್ವೆ ನಂಬರ್, ಗ್ರಾಮದ ಹೆಸರು, ಹೋಬಳಿ, ನಿಮ್ಮ ತಾಲೂಕು ಹಾಗೂ ಜಿಲ್ಲೆಯ ಹೆಸರು ತೋರಿಸುತ್ತದೆ.

ಅಲ್ಲಿ ಕಾಣುವ ಹೆಚ್ಚಿನ ವಿವರಗಳು ಮೇಲೆ ಒತ್ತಿದರೆ ಸಾಕು, ಇನ್ನೊಂದು ಪೇಜ್ ಓಪನ್ ಆಗುತ್ತದೆ. ಸರ್ನೋಕ್ ಸಂಖ್ಯೆಯಲ್ಲಿ ಸ್ಟಾರ್ ಆಯ್ಕೆ ಮಾಡಿದ ನಂತರ ನಿಮಗೆ ಹಿಸ್ಸಾ ನಂಬರ್ ಗೊತ್ತಿದ್ದರೆ ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಬೇಕು. ನಿಮಗೆ ಹಿಸ್ಸಾ ನಿಂಬರ್ ಗೊತ್ತಿಲ್ಲದಿದ್ದರೆ ಅಲ್ಲಿ ಕಾಣುವ ಹಿಸ್ಸಾ ನಂಬರ್ ಗಳನ್ನು ಒಂದೊಂದಾಗಿ ಚೆಕ್ ಮಾಡಿಕೊಳ್ಳಬಹುದು. ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಿಕೊಂಡ ನಂತರ ಮಾಲಿಕರು ಮೇಲೆ ಒತ್ತಬೇಕು. ಆಗ ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಆ ಜಮೀನು ಎಷ್ಟು ಎಕರೆ ಹೊಂದಿಗೆ ಎಂಬುದು ಸಹ ಕಾಣುತ್ತದೆ.

Measure your land ಜಮೀನು ಅಳತೆ ಮಾಡುವುದು ಹೇಗೆ?

ರೈತರು ಜಮೀನು ಅಳತೆ ಮಾಡಲು ಅಲ್ಲಿ ಕಾಣುವ ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದಮೇಲೆ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತದೆ. ಅಲ್ಲೇ ಕಾಣುವ ಲೈನ್ ಸೆಲೆಕ್ಟ್ ಮಾಡಿಕೊಂಡನಂತರ ನೀವು ನಿಂತಿರುವ ಜಮೀನು ನಾಲ್ಕು ಭಾಗಗಳು ಕಾಣುತ್ತಿರುತ್ತವೆ.

ಅದರಲ್ಲಿ ಒಂದು ಮೂಲೆಯಲ್ಲಿ ಕ್ಲಿಕ್ ಮಾಡಬೇಕು. ಅದೇ ರೀತಿ ಇನ್ನೊಂದು ಮೂಲೆ ಹೀಗೆ ನಾಲ್ಕು ಮೂಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದೊಂದು ಮೂಲೆ ಆಯ್ಕೆ ಮಾಡಿಕೊಳ್ಳುವಾಗ ಉದ್ದವೆಷ್ಟಿದೆ ಎಂಬುದನ್ನು ಚೆಕ್ ಮಾಡಬಹುದು. ಮೀಟರ್, ಫೀಟರ್, ಕಿಲೋ ಮೀಟರ್ ಹೀಗೆ ಮೂರು ಆಯ್ಕೆಗಳಿರುತ್ತವೆ. ಇದರಲ್ಲಿ ನೀವು ಯಾವುದಾರೊಂದನ್ನು ಆಯ್ಕೆ ಮಾಡಿಕೊಂಡು ಜಮೀನಿನ ಅಳತೆ ಮಾಡಬಹುದು.

Post a Comment

Previous Post Next Post
CLOSE ADS
CLOSE ADS
×