ಸರ್ಕಾರದಿಂದಲೇ PU ಕಾಲೇಜುಗಳಲ್ಲಿ CET & NEET ಉಚಿತ ಕೋಚಿಂಗ್

ಸರ್ಕಾರದಿಂದಲೇ PU ಕಾಲೇಜುಗಳಲ್ಲಿ CET & NEET ಉಚಿತ ಕೋಚಿಂಗ್

ಪಿಯುಸಿ ಪೂರ್ಣಗೊಳ್ಳುತ್ತಿದ್ದಂತೆ ಉನ್ನತ ವ್ಯಾಸಂಗಕ್ಕಾಗಿ CET ಮತ್ತು NEET ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ತರಬೇತಿ ಪಡೆಯುತ್ತಾರೆ. ಇನ್ನು ಮುಂದೆ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಕೋಚಿಂಗ್ ಪಡೆಯುವ ಅಗತ್ಯತೆ ತಪ್ಪಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.



ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಹಾಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ವಿದ್ಯಾರ್ಥಿಗಳಿಗೆ ಪರಿಚಯಿಸಲು ನಿರ್ಧರಿಸಿದೆ.

ಈ ಕುರಿತು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಜ್ಞಾನ ವಿಭಾಗದ ಸುಮಾರು 25,000 ವಿದ್ಯಾರ್ಥಿಗಳಿಗೆ ಕೋಚಿಂಗ್ ಕಾರ್ಯಕ್ರಮದಿಂದ ಪ್ರಯೋಜನ ಪಡೆಯಲಿದ್ದಾರೆ.

ಯೋಜನೆ ಜಾರಿಯ ವೆಚ್ಚದ ಮಾಹಿತಿ

ರಾಜ್ಯಾದ್ಯಂತ ಸುಮಾರು 80,000 ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಎರಡು ವರ್ಷಗಳ ಪಿಯು ವಿಜ್ಞಾನ ವ್ಯಾಸಂಗ ಮಾಡುತ್ತಿದ್ದಾರೆ. ಉಚಿತ ಕೋಚಿಂಗ್‌ಗಾಗಿ ಶಿಕ್ಷಣ ಇಲಾಖೆಯು ಬರೋಬ್ಬರಿ 12.5 ಕೋಟಿ ವೆಚ್ಚ ಮಾಡಲಿದೆ ಎಂದು ಅವರು ತಿಳಿಸಿದರು.

ಸರ್ಕಾರದ ಈ ಮಹತ್ವದ ಉಚಿತ ಕೋಚಿಂಗ್ ಯೋಜನೆಯನ್ನು ಕಾರ್ಯಗತ ಮಾಡಲು ಹಾಗೂ ಕೋಚಿಂಗ್ ಸಂಸ್ಥೆಯ ಆಯ್ಕೆಗಾಗಿ ಆಯ್ಕೆ ಮಾಡಲು ಶೀಘ್ರವೇ ಟೆಂಡರ್ ಕರೆಯಲಿದೆ. ಇನ್ನೂ ಕೋಚಿಂಗ್ ಪಡೆಯುವ ಅರ್ಹ ವಿದ್ಯರ್ಥಿಗಳನ್ನು ಆಯ್ಕೆ ಮಾಡಲು ಸಂಸ್ಥೆಯು ಪರೀಕ್ಷೆ ನಡೆಸುತ್ತದೆ. ಪಿಯುಸಿ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಸೂಕ್ತ ತರಬೇತಿ ಪಡೆದು ಹೊರ ಹೊಮ್ಮಲಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳು ಕೋಚಿಂಗ್ ಪಡೆಯಲು ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಹೆಚ್ಚು ಸಮಯ ನೀಡಬೇಕಾಗುತ್ತದೆ ಎಂಬ ಟೀಕೆಯ ನಡುವೆ ಸರ್ಕಾರ, ಈ ಕಾರ್ಯಕ್ರಮ ಜಾರಿಗೆ ತರಲು ನಿರ್ಧರಿಸಿದೆ. ಕೋಚಿಂಗ್ ಶುರುವಾಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳ ಹೊರೆ ಆಗದಂತೆ ನೋಡಿಕೊಳ್ಳಲಾಗುವುದು.

ಎಲ್ಲ ವಿಷಯಗಳಿಗೆ ಒಂದೇ ನೋಟ್‌ಬುಕ್ ಅಥವಾ ನೋಟ್‌ಶೀಟ್‌ಗಳನ್ನು ಪರಿಚಯಿಸುವ ಉದ್ದೇಶ ರಾಜ್ಯ ಸರ್ಕಾರ ಹೊಂದಿದೆ ಎಂದು ಸಚಿವರು ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆಗಳು

ಇನ್ನೂ ಯೋಜನೆಯ ಮೊದಲ ಹಂತದಲ್ಲಿ ಶಿಕ್ಷಣ ಇಲಾಖೆಗೆ ಶಾಲಾ ಪಠ್ಯಪುಸ್ತಕಗಳನ್ನು ಎರಡು ಭಾಗಗಳಾಗಿ ಮುದ್ರಿಸಲಿದೆ. ಪೂರ್ವ ಮತ್ತು ಮಧ್ಯಂತರ ರಜೆ. ಪ್ರತಿ ಮೂರನೇ ಶನಿವಾರ 'ನೋ ಬ್ಯಾಗ್ ಡೇ' ಆಚರಿಸುವಂತೆ ಎಲ್ಲ ಶಾಲೆಗಳಿಗೆ ಸೂಚನೆ ನೀಡಿದೆ. ವಿದ್ಯಾರ್ಥಿಗಳ ಹಾಜರಾತಿ ಮೇಲ್ವಿಚಾರಣೆಗಾಗಿ ಇಲಾಖೆಯು ವಿದ್ಯಾರ್ಥಿಗಳ ಫೇಸ್‌ ರಿಕಗ್ಗನೈಸ್ ವ್ಯವಸ್ಥೆ ಪರಿಚಯಿಸಲು ಯೋಚಿಸಿದೆ.

ಈ ಹಾಜರಾತಿ ಮೇಲ್ವಿಚಾರಣೆ ವ್ಯವಸ್ಥೆಯನ್ನು ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ಸಿಸ್ಟಮ್ (SATS) ಗೆ ಲಿಂಕ್ ಮಾಡಲಾಗುತ್ತದೆ. ಶೈಕ್ಷಣಿಕ ಬೆಳವಣಿಗೆ ಮೇಲೆ ನಿಗಾ ಇಡಲು ಸಾಧ್ಯವಾಗುವ ಜೊತೆಗೆ ಶಾಲೆಗಳಲ್ಲಿನ ಹಾಜರಾತಿ ಸಮಸ್ಯೆ ನಿವಾರಣೆಯಾಗಲಿದೆ. ಇದನ್ನು ಪ್ರಾಯೋಗಿಕವಾಗಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.


Post a Comment

Previous Post Next Post
CLOSE ADS
CLOSE ADS
×