ಕಡಿಮೆ ಬೆಲೆ, ಆಕರ್ಷಕ ಫೀಚರ್ಸ್‌, 5,000mAh ಬ್ಯಾಟರಿ: ಮಾರುಕಟ್ಟೆಗೆ ಬರಲಿದೆ Realme C63

ಕಡಿಮೆ ಬೆಲೆ, ಆಕರ್ಷಕ ಫೀಚರ್ಸ್‌, 5,000mAh ಬ್ಯಾಟರಿ: ಮಾರುಕಟ್ಟೆಗೆ ಬರಲಿದೆ Realme C63

ಬಜೆಟ್‌ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ಅದೆಷ್ಟೋ ಕಂಪನಿಯ ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಧೂಳೆಬಿಸ್ಸಿವೆ. ಈ ಮೊಬೈಲ್‌ಗಳಿಗೆ ಭರ್ಜರಿ ಪೈಪೋಟಿ ನೀಡಲು ರಿಯಲ್‌ಮಿ ಕಂಪನಿ ಹೊಸ ಫೋನ್‌ ಬುಧವಾರ ಲಾಂಚ್‌ ಆಗಲಿದೆ. ಭರ್ಜರಿ ಫೀಚರ್ಸ್‌ ಹೊಂದಿರುವ ಈ ಮೊಬೈಲ್‌ ಕೊಂಡು ಕೊಳ್ಳಲು ಗ್ರಾಹಕ ಲೈನ್‌ನಲ್ಲಿ ನಿಲ್ಲುವುದು ಫಿಕ್ಸ್..



ಈಗಾಗಲೇ 10000 ಸಾವಿರ ರೂ ಒಳಗಡೆ ಹಲವು ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಈ ಫೋನ್‌ಗಳ ನಿದ್ದೆಗೆಡಿಸಲು Realme C63 ರೆಡಿ ಆಗಿದೆ. ಆಕರ್ಷಕ ಡಿಸೈನ್‌ ಹಾಗೂ ಸ್ಟೈಲಿಷ್‌ ಲುಕ್‌ ಈ ಫೋನ್‌ ಕೊಳ್ಳುವಂತೆ ಮಾಡುತ್ತದೆ. ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಫೀಚರ್ಸ್‌ ನೀಡಲಿದೆ. ಈ ಮೊಬೈಲ್‌ ಅಗ್ಗದ ದರದಲ್ಲಿ 5000 ಎಂಎಎಚ್‌ ಬ್ಯಾಟರಿಯೊಂದಿಗೆ ಬರಲಿದೆ.

ಈ ಮೊಬೈಲ್‌ ಒಂದೇ ಒಂದು ರ್ಯಾಮ್‌ ಸ್ಟೋರೇಜ್‌ ಹೊಂದಿರಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಕಂಪನಿಯ ಫೋನ್‌ ಭಾರತದಲ್ಲಿ ಲಾಂಚ್ ಆಗಲು ಸಿದ್ಧವಾಗಿದೆ. ರಿಯಲ್‌ಮಿ ಈ ಮೊಬೈಲ್‌ ಜುಲೈ 3ರ ರಂದು ಮಾರುಕಟ್ಟೆಗೆ ಲಾಂಚ್‌ ಆಗಲಿದೆ. ಈ ಮೊಬೈಲ್‌ ರಿಯಲ್‌ಮಿ ಆಫಿಸಿಯಲ್‌ ವೆಬ್‌ ಸೈಟ್‌ ಹಾಗೂ ಫ್ಲಿಪ್‌ ಕಾರ್ಟ್‌ಗಳಲ್ಲಿ ಲಭ್ಯ.

ಎಷ್ಟು ಬಣ್ಣಗಳಲ್ಲಿ ಲಭ್ಯ?

Realme C63 ಮೊಬೈಲ್‌ ಫೋನ್‌ ಎರಡು ಹೊಸ ಸ್ಟೈಲಿಷ್‌ ಲುಕ್‌ನಿಂದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರಲ್ಲಿ ಹಸಿರು ಹಾಗೂ ಲೆಥರ್‌ ಬ್ಲ್ಯೂ ಬಣ್ಣಗಳಲ್ಲಿ ಗ್ರಾಹರಕ ಕೈ ಸೇರಲಿದೆ. ಈ ಎರಡೂ ಮೊಬೈಲ್‌ಗಳಲ್ಲಿ ವೆಗನ್‌ ಲೆಥರ್‌ ಫಿನಿಶ್‌ ಕಾಣಬಹುದಾಗಿದೆ.

ಈ ಮೊಬೈಲ್‌ನಲ್ಲಿ ಸುಧಾರಿತ ಎಐ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ಫೋನ್‌ ಸ್ಕ್ರಿನ್‌ ಮುಟ್ಟದೇಯೆ ಸ್ಕ್ರಿನ್‌ ಆಪರೇಟ್‌ ಸಹ ಮಾಡಬಹುದು. ನೋಟಿಫಿಕೇಷನ್‌ ಹಾಗೂ ಅಲರ್ಟ್‌ಗಳನ್ನು ತೋರಿಸಲು ಕಂಪನಿ ಈ ಬಾರಿ ಬೇರೆ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದೆ. ಈ ಫೋನ್‌ನಲ್ಲಿ ಶಕ್ತಿಯುತ ಬ್ಯಾಟರಿ ನೀಡಲಾಗುತ್ತಿದೆ. ಈ ಮೊಬೈಲ್‌ 5,000mAh ಬ್ಯಾಟರಿ ಹೊಂದಿದ್ದು, 45 ವ್ಯಾಟ್‌ ಚಾರ್ಜಿಂಗ್‌ ಸೌಲಭ್ಯ ಹೊಂದಿರಲಿದೆ.

Realme C63 ಡಿಸ್‌ಪ್ಲೇ ಹೇಗಿದೆ?

ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿಶೇಷವಾಗಿದೆ. ಈ ಪೋನ್‌ 6.74 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೇಶ್‌ ದರವನ್ನು ಹೊಂದಿದೆ. ಈ ಮೊಬೈಲ್‌ ಹಿಂಭಾಗದಲ್ಲಿ 50 ಮೆಗಾ ಪಿಕ್ಸಲ್‌ ಕ್ಯಾಮೆರಾ ಹಾಗೂ ಮುಂಭಾಗದಲ್ಲಿ ವಿಡಿಯೋ ಹಾಗೂ ಕರೆಗಳಿಗಾಗಿ 8 ಮೆಗಾ ಪಿಕ್ಸಲ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ರಿಯಲ್‌ಮಿ C63 Unisoc T612 ಪ್ರೊಸೆಸರ್‌ ಹೊಂದಿದೆ. ಈ ಫೋನ್‌ 4 ಜಿಬಿ ರ್ಯಾಮ್‌ ಹಾಗೂ 128 ಜಿಬಿ ಇಟರ್ನಲ್‌ ಸ್ಟೋರೇಜ್‌ ನೊಂದಿಗೆ ಗ್ರಾಹರಕ ಕೈ ಸೇರಲಿದೆ. ಅಲ್ಲದೆ ಈ ಫೋನ್‌ನಲ್ಲಿ ಸುಧಾರಿತ ಆಂಡ್ರಾಯ್ಡ್‌ 14 ನೀಡಲಾಗುತ್ತಿದೆ. ಭಾರತದಲ್ಲಿ ಬಿಡುಗಡೆ ಆಗಲಿರುವ ಫೋನ್‌ ಧೂಳು ಹಾಗೂ ನೀರಿನ ರಕ್ಷಣೆಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಈ ಮೊಬೈಲ್‌ ಬೆಲೆ 8,999 ಎಂದು ಅಂದಾಜಿಸಲಾಗಿದೆ.

Post a Comment

Previous Post Next Post
CLOSE ADS
CLOSE ADS
×