SSC ಇಂದ ಮತ್ತೊಂದು ಬಿಗ್‌ ಜಾಬ್ ನೋಟಿಫಿಕೇಶನ್ ಪ್ರಕಟ: 8326 ಹುದ್ದೆಗೆ ಅರ್ಜಿ ಆಹ್ವಾನ

SSC ಇಂದ ಮತ್ತೊಂದು ಬಿಗ್‌ ಜಾಬ್ ನೋಟಿಫಿಕೇಶನ್ ಪ್ರಕಟ: 8326 ಹುದ್ದೆಗೆ ಅರ್ಜಿ ಆಹ್ವಾನ

SSC MTS, Havaldar Job Vacancy, Qualification Details : ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ಇದೀಗ 4887 ಮಲ್ಟಿ ಟಾಸ್ಕಿಂಗ್ ಸ್ಟಾಫ್‌ ಹಾಗೂ 3439 ಹವಾಲ್ದಾರ್ ಹುದ್ದೆಗಳ ಭರ್ತಿಗೆ ಪರೀಕ್ಷಾ ಅಧಿಸೂಚನೆ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಜಸ್ಟ್‌ ಎಸ್‌ಎಸ್‌ಎಲ್‌ಸಿ ಪಾಸಾಗಿದ್ರು ಅರ್ಜಿ ಹಾಕಿರಿ.



ಕೇಂದ್ರ ಸರ್ಕಾರದ ಇಲಾಖೆಗಳು, ಸಚಿವಾಲಯಗಳಿಗೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ ಇತ್ತೀಚೆಗೆ 17ಕ್ಕೂ ಸಾವಿರಕ್ಕೂ ಹೆಚ್ಚು ಹುದ್ದೆ ಭರ್ತಿಗೆ ಸಿಜಿಎಲ್ ಪರೀಕ್ಷೆ ನೋಟಿಫಿಕೇಶನ್‌ ಬಿಡುಗಡೆ ಮಾಡಿತ್ತು. ಈಗ ಮತ್ತೊಂದು ಬಿಗ್‌ ನೋಟಿಫಿಕೇಶನ್‌ ಅನ್ನು ಪ್ರಕಟಿಸಿದೆ. 8326 ಮಲ್ಟಿ ಟಾಸ್ಕಿಂಗ್ ಸ್ಟಾಫ್‌ ಹಾಗೂ ಹವಾಲ್ದಾರ್‌ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಿ, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಜುಲೈ 31 ರವರೆಗೆ ಆನ್‌ಲೈನ್‌ ಅರ್ಜಿಗೆ ಅವಕಾಶ ನೀಡಿದೆ. ಅರ್ಜಿ ಸಲ್ಲಿಸಿದವರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಮುಂದಿನ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ. ಜಸ್ಟ್‌ ಎಸ್‌ಎಸ್‌ಎಲ್‌ಸಿ ಅಥವಾ ಹತ್ತನೇ ತರಗತಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಇದರ ಕುರಿತ ಇನ್ನಷ್ಟು ಹೆಚ್ಚಿನ ಡೀಟೇಲ್ಸ್‌ ಅನ್ನು ಕೆಳಗಿನಂತೆ ಓದಿಕೊಳ್ಳಿ.

ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ಸಂಭಾವ್ಯ ಹುದ್ದೆಗಳ ಸಂಖ್ಯೆ.

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ಮಲ್ಟಿ ಟಾಸ್ಕಿಂಗ್ (ನಾನ್‌ ಟೆಕ್ನಿಕಲ್ ) ಸ್ಟಾಫ್‌4887
ಹವಾಲ್ದಾರ್ ಇನ್ ಸಿಬಿಐಸಿ, ಸಿಬಿಎನ್3439


ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ಹುದ್ದೆಗೆ ವಿದ್ಯಾರ್ಹತೆ
ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು.

ವಯಸ್ಸಿನ ಅರ್ಹತೆಗಳು

  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು.
  • ಮಲ್ಟಿ ಟಾಸ್ಕಿಂಗ್ ಸ್ಟಾಫ್‌ ಮತ್ತು ಹವಾಲ್ದಾರ್ ಇನ್‌ ಸಿಬಿಎನ್ (ಕಂದಾಯ ಇಲಾಖೆ) ಹುದ್ದೆಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು.
  • ಹವಾಲ್ದಾರ್ ಇನ್ ಸಿಬಿಐಸಿ (ಕಂದಾಯ ಇಲಾಖೆ) ಮತ್ತು ಕೆಲವು ಎಂಟಿಎಸ್ ಹುದ್ದೆಗಳಿಗೆ ಗರಿಷ್ಠ 27 ವರ್ಷ ಮೀರಿರಬಾರದು.

ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ವಯೋಮಿತಿ ಸಡಿಲಿಕೆ ನಿಯಮಗಳು ಯಾವ ಕೆಟಗರಿಗೆ ಎಷ್ಟು ವರ್ಷ ಎಂಬುದರ ಡೀಟೇಲ್ಸ್‌ ಕೆಳಗಿನಂತಿದೆ.

  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ : 5 ವರ್ಷ
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ : 3 ವರ್ಷ
  • ಪಿಡಬ್ಲ್ಯೂಡಿ ಅಭ್ಯರ್ಥಿ (Unreserved) : 10 ವರ್ಷ
  • ಪಿಡಬ್ಲ್ಯೂಡಿ (OBC) : 13 ವರ್ಷ
  • ಪಿಡಬ್ಲ್ಯೂಡಿ (SC/ST) : 15 ವರ್ಷ
  • ಮಾಜಿ ಸೈನಿಕ : 3 ವರ್ಷ

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ27-06-2024
ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ31-07-2024 ರಾತ್ರಿ 11 ಗಂಟೆವರೆಗೆ.
ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ01-08-2024 ರಾತ್ರಿ 11 ಗಂಟೆವರೆಗೆ.
ಅಪ್ಲಿಕೇಶನ್‌ ತಿದ್ದುಪಡಿಗೆ ಅವಕಾಶ ನೀಡುವ ದಿನಾಂಕ2024 ರ ಆಗಸ್ಟ್‌ 16 ರಿಂದ 17 ರ ರಾತ್ರಿ 11 ಗಂಟೆವರೆಗೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕಅಕ್ಟೋಬರ್ / ನವೆಂಬರ್ 2024

ಎಸ್‌ಎಸ್‌ಸಿ ಎಂಟಿಎಸ್‌, ಹವಾಲ್ದಾರ್ ವೇತನ ಶ್ರೇಣಿ : Rs.5200-20200.

ಅರ್ಜಿ ಸಲ್ಲಿಸುವುದು ಹೇಗೆ?
  • ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್‌ https://ssc.gov.in ಗೆ ಭೇಟಿ ನೀಡಿ.
  • ತೆರೆದ ವೆಬ್‌ ಮುಖಪುಟದಲ್ಲಿ 'Quick Links >> Apply' ಆಯ್ಕೆ ಮಾಡಿ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. Multi Tasking (Non-Technical) Staff Examination,2024 >> Apply ಆಯ್ಕೆ ಮಾಡಿ ಕ್ಲಿಕ್ ಮಾಡಿ.
  • ಈ ಹಂತದಲ್ಲಿ 'New User ? Register Now' ಎಂದಿರುವಲ್ಲಿ ಕ್ಲಿಕ್ ಮಾಡಿ ಮೊದಲು ರಿಜಿಸ್ಟ್ರೇಷನ್‌ ಪಡೆಯಬೇಕು.
  • ನಂತರ ಆನ್‌ಲೈನ್‌ ಅರ್ಜಿ ನಮೂನೆಯಲ್ಲಿ ಕೇಳಲಾದ ಸವಿವರ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕ 

ರೂ.100.

ಉದ್ಯೋಗ ವಿವರ

ಹುದ್ದೆಯ ಹೆಸರುಎಂಟಿಎಸ್, ಹವಾಲ್ದಾರ್ ನೇಮಕಾತಿ ಪರೀಕ್ಷೆ 2024
ವಿವರಸಿಬ್ಬಂದಿ ನೇಮಕಾತಿ ಆಯೋಗ ಅಧಿಸೂಚನೆ
ಪ್ರಕಟಣೆ ದಿನಾಂಕ2024-06-27
ಕೊನೆ ದಿನಾಂಕ2024-07-31
ಉದ್ಯೋಗ ವಿಧಪೂರ್ಣಾವಧಿ
ಉದ್ಯೋಗ ಕ್ಷೇತ್ರಕೇಂದ್ರ ಸರ್ಕಾರಿ ಹುದ್ದೆಗಳು
ವೇತನ ವಿವರINR 5200 to 20200 /Month

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ--
ವಿದ್ಯಾರ್ಹತೆಎಸ್‌ಎಸ್‌ಎಲ್‌ಸಿ / 10ನೇ ತರಗತಿ / ತತ್ಸಮಾನ ಪರೀಕ್ಷೆ ಪಾಸ್.
ಕಾರ್ಯಾನುಭವ0 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರುಸಿಬ್ಬಂದಿ ನೇಮಕಾತಿ ಆಯೋಗ
ವೆಬ್‌ಸೈಟ್‌ ವಿಳಾಸhttps://ssc.gov.in/
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸಕೇಂದ್ರ ಸರ್ಕಾರಿ ಸಚಿವಾಲಯ, ಸಂಸ್ಥೆ ಇಲಾಖೆಗಳು
ಸ್ಥಳಕೇಂದ್ರ ಸರ್ಕಾರಿ ಸಚಿವಾಲಯ, ಸಂಸ್ಥೆ ಇಲಾಖೆಗಳು
ಪ್ರದೇಶನವದೆಹಲಿ
ಅಂಚೆ ಸಂಖ್ಯೆ110001
ದೇಶIND

Post a Comment

Previous Post Next Post
CLOSE ADS
CLOSE ADS
×