Anganwadi Recruitment: ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ, ಅರ್ಹರು 13,593 ಹುದ್ದೆಗಳಿಗೆ ಅರ್ಜಿ ಹಾಕಿ

Anganwadi Recruitment: ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ, ಅರ್ಹರು 13,593 ಹುದ್ದೆಗಳಿಗೆ ಅರ್ಜಿ ಹಾಕಿ

ಕರ್ನಾಟಕ ರಾಜ್ಯ ಸರ್ಕಾರ ಅಂಗನವಾಡಿಯಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈವರೆಗೆ ಹುದ್ದೆಗಳಿಗೆ ಆಫ್‌ಲೈನ್ ಮೂಲಕ ಅರ್ಜಿ ಕರೆಯುತ್ತಿದ್ದ ಸರ್ಕಾರ, ಇದೇ ಮೊದಲ ಭಾರಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.



ರಾಜ್ಯದ ಅಂಗನವಾಡಿಗಳಲ್ಲಿ 13593 ಅಂಗನವಾಡಿ ಶಿಕ್ಷಕರಿಯರು, ಸಹಾಯಕಿಯರ ನೇಮಕಾತಿಗಾಗಿ ಅರ್ಹರು ಸೂಕ್ತ ದಾಖಲಾತಿಗಳ ಜೊತೆಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಬಗ್ಗೆರ ರಾಜ್ಯ ಸರ್ಕಾರ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದು, ಬಳಿಕವೇ ಅರ್ಜಿ ಆಹ್ವಾನಿಸಿದೆ.

ಈ ಮೊದಲು ಆಪ್‌ಲೈನ್ ಮೂಲಕ ಅರ್ಜಿ ಪ್ರಕ್ರಿಯೆ ಇತ್ತು. ಅದನ್ನು ಪ್ರಾಯೋಗಿಕವಾಗಿ ಕೆಲವು ಜಿಲ್ಲೆಗಳಲ್ಲಿ ಆನ್‌ಲೈನ್ ಸಲ್ಲಿಕೆ ಪ್ರಕ್ರಿಯೆ ನಡೆಸಿದ್ದ ಸರ್ಕಾರ ಯಶಸ್ವಿಯಾಯಿತು. ಹೀಗಾಗಿ ಇದೀಗ ಈ ಆನ್‌ಲೈನ್ ಪ್ರಕ್ರಿಯೆಯನ್ನೇ ರಾಜ್ಯಾದ್ಯಂತೆ ವಿಸ್ತರಣೆ ಮಾಡಿದೆ.

ಷರತ್ತು ಏನಿದೆ? ಯಾರಿಗೆಲ್ಲ ಅವಕಾಶ

ಈ ಅಂನವಾಡಿ ಹುದ್ದೆಗಳಿಗೆ ಆಯಾ ಜಿಲ್ಲೆಯವರು, ತಾಲೂಕಿನವರು ಅಂದರೆ ಸ್ಥಳೀಯರು ಆನ್‌ಲೈನ್ ಸೇವಾ ಕೇಂದ್ರದಲ್ಲಿ ಅರ್ಜಿಸಲ್ಲಿಸಬೇಕು. ಬೇರೆ ಬೇರೆ ಜಿಲ್ಲೆ, ತಾಲೂಕಿನವರ ಅರ್ಜಿ ಪರಿಗಣಿಸುವುದಿಲ್ಲ. ನಿಮ್ಮ ವಾಸದ ದೃಢೀಕರಣ, ಡಿಎಆರ್ ನಂಬರ್, ಆಧಾರ್ ಸಹಿತ ಆಯಾ ಗ್ರಾಮದವರು ಕೇಂದ್ರದ ಮೂರು ಕಿಲೋ ಮೀಟರ್ ವ್ಯಾಪ್ತಿಯವರು ಅರ್ಜಿ ಸಲ್ಲಿಸಿದರೆ ಪರಿಗಣಿಸಲಾಗುವುದು ಎಂದು ಸೂಚನೆ ನೀಡಲಾಗಿದೆ.

ಶೈಕ್ಷಣಿಕ ಅರ್ಹತೆ

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 12 ನೇ ತರಗತಿ, ಡಿಪ್ಲೋಮಾ ಇಸಿಸಿಐ, ತತ್ಸಮಾನ ಶಿಕ್ಷಣದಲ್ಲಿ ತೇರ್ಗಡೆ ಹೊಂದಿರಬೇಕು. ಸಹಾಯಕಿ ಹುದ್ದೆಗೆ 10ನೇ ತರಗತಿ ಪಾಸಾಗಿರಬೇಕು ಎಂದು ತಿಳಿಸಲಾಗಿದೆ.

ವಯೋಮಿತಿ ಎಷ್ಟಿರಬೇಕು?

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18ರಿಂದ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಈ ಪೈಕಿ ವಿಶೇಷ ಚೇತನ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಹತ್ತು ವರ್ಷ ಸಡಿಲಿಕೆ ಇರಲಿದೆ.

ಅಗತ್ಯ ದಾಖಲೆಗಳೇನು?

* ವಿದ್ಯಾರ್ಹತೆ ಪ್ರಮಾಣ ಪತ್ರ

* ವಾಸಸ್ಥಳದ ದೃಢೀಕರಣ ಪತ್ರ

* ಜನನ ಪ್ರಮಾಣ ಮತ್ತು ವಯಸ್ಸಿನ ದೃಢೀಕರಣ

* ಶೈಕ್ಷಣಿಕ ಉತ್ತೀರ್ಣತೆ/ SSLC ಇಲ್ಲ PUC ಅಂಕಪಟ್ಟಿ

* ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಯ ಪ್ರಮಾಣ ಪತ್ರ

* ವಿಚ್ಚೇದಿತರಾಗಿದ್ದಲ್ಲಿ ಪ್ರಮಾಣ ಪತ್ರ

* ಯೋಜನಾ ನಿರಾಶ್ರಿತರಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಪತ್ರ

8888

ಅರ್ಜಿ ಸಲ್ಲಿಕೆ ವಿಳಾಸ

ಅರ್ಜಿ ಸಲ್ಲಿಕೆ ವಿಳಾಸ ನೋಡುವುದಾದರೆ, ಅರ್ಹ ಅಭ್ಯರ್ಥಿಗಳನ್ನು ಅರ್ಜಿಗಳನ್ನು www.karnemakaone.kar.nic.in/abcd/ ಗೆ ಭೇಟಿ ನೀಡಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುತ್ತದೆ.


Post a Comment

Previous Post Next Post
CLOSE ADS
CLOSE ADS
×