ಜೂನ್‌ 24ಕ್ಕೆ ಲಾಂಚ್ ಆಗಲಿದೆ ಒನ್‌ಪ್ಲಸ್‌ ಅಗ್ಗದ 5ಜಿ ಮೊಬೈಲ್

ಜೂನ್‌ 24ಕ್ಕೆ ಲಾಂಚ್ ಆಗಲಿದೆ ಒನ್‌ಪ್ಲಸ್‌ ಅಗ್ಗದ 5ಜಿ ಮೊಬೈಲ್

ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಚೀನಿ ಕಂಪನಿಗಳು ದಿನಕ್ಕೊಂದು ಮೊಬೈಲ್‌ ಲಾಂಚ್‌ ಮಾಡುವ ಮೂಲಕ, ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಮುಂದಿನ ವಾರದಲ್ಲಿ ಚೀನಾ ಮೂಲದ ಒನ್‌ಪ್ಲಸ್‌ ತನ್ನ ಅಗ್ಗದ 5G ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಲು ಸಿದ್ಧವಾಗಿದೆ. ಈ ಬಗ್ಗೆ ಕಂಪನಿ ಸಾಮಾಜಿಕ ತಾಣದಲ್ಲಿ ಬಹಿರಂಗ ಪಡಿಸಿದೆ.



ಒನ್‌ಪ್ಲಸ್‌ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನ ಹಲವು ಮೊಬೈಲ್‌ಗಳನ್ನು ಹೊಂದಿದೆ. ಕಂಪನಿ ಕಳೆದ ತಿಂಗಳು OnePlus Nord CE 4 ಅನ್ನು ಮಿಡ್‌ ಬಜೆಟ್‌ ರೇಂಜ್‌ನಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್‌ 24,999 ರೂಗಳಿಗೆ ಗ್ರಾಹಕರ ಜೇಬು ಸೇರುತ್ತಿತ್ತು. ಈಗ ಕಂಪನಿ ಇದಕ್ಕೂ ಅಗದ್ದ OnePlus Nord CE 4 Lite ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದೆ, ಈ ಮೊಬೈಲ್ ಕಳೆದ ತಿಂಗಳು ಲಾಂಚ್ ಆಗಿರುವ ಮೊಬೈಲ್‌ಗಿಂತ ಕಡಿಮೆ ಬೆಲೆಯದ್ದಾಗಿರಲಿದೆ.

ಬಿಡುಗಡೆ ಯಾವಾಗ?

OnePlus ಇಂಡಿಯಾ ತನ್ನ ಅಧಿಕೃತ X ಹ್ಯಾಂಡಲ್‌ನಿಂದ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಫೋನ್‌ನ ಬಿಡುಗಡೆ ದಿನಾಂಕವನ್ನು ದೃಢಪಡಿಸಿದೆ. OnePlus ನ ಈ ಫೋನ್ ಜೂನ್ 24 ರಂದು ಸಂಜೆ 7 ಗಂಟೆಗೆ ಬಿಡುಗಡೆ ಮಾಡಲಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಆಲ್-ಡೇ ಎಂಟರ್‌ಟೈನ್‌ಮೆಂಟ್ ಎಂಬ ಅಡಿಬರಹದೊಂದಿಗೆ ಪ್ರಚಾರ ಮಾಡಿದೆ, ಅಂದರೆ ಫೋನ್‌ನಲ್ಲಿ ದೊಡ್ಡ ಬ್ಯಾಟರಿಯನ್ನು ನೀಡುವ ಸಾಧ್ಯತೆ ದಟ್ಟವಾಗಿದೆ.

ಒನ್‌ಪ್ಲಸ್‌ ಕಂಪನಿ ಈ ಹೊಸ ಮೊಬೈಲ್‌ನ ಟೀಸರ್‌ ಹಂಚಿಕೊಂಡಿದೆ. ಇದು 15 ಸೆಕೆಂಡ್‌ಗಳ ವಿಡಿಯೋ ಆಗಿದೆ. ಎಂದಿನಂತೆ ಫೋನ್‌ ಹಿಂಭಾಗದಲ್ಲಿ ಡ್ಯೂಯಲ್‌ ಕ್ಯಾಮೆರಾ ಸೆಟಪ್‌ ಕಾಣಬಹುದು. ಅಲ್ಲದೆ ಡ್ಯುಯಲ್ ಎಲ್‌ಇಡಿ ಲೈಟ್‌ಗಳನ್ನು ಕಾಣಬಹುದು. ಕಳೆದ ವರ್ಷ ಬಿಡುಗಡೆಯಾದ OnePlus Nord CE 3 Lite ಗೆ ಹೋಲಿಸಿದರೆ ಫೋನ್‌ನ ವೈಶಿಷ್ಟ್ಯಗಳನ್ನು ಸಹ ನವೀಕರಿಸಲಾಗುತ್ತದೆ.

ಕ್ಯಾಮೆರಾ ಹೇಗಿರಬಹುದು?

OnePlus ನ ಈ ಫೋನ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೊಂದಿಗೆ ಮಾರುಕಟ್ಟೆ ಬರಲಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾಪಿಕ್ಸಲ್‌ ಇರುವ ಸಾಧ್ಯತೆ ಇದ್ದು, ಫ್ರಂಟ್‌ ಕ್ಯಾಮೆರಾ 16 ಮೆಗಾ ಪಿಕ್ಸಲ್‌ ಇರುವ ಸಂಭವ ಇದೆ. ಮುಂಭಾಗದ ಕ್ಯಾಮೆರಾ ಮೂಲಕ ವಿಡಿಯೋ ಕರೆಗಳು ಹಾಗೂ ಸೆಲ್ಫಿ ಫೋಟೋ ತೆಗೆದುಕೊಳ್ಳಬಹುದು. ಅಲ್ಲದೆ ಈ ಮೊಬೈಲ್‌ 5,110mAh ಬ್ಯಾಟರಿಯೊಂದಿಗೆ ಬರುವ ಸಾಧ್ಯತೆ ಇದೆ. ಅಲ್ಲದೆ 80 ವ್ಯಾಟ್‌ ಸೂಪರ್ ವೋಕ್‌ ಚಾರ್ಜಿಂಗ್ ಸೌಲಭ್ಯ ಹೊಂದಿರುವ ಸಾಧ್ಯತೆ ಇದೆ. ಇದು ಕಳೆದ ವರ್ಷ ಬಿಡುಗಡೆಯಾದ ನಾರ್ಡ್‌ ಸಿಇ 3 ಲೈಟ್‌ಗೆ ಹೋಲಿಸಿದರೆ ದೊಡ್ಡ ಗಾತ್ರದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರಲಿದೆ.

ಈ ಫೋನ್‌ 120Hz OLED ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದ್ದು, 2,100 ನೀಟ್ಸ್‌ ಬೆಳಕನ್ನು ನೀಡುತ್ತದೆ. ಇದರ ಕಾರ್ಯ ಕ್ಷಮತೆ ಇನ್‌ಡೋರ್ ಹಾಗೂ ಔಟ್ ಡೋರ್ ಉತ್ತಮವಾಗಿರುವ ಸಾಧ್ಯತೆ ಇದೆ. OnePlus Nord CE 4 Lite Android 14 ಆಧಾರಿತ Oxygen OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಚೀನಾದಲ್ಲಿ ಬಿಡುಗಡೆಯಾದ OnePlus Nord 3V ಯ ಮರುಬ್ರಾಂಡೆಡ್ ಆವೃತ್ತಿಯಾಗಿರಬಹುದು.

Post a Comment

Previous Post Next Post
CLOSE ADS
CLOSE ADS
×