ATM Cash Withdrawal Fee: ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ 21 ರೂ.ಗೆ ಏರಿಕೆ?

ATM Cash Withdrawal Fee: ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ 21 ರೂ.ಗೆ ಏರಿಕೆ?

ಎಟಿಎಂನಲ್ಲಿ (ATM) ಇನ್ನು ಮುಂದೆ ಹಣ ಪಡೆಯುವ (Cash Withdrawal) ಮುನ್ನ ಯೋಚಿಸಿ. ಯಾಕೆಂದರೆ ಈಗಾಗಲೇ ಬ್ಯಾಂಕ್‌ಗಳು ವಿಧಿಸುತ್ತಿರುವ ಎಟಿಎಂ ಸೇವಾ ಶುಲ್ಕ (ATM Cash Withdrawal Fee) ಇನ್ನೂ ಹೆಚ್ಚಾಗಬಹುದು. ಎಟಿಎಂ ಆಪರೇಟರ್‌ಗಳು ನಗದು ಹಿಂಪಡೆಯುವಿಕೆಯ ಮೇಲಿನ ಶುಲ್ಕವನ್ನು ಹೆಚ್ಚಿಸಲು ಒತ್ತಾಯಿಸುತ್ತಿದ್ದು, ಈಗಾಗಲೇ ಇವರು ತಮ್ಮ ಮನವಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಗೆ (NPCI) ಸಲ್ಲಿಸಿದ್ದಾರೆ.



ಎಟಿಎಂ ಉದ್ಯಮದ ಒಕ್ಕೂಟ (ಸಿಎಟಿಎಂಐ) ವ್ಯವಹಾರಕ್ಕೆ ಹೆಚ್ಚಿನ ನಿಧಿಯನ್ನು ಪಡೆಯಲು ಎಟಿಎಂ ಆಪರೇಟರ್‌ಗಳು ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಇಂಟರ್‌ಚೇಂಜ್ ಶುಲ್ಕವನ್ನು ಪ್ರತಿ ವಹಿವಾಟಿಗೆ ಗರಿಷ್ಠ 23 ರೂ. ಹೆಚ್ಚಿಸಲು ಒತ್ತಾಯಿಸಿದೆ. ಎರಡು ವರ್ಷಗಳ ಹಿಂದೆ ಈ ವಿನಿಮಯ ದರವನ್ನು ಕೊನೆಯದಾಗಿ ಹೆಚ್ಚಿಸಲಾಗಿತ್ತು ಎಂದು ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸ್ಟಾನ್ಲಿ ಜಾನ್ಸನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಈ ಕುರಿತು ಭಾರತೀಯ ರಿಸರ್ವ್ ಅನ್ನು ಸಂಪರ್ಕಿಸಲಾಗುತ್ತಿದೆ. ಅವರು ನಮ್ಮ ವಿನಂತಿಯನ್ನು ಬೆಂಬಲಿಸುವಂತೆ ತೋರುತ್ತಿದೆ. ಸಿಎಟಿಎಂಐ ಶುಲ್ಕವನ್ನು 21 ರೂ. ಗೆ ಏರಿಸಲು ಪ್ರಸ್ತಾಪಿಸಿದೆ. ಆದರೆ ಕೆಲವು ಎಟಿಎಂ ತಯಾರಕರು 23 ರೂ. ಗೆ ಹೆಚ್ಚಿಸುವಂತೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.

ಎಟಿಎಂ ವಹಿವಾಟಿನ ಇಂಟರ್ಚೇಂಜ್ ಶುಲ್ಕವನ್ನು ಕೊನೆಯದಾಗಿ 2021ರಲ್ಲಿ 15 ರಿಂದ 17ಕ್ಕೆ ಹೆಚ್ಚಿಸಲಾಗಿತ್ತು. ಹಿಂದಿನ ಬಾರಿ ಈ ಶುಲ್ಕ ಹೆಚ್ಚಳಕ್ಕೆ ಹಲವಾರು ವರ್ಷಗಳನ್ನು ತೆಗೆದುಕೊಂಡಿತು. ಆದರೆ ಈಗ ಎಲ್ಲರೂ ಇದಕ್ಕೆ ಹೊಂದಿಕೊಂಡಿದ್ದಾರೆ. ಶುಲ್ಕ ಹೆಚ್ಚಳಕ್ಕೆ ಇನ್ನು ಅನುಮೋದನೆ ಸಿಕ್ಕಿಲ್ಲ. ಶೀಘ್ರದಲ್ಲೇ ಸಿಗಬಹುದು ಎಂದು ಜಾನ್ಸನ್ ತಿಳಿಸಿದ್ದಾರೆ.

ಇಂಟರ್‌ಚೇಂಜ್ ಶುಲ್ಕ ಎಂದರೇನು?

ಎಟಿಎಂ ಇಂಟರ್ ಚೇಂಚ್ ಶುಲ್ಕವು ಎಟಿಎಂ ಕಾರ್ಡ್ ಅನ್ನು ವಿತರಿಸುವ ಬ್ಯಾಂಕ್ (ವಿತರಕರು) ಪಾವತಿಸುವ ಶುಲ್ಕವಾಗಿದೆ. ಎಟಿಎಂ ಕಾರ್ಡ್ ಅನ್ನು ನಗದು ಹಿಂಪಡೆಯಲು ಬಳಸಲಾಗುತ್ತದೆ. ಇದು ಹೆಚ್ಚುವರಿಯಾಗಿ ಗ್ರಾಹಕರಿಗೆ ವಿಧಿಸಬಹುದಾದ ಶುಲ್ಕವಾಗಿದೆ. ಪ್ರಸ್ತುತ ಆರು ಪ್ರಮುಖ ನಗರಗಳಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬಯಿ ಮತ್ತು ನವದೆಹಲಿ ಬ್ಯಾಂಕ್‌ಗಳು ತಮ್ಮ ಉಳಿತಾಯ ಖಾತೆದಾರರಿಗೆ ತಿಂಗಳಿಗೆ ಕನಿಷ್ಠ ಐದು ಉಚಿತ ವಹಿವಾಟುಗಳನ್ನು ಹಾಗೂ ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಉಚಿತ ವಹಿವಾಟು ಸೌಲಭ್ಯವನ್ನು ಒದಗಿಸುತ್ತದೆ. ಬಳಿಕ ನಡೆಯುವ ಪ್ರತಿ ವಹಿವಾಟಿಗೆ ಶುಲ್ಕ ವಿಧಿಸಲಾಗುತ್ತದೆ.

Post a Comment

Previous Post Next Post
CLOSE ADS
CLOSE ADS
×