ಹೆವಿ ವೆಹಿಕಲ್ ಫ್ಯಾಕ್ಟರಿಯಲ್ಲಿನ ವಿವಿಧ 271 ಹುದ್ದೆಗೆ ಅರ್ಜಿ ಆಹ್ವಾನ: ಬೇಸಿಕ್‌ ಪೇ ರೂ.30,000.

ಡಿಪ್ಲೊಮ, ಐಟಿಐ, ಕಾನೂನು ಪದವಿ ಮುಗಿಸಿ ಜಾಬ್‌ ಸರ್ಚ್‌ ಮಾಡುತ್ತಿರುವವರಿಗೆ ರಕ್ಷಣಾ ಸಚಿವಾಲಯ ಅಧೀನದ ಚೆನ್ನೈ ಅವಡಿ ಹೆವಿ ವೆಹಿಕಲ್ ಫ್ಯಾಕ್ಟರಿಯಲ್ಲಿವೆ ಹಲವು ಉದ್ಯೋಗಾವಕಾಶಗಳು. ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ.



ಕೇಂದ್ರ ರಕ್ಷಣಾ ಸಚಿವಾಲಯ ಅಧೀನದ ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕನ್‌ ಎಂಟರ್‌ಪ್ರೈಸ್ ಆಗಿರುವ ಅವಡಿ ಹೆವಿ ವೆಹಿಕಲ್ ಫ್ಯಾಕ್ಟರಿಯು ವಿವಿಧ ಹುದ್ದೆಗಳ ಭರ್ತಿಗಾಗಿ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಇಲ್ಲಿ ಅಗತ್ಯ ಇರುವ ಜೂನಿಯರ್ ಮ್ಯಾನೇಜರ್, ಡಿಪ್ಲೊಮ ಟೆಕ್ನೀಷಿಯನ್, ಜೂನಿಯರ್ ಟೆಕ್ನೀಷಿಯನ್, ಅಸಿಸ್ಟಂಟ್, ಇತರೆ ಹುದ್ದೆಗಳನ್ನು ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 271 ಹುದ್ದೆಗಳಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಇನ್ನಷ್ಟು ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

ಹೆವಿ ವೆಹಿಕಲ್ ಫ್ಯಾಕ್ಟರಿ

  • ನೇಮಕಾತಿ ಪ್ರಾಧಿಕಾರ:- ಹೆವಿ ವೆಹಿಕಲ್ ಫ್ಯಾಕ್ಟರಿ, ಅವಡಿ, ಚೆನ್ನೈ.
  • ಹುದ್ದೆಗಳ ಹೆಸರು:- ಜೂನಿಯರ್ ಮ್ಯಾನೇಜರ್, ಡಿಪ್ಲೊಮ ಟೆಕ್ನೀಷಿಯನ್, ಜೂನಿಯರ್ ಟೆಕ್ನೀಷಿಯನ್, ಅಸಿಸ್ಟಂಟ್.
  • ಒಟ್ಟು ಹುದ್ದೆಗಳ ಸಂಖ್ಯೆ:- 271
  • ಹುದ್ದೆಗಳ ನೇಮಕಾತಿ ವಿಧ:- ಗುತ್ತಿಗೆ ಆಧಾರಿತ ಹುದ್ದೆಗಳು.

ವಿದ್ಯಾರ್ಹತೆ ವಿವರಗಳು

  • ಜೂನಿಯರ್ ಮ್ಯಾನೇಜರ್:- ಇಂಜಿನಿಯರಿಂಗ್ ಪದವಿ / ಎಂ.ಟೆಕ್‌ ಪದವಿ.
  • ಡಿಪ್ಲೊಮ ಟೆಕ್ನೀಷಿಯನ್:- ಹುದ್ದೆಗೆ ಸಂಬಂಧಿತ ವಿಷಯ / ವಿಭಾಗದಲ್ಲಿ ಡಿಪ್ಲೊಮ ಇನ್ ಇಂಜಿನಿಯರಿಂಗ್ ಪಾಸ್.
  • ಜೂನಿಯರ್ ಟೆಕ್ನೀಷಿಯನ್:- ಹುದ್ದೆಗೆ ಸಂಬಂಧಿತ ವಿಷಯ / ವಿಭಾಗದಲ್ಲಿ ಐಟಿಐ ಪಾಸ್‌.
  • ಅಸಿಸ್ಟಂಟ್ ಹುದ್ದೆ:- 5 ವರ್ಷ ಎಲ್‌ಎಲ್‌ಬಿ ಪದವಿ ಅಥವಾ ಪದವಿಯೊಂದಿಗೆ 3 ವರ್ಷದ ಪದವಿ ಪಾಸ್.

ವಯಸ್ಸಿನ ಅರ್ಹತೆಗಳು

ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ 28 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಹುದ್ದೆವಾರು ಬೇಸಿಕ್ ಸ್ಯಾಲರಿ ವಿವರ ( Salary /Month)

  • ಜೂನಿಯರ್ ಮ್ಯಾನೇಜರ್:- Rs.30000.
  • ಡಿಪ್ಲೊಮ ಟೆಕ್ನೀಷಿಯನ್:- Rs.23000.
  • ಜೂನಿಯರ್ ಟೆಕ್ನೀಷಿಯನ್:- Rs.21000
  • ಅಸಿಸ್ಟಂಟ್:- Rs.23000
  • ಭತ್ಯೆ:- ಈ ಮೇಲಿನ ಭತ್ಯೆಗಳ ಜತೆಗೆ ಡಿಎ, ವಿಶೇಷ ಭತ್ಯೆ, ವಾರ್ಷಿಕ ವೇತನ ಹೆಚ್ಚಳ ಸೌಲಭ್ಯಗಳು ಇರಲಿವೆ.

ಆಯ್ಕೆ ವಿಧಾನ: 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆ ಶೇಕಡ.85 ಅಂಕಗಳನ್ನು ಹಾಗೂ 15 ಅಂಕಗಳಿಗೆ ನಡೆಸುವ ಸಂದರ್ಶನದ ಅಂಕಗಳನ್ನು ಪರಿಗಣಿಸಿ ಮೆರಿಟ್‌ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ಹುದ್ದೆಗೆ ನಿಯೋಜನೆ ಮಾಡಲಾಗುತ್ತದೆ.

ಹುದ್ದೆಯ ಅವಧಿ: 

ಪ್ರಾಥಮಿಕವಾಗಿ ಮೊದಲು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರದಲ್ಲಿ ಅಗತ್ಯತೆ ಹಾಗೂ ಕಾರ್ಯದಕ್ಷತೆ ಆಧಾರದಲ್ಲಿ ನಾಲ್ಕು ವರ್ಷಗಳ ವರೆಗೆ ಅರ್ಹರಿಗೆ ಹುದ್ದೆ ಅವಧಿ ವಿಸ್ತರಣೆ ಮಾಡುವ ಅವಕಾಶ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

  • ವೆಬ್‌ಸೈಟ್‌ www.avnl.co.in ಗೆ ಭೇಟಿ ನೀಡಿ, ಅರ್ಜಿ ನಮೂನೆ ಡೌನ್‌ಲೋಡ್‌ ಮಾಡಿಕೊಳ್ಳಬೇಕು.
  • ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ, ಶೈಕ್ಷಣಿಕ ದಾಖಲೆಗಳನ್ನು ಲಗತ್ತಿಸಿ, ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ - 

  • ದಿ ಚೀಫ್‌ ಜೆನೆರಲ್ ಮ್ಯಾನೇಜರ್, ಹೆವಿ ವೆಹಿಕಲ್ ಫ್ಯಾಕ್ಟರಿ, ಅವಡಿ, ಚೆನ್ನೈ- 600054.
  • ಅರ್ಜಿ ಶುಲ್ಕ : ರೂ.300.

ಕಾಲಾವಧಿ 

ಉದ್ಯೋಗ ಅಧಿಸೂಚನೆ ಪ್ರಕಟಿಸಿದ ದಿನದಿಂದ (ಜೂನ್ 20, 2024) 21 ದಿನಗಳವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ.


Previous Post Next Post