Provident Fund: PF ಖಾತೆ ಹೊಂದಿರುವ ಎಲ್ಲರಿಗೂ ಗುಡ್ ನ್ಯೂಸ್! ಈ ಚಿಕ್ಕ ಕೆಲಸ ಮಾಡಿ ಸಾಕು

Provident Fund: PF ಖಾತೆ ಹೊಂದಿರುವ ಎಲ್ಲರಿಗೂ ಗುಡ್ ನ್ಯೂಸ್! ಈ ಚಿಕ್ಕ ಕೆಲಸ ಮಾಡಿ ಸಾಕು

ಪಿಎಫ್ ಅಥವಾ ಈ ಪಿ ಎಫ್ (Provident Fund) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನೌಕರಿಯಲ್ಲಿ ಇರುವಂತಹ ಒಂದು ಹಣದ ವ್ಯವಸ್ಥೆಯಾಗಿದೆ. ಆದರೆ ಕೆಲವೊಮ್ಮೆ ಅವಧಿಗಿಂತಲೂ ಮುಂಚೆ ಆರ್ಥಿಕ ಅಗತ್ಯತೆ ಗಂಭೀರವಾಗಿದ್ರೆ ಆ ಸಂದರ್ಭದಲ್ಲಿ ಈ ಹಣವನ್ನು ಪಡೆದುಕೊಳ್ಳಬಹುದಾಗಿದೆ ಯಾಕೆಂದರೆ ಇದು ನೀವು ದುಡಿದಿರುವಂತಹ ಹಣ ಆಗಿರುತ್ತದೆ ಅನ್ನೋದನ್ನ ಪ್ರಮುಖವಾಗಿ ನೆನಪಿನಲ್ಲಿಟ್ಟುಕೊಳ್ಳಿ. ಹೀಗಾಗಿ ಪಿಎಫ್ ಹಣವನ್ನು (PF Money) ಡ್ರಾ ಮಾಡಿಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.



ಪಿಎಫ್ ಅಂದ್ರೆ ಏನು?

ಪಿಎಫ್ ಅಂದ್ರೆ ಪ್ರಾವಿಡೆಂಟ್ ಫಂಡ್ (Provident Fund) ಇದನ್ನು ಇಪಿಎಫ್ಓ (EPFO) ಮೂಲಕ ಜಮಾ ಮಾಡಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ನೌಕರಿಯಲ್ಲಿ ಇದ್ದರೆ ಈ ರೀತಿ ಹಣ ಜಮಾ ಆಗುತ್ತದೆ. ತಾವು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಇದ್ದ ಸಂದರ್ಭದಲ್ಲಿ ಇಂತಿಷ್ಟು ಹಣವನ್ನು ಪಿಎಫ್ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ ಹಾಗೂ ಇದನ್ನು ಸರ್ಕಾರಿ ನೌಕರರಿಗೆ ರಿಟೈರ್ಮೆಂಟ್ ಆದ ನಂತರ ಹಾಗೂ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ತಮ್ಮ ಕೆಲಸ ಬಿಟ್ಟ ನಂತರ ಸಿಗುತ್ತದೆ.

ಕೆಲವು ಸಂದರ್ಭದಲ್ಲಿ ನಿಮಗೆ ಅತ್ಯಂತ ಅಗತ್ಯ ಪರಿಸ್ಥಿತಿಗಳಲ್ಲಿ ಹಣದ ಅವಶ್ಯಕತೆ ಇದ್ದಾಗ ಇದರಿಂದ ಹಣವನ್ನು ನೀವು ಪಡೆದುಕೊಳ್ಳಬಹುದಾಗಿದೆ ಆ ಸಂದರ್ಭದಲ್ಲಿ ಟಿಡಿಎಸ್ ಶುಲ್ಕ ಕಡಿತಗೊಳ್ಳುತ್ತದೆ ಅನ್ನೋದನ್ನ ಕೂಡ ನೀವು ತಿಳಿದುಕೊಳ್ಳಬೇಕಾಗಿದೆ.

ಪಿಎಫ್ ಹಣವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳುವ ವಿಧಾನ:

  • ನೀವು ಇಪಿಎಫ್ಓ ನ ಅಧಿಕೃತ ವೆಬ್ಸೈಟ್ ಆಗಿರುವಂತಹ www.epfindia.gov.in ನಲ್ಲಿ ಲಾಗಿನ್ ಆಗಿ ನಿಮ್ಮ ಅಧಿಕೃತ UAN ನಂಬರ್ ಅನ್ನು ನಮೂದಿಸಬೇಕಾಗಿರುತ್ತದೆ.
  • ಇದಾದ ನಂತರ ಇಪಿಎಫ್ಓ (EPFO) ನಲ್ಲಿ ನೀವು ಆನ್ಲೈನ್ ಮೂಲಕ ಹಣವನ್ನು ಪಡೆದುಕೊಳ್ಳುವಂತಹ ಅವಕಾಶಕ್ಕಾಗಿ ಅಲ್ಲಿ ನೀಡಿರುವಂತಹ ಫಾರ್ಮ್ ಅನು ಭರ್ತಿ ಮಾಡಿ ಸಬ್ಮಿಟ್ ಮಾಡಬೇಕಾಗಿರುತ್ತದೆ.
  • ಇದಾದ ನಂತರ 20 ದಿನಗಳ ಒಳಗಾಗಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುವಂತಹ ಪ್ರಕ್ರಿಯೆ ನಡೆಯುತ್ತದೆ.
  • ಇಲ್ಲಿ ಕೂಡ ನೀವು ಎರಡು ವಿಧಾನಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಮೊದಲನೆಯದಾಗಿ ಫುಲ್ ಈ ಪಿ ಎಫ್ (Provident Fund) ಸೆಟಲ್ಮೆಂಟ್. ಇದನ್ನು ಪೂರ್ತಿ ಪ್ರಮಾಣದಲ್ಲಿ ಹಣವನ್ನು ಪಡೆದುಕೊಳ್ಳುವುದಕ್ಕಾಗಿ ಆಯ್ಕೆ ಮಾಡಬೇಕಾಗುತ್ತದೆ ಹಾಗೂ ಎರಡನೇದಾಗಿ ಇಪಿಎಫ್ ಪಾರ್ಟ್ ವಿಥ್ಡ್ರಾವಲ್. ಇದರ ಮೂಲಕ ನೀವು ಜಮಾ ಮಾಡಿರುವಂತಹ ಹಣದಲ್ಲಿ ಕೆಲವು ಭಾಗವನ್ನು ಮಾತ್ರ ಅಗತ್ಯ ಪರಿಸ್ಥಿತಿಗಳಲ್ಲಿ ಪಡೆದುಕೊಳ್ಳುವುದು.

ಪ್ರಮುಖ ಡಾಕ್ಯುಮೆಂಟ್ಸ್ ಗಳು:

  • UAN ಐಡಿ ನಂಬರ್ ಹಾಗೂ ಪಾಸ್ವರ್ಡ್
  • ಪ್ಯಾನ್ ಕಾರ್ಡ್
  • ಐಡೆಂಟಿಟಿ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಇಪಿಎಫ್ ಕ್ಲೈಮ್ ಮಾಡುವಂತಹ ಫಾರ್ಮ್.

ಮೊಬೈಲ್ ಮೂಲಕ ಪಿಎಫ್ ಹಣವನ್ನು ಪಡೆದುಕೊಳ್ಳುವುದು:

ಉಮಂಗ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಂತರ ನಿಮ್ಮ UAN ನಂಬರ್ ಹಾಗೂ ಪಾಸ್ವರ್ಡ್ ನಿಂದ ಲಾಗಿನ್ ಆಗಬಹುದಾಗಿದೆ. ಇಲ್ಲಿ ಲಾಗಿನ್ ಆದ ನಂತರ ನಿಮಗೆ ಪಿಎಫ್ ಹಣವನ್ನು ಕ್ಲೇಮ್ ಮಾಡುವಂತಹ ಆಪ್ಷನ್ ದೊರಕುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.

ಅಪ್ಲಿಕೇಶನ್ ಮೂಲಕ ನೀವು ಇಪಿಎಫ್ (EPF) ಕ್ಲೈಮ್ ಫಾರ್ಮ್ ಅನ್ನು ಕೂಡ ಪಡೆದುಕೊಂಡು ಸಬ್ಮಿಟ್ ಮಾಡಬಹುದಾಗಿದೆ. ಈ ಮೇಲೆ ಹೇಳಿರುವಂತಹ ಪ್ರತಿಯೊಂದು ವಿಧಾನಗಳ ಮೂಲಕ ಕೂಡ ನೀವು ನಿಮ್ಮ ಪಿಎಫ್ ಹಣವನ್ನು ಪಡೆದುಕೊಳ್ಳಬಹುದಾಗಿದೆ.

Post a Comment

Previous Post Next Post
CLOSE ADS
CLOSE ADS
×