Jio: ಗ್ರಾಹಕರನ್ನು ಸೆಳೆಯಲು ಜಿಯೋ ಐದು ಹೊಸ ರಿಚಾರ್ಜ್ ಪ್ಲ್ಯಾನ್‌

Jio: ಗ್ರಾಹಕರನ್ನು ಸೆಳೆಯಲು ಜಿಯೋ ಐದು ಹೊಸ ರಿಚಾರ್ಜ್ ಪ್ಲ್ಯಾನ್‌

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಹೊಂದಿರುವ ಜಿಯೋ ಈಗ ತನ್ನ ಗ್ರಾಹಕರನ್ನು ತನ್ನತ್ತ ಹಿಡಿದಿಟ್ಟುಕೊಳ್ಳಲು ಭರ್ಜರಿ ಪ್ಲ್ಯಾನ್ ಮಾಡಿದೆ. ಹಲವು ಸೇವೆಗಳನ್ನು ಒಳಗೊಂಡ ವಿಶಿಷ್ಠ ರಿಚಾರ್ಜ್‌ ಯೋಜನೆಯನ್ನು ನೀಡಲು ಜಿಯೋ ಮುಂದಾಗಿದೆ. ಈ ರಿಚಾರ್ಜ್‌ ಪ್ಲ್ಯಾನ್‌ಗಳ ವ್ಯಾಲಿಡಿಟಿ ಹೆಚ್ಚಿರುತ್ತದೆ. 84 ದಿನಗಳ ಮಾನ್ಯತೆಯೊಂದಿಗೆ ಬರುವ ಕಂಪನಿಯ 5 ರೀಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ. ಆ ಬಗ್ಗೆ ವರದಿ ಇಲ್ಲಿದೆ.



ಜಿಯೋ ಕಂಪನಿ ತನ್ನ ಗ್ರಾಹಕರನ್ನು ಖುಷಿ ಪಡಿಸುವ ದೃಷ್ಟಿಯಿಂದ ಹಲವು ಕಾರ್ಯಗಳನ್ನು ಮೊದಲಿನಿಂದಲೂ ಮಾಡುತ್ತಲೇ ಬಂದಿದೆ. ಆರಂಭದಲ್ಲಿ ಉಚಿತವಾಗಿ ಡಾಟಾ ನೀಡಿದ್ದ ಜಿಯೋ, ಈಗ ಓಟಿಟಿಗಳನ್ನು ಉಚಿತವಾಗಿ ನೀಡುತ್ತಿದೆ.

ಏನೆಲ್ಲಾ ಆಫರ್‌ಗಳಿವೆ?

ಜಿಯೋ ಕಂಪನಿ ತನ್ನ ಗ್ರಾಹಕರಿಗೆ 666 ರಿಚಾರ್ಜ್‌ ಯೋಜನೆಯನ್ನು ನೀಡುತ್ತದೆ. ಈ ರಿಚಾರ್ಜ್‌ನೊಂದಿಗೆ ಗ್ರಾಹಕ 84 ದಿನಗಳ ಮಾನ್ಯತೆ ಪಡೆಯುತ್ತಾರೆ. ಅಲ್ಲದೆ ಪ್ರತಿ ದಿನ 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್‌ಗಳು ಲಭ್ಯ. ಬಳಕೆದಾರರು 64 kbps ವೇಗದಲ್ಲಿ ಡೇಟಾವನ್ನು ಬಳಸುವ ಸೌಲಭ್ಯ ಪಡೆಯಬಹುದು.

ಇನ್ನು ಜಿಯೋ 739 ರಿಚಾರ್ಜ್‌ ಮಾಡಿಸಿಕೊಂಡರೆ, 84 ದಿನಗಳ ಮಾನ್ಯತೆ ಪಡೆಯಬಹುದು. ಅಲ್ಲದೆ ಅನಿಯಮಿತ ಕರೆ, 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್‌ಗಳು ಲಭ್ಯ. ಅಲ್ಲದೆ Jio ಅಪ್ಲಿಕೇಶನ್‌ಗಳ ವೈಶಿಷ್ಟ್ಯಗಳನ್ನು ಸಹ ಪಡೆಯಬಹುದು.

ಎಷ್ಟು ದಿನದ ವ್ಯಾಲಿಡಿಟಿ?

ಜಿಯೋ 758 ರೂಪಾಯಿಗಳ ರಿಚಾರ್ಜ್‌ ಪ್ಲ್ಯಾನ್‌ ಸಹ ಪರಿಚಯಿಸಿದಿದೆ. ಇದು ಸಹ 84 ದಿನಗಳ ಮಾನ್ಯತೆ ಹೊಂದಿದ್ದು, 1.5 ಜಿಬಿ ಡೇಟಾ ಸೌಲಭ್ಯವನ್ನು ಪ್ರತಿ ದಿನ ಹೊಂದಿರುತ್ತದೆ. ಇದರೊಂದಿಗೆ ಮೂರು ತಿಂಗಳವರೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನ ಪ್ರಯೋಜನವನ್ನು ಗ್ರಾಹಕ ಪಡೆಯುತ್ತಾರೆ.

ಇನ್ನು ನೀವು ಹೆಚ್ಚಿನ ಡೇಟಾವನ್ನು ಉಪಯೋಗಿಸುವ ಗ್ರಾಹಕರು ಆಗಿದ್ದರೇ ಅಂತಹವರಿಗೂ ಜಿಯೋ ಬೆಸ್ಟ್ ಆಫರ್ ನೀಡಿದೆ. 857 ರೂಗಳ ರೀಚಾರ್ಜ್ ಯೋಜನೆಯನ್ನು ರಿಚಾರ್ಜ್ ಮಾಡಿಸಿಕೊಂಡಲ್ಲಿ, ಬಳಕೆದಾರ ದಿನವೂ 2GB ಡೇಟಾ ಮತ್ತು 84 ದಿನಗಳವರೆಗೆ ಪಡೆಯುತ್ತಾನೆ. ಇದರೊಂದಿಗೆ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಮತ್ತು ಅಮೆಜಾನ್ ಪ್ರೈಮ್ ವೀಡಿಯೊ ಸೇರಿವೆ.

ಇನ್ನು 866 ರೂಗಳ ರೀಚಾರ್ಜ್ ಯೋಜನೆಯನ್ನು ಹಾಕಿಸಿಕೊಂಡಲ್ಲಿ, ದೈನಂದಿನ 2GB ಡೇಟಾ ಮತ್ತು 84 ದಿನಗಳವರೆಗೆ ದೈನಂದಿನ 100 SMS ಸೌಲಭ್ಯಗಳನ್ನು ನೀಡುತ್ತದೆ. ಇತರ ಪ್ರಯೋಜನಗಳಲ್ಲಿ 3 ತಿಂಗಳ ಕಾಲ Jio ಅಪ್ಲಿಕೇಶನ್‌ಗಳು ಮತ್ತು Swiggy ನ ಒನ್ ಲೈಟ್ ಸದಸ್ಯತ್ವವೂ ಸಿಗಲಿದೆ.

Post a Comment

Previous Post Next Post
CLOSE ADS
CLOSE ADS
×