ಕರ್ನಾಟಕ ಯುಜಿಸಿಇಟಿ ಕೌನ್ಸಿಲಿಂಗ್, ಅಣಕು ಸೀಟು ಹಂಚಿಕೆ ಪ್ರಕಟ ಯಾವಾಗ? ಇಲ್ಲಿದೆ ನೋಡಿ ಡೀಟೇಲ್ಸ್‌

ಕರ್ನಾಟಕ ಯುಜಿಸಿಇಟಿ ಕೌನ್ಸಿಲಿಂಗ್, ಅಣಕು ಸೀಟು ಹಂಚಿಕೆ ಪ್ರಕಟ ಯಾವಾಗ? ಇಲ್ಲಿದೆ ನೋಡಿ ಡೀಟೇಲ್ಸ್‌

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಹಾಗೂ ಅಣಕು ಸೀಟು ಹಂಚಿಕೆ ಕುರಿತ ಲೇಟೆಸ್ಟ್‌ ಡೀಟೇಲ್ಸ್‌ ಇಲ್ಲಿದೆ. ಈ ಪರೀಕ್ಷೆ ಬರೆದು ಇಂಜಿನಿಯರಿಂಗ್ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾದು ಕುಳಿತವರು, ಈ ಅಪ್‌ಡೇಟ್ಸ್‌ ಚೆಕ್‌ ಮಾಡಿಕೊಳ್ಳಿ.



ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧ, ಯುಜಿ ಸಿಇಟಿ ಕರ್ನಾಟಕದ ಫಲಿತಾಂಶ ಬಂದು ತಿಂಗಳೇ ಕಳೆದಿದೆ. ಆದರೆ ಇನ್ನು ಸಹ ಈ ಕೋರ್ಸ್‌ಗಳ ಸೀಟುಗಳನ್ನು ಭರ್ತಿ ಮಾಡಲು ಕೌನ್ಸಿಲಿಂಗ್‌ ಕುರಿತು ಯಾವುದೇ ಅಪ್‌ಡೇಟ್‌ ಬರುತ್ತಿಲ್ಲ ಎಂದು ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಹಾಗೂ ಅಣಕು ಸೀಟು, ವೇಳಾಪಟ್ಟಿಯಾದರೂ ಇನ್ನು ಬಂದಿಲ್ಲವಲ್ಲ ಎಂದು ಸಹ ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ. ಈ ಎಲ್ಲ ಅಭ್ಯರ್ಥಿಗಳಿಗೆ ಈಗ ಸಿಇಟಿ ಕೌನ್ಸಿಲಿಂಗ್ ಕುರಿತು ಲೇಟೆಸ್ಟ್‌ ಅಪ್‌ಡೇಟ್‌ ಸಿಕ್ಕಿದೆ.

ನೀಟ್‌ ರಿಸಲ್ಟ್‌ ನಂತರ ಕೆಸಿಇಟಿ ಕೌನ್ಸಿಲಿಂಗ್ ಆರಂಭಿಸುವ ಪ್ಲಾನ್‌ ಕೆಇಎ'ಗೆ ಇತ್ತು. ಆದರೆ ನೀಟ್‌ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಈಗ ನೀಟ್‌ ಪರೀಕ್ಷೆಯನ್ನು 1563 ಅಭ್ಯರ್ಥಿಗಳಿಗೆ ಮತ್ತೆ ನಡೆಸಲಾಗುತ್ತಿದೆ. ಇದರ ನಡುವೆ ಈಗ ನೀಟ್‌ ಕೌನ್ಸಿಲಿಂಗ್ ಹಾಗೂ ಸಿಇಟಿ ಕೌನ್ಸಿಲಿಂಗ್ ಎರಡರ ಆರಂಭದ ದಿನಾಂಕ ಹೊರಬಿದ್ದಿದೆ.

ಸಿಇಟಿ/ ನೀಟ್‌ ಕೌನ್ಸಿಲಿಂಗ್ ಯಾವಾಗ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜುಲೈ ಎರಡನೇ ವಾರದಲ್ಲಿ ಸಿಇಟಿ ಕೌನ್ಸಿಲಿಂಗ್ ಆರಂಭಿಸುವ ಎಲ್ಲ ಸಾಧ್ಯತೆಗಳಿವೆ. ಹಾಗೆಯೇ ಜುಲೈ 06 ರಂದು ನೀಟ್‌ ಕೌನ್ಸಿಲಿಂಗ್ ಆರಂಭಿಸುವ ಸಾಧ್ಯತೆಗಳಿವೆ. ಪ್ರಸ್ತುತ ಸುಪ್ರೀಂಕೋರ್ಟ್‌ನಲ್ಲಿ ನೀಟ್‌ ವಿಚಾರಣೆ ನಡೆಯುತ್ತಿದೆ. ಜೂನ್ 23 ರಂದು 1563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಿ, ಇದರ ರಿಸಲ್ಟ್‌ ಅನ್ನು ಜೂನ್ 30 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಎನ್‌ಟಿಎ ನ್ಯಾಯಾಲಯಕ್ಕೆ ತಿಳಿಸಿದೆ. ಮೊದಲು ನೀಟ್‌ ಮೊದಲ ಸುತ್ತಿನ ಕೌನ್ಸಿಲಿಂಗ್ ಆರಂಭಿಸಿ, ನಂತರ ಸಿಇಟಿ ಕೌನ್ಸಿಲಿಂಗ್ ಅನ್ನು ಜುಲೈ ಎರಡನೇ ವಾರದಲ್ಲಿ ನಡೆಸಲಾಗುತ್ತದೆ. ಅಷ್ಟರೊಳಗೆ ಕೆಇಎ ಅಣಕು ಸೀಟು ಹಂಚಿಕೆ ಸೇರಿ ಸೀಟು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಮುಗಿಸಿಕೊಳ್ಳಲಾಗುತ್ತದೆ. ಆದಾದ ನಂತರ ಕೌನ್ಸಿಲಿಂಗ್ ಶುರುವಾಗಲಿದೆ.

ನೀಟ್‌ ಕೌನ್ಸಿಲಿಂಗ್ ಆರಂಭವಾದ 3-4 ದಿನಗಳಲ್ಲಿ ಸಿಇಟಿ ಕೌನ್ಸಿಲಿಂಗ್ ಆರಂಭ ಮಾಡಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್‌ ಪ್ರಸನ್ನ ರವರು ತಿಳಿಸಿದ್ದಾರೆ.


Post a Comment

Previous Post Next Post
CLOSE ADS
CLOSE ADS
×