Tower: ಖಾಲಿ ಜಾಗ ಮತ್ತು ಮನೆಯ ಮೇಲಿನ ಜಾಗ ಇದ್ದವರಿಗೆ ಬಂಪರ್ ಸಿಹಿಸುದ್ದಿ

Tower: ಖಾಲಿ ಜಾಗ ಮತ್ತು ಮನೆಯ ಮೇಲಿನ ಜಾಗ ಇದ್ದವರಿಗೆ ಬಂಪರ್ ಸಿಹಿಸುದ್ದಿ

Tower ನಮಸ್ಕಾರ ಗೆಳೆಯರೇ,ತಿಂಗಳಿಗೆ 50 ರಿಂದ 60,000 ಸಂಪಾದನೆ ಮಾಡುವಂತಹ ಅವಕಾಶ ಸಿಕ್ಕರೆ ಯಾರು ತಾನೆ ಬಿಡ್ತಾರೆ ಹೇಳಿ. ಒಂದು ವೇಳೆ ನಿಮ್ಮ ಬಳಿ 500 ಸ್ಕ್ವೇರ್ ಫೀಟ್ ಜಾಗ ಖಾಲಿ ಇದ್ರೆ, ನೀವು ಈಗ ಹೇಳುವಂತಹ ವಿಧಾನವನ್ನು ಫಾಲೋ ಮಾಡಬಹುದಾಗಿದೆ. ಆರಂಭದಲ್ಲಿ ನೀವು ಕೆಲವೊಂದು ಡಾಕ್ಯೂಮೆಂಟ್ ಹಾಗೂ ಪೇಪರ್ ವರ್ಕ್ ಗಳನ್ನು ಮಾಡಬೇಕಾಗಿರುತ್ತದೆ ನಂತರ ಯಾವುದೇ ರೀತಿಯ ಕೆಲಸ ಮಾಡಬೇಕಾದ ಅಗತ್ಯ ಇರುವುದಿಲ್ಲ. ಹೀಗಾಗಿ ಮೊದಲಿಗೆ ನೀವು ಮೊಬೈಲ್ ಟವರ್ ಕಂಪನಿಯ ಜೊತೆಗೆ ಮಾತನಾಡಿ ಖಾಲಿ ಜಾಗದಲ್ಲಿ ಟವರ್ (Tower) ಅನ್ನು ಇರಿಸಬೇಕು. ಅಲ್ಲಿ ಟವರ್ ಇರಿಸುವುದಕ್ಕಾಗಿ ಕಂಪನಿ ನಿಮಗೆ ತಿಂಗಳಿಗೆ ಸಾವಿರಾರು ರೂಪಾಯಿ ಹಣವನ್ನು ನೀಡುತ್ತದೆ.




Tower ಖಾಲಿ ಚಾವಣಿಯ ಮೇಲೆ ಮೊಬೈಲ್ ಟವರ್ ಅನ್ನು ಇಡುವುದಕ್ಕಾಗಿ 500 ಸ್ಕ್ವೇರ್ ಫೀಟ್ ಜಾಗ ಬೇಕಾಗಿರುತ್ತದೆ ಆದರೆ ಖಾಲಿ ಕೆಳಗಿನ ಜಾಗದಲ್ಲಿ 2000 ರಿಂದ 2500 ಸ್ಕ್ವೇರ್ ಫೀಟ್ ಬೇಕಾಗುವುದು ಕೂಡ ಅದು ಗ್ರಾಮೀಣ ಭಾಗದಲ್ಲಿ ಇದೆಯೋ ಅಥವಾ ನಗರ ಭಾಗದಲ್ಲಿ ಇದೆಯೋ ಅನ್ನೋದು ಕೂಡ ಪ್ರಮುಖವಾಗಿರುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಆಸ್ಪತ್ರೆಯಿಂದ 100 ಮೀಟರ್ ದೂರ ಇರಬೇಕು ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಇನ್ನು ಅದು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವಂತಹ ಪ್ರದೇಶ ಆಗಿರಬಾರದು ಎಂಬುದನ್ನು ಕೂಡ ನೀವು ಗಮನಿಸಬೇಕಾಗಿರುತ್ತದೆ. ಯಾಕೆಂದರೆ ಮೊಬೈಲ್ ಟವರ್ ನಿಂದ ಹೊರಬರುವಂತಹ ರೇಡಿಯೇಷನ್ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾಗಿದೆ.

Tower (ಟವರ್ ) ಹಾಕೋದು ಹೇಗೆ?

ಯಾವುದೇ ಕಂಪನಿ ಕೂಡ ಟವರ್ ಹಾಕೋದಕ್ಕೆ ಜನರ ಮನೆಗೆ ಬರೋದಿಲ್ಲ ನಾವೇ ಕಂಪನಿಗೆ ಹೋಗಿ ಕಾಂಟಾಕ್ಟ್ ಮಾಡಬೇಕಾಗಿರುತ್ತದೆ. ನಿಮ್ಮ ಮನೆಯ ಮೇಲಿರುವಂತಹ ಚಾವಣಿಯನ್ನು ಸರಿಯಾದ ರೀತಿಯಲ್ಲಿ ಚೆಕ್ ಮಾಡಿದ ನಂತರ ಅವರೇ ಮನೆಯ ಮೇಲೆ ಟವರ್ ಹಾಕಬಹುದು ಇಲ್ಲವೋ ಎನ್ನುವುದನ್ನ ನಿಮಗೆ ಹೇಳುತ್ತಾರೆ. ಎಲ್ಲ ಸರಿಯಾದ ಮೇಲೆ ಅಗ್ರಿಮೆಂಟ್ ಮಾಡಿ ಅಗ್ರಿಮೆಂಟ್ ಪ್ರಕಾರ ನಿಮಗೆ ಪ್ರತಿ ತಿಂಗಳು ಹಣವನ್ನು ನೀಡುತ್ತದೆ.

ಆದಾಯ ಎಷ್ಟು ಬರುತ್ತೆ?

ನಿಮಗೆ ಎಷ್ಟು ಹಣ ಸಿಗುತ್ತೆ ಅನ್ನೋದಕ್ಕೆ ಟವರ್ ಅನ್ನು ಎಲ್ಲಿ ಹಾಕ್ತಾರೆ ಹಾಗೂ ಯಾವ ಕಂಪನಿ ನಿಮ್ಮ ಜಾಗದಲ್ಲಿ ಟವರ್ ಹಾಕುತ್ತಿದೆ ಅನ್ನೋದರ ಮೇಲೆ ನಿರ್ಧಾರವಾಗಿರುತ್ತದೆ. ಇನ್ನು ಈ ರೀತಿ ಟವರ್ ಹಾಕಿಸುವುದಕ್ಕೆ ಕಂಪನಿ ಗಳು 10,000 ಗಳಿಂದ ಪ್ರಾರಂಭಿಸಿ ಪ್ರತಿ ತಿಂಗಳಿಗೆ 60 ಸಾವಿರ ರೂಪಾಯಿಗಳವರೆಗೆ ಕೂಡ ಹಣವನ್ನು ನೀಡುತ್ತಾರೆ.

ಟವರ್ ಹಾಕುವಂತಹ ಕಂಪನಿಗಳು

ಏರ್ಟೆಲ್, ಅಮೆರಿಕನ್ ಟವರ್ ಕಾರ್ಪೊರೇಟಿವ್, ಬಿಎಸ್ಎನ್ಎಲ್ ಟವರ್ ಇನ್ಫ್ರಾಸ್ಟ್ರಕ್ಚರ್, ಎಸ್ ಆರ್ ಟೆಲಿಕಾಂ, ಜಿ ಟಿ ಎಲ್ ಇನ್ಟ್ರಾಸ್ಟ್ರಕ್ಚರ್, ಎನ್ ಎಫ್ ಸಿ ಎಲ್ ಕನೆಕ್ಷನ್ ಇನ್ಫ್ರಾಸ್ಟ್ರಕ್ಚರ್, ಐಡಿಯಾ ಟೆಲಿಕಾಂ ಇನ್ಫ್ರಾ ಲಿಮಿಟೆಡ್, ವೊಡಾಫೋನ್ ಸೇರಿದಂತೆ ಸಾಕಷ್ಟು ಕಂಪನಿಗಳು ಮೊಬೈಲ್ ಟವರ್ ಅನ್ನು ಅಳವಡಿಸುತ್ತವೆ. ಇವುಗಳ ಅಧಿಕೃತ ವೆಬ್ ಸೈಟ್ ಗೆ ಹೋಗಿ ನೀವು ಟವರ್ ಅಳವಡಿಸುವುದರ ಬಗ್ಗೆ ರಿಕ್ವೆಸ್ಟ್ ಕಳಿಸಬಹುದಾಗಿದೆ. ಇದಕ್ಕಾಗಿ ನಗರಸಭೆಯಿಂದ NOC ಸೇರಿದಂತೆ ಸಾಕಷ್ಟು ಡಾಕ್ಯುಮೆಂಟ್ ಗಳನ್ನು ಕೂಡ ಸಂಬಂಧ ಪಟ್ಟಂತೆ ಒದಗಿಸಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಪಡೆದುಕೊಂಡ ನಂತರವಷ್ಟೇ ಈ ಯೋಜನೆಗೆ ನೀವು ಚಾಲನೆ ನೀಡಬಹುದಾಗಿದೆ.

Post a Comment

Previous Post Next Post
CLOSE ADS
CLOSE ADS
×