ಓಮ್ರಾನ್ ಹೆಲ್ತ್‌ಕೇರ್ ಸ್ಕಾಲರ್‌ಶಿಪ್'ಗೆ ಅರ್ಜಿ ಹಾಕಿ ಪಡೆಯಿರಿ ರೂ.20,000

ಓಮ್ರಾನ್ ಹೆಲ್ತ್‌ಕೇರ್ ಸ್ಕಾಲರ್‌ಶಿಪ್'ಗೆ ಅರ್ಜಿ ಹಾಕಿ ಪಡೆಯಿರಿ ರೂ.20,000

Omron Healthcare Scholarship 2024: ನೀವು 9 ರಿಂದ 12ನೇ ತರಗತಿವರೆಗೆ ಯಾವುದೇ ಕ್ಲಾಸ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದಲ್ಲಿ, ನಿಮ್ಮ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಬೇಕಾದಲ್ಲಿ ಈಗಲೇ ಓಮ್ರಾನ್ ಹೆಲ್ತ್‌ಕೇರ್ ಸ್ಕಾಲರ್‌ಶಿಪ್ ಗೆ ಅರ್ಜಿ ಹಾಕಿ, ಪಡೆಯಿರಿ ರೂ.20,000.



  • ಕಡುಬಡತನವಿದೆ, ಓದಲು ಬರೆಯಲು ಉತ್ತಮ ಶಿಕ್ಷಣ ಪಡೆಯಲು ಬೇಕಾದ ಕನಿಷ್ಠ ಸೌಕರ್ಯಗಳನ್ನು ಪಡೆಯಲು ಆರ್ಥಿಕ ಸಂಕಷ್ಟವಿದೆ. ಏನು ಮಾಡೋದು ಎಂದು ಯೋಚಿಸುತ್ತಿರುವ 9 ನೇ ತರಗತಿಯಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿನಿಯರು ನೀವಾಗಿದ್ದಲ್ಲಿ ನಿಮಗಾಗಿ ಈ ಲೇಖನ. ಓದಲು ಆರ್ಥಿಕ ಸಂಕಷ್ಟವಿದೆ ಎಂದು ಕೂರದಿರಿ. ನಿಮ್ಮಂತಹ ಪ್ರತಿಭಾವಂತರಿಗೆ, ಶಿಕ್ಷಣದಲ್ಲಿ ಉತ್ಸಾಹವುಳ್ಳ ನಿಮಗೆ ಕೇವಲ ಸರ್ಕಾರದಿಂದ ಮಾತ್ರವಲ್ಲದೇ ಹಲವು ಸಂಘ, ಸಂಸ್ಥೆಗಳು ಕಾರ್ಪೋರೇಟ್‌ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮಗಳಡಿ ಕೆಲವು ಸ್ಕಾಲರ್‌ಶಿಪ್‌ಗಳನ್ನು ನೀಡುತ್ತವೆ. ಅಂತಹವುಗಳ ಸಾಲಿನಲ್ಲಿ ಓಮ್ರಾನ್‌ ಹೆಲ್ತ್‌ಕೇರ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌'ನ 'ಓಮ್ರಾನ್ ಹೆಲ್ತ್‌ಕೇರ್ ಸ್ಕಾಲರ್‌ಶಿಪ್' ಸಹ ಒಂದು. ಪ್ರಸ್ತುತ ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ.
  • ನೀವು ನಿಮ್ಮ ಶೈಕ್ಷಣಿಕ ಅಗತ್ಯಗಳನ್ನು ನೀಗಿಸಿಕೊಳ್ಳಲು ಆರ್ಥಿಕ ನೆರವು ಬೇಕು ಎಂದಲ್ಲಿ 'ಓಮ್ರಾನ್ ಹೆಲ್ತ್‌ಕೇರ್ ಸ್ಕಾಲರ್‌ಶಿಪ್ 2024-25' ಗೆ ಈಗ ಅರ್ಜಿ ಸಲ್ಲಿಸಿ. ಈ ವಿದ್ಯಾರ್ಥಿವೇತನದಡಿ ಶಿಕ್ಷಣಕ್ಕಾಗಿ ಒಮ್ಮೆ ರೂ.20,000 ಸಹಾಯಧನವನ್ನು ಪಡೆಯಿರಿ.
  • 'ಓಮ್ರಾನ್ ಹೆಲ್ತ್‌ಕೇರ್ ಸ್ಕಾಲರ್‌ಶಿಪ್ 2024-25' ಅರ್ಜಿ ಸಲ್ಲಿಸಲು ಅರ್ಹತೆಗಳೇನು, ಅರ್ಜಿ ವಿಧಾನ ಹೇಗೆ, ಇತರೆ ಹೆಚ್ಚಿನ ಮಾಹಿತಿಗಳು ಕೆಳಗಿನಂತಿವೆ ನೋಡಿ.

'ಓಮ್ರಾನ್ ಹೆಲ್ತ್‌ಕೇರ್ ಸ್ಕಾಲರ್‌ಶಿಪ್ 2024-25' ಗೆ ಅರ್ಜಿ ಹಾಕಲು ಅರ್ಹತೆಗಳು

  • 9ನೇ ತರಗತಿಯಿಂದ 12 ನೇ ತರಗತಿ ವರೆಗೆ ಯಾವುದೇ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬಹುದು.
  • ದೇಶದಾದ್ಯಂತದ ಯಾವುದೇ ರಾಜ್ಯದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅರ್ಹರು.
  • ವಿದ್ಯಾರ್ಥಿನಿಯರು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ ಶೇಕಡ.75 ಅಂಕಗಳನ್ನು ಗಳಿಸಿರಬೇಕು.
  • ವಿದ್ಯಾರ್ಥಿನಿಯರ ಕುಟುಂಬದ ವಾರ್ಷಿಕ ಆದಾಯ ರೂ.8,00,000 ದೊಳಗಿರಬೇಕು.
  • ಓಮ್ರಾನ್‌ ಹೆಲ್ತ್‌ಕೇರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್, Buddy4Study ಎಂಪ್ಲಾಯ್‌ಗಳ ಮಕ್ಕಳು ಅರ್ಜಿ ಹಾಕುವಂತಿಲ್ಲ.
  • ಅರ್ಜಿ ಸಲ್ಲಿಸಿದವರ ಪೈಕಿ ಒಬ್ಬರೇ ಪೋಷಕರಿರುವವರ ಮಕ್ಕಳಿಗೆ, ಅನಾಥ ಮಕ್ಕಳಿಗೆ, ವಿಶೇಷ ಚೇತನ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಸ್ಕಾಲರ್‌ಶಿಪ್‌ ಸಹಾಯಧನ ಮೌಲ್ಯ: 

ಒಂದು ಬಾರಿಗೆ Rs.20,000.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 

31-05-2024

ಸ್ಕಾಲರ್‌ಶಿಪ್‌ - ಟ್ಯೂಷನ್‌ ಶುಲ್ಕ, ಹಾಸ್ಟೆಲ್‌ ಶುಲ್ಕ, ಊಟದ ಶುಲ್ಕ, ಪ್ರಯಾಣ ಶುಲ್ಕ, ಪುಸ್ತಕ ಮತ್ತು ಸ್ಟೇಷನರಿ, ಮೆಡಿಕಲ್ ವಿಮಾ ಭತ್ಯೆಗಳನ್ನು ಒಳಗೊಂಡಿರುತ್ತದೆ.

ಅರ್ಜಿ ಹಾಕುವ ವಿಧಾನ

  • ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು Apply Online Link ಕ್ಲಿಕ್ ಮಾಡಿ.
  • ತೆರೆದ ವೆಬ್‌ಪೇಜ್‌ನಲ್ಲಿ ಸ್ಕ್ರಾಲ್‌ ಡೌನ್‌ ಮಾಡಿ.
  • 'Apply Now' ಎಂದಿರುವ ಬಟನ್‌ ಮೇಲೆ ಕ್ಲಿಕ್ ಮಾಡಿ.
  • ಗೂಗಲ್ ಮೇಲ್, ಮೊಬೈಲ್ ನಂಬರ್, ಇ-ಮೇಲ್‌ ಮೂರರಲ್ಲಿ ಯಾವುದರ ಮೂಲಕ ರಿಜಿಸ್ಟರ್‌ ಪಡೆಯಲು ಸಾಧ್ಯವೋ ಆ ಆಯ್ಕೆ ಕ್ಲಿಕ್ ಮಾಡಿ.
  • ಮೊದಲು ರಿಜಿಸ್ಟ್ರೇಷನ್‌ ಪಡೆದು, ನಂತರ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಹಿಂದಿನ ವರ್ಷದ ಶೈಕ್ಷಣಿಕ ದಾಖಲೆ /ಅಂಕಪಟ್ಟಿ
  • ಆಧಾರ್ ಕಾರ್ಡ್
  • ಪ್ರಸ್ತುತ ಶಾಲೆಯ ಪ್ರವೇಶಾತಿ ಪಡೆದ ಪ್ರಮಾಣಪತ್ರ.
  • ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ.
  • ವಿಳಾಸದ ದಾಖಲೆ
  • ಪಿಡಬ್ಲ್ಯೂಡಿ ಅಭ್ಯರ್ಥಿಗಳಾಗಿದ್ದಲ್ಲಿ ಪ್ರಮಾಣಪತ್ರ.
  • ಇತ್ತೀಚಿನ ಭಾವಚಿತ್ರ.

ಆಯ್ಕೆ ವಿಧಾನ ಹೇಗೆ?

ವಿದ್ಯಾರ್ಥಿನಿಯರನ್ನು ಅವರ ಶೈಕ್ಷಣಿಕ ಅಂಕಗಳು, ಆರ್ಥಿಕ ಹಿನ್ನೆಲೆಯ ಆಧಾರದಲ್ಲಿ ಸೆಲೆಕ್ಟ್‌ ಮಾಡಲಾಗುತ್ತದೆ. ನಂತರ ದೂರವಾಣಿಯಲ್ಲಿ ಸಂದರ್ಶನ, ಅನಂತರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಅಂತಿಮವಾಗಿ ಆಯ್ಕೆಯಾದವರಿಗೆ ಸಹಾಯಧನವನ್ನು ಒಮ್ಮೆ ನೀಡಲಾಗುತ್ತದೆ.

ವಿಶೇಷ ಸೂಚನೆ : 

ಓಮ್ರಾನ್ ಹೆಲ್ತ್‌ಕೇರ್ ಸ್ಕಾಲರ್‌ಶಿಪ್ ಗೆ 9ನೇ ತರಗತಿಯಿಂದ 12 ನೇ ತರಗತಿ ವರೆಗೆ ಯಾವುದೇ ಕ್ಲಾಸ್‌ನಲ್ಲಿ ಯಾವುದೇ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

Post a Comment

Previous Post Next Post
CLOSE ADS
CLOSE ADS
×