ಕಾರ್ಮಿಕರ ದಿನವೇ ಭರ್ಜರಿ ಗಿಫ್ಟ್!‌ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಧನ ಸಹಾಯ ಬಿಡುಗಡೆಗೆ ಆದೇಶ

ಕಾರ್ಮಿಕರ ದಿನವೇ ಭರ್ಜರಿ ಗಿಫ್ಟ್!‌ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಧನ ಸಹಾಯ ಬಿಡುಗಡೆಗೆ ಆದೇಶ

ಹಲೋ ಸ್ನೇಹಿತರೇ, ಮೇ 01: ಇಬ್ಬರು ಕಟ್ಟಡ ಕಾರ್ಮಿಕರ ಮಕ್ಕಳು ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿ ಶೈಕ್ಷಣಿಕ ಧನ ಸಹಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಯಾಲಯ ಧನ ಸಹಾಯ ನೀಡುವ ಅರ್ಜಿಯನ್ನು 10 ತಿಂಗಳು ಶೈತ್ಯಾಗಾರದಲ್ಲಿಟ್ಟಿದ್ದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕ್ರಮವನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡು ದಂಡ ಸಹಿತ ಪಾವತಿಸುವಂತೆ ಮಧ್ಯಂತರ ಆದೇಶ ನೀಡಿದೆ.



ಅಲ್ಲದೆ, ಅರ್ಜಿದಾರರಾದ ಇಬ್ಬರು ವಿದ್ಯಾರ್ಥಿನಿಯರಿಗೆ ಅವರು ತುಂಬಿರುವ ಕಾಲೇಜು ಶುಲ್ಕವನ್ನು ಈ ಆದೇಶವಾಗಿರುವ 4 ವಾರದೊಳಗೆ ಅವರ ಖಾತೆಗೆ ಪಾವತಿಸುವಂತೆ ಸೂಚಿಸಿದೆ. ಶೈಕ್ಷಣಿಕ ಧನಸಹಾಯವನ್ನು ನೀಡಲು ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಶನ್ ಹಾಗೂ ಮತ್ತಿತ್ತರರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಹೈಕೋರ್ಟ್ ಆದೇಶವೇನು?

ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರ ಹೊಸ ಅಧಿಸೂಚನೆ ಹೊರಡಿಸುವ ಮೊದಲೇ ಅರ್ಜಿದಾರರಾದ ಇಬ್ಬರು ವಿದ್ಯಾರ್ಥಿನಿಯರು ಮಂಡಳಿ ಹಿಂದೆ ನೀಡುತ್ತಿದ್ದ 30,000 ಹಾಗೂ ರೂ. 35,000 ಶೈಕ್ಷಣಿಕ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಆದರೆ 10 ತಿಂಗಳಾದರೂ ಕಲ್ಯಾಣ ಮಂಡಳಿ ಈ ಅರ್ಜಿಗಳನ್ನು ಇತ್ಯರ್ಥ ಪಡಿಸಲಿಲ್ಲ. ಸರ್ಕಾರಿ ನೌಕರರಿಗೆ ಸಿಗುವ ಯಾವೊಂದು ಭತ್ಯೆಗಳು ಇಲ್ಲದೆ ಬಿಸಿಲಿನಲ್ಲಿ ಬೆವರು ಸುರಿಸುವ ಬಡ ಕಾರ್ಮಿಕರ ಕುರಿತಾಗಿ ಅವರದ್ದೇ ಶ್ರಮದಿಂದ ಸಂಗ್ರಹವಾಗಿರುವ 8200 ಕೋಟಿ ಕಲ್ಯಾಣ ನಿಧಿ ಇರುವಾಗಲೂ ಅವರ ಮಕ್ಕಳಿಗೆ ನ್ಯಾಯಬದ್ದವಾಗಿ ದೊರಕಬೇಕಾದ ಶೈಕ್ಷಣಿಕ ಧನಸಹಾಯವನ್ನು ನಿರಾಕರಣೆ ಮಾಡುತ್ತಿರುವುದು ಒಪ್ಪುವಂತದಲ್ಲ ಎಂದು ನ್ಯಾಯಪೀಠ ಹೇಳಿದೆ.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ದಂಡ ಸಹಿತ ಪಾವಸುವಂತೆ ಹೇಳಿದೆ. ಜತೆಗೆ ಒಂದು ವೇಳೆ ಕಲ್ಯಾಣ ಮಂಡಳಿಯು ದಂಡ ಸಹಿತ ಈ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ನಿಗದಿತ ಅವಧಿಯೊಳಗೆ ಪಾವತಿಸಲು ವಿಫಲವಾದರೆ ಬಳಿಕ ಪ್ರತಿ ದಿವಸಕ್ಕೂ 500 ರೂ. ಪ್ರತಿ ವಿದ್ಯಾರ್ಥಿನಿಯರಿಗೆ ದಂಡವಾಗಿ ಮಕ್ಕಳ ಖಾತೆಗೆ ಪಾವತಿಸಬೇಕು ಆದೇಶಿಸಿ ವಿಚಾರಣೆಯನನ್ನು ಜೂ.4 ಕ್ಕೆ ಮುಂದೂಡಿದೆ.

ಈ ವೇಳೆ ಅರ್ಜಿದಾರರ ಪರ ವಕೀಲರು ಈ ಹಿಂದಿನ ನ್ಯಾಯಾಲಯದ ಆದೇಶದಂತೆ ಕಲ್ಯಾಣ ಮಂಡಳಿಯೂ ಯಾವುದೇ ಕ್ರಮವಹಿಸಿಲ್ಲ. ವಿದ್ಯಾರ್ಥಿಗಳ ಖಾತೆಗೆ ಹಣ ಪಾವತಿಸಲಿಲ್ಲ ಎಂದು ಮಕ್ಕಳ, ಪೋಷಕರ ಬ್ಯಾಂಕ್ ಖಾತೆ ವಿವರ ಸಹಿತ ದಾಖಲೆಗಳನ್ನು ನ್ಯಾಯಪೀಠದ ಮುಂದಿಟ್ಟರು.

ಕಲ್ಯಾಣ ಮಂಡಳಿ ಪರವಾಗಿ ವಾದ ಮಂಡಿಸಿದ ವಕೀಲರು ಹಿಂದಿನ ತೀರ್ಮಾನದಂತೆ ಕೇವಲ ರೂ. 10 ಹಾಗೂ 11 ಸಾವಿರ ರೂಪಾಯಿಗಳನ್ನು ಮಾತ್ರವೇ ಪಾವತಿಸಲು ಸಾಧ್ಯ ಎಂದರು.


Post a Comment

Previous Post Next Post
CLOSE ADS
CLOSE ADS
×