SSLC & PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ! ಕೂಡಲೇ ಅರ್ಜಿ ಸಲ್ಲಿಸಿ

SSLC & PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ! ಕೂಡಲೇ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, ಈಗಾಗಲೇ ಈ ವರ್ಷದ PUC ಮತ್ತು SSLC ಪರೀಕ್ಷೆಯ ಫಲಿತಾಂಶ ಕೂಡ ಪ್ರಕಟಣೆಯಾಗಿದೆ. ಯಾವ ವಿದ್ಯಾರ್ಥಿಗಳು ಎಷ್ಟು ಅಂಕಗಳನ್ನು ಗಳಿಸಿದ್ದಾರೆ ಎಂಬುದು ಕೂಡ ಖಚಿತವಾಗಿದೆ. ಕೆಲ ವಿದ್ಯಾರ್ಥಿಗಳು ಅತ್ಯುತ್ತಮವಾದ ಅಂಕ ಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಅಂತವರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.



ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ !

PUC ವಿದ್ಯಾರ್ಥಿಗಳ ಪೋಷಕರು ಹಾಗೂ SSLC ವಿದ್ಯಾರ್ಥಿಗಳ ಪೋಷಕರು ಓದುತ್ತಿದ್ದರೆ, ನಿಮ್ಮ ಮಕ್ಕಳಿಗೂ ಕೂಡ ಈ ಒಂದು ಪುರಸ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿ. ಕಡ್ಡಾಯವಾಗಿ 90 ಪರ್ಸೆಂಟ್ ಅಂಕವನ್ನು ಗಳಿಸಿರಬೇಕು. 90% ಹೆಚ್ಚಿನ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಹೊಸದುರ್ಗ ಶಾಖ ಮಠವು ಅರ್ಜಿಯನ್ನು ಕೂಡ ಆಹ್ವಾನಿಸಿದೆ. ಪ್ರತಿಭಾವಂತರು ಈ ಪುರಸ್ಕಾರವನ್ನು ಸ್ವೀಕರಿಸುತ್ತಾರೆ.

ಮೊದಲನೇ ಬಾರಿಗೆ ಪರೀಕ್ಷೆಯನ್ನು ಬರೆದು ಪರೀಕ್ಷೆಯಲ್ಲಿ 90 ಕ್ಕಿಂತ ಹೆಚ್ಚಿನ ಪ್ರತಿಶತ ಅಂಕವನ್ನು ಗಳಿಸಿದಂತಹ ವಿದ್ಯಾರ್ಥಿಗಳನ್ನು ಪ್ರತಿಭಾವಂತ ವಿದ್ಯಾರ್ಥಿ ಎಂದು ಕರೆಯಲಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಹೊಸದುರ್ಗ ಶಾಖ ಮಟವು ಪ್ರತಿಭಾ ಪುರಸ್ಕಾರವನ್ನು ನೀಡಬೇಕು ಎಂದು ಅರ್ಜಿಯನ್ನು ಕೂಡ ಆಹ್ವಾನಿಸಲಾಗಿದೆ.

ಯಾರು ಈ ವರ್ಷದ ಮೊದಲನೇ ಬಾರಿಗೆ PUC ಪರೀಕ್ಷೆಯಲ್ಲಿ ಹಾಗೂ SSLC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 90 ಕ್ಕಿಂತ ಹೆಚ್ಚಿನ ಪರ್ಸೆಂಟೇಜ್ ಅಂಕಗಳನ್ನು ಗಳಿಸಿದ್ದಾರೋ ಅಂತವರಿಗೆ ಈ ರೀತಿಯ ಒಂದು ಪ್ರತಿಭಾ ಪುರಸ್ಕಾರ ದೊರೆಯುತ್ತದೆ. ಈ ಪ್ರತಿಭಾ ಪುರಸ್ಕಾರದಲ್ಲಿ ಯಾವ ದಿನಾಂಕವನ್ನು ನಿಗದಿ ಮಾಡಲಾಗಿದೆಯೋ ಮಟವು ಆ ದಿನಾಂಕದಲ್ಲಿ ನೀವು ಆ ಒಂದು ಸ್ಥಳಕ್ಕೆ ತೆರಳಿ ಪ್ರತಿಭಾ ಪುರಸ್ಕಾರವನ್ನು ಕೂಡ ಸ್ವೀಕರಿಸಬಹುದು. ನೀವು ಕೂಡ ಅಷ್ಟು ಅಂಕವನ್ನು ಗಳಿಸಿದ್ದೀರಿ ಎಂದರೆ, ಕೂಡಲೇ ಈ ಮಾಹಿತಿಯಂತೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಕೆಗೆ ಈ ದಾಖಲಾತಿಗಳು ಕಡ್ಡಾಯ.

  • SSLC ವಿದ್ಯಾರ್ಥಿಗಳಿಗೆ SSLC ಅಂಕಪಟ್ಟಿ ಜೆರಾಕ್ಸ್
  • PUC ವಿದ್ಯಾರ್ಥಿಗಳಿಗೆ 2nd PUC ಪಾಸಾದ ಇರುವಂತಹ ಅಂಕಪಟ್ಟಿ ಜೆರಾಕ್ಸ್.
  • ಪ್ರಸ್ತುತ ಬೇರೆ ಕಾಲೇಜುಗಳಿಗೆ ಹೋಗುವ ಸಂದರ್ಭದಲ್ಲಿ ವರ್ಗಾವಣೆ ನಕಲಿ ಪತ್ರ ಕೂಡ ಸಲ್ಲಿಕೆ ಮಾಡಿ. ಆ ವರ್ಗಾವಣೆ ಪತ್ರದಲ್ಲಿ ನಿಮ್ಮ ಮೊಬೈಲ್ ನಂಬರ್ ಬರೆದು, ನಿಮ್ಮ ಖಾಯಂ ವಿಳಾಸದ ಮಾಹಿತಿ ಬರೆದು ಸಲ್ಲಿಕೆ ಮಾಡಿ.

ಜುಲೈ 12 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ. ಈ ದಿನಾಂಕದೊಳಗೆ ಎಲ್ಲಾ 10ನೇ ತರಗತಿ & PUC ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. 

ಅರ್ಜಿ ಸಲ್ಲಿಕೆ ಮಾಡಬೇಕಾಗಿರುವಂತಹ ವಿಳಾಸ :- ಶ್ರೀಮದ್ ಜಗದ್ಗುರು ರೇವಣಸಿದ್ಧೇಶ್ವರ ಸಿಂಹಾಸನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠ, ಕನಕ ಭವನ, 10ನೇ ಅಡ್ಡ ರಸ್ತೆ ಚಂದ್ರಾ ಲೇಔಟ್, 1ನೇ ಹಂತ, ಬೆಂಗಳೂರು – 560072.

Post a Comment

Previous Post Next Post
CLOSE ADS
CLOSE ADS
×