Poco: 128 GB ಸ್ಟೋರೇಜ್ ಆಯ್ಕೆಯ ಈ ಪೊಕೊ ಫೋನ್‌ ಕೇವಲ 6,799 ರೂ.ಗಳಿಗೆ

Poco: 128 GB ಸ್ಟೋರೇಜ್ ಆಯ್ಕೆಯ ಈ ಪೊಕೊ ಫೋನ್‌ ಕೇವಲ 6,799 ರೂ.ಗಳಿಗೆ

ಪೊಕೊ ಫೋನ್‌ಗಳು (Poco phones) ಬಜೆಟ್‌ ಬೆಲೆ ವಿಭಾಗದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡುತ್ತವೆ. ಈ ನಡುವೆ ಕೆಲವು ತಿಂಗಳ ಹಿಂದೆ ಲಾಂಚ್‌ ಆದ ಪೊಕೊ C65 (Poco C65 5G) ಸ್ಮಾರ್ಟ್‌ಫೋನ್‌ ಇದೀಗ ಭರ್ಜರಿ ಆಫರ್ ನೊಂದಿಗೆ ಲಭ್ಯ ಇದೆ. ಈ ಫೋನ್ 128 GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದೆ.



ಹೌದು, ಬಜೆಟ್ ಬೆಲೆ ವಿಭಾಗದಲ್ಲಿ ಖರೀದಿ ಮಾಡುವವರಿಗೆ ಈ ಫೋನ್‌ ಉತ್ತಮ ಎನ್ನಬಹುದು. ಈ ಪೊಕೊ C65 5G ಸ್ಮಾರ್ಟ್‌ಫೋನ್ 600 ನಿಟ್ಸ್‌ ಬ್ರೈಟ್‌ನೆಸ್ ಆಯ್ಕೆ, ಹಿಲಿಯೊ G85 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ ಎಷ್ಟು?, ಈ ಫೋನ್‌ನ ಆಫರ್ ಬೆಲೆ ಎಷ್ಟು?, ಇದರ ಪ್ರಮುಖ ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಪೊಕೊ C65 ಸ್ಮಾರ್ಟ್‌ಫೋನ್‌: 

ಈ ಸ್ಮಾರ್ಟ್‌ಫೋನ್‌ಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಉತ್ತಮ ಆಫರ ನೀಡಲಾಗಿದೆ. ಈ ಫೋನ್ 10,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 6,799 ರೂ.ಗಳ ಅಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಬರೋಬ್ಬರಿ 38% ರಿಯಾಯಿತಿಯನ್ನು ಪಡೆಯಬಹುದಾಗಿದೆ. ಅದಾಗ್ಯೂ ನೀವು ಕೆಲವು ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ಫ್ಲಿಪ್‌ಕಾರ್ಟ್ ಯುಪಿಐ ಟಿಎಕ್ಸ್‌ಎನ್‌ಎಸ್‌ನಲ್ಲಿ 250 ರೂ.ಗಳನ್ನು ಪಡೆಯಬಹುದಾಗಿದ್ದು, ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್‌ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್, ಕ್ಲಿಯರ್‌ಟ್ರಿಪ್ ಹೋಟೆಲ್‌ಗಳ ಬುಕಿಂಗ್‌ನಲ್ಲಿ ಫ್ರೀಬೀಪ್ಲ್ಯಾಟ್‌ 1000 ರೂ.ಗಳ ಆಫರ್ ಜೊತೆಗೆ 300 ಸೂಪರ್‌ಕಾಯಿನ್‌ಗಳನ್ನು ಪಡೆಯಬಹುದಾಗಿದ್ದು, ಕಾಂಬೊ ಮೊಬೈಲ್ ಮತ್ತು ಕೇಸ್‌ಕವರ್‌ನಲ್ಲಿ ಹೆಚ್ಚುವರಿ 10% ರಿಯಾಯಿತಿ ಸಿಗಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸೋಣ ಬನ್ನಿ.

ಪೊಕೊ C65 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: 

ಈ ಸ್ಮಾರ್ಟ್‌ಫೋನ್ 6.74 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 720 x 1600 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ, 90Hz ರಿಫ್ರೆಶ್‌ ರೇಟ್‌, 83.7% ಸ್ಕ್ರೀನ್-ಟು-ಬಾಡಿ ಅನುಪಾತ, 260 ppi ಸಾಂದ್ರತೆ ಸೌಲಭ್ಯ ಪಡೆದಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.

ಪೊಕೊ C65 ಸ್ಮಾರ್ಟ್‌ಫೋನ್‌ ಪ್ರೊಸೆಸರ್ ಮಾಹಿತಿ: 


ಇನ್ನು ಈ ಫೋನ್ ಆಂಡ್ರಾಯ್ಡ್‌ 13, MIUI 14 ಓಎಸ್‌ ಅನ್ನು ರನ್‌ ಮಾಡಲಿದ್ದು, ಮೀಡಿಯಾಟೆಕ್ MT6769Z ಹಿಲಿಯೊ G85 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಮಾಲಿ-G52 MC2 ಜಿಪಿಯು ಬಲ ಪಡೆದಿದ್ದು, ಹೆಚ್ಚುವರಿ ಸ್ಟೋರೇಜ್‌ಗಾಗಿ ಮೈಕ್ರೋ ಎಸ್‌ಡಿ ಕಾರ್ಡ್‌ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಜೊತೆಗೆ ಆಫರ್ ಬೆಲೆಗೆ ಲಭ್ಯ ಇರುವ ಈ ಫೋನ್ 128 GB ಇಂಟರ್ ಸ್ಟೋರೇಜ್‌ ಹಾಗೂ 4 GB RAM ಸೌಲಭ್ಯ ಪಡೆದುಕೊಂಡಿದೆ.

ಪೊಕೊ C65 ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: 

ಈ ಫೋನ್‌ ಬಜೆಟ್‌ ಬೆಲೆಯಲ್ಲಿ ಲಭ್ಯ ಇದ್ದರೂ ಸಹ ವಿವಿಧ ರಿಯರ್ ಕ್ಯಾಮೆರಾ ಸೆನ್ಸರ್‌ ಅನ್ನು ಪಡೆದುಕೊಂಡಿದೆ. ಅದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ಮ್ಯಾಕ್ರೋ ಕ್ಯಾಮೆರಾ ಹಾಗೂ 0.08 ಮೆಗಾಪಿಕ್ಸೆಲ್‌ ಸಹಾಯಕ ಸೆನ್ಸರ್‌ ಅನ್ನು ಇದರಲ್ಲಿ ಕಾಣಬಹುದಾಗಿದ್ದು, ಎಲ್ಇಡಿ ಫ್ಲ್ಯಾಶ್, ಎಚ್ಡಿಆರ್ ಫೀಚರ್ಸ್‌ ಇವೆ. ಹಾಗೆಯೇ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಪೊಕೊ C65 ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ:

 ಇನ್ನು ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ, 18W ವೈರ್ಡ್‌ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ. ಇದರ ಜೊತೆಗೆ 3.5 ಎಂಎಂ ಜ್ಯಾಕ್, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.3, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಬಿಡಿಎಸ್ ಸ್ಥಾನೀಕರಣ, ಯುಎಸ್‌ಬಿ ಟೈಪ್‌ ಸಿ ಟೈಪ್-C 2.0, ಫಿಂಗರ್‌ಪ್ರಿಂಟ್ (ಸೈಡ್-ಮೌಂಟೆಡ್), ಅಕ್ಸೆಲೆರೊಮೀಟರ್, ದಿಕ್ಸೂಚಿ ಸೇರಿದಂತೆ ಅನೇಕ ಸೌಕರ್ಯಗಳನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.


Post a Comment

Previous Post Next Post
CLOSE ADS
CLOSE ADS
×