Wire Fence: 1 ಎಕರೆ ಜಮೀನಿಗೆ ತಂತಿ ಬೇಲಿ ಹಾಕಲು ಎಷ್ಟು ಖರ್ಚಾಗುತ್ತೇ ಗೊತ್ತಾ

Wire Fence: 1 ಎಕರೆ ಜಮೀನಿಗೆ ತಂತಿ ಬೇಲಿ ಹಾಕಲು ಎಷ್ಟು ಖರ್ಚಾಗುತ್ತೇ ಗೊತ್ತಾ

ಜಮೀನು ಎಂದ ಮೇಲೆ ಅದರ ಸರಿಯಾದ ನಿರ್ವಹಣೆಯ ಅರಿವು ನಿಮಗೆ ಇರಬೇಕಾಗುತ್ತದೆ. ಜಮೀನಿನ ಸರಿಯಾದ ನಿರ್ವಹಣೆ ಆಗ ಬೇಕು ಎಂದಾದರೆ ಮೊದಲು ಆ ಜಮೀನಿನ ಅಂಚು ನಿಮಗೆ ನಿಗಧಿತವಾಗಿ ತಿಳಿದಿರಬೇಕು ಹಾಗಾಗಿ ನೀವು ಜಮೀನು ಅಥವಾ ಯಾವುದೇ ಇತರ ಭೂಮಿ ಖರೀದಿ ಮಾಡಿದರೆ ಅದಕ್ಕೆ ಸುತ್ತಲು ಬೇಲಿ ಅಳವಡಿಸಬೇಕು ಇಲ್ಲವಾದರೆ ಪಕ್ಕದ ಜಮೀನಿನವರು ಭೂಮಿಯ ಅಂಚು ಕಸಿಯುವ ಸಾಧ್ಯತೆ ಇರಲಿದೆ ಹಾಗಾದರೆ ಈ ಬೇಲಿ (Wire Fence) ನಿರ್ಮಾಣ ಮಾಡಲು ಎಷ್ಟು ಹಣ ಖರ್ಚಾಗಲಿದೆ ಎಂದು ನಿಮಗೂ ಅನಿಸಬಹುದು. ಈ ಬಗ್ಗೆ ನಾವು ಇಂದು ನಿಮಗೆ ಮಾಹಿತಿ ನೀಡಲಿದ್ದೇವೆ



ಕೃಷಿ ಭೂಮಿಗೆ ಕಾಂಪೌಂಡ್ ಅಗತ್ಯವೇ?

ಸಾಮಾನ್ಯವಾಗಿ ಮನೆ ಇರುವ ಸುತ್ತಮುತ್ತಲಿನ ಜಾಗಕ್ಕೆ ಕಾಂಪೌಂಡ್ ಅಗತ್ಯ ಎಂಬುದು ನಾವು ಮನಗಂಡಿದ್ದೇವೆ ಆದರೆ ಕೃಷಿ ಭೂಮಿಗೂ ಕಾಂಪೌಂಡ್ ಅಗತ್ಯ ಇರಲಿದೆಯೇ ಎಂಬುದಕ್ಕೆ ಖಂಡಿತಾ ಅಗತ್ಯ ಇದೆ ಎಂದು ಹೇಳಬಹುದು‌‌. ಯಾಕೆಂದರೆ ನಿಮ್ಮ ಪಕ್ಕದ ಜಮೀನಿನ ಕೃಷಿಕರು ಅಕ್ರಮವಾಗಿ ನಿಮ್ಮ ಭೂಮಿ ಸ್ವಾಧೀನ ಪಡಿಸಿಕೊಳ್ಳ ಬಾರದು ಎಂದಾದರೆ ಮೊದಲು ನೀವು ಬೇಲಿ ಹಾಕಬೇಕು‌. ಕೃಷಿ ಭೂಮಿಗೆ ಕಾಂಕ್ರೀಟ್ ಬೇಲಿ ಅಗತ್ಯ ಇಲ್ಲ ಅದರ ಬದಲು ಕೃಷಿ ಭೂಮಿಗೆ ತಂತಿ ಬೇಲಿ (Wire Fence) ಹಾಕಬಹುದು.

ಏನೆಲ್ಲ ಬೇಕಾಗಲಿದೆ?

ತಂತಿ ಬೇಲಿ (Wire Fence) ಮಾಡಬೇಕು ಎಂದಾದರೆ ಅದಕ್ಕೆ ಕಲ್ಲಿನ ಕಂಬ, ಬೇಲಿ ಇತ್ಯಾದಿ ಬಹಳ ಅಗತ್ಯವಾಗಿದೆ. ಒಂದು ಎಕರೆ ಭೂ ಪ್ರದೇಶಕ್ಕೆ 150-160 ಕಲ್ಲಿನ ಕಂಬಗಳು ಬೇಕಾಗಲಿದೆ. ಇನ್ನು ತಂತಿಯನ್ನು ಕಂಪೆನಿ ಬ್ರ್ಯಾಂಡ್ ನಿಂದ ಆಯ್ಕೆ ಮಾಡಿಕೊಳ್ಳಿ. ಕಂಪೆನಿ ಬ್ರ್ಯಾಂಡ್ ನೀವು ಆಯ್ಕೆ ಮಾಡಿಕೊಳ್ಳಲು ಬಯಸಿದರೆ 15- 20 ವರ್ಷದ ಗ್ಯಾರೆಂಟಿ ನಿಮಗೆ ಸಿಗಲಿದೆ. ಇದರ ಜೊತೆಗೆ ಬೇಲಿ ಹಾಕಲು ಶ್ರಮಿಕರು ಅಗತ್ಯವಾಗಿ ಬೇಕಾಗಲಿದ್ದಾರೆ.

ಎಷ್ಟು ಖರ್ಚು ಆಗಲಿದೆ?

ಒಂದು ಕೆ.ಜಿ. ತಂತಿ ಬೇಲಿಗೆ 130 ರೂಪಾಯಿ ತನಕ ಬೆಲೆ ಇರಲಿದೆ. ನೀವು ಟಾಟಾ ಸ್ಟೀಲ್ ನಿಂದ ತಂತಿ ಬೇಲಿ ಖರೀದಿ ಮಾಡಿದರೆ ಒಂದು ಎಕರೆಗೆ ಮೇಲೆ ಬೆಲೆ ಏರಿಳಿತ ಆಗಲಿದೆ. ಒಂದು ರೀಲ್ ಟಾಟಾ ಸ್ಟೀಲ್ ಗೆ 30kg ಬೇಕಾಗಲಿದೆ. ಒಂದು ಎಕರೆಗೆ 8 ರೋಲ್ ಬೇಕಾಗಲಿದೆ. ಆಗ 30×8 ಅಂದರೆ 240 ಆಗಲಿದೆ. ಒಂದು ಎಕರೆಗೆ 240 ಕೆಜಿ ಸರಿಸುಮಾರು ತಂತಿ ಬೇಲಿ (Wire Fence) ಬೇಕು ಅದಕ್ಕೆ 240×130 ಎಂದರೆ 31,200 ರೂಪಾಯಿ ಬರೀ ತಂತಿ ಬೇಲಿಗೆ ಆಗಲಿದೆ. ಇನ್ನು ಶ್ರಮಿಕರು ಒಂದು ಕಂಬಕ್ಕೆ 180-200 ರೂಪಾಯಿ ಪಡೆಯುತ್ತಾರೆ.

150 ಕಲ್ಲು ಒಂದು ಎಕರೆಗೆ ಹಾಕಿದರೆ 180 ರೂಪಾಯಿ ಲೆಕ್ಕದಲ್ಲಿ 27,000 ಶ್ರಮಿಕರ ಕೂಲಿ ಆಗಲಿದೆ. 6ಲೈನ್ ಕ್ರಾಸ್ ಮಾಡಬಹುದು ಅದೇ ರೀತಿ ಗುಣಾಕಾರವಾಗಿ ಕೂಡ ಕಲ್ಲನ್ನು ಬಳಸಿ ತಂತಿ ಬೇಲಿ ಹಾಕುತ್ತಾರೆ. ಹಾಗಾಗಿ ಎಲ್ಲ ಖರ್ಚು ಸೇರಿದರೆ 1 ರಿಂದ 1.50 ಲಕ್ಷದ ವರೆಗೂ ಬೆಲೆ ಆಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಒಂದು ಎಕರೆಗೆ ತಂತಿ ಬೇಲಿ ಮಾಡಿದರೆ ನಿಮಗೆ ಆ ತಂತಿ ಬೇಲಿ ಬಹಳ ಸುರಕ್ಷಿತವಾಗಿ ಕೂಡ ಇರಲಿದೆ‌.

Post a Comment

Previous Post Next Post
CLOSE ADS
CLOSE ADS
×