ಡಿಆರ್‌ಡಿಒ'ದಲ್ಲಿ ಐಟಿಐ ಪಾಸಾದವರಿಗೆ ಉದ್ಯೋಗ: ಪರೀಕ್ಷೆ ಇಲ್ಲದೆ ಆಯ್ಕೆ, ಈಗಲೇ ಅರ್ಜಿ ಹಾಕಿ

DRDO Careers For ITI Pass: ಡಿಫೆನ್ಸ್‌ ರಿಸರ್ಚ್‌ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್‌ನಲ್ಲಿ ಐಟಿಐ ಪಾಸಾದವರಿಗೆ ಉದ್ಯೋಗಾವಕಾಶವಿದೆ. ಸರ್ಕಾರಿ ಸಂಸ್ಥೆಯಲ್ಲಿ ಅದರಲ್ಲೂ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ ಬಯಸುವವರು ಈಗಲೇ ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ, ಅರ್ಹತೆ, ಅರ್ಜಿಗೆ ಪ್ರಮುಖ ದಿನಾಂಕ, ಇತರೆ ಮಾಹಿತಿಗಳನ್ನು ಇಲ್ಲಿ ತಿಳಿಸಲಾಗಿದೆ.



ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಗತ್ಯ ಹುದ್ದೆಗಳ ಭರ್ತಿಗಾಗಿ ಎಂಪ್ಲಾಯ್ಮೆಂಟ್‌ ನೋಟಿಫಿಕೇಶನ್‌ ಒಂದನ್ನು ಬಿಡುಗಡೆ ಮಾಡಿದೆ. ಐಟಿಐ ಪಾಸಾದವರಿಗೆ ಹಲವು ವಿಭಾಗಗಳಲ್ಲಿ ಹುದ್ದೆಗಳಿದ್ದು, ಈ ಶಿಕ್ಷಣ ಪಡೆದು ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ, ಅದರಲ್ಲೂ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು, ತರಬೇತಿ ಪಡೆಯಲು ಆಸಕ್ತಿ ಇರುವವರು ತಡಮಾಡದೇ ಈಗಲೇ ಅರ್ಜಿ ಸಲ್ಲಿಸಿ. ಕಂಪ್ಯೂಟರ್ ಆಪರೇಟಿಂಗ್, ಪ್ರೋಗ್ರಾಮಿಂಗ್ ಅಸಿಸ್ಟಂಟ್, ಇಲೆಕ್ಟ್ರಿಕಲ್, ಫಿಟ್ಟರ್, ಪೇಂಟರ್, ಇತರೆ ಹಲವು ವಿಭಾಗಗಳಲ್ಲಿ ಹುದ್ದೆಗಳಿವೆ. ವಿಭಾಗವಾರು ಹುದ್ದೆಗಳ ವಿವರ, ಅರ್ಜಿಗೆ ಕೊನೆ ದಿನಾಂಕ, ಅರ್ಜಿ ವಿಧಾನವನ್ನು ಕೆಳಗಿನಂತೆ ಓದಿಕೊಳ್ಳಿ.

ಹುದ್ದೆಗಳ ವಿವರ

  • ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್: 60
  • ಫಿಟ್ಟರ್ : 20
  • ಟರ್ನರ್ : 08
  • ಮಷಿನಿಸ್ಟ್‌ : 16
  • ವೆಲ್ಡರ್ : 04
  • ಇಲೆಕ್ಟ್ರೀಷಿಯನ್ : 12
  • ಇಲೆಕ್ಟ್ರಾನಿಕ್ಸ್‌ : 04
  • ಕಾರ್ಪೆಂಟರ್ : 02
  • ಬುಕ್‌ ಬೈಂಡರ್ : 01

Main Points

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 

31-05-2024

ಉದ್ಯೋಗ ಅವಧಿ : 

ಒಂದು ವರ್ಷ ತರಬೇತಿ ಇರುತ್ತದೆ.

ಉದ್ಯೋಗ ಸ್ಥಳ : 

ಹೈದರಾಬಾದ್.

ಮಾಸಿಕ ಸಂಭಾವನೆ : 

ರೂ.8000-9000 ಪ್ರತಿ ತಿಂಗಳ ಸ್ಟೈಫಂಡ್.

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ : 

ಐಟಿಐ ಶಿಕ್ಷಣವನ್ನು ಹುದ್ದೆಯ ವಿಭಾಗಗಳಿಗೆ ಸಂಬಂಧಿಸಿದ ಟ್ರೇಡ್‌ಗಳಲ್ಲಿ ಪಡೆದಿರಬೇಕು. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರಗಳನ್ನು ಪಡೆದಿರಬೇಕು.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಡಿಆರ್‌ಡಿಒ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಥವಾ ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಕ್ಲಿಕ್ ಮಾಡಿ ಓದಿರಿ.

ಅರ್ಜಿ ಸಲ್ಲಿಸುವ ವಿಧಾನ

ಡಿಆರ್‌ಡಿಒ ಹುದ್ದೆಗಳಲ್ಲಿ ಆಸಕ್ತಿ ಇರುವವರು ನ್ಯಾಷನಲ್ ಅಪ್ರೆಂಟಿಶಿಪ್ ಟ್ರೈನಿಂಗ್ ಸ್ಕೀಮ್‌ (NATS) ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು.

Notification

DRDO Job Notification 2024

ವೆಬ್‌ಸೈಟ್‌ ವಿಳಾಸ

  •   https://portal.mhrdnats.gov.in ಕ್ಕೆ ಭೇಟಿ ನೀಡಿ.
  • 'Login' ಎಂದಿರುವಲ್ಲಿ ಕ್ಲಿಕ್ ಮಾಡಿ.
  • ತೆರೆದ ವೆಬ್‌ಪೇಜ್‌ನಲ್ಲಿ ಇಮೇಲ್‌ / ಮೊಬೈಲ್ ನಂಬರ್ / ಯೂಸರ್‌ ಐಡಿ ನೀಡಿ, ಪಾಸ್‌ವರ್ಡ್‌ ನಮೂದಿಸಿ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಬೇಕು.
  • ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದವರನ್ನು ಐಟಿಐ ಶಿಕ್ಷಣದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ಆಯ್ಕೆ ಮಾಡಲಾಗುತ್ತದೆ.

Previous Post Next Post