RCB: ಆರ್‌ಸಿಬಿ ತಂಡದಲ್ಲಿದ್ದಾರೆ ಬುಮ್ರಾ ರೀತಿ ಬೌಲಿಂಗ್ ಮಾಡುವ ಕನ್ನಡಿಗ

RCB: ಆರ್‌ಸಿಬಿ ತಂಡದಲ್ಲಿದ್ದಾರೆ ಬುಮ್ರಾ ರೀತಿ ಬೌಲಿಂಗ್ ಮಾಡುವ ಕನ್ನಡಿಗ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಸಮಸ್ಯೆ ಬೌಲಿಂಗ್. ಬಲಿಷ್ಠ ಬ್ಯಾಟಿಂಗ್ ಪಡೆ ಇದ್ದರೂ, ಆರ್‌ಸಿಬಿ ಬಹುತೇಕ ಸೋತಿರುವುದು ಉತ್ತಮ ಬೌಲಿಂಗ್ ಕೊರತೆಯಿಂದ. ಹಲವು ವರ್ಷಗಳಿಂದ ಉತ್ತಮ ಬೌಲರ್ ಹುಡುಕುವಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿಫಲವಾಗಿದೆ.



ಜಸ್ಪ್ರೀತ್ ಬುಮ್ರಾ ಭಾರತ ತಂಡದ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರು. ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುವ ಅವರು, ತಂಡದ ಪ್ರಮುಖ ಬೌಲಿಂಗ್ ಅಸ್ತ್ರ. ಅವರ ಬೌಲಿಂಗ್ ಶೈಲಿಯೇ ವಿಭಿನ್ನ. ಅಂತ ವಿಭಿನ್ನ ಬೌಲಿಂಗ್ ಶೈಲಿ ಹೊಂದಿರುವ ಬೌಲರ್ ಒಬ್ಬರು ಆರ್‌ಸಿಬಿ ತಂಡದಲ್ಲಿದ್ದಾರೆ

ಹೌದು, ಬುಮ್ರಾರಂತೆಯೇ ಬೌಲಿಂಗ್ ಶೈಲಿಯನ್ನು ಹೊಂದಿರುವ ಬೌಲರ್ ಆರ್‌ಸಿಬಿ ತಂಡದಲ್ಲಿದ್ದಾರೆ. ಆರ್‌ಸಿಬಿಯ ನೆಟ್‌ ಬೌಲರ್ ಮಹೇಶ್ ಕುಮಾರ್ ಬುಮ್ರಾ ರೀತಿಯೇ ಬೌಲಿಂಗ್ ಮಾಡುತ್ತಿದ್ದು, ಸದ್ಯ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಕನ್ನಡಿಗ ಮಹೇಶ್ ಕುಮಾರ್

2022 ರಲ್ಲಿ ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದ ಮಹೇಶ್ ಕುಮಾರ್ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಬುಮ್ರಾ ಯಾವ ರೀತಿ ಬೌಲಿಂಗ್ ಮಾಡುತ್ತಾರೋ ಅದೇ ಶೈಲಿಯಲ್ಲಿ ಬೌಲಿಂಗ್ ಮಾಡುವುದನ್ನು ನೋಡಬಹುದು. ಅನೇಕರು ಮುಖೇಶ್ ಕುಮಾರ್‌ಗೆ ಉಜ್ವಲ ಭವಿಷ್ಯ ಹೊಂದಲಿ ಎಂದು ಆಶಿಸಿದ್ದಾರೆ.

ಮಹೇಶ್ ಕುಮಾರ್ ಕರ್ನಾಟಕದ ಕ್ರಿಕೆಟಿಗ. 2017 ರಲ್ಲಿ ಟೀಮ್ ಇಂಡಿಯಾ ನೆಟ್ಸ್‌ನಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಿದರು. ಇವರ ಬೌಲಿಂಗ್ ನೋಡಿ ಭಾರತ ತಂಡದ ಆಟಗಾರರು ಕೂಡ ಮೆಚ್ಚಿಕೊಂಡಿದ್ದರು, ಅದಾದ ಬಳಿಕ ಅವರು ಭಾರತ ತಂಡದ ನೆಟ್‌ ಬೌಲರ್ ಆಗಿದ್ದರು. ನಂತರ 2020ರಲ್ಲಿ ಆರ್ ಸಿಬಿ ಬೌಲಿಂಗ್ ಕೋಚ್ ಆಗಿದ್ದ ಆಶಿಶ್ ನೆಹ್ರಾ ಮಹೇಶ್ ಕುಮಾರ್ ಅವರನ್ನು ನೆಟ್‌ಗೆ ಆಹ್ವಾನಿಸಿ ಅವಕಾಶ ನೀಡಿದರು.

ನಿನ್ನ ಹಾಗೆ ಇರು ಎಂದಿದ್ದ ಕೊಹ್ಲಿ

ಆರ್ ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮಹೇಶ್ ಕುಮಾರ್ ಅವರಿಗೆ ಸಲಹೆ ನೀಡಿದ್ದರು. ನಿಮ್ಮ ಸಾಮರ್ಥ್ಯವನ್ನು ಮಾತ್ರ ನೆಚ್ಚಿಕೊಳ್ಳಿ, ಬೇರೆ ಯಾರನ್ನೂ ಅನುಕರಿಸದಂತೆ ಹೇಳಿದ್ದರು.

ಮಹೇಶ್ ಕುಮಾರ್ ಇಂಜಿನಿಯರಿಂಗ್ ಓದಿದ್ದರೂ ಸಂಪೂರ್ಣವಾಗಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ಅವರು, ಈ ವರ್ಷ ಮತ್ತೆ ಆರ್ ಸಿಬಿ ತಂಡಕ್ಕೆ ಮರಳಿದ್ದಾರೆ.

ಕನ್ನಡಿಗ ವಿಜಯ್‌ಕುಮಾರ್ ವೈಶಾಖ್ ಕೂಡ ನೆಟ್ ಬೌಲರ್ ಆಗಿದ್ದವರು ಬಳಿಕ ತಂಡವನ್ನು ಸೇರಿಕೊಂಡಿದ್ದರು. ಮಹೇಶ್ ಕುಮಾರ್ ಕೂಡ ಹಾಗೆ ಅವಕಾಶ ಪಡೆದು ಯಶಸ್ಸು ಪಡೆಯಲಿ ಎಂದು ಅಭಿಮಾನಿಗಳು ಕೋರಿದ್ದಾರೆ.


Post a Comment

Previous Post Next Post
CLOSE ADS
CLOSE ADS
×