2500 BMTC ಕಂಡಕ್ಟರ್ ಹುದ್ದೆಗಳ ಅರ್ಜಿಗೆ ಲಿಂಕ್‌ ಬಿಡುಗಡೆ: ಅಪ್ಲಿಕೇಶನ್ ವಿಧಾನ, ಶುಲ್ಕ ಮಾಹಿತಿ ಇಲ್ಲಿದೆ.

2500 BMTC Conductor Application Link: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರಡಿಸಿದ್ದ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧ ಇದೀಗ ಆನ್‌ಲೈನ್‌ ಅರ್ಜಿಗೆ ಲಿಂಕ್‌ ಅನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತರು ಇಂದಿನಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ವಿಧಾನ, ಅರ್ಜಿ ಶುಲ್ಕ ಮಾಹಿತಿ, ಇತರೆ ಮಾಹಿತಿಗಳು ಇಲ್ಲಿವೆ.



ದ್ವಿತೀಯ ಪಿಯುಸಿ ಪಾಸಾದವರು ಸರ್ಕಾರಿ ಹುದ್ದೆಗಾಗಿ ಮುನ್ನೋಡುತ್ತಿದ್ದಲ್ಲಿ, ಅದರಲ್ಲೂ ಬಿಎಂಟಿಸಿ ಹುದ್ದೆ ಪಡೆಯಬೇಕು, ಕಂಡಕ್ಟರ್ ಹುದ್ದೆಗೆ ಸೇರಬೇಕು ಎಂದುಕೊಂಡಿದ್ದಲ್ಲಿ, ನಿಮಗಿದೋ ಭರ್ಜರಿ ಗುಡ್‌ನ್ಯೂಸ್‌. ಬಿಎಂಟಿಸಿ'ಯ ಬರೋಬರಿ 2500 ಕಂಡಕ್ಟರ್‌ ಹುದ್ದೆಗಳ ಭರ್ತಿಗೆ ಕೆಇಎ ಇತ್ತೀಚೆಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಇದೀಗ ಸದರಿ ಹುದ್ದೆಗಳಿಗೆ ಅರ್ಜಿ ಹಾಕಲು ಆನ್‌ಲೈನ್‌ ಲಿಂಕ್‌ ಅನ್ನು ಬಿಡುಗಡೆ ಮಾಡಲಾಗಿದೆ. ಅರ್ಜಿ ವಿಧಾನ, ಶುಲ್ಕ ವಿವರ, ಇತರೆ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಿಕ್ಕುಳಿದ ವೃಂದದಲ್ಲಿ 2286 ನಿರ್ವಾಹಕ ಹುದ್ದೆ, ಸ್ಥಳೀಯ ವೃಂದದಲ್ಲಿ 214 ( ಹಿಂಬಾಕಿ 15 ಹುದ್ದೆ ಸೇರಿ) ನಿರ್ವಾಹಕ ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೆಇಎ ನಡೆಸುತ್ತಿದೆ.

ಉದ್ಯೋಗ ಸಂಸ್ಥೆ : 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಹುದ್ದೆ ಹೆಸರು : 

ನಿರ್ವಾಹಕ (ಕಂಡಕ್ಟರ್ )
ಒಟ್ಟು ಹುದ್ದೆಗಳ ಸಂಖ್ಯೆ : 
2500.

ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಅರ್ಜಿ ಹಾಕುವ ವಿಧಾನ


- ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು Apply Online ವೆಬ್‌ ವಿಳಾಸಕ್ಕೆ ಭೇಟಿ ನೀಡಿ.


- ತೆರೆದ ವೆಬ್‌ಸೈಟ್‌ನಲ್ಲಿ HK / NHK ಹುದ್ದೆಗಳ ಅರ್ಜಿಗೆ ಪ್ರತ್ಯೇಕ ಲಿಂಕ್ ಇರುತ್ತವೆ.


- ನೀವು ಯಾವ ವೃಂದದ ಹುದ್ದೆಗೆ ಅರ್ಜಿ ಹಾಕಲು ಬಯಸುವಿರೋ ಸದರಿ ಲಿಂಕ್ ಕ್ಲಿಕ್ ಮಾಡಿ.


- ಕೆಇಎ'ಯ ಮತ್ತೊಂದು ವೆಬ್‌ಸೈಟ್‌ ತೆರೆಯುತ್ತದೆ.


- ಇಲ್ಲಿ ಮೊದಲ ಬಾರಿಗೆ ಕೆಇಎ ಹುದ್ದೆಗೆ ಅರ್ಜಿ ಹಾಕುವವರು 'New Applicant Registration' ಎಂದಿರುವಲ್ಲಿ ಕ್ಲಿಕ್ ಮಾಡಿ.


- ಕೇಳಲಾದ ಮಾಹಿತಿ ನೀಡಿ ಅರ್ಜಿ ರಿಜಿಸ್ಟ್ರೇಷನ್‌ ಪಡೆಯಿರಿ.


- ರಿಜಿಸ್ಟ್ರೇಷನ್‌ ಪಡೆದಿರುವವರು ರಿಜಿಸ್ಟ್ರೇಷನ್ ಸಂಖ್ಯೆ, ಹೆಸರಿನ ಮೊದಲ 5 ಅಕ್ಷರ ನೀಡಿ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಿ.

ಅರ್ಜಿ ಶುಲ್ಕ ವಿವರ

ಜೆನೆರಲ್ ಕೆಟಗರಿ / ಇತರೆ ಹಿಂದುಳಿದ ಪ್ರವರ್ಗಗಳಿಗೆ ಅರ್ಜಿ ಶುಲ್ಕ ರೂ.750.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ ರೂ.500.

ಆನ್‌ಲೈನ್ ಮುಖಾಂತರ ಅರ್ಜಿ ಸ್ವೀಕಾರ ಮಾಡುವ ಕೊನೆ ದಿನಾಂಕ: 

18-05-2024
ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ : 19-05-2024

ಅಪ್ಲಿಕೇಶನ್ ಸ್ವೀಕರಿಸಲು ನಿಗದಿಪಡಿಸಿದ ಕೊನೆ ದಿನಾಂಕಕ್ಕೆ 18-05-2024 ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು ವರ್ಗಾವಾರು ತಿಳಿಯಲು ಕೆಳಗಿನ ಡೀಟೇಲ್ಡ್‌ ಲೇಖನದ ಲಿಂಕ್ ಕ್ಲಿಕ್ ಮಾಡಿ ಓದಿರಿ.

ಬಿಎಂಟಿಸಿ ನಿರ್ವಾಹಕ ಹುದ್ದೆಗೆ ವೇತನ ಶ್ರೇಣಿ : 

ರೂ.18660-25300.

ಬಿಎಂಟಿಸಿ ಕಂಡಕ್ಟರ್ ಪರೀಕ್ಷಾ ವಿಧಾನ

ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ಎರಡು ಪತ್ರಿಕೆಗಳಿಗೆ ತಲಾ 100 ಗಳಿಗೆ ನಡೆಸಿ, ನಂತರ ಇದರಲ್ಲಿನ ಶೇಕಡ.75 ಅಂಕಗಳು ಹಾಗೂ ಶೈಕ್ಷಣಿಕ ಅರ್ಹತೆಯ ಶೇಕಡ.25 ಅಂಕಗಳನ್ನು ಸೇರಿಸಿ ಮೆರಿಟ್ ಆಧಾರದ ಮೇಲೆ 1:5 ಅನುಪಾತದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
Previous Post Next Post