Gruha Jyothi: ಗೃಹಜ್ಯೋತಿ ಕರೆಂಟ್ 200 ಯುನಿಟ್ ದಾಟದಂತೆ ಮಾಡೋದು ಹೇಗೆ? ಇಲ್ಲಿದೆ ಟ್ರಿಕ್ಸ್

Gruha Jyothi: ಗೃಹಜ್ಯೋತಿ ಕರೆಂಟ್ 200 ಯುನಿಟ್ ದಾಟದಂತೆ ಮಾಡೋದು ಹೇಗೆ? ಇಲ್ಲಿದೆ ಟ್ರಿಕ್ಸ್

ರಾಜ್ಯ ಸರಕಾರದಿಂದ ಗೃಹಜ್ಯೋತಿ ಸೌಲಭ್ಯ ನೀಡಲಾಗುತ್ತಿದ್ದು ಈ ಗೃಹಜ್ಯೋತಿ (Gruha Jyothi) ಮೂಲಕ ಅನೇಕರು ಉಚಿತ ವಿದ್ಯುತ್ (Free Electricity) ಸೌಲಭ್ಯವನ್ನು ಸದ್ವಿನಿಯೋಗ ಪಡಿಸಿಕೊಳ್ಳುತ್ತಿದ್ದಾರೆ‌. ಆದರೆ ಕೆಲವರಿಗೆ ಇದರ ಸಾಮಾನ್ಯ ನಿಯಮ ಪಾಲಿಸಲು ಸಾಧ್ಯವಾಗದೆ ಪೂರ್ತಿ ಮೊತ್ತವನ್ನು ಕಟ್ಟಲೇ ಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಗೃಹಜ್ಯೋತಿ ಸೌಲಭ್ಯ ಪಡೆಯಲು 200ಯುನಿಟ್ ತನಕ ಮಾತ್ರ ವಿನಾಯಿತಿ ನೀಡಲಾಗಿದ್ದು 200 ಯುನಿಟ್ ಮೀರಿದರೆ ಪೂರ್ತಿ ಮೊತ್ತವನ್ನು ಸಂಬಂಧ ಪಟ್ಟವರೇ ನೀಡಬೇಕು ಎಂಬ ನಿಯಮ ಕೂಡ ಇದೆ.



ಗೃಹಜ್ಯೋತಿ (Gruha Jyothi) ಸೌಲಭ್ಯ 200 ಯನಿಟ್ ಮೀರದಂತೆ ವಿದ್ಯುತ್ ಖರ್ಚು ಮಾಡಬಹುದು. ಯುನಿಟ್ ನಲ್ಲಿ ವಿದ್ಯುತ್ ಲೆಕ್ಕಾಚಾರ ಯಾವ ರೀತಿ ಇರಲಿದೆ. ವಿದ್ಯುತ್ ಅನ್ನು 200 ಯುನಿಟ್ ಒಳಗೆ ಖರ್ಚು ಮಾಡುವುದು ಹೇಗೆ ಎಂಬ ಅನೇಕ ವಿಚಾರದ ಬಗ್ಗೆ ಸಂಪೂರ್ಣ ವಿವರಗಳನ್ನು ನಾವು ಈ ಲೇಖನದ ಮೂಲಕ ನಿಮಗೆ ನೀಡಲಿದ್ದೇವೆ. ಈ ಮಾಹಿತಿಯನ್ನು ನೀವು ತಿಳಿದು 200 ಯುನಿಟ್ ಒಳಗೆ ಕರೆಂಟ್ ಬಳಕೆ ಮಾಡಬಹುದು.

1 Unit ಎಂದರೆ ಎಷ್ಟು?

ಒಂದು ಯುನಿಟ್ ವಿದ್ಯುತ್ ಎಂದರೆ 1000 Watt Hour ಎಂದು ಆಗಲಿದೆ. ಹಾಗೆಂದು ಹೇಳಿದರೆ 1kwh (Kilo Watt Hour ಎಂದು ಹೇಳಲಾಗುತ್ತದೆ). ಸುಲಭವಾಗಿ ಅರ್ಥೈಸುವುದಾದರೆ 100 Watt ನ 10 ಬಲ್ಬ್ ಅನ್ನು 1ಗಂಟೆ ಉರಿಸಿದರೆ ಎಷ್ಟು ಕರೆಂಟ್ ಖರ್ಚಾಗಲಿದೆಯೋ ಅದು 1 ಯುನಿಟ್ ಎಂದು ಆಗಲಿದೆ. ಹಾಗಾಗಿ 1ಗಂಟೆ ಕರೆಂಟ್ ಗೆ 1000 Watt Hour ಎಂದಾಗಿದ್ದು ಅದೇ 200 ಯುನಿಟ್ ಎಂದರೆ 2,00,000 ವ್ಯಾಟ್ Hour ಎಂದು ಆಗಲಿದೆ.

ಅಂದರೆ 100 ವ್ಯಾಟ್ ನ 2000 ಬಲ್ಬ್ ಅನ್ನು ಒಂದು ಗಂಟೆ ಉರಿಸಿದರೆ ಎಷ್ಟು ಕರೆಂಟ್ ಖರ್ಚಾಗಲಿದೆಯೊ ಅದುವೆ 200 ವ್ಯಾಟ್ ಆಗಲಿದೆ. ಅದೇ ರೀತಿ ಮೀಟರ್ ಬೋರ್ಡ್ ನಲ್ಲಿ ಒಂದು ಬ್ಲಿಂಕ್ ಲೈಟ್ ಇದ್ದು ಅದು 3200 ಬಾರಿ ಬ್ಲಿಂಕ್ ಆದರೆ 1kwh ಎಂಬುದನ್ನು ತಿಳಿಸಲಿದೆ.

200ಯುನಿಟ್ ಗೆ ಎಷ್ಟು ಮೊತ್ತ ಆಗಲಿದೆ:

ಗೃಹಜ್ಯೋತಿ (Gruha Jyothi) 200 ಯುನಿಟ್ ಕರೆಂಟ್ ಬಳಕೆ ಆದರೆ 1500 ರೂಪಾಯಿ ಬಿಲ್ ಬರುತ್ತದೆ. ಹಾಗಾಗಿ ನೀವು ಈ ಮೊತ್ತ ಮೀರದಂತೆ ಕರೆಂಟ್ ಚೆಕ್ ಮಾಡಿಕೊಳ್ಳಬೇಕು. ಮೊದಲಿಗೆ ಕಳೆದ ತಿಂಗಳ ಬಿಲ್ ಇಟ್ಟುಕೊಳ್ಳಿ ಬಳಿಕ ನಿಮ್ಮ ಡಿಜಿಟಲ್ ಮೀಟರ್ ಬೋರ್ಡ್ ನಲ್ಲಿ ಕಪ್ಪು ಬಟನ್ ಇರಲಿದ್ದು ಅದರಲ್ಲಿ ಸಂಖ್ಯೆ ಕಾಣಲಿದೆ ಉದಾಹರಣೆಗೆ 367.43 ಎಂದು ಇದ್ದರೆ ಅದನ್ನು ನಿಮ್ಮ ಕಳೆದ ತಿಂಗಳ ಬಿಲ್ ನಲ್ಲಿ ರಿಡಿಂಗ್ ಬಂದಿದ್ದಕ್ಕೆ ನೀವು ಕಳೆದರೆ ಎಷ್ಟು ಯುನಿಟ್ ಬಳಕೆ ಮಾಡಿದ್ದೀರಿ ಎಂಬುದ ತಿಳಿಯಲಿದೆ.

ಹೀಗೆ ಮಾಡಿ:

ಮೀಟರ್ ರೀಡಿಂಗ್ ಅತಿಯಾಗಿ ಹೋದರೆ ಗೃಹಜ್ಯೋತಿ ಸೌಲಭ್ಯ ನಿಮಗೆ ಸಿಗುವುದಿಲ್ಲ ಹಾಗಾಗಿ ವಾರಕ್ಕೊಮ್ಮೆ ಅಥವಾ 15ದಿನಕ್ಕೊಮ್ಮೆ ಮೀಟರ್ ರೀಡಿಂಗ್ ಅನ್ನು ಚೆಕ್ ಮಾಡುತ್ತಿರಬೇಕು. ಆಗ ನಿಮಗೆ ಜಾಸ್ತಿ ಮೀಟರ್ ರೀಡಿಂಗ್ ಬರ್ತಿದೆ ಎಂದರೆ ಕಡಿಮೆ ಕರೆಂಟ್ ಖರ್ಚು ಮಾಡಿ ಉಳಿಸಬಹುದು. ಹೀಗೆ ಅನಗತ್ಯ ಎನಿಸಿದ್ದಲ್ಲಿ ಕರೆಂಟ್ ಬಳಕೆ ಮಾಡದೇ ಇದ್ದರೆ ನಿಮಗೆ ಕರೆಂಟ್ ಉಳಿತಾಯ ಕೂಡ ಆಗಲಿದೆ.


Post a Comment

Previous Post Next Post
CLOSE ADS
CLOSE ADS
×