7ನೇ ಕಂತಿನ ಗೃಹಲಕ್ಷ್ಮಿ ಹಣ ಈ ಜಿಲ್ಲೆಗಳಿಗೆ ಬಿಡುಗಡೆ ಆಗಿದೆ : ನಿಮ್ಮ ಜಿಲ್ಲೆ ಹೆಸರು ಇದೆಯಾ ನೋಡಿ

7ನೇ ಕಂತಿನ ಗೃಹಲಕ್ಷ್ಮಿ ಹಣ ಈ ಜಿಲ್ಲೆಗಳಿಗೆ ಬಿಡುಗಡೆ ಆಗಿದೆ : ನಿಮ್ಮ ಜಿಲ್ಲೆ ಹೆಸರು ಇದೆಯಾ ನೋಡಿ

ನಮಸ್ಕಾರ ಸ್ನೇಹಿತರೆ ಕಾಂಗ್ರೆಸ್ ಸರ್ಕಾರವು ಹೋದ ಬಾರಿ ನಡೆದಂತಹ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಪರವಾದ ಯೋಜನೆಗಳನ್ನು ಹೆಚ್ಚು ಜಾರಿಗೆ ತಂದಿತ್ತು ಇದಕ್ಕಾಗಿ ಪ್ರತಿಕ್ರಿಯೆ ಕೂಡ ಮಹಿಳೆಯರದ್ದು ಉತ್ತಮವಾಗಿತ್ತು ಎಂದು ಹೇಳಬಹುದು ಕೇಂದ್ರ ಸರ್ಕಾರದ ಚುನಾವಣೆ ಇನ್ನೇನು ಈ ಬಾರಿಯಲ್ಲಿ ನಡೆಯಲಿದ್ದು ಪಕ್ಷಗಳ ಪ್ರಣಾಳಿಕೆಯು ಕೂಡ ಪ್ರಾರಂಭವಾಗಿದೆ.



ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರಿಗಾಗಿ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಮಹಿಳೆಯರಿಗಾಗಿ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಮಹಿಳೆಯರು ಉಚಿತ ಬಸ್ ನಲ್ಲಿ ಈಗಾಗಲೇ ಪ್ರಯಾಣ ಮಾಡುತ್ತಿದ್ದಾರೆ ಅದೇ ರೀತಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿದ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬಿಡುಗಡೆಯಾಗಿದೆ.

ಏಳನೇ ಕಂತಿನ ಹಣ ಸರ್ಕಾರದಿಂದ ಜಮಾ :

ನೊಂದಣಿ ಮಾಡಿದ ಕೆಲವು ಮಹಿಳೆಯರಿಗೆ ಈಗಾಗಲೇ ರಾಜ್ಯ ಸರ್ಕಾರದಿಂದ ಆರು ಕoತಿನ ಹಣ ಬಿಡುಗಡೆಯಾಗಿದೆ ಇನ್ನೂ ಕೆಲವು ಮಹಿಳೆಯರಿಗೆ ನೋಂದಣಿ ಮಾಡಿದ್ದರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವುದಿಲ್ಲ.

ಅಲ್ಲದೆ ಶೀಘ್ರವಾಗಿ ಪೆಂಡಿಂಗ್ ಇರುವ ಹಣವನ್ನು ಕೂಡ ಸರ್ಕಾರ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ ಇನ್ನೇನು ಇದೀಗ 7ನೇ ಕಂತಿನ ಹಣವನ್ನು ಕೂಡ ಸರ್ಕಾರದಿಂದ ಬಿಡುಗಡೆಯಾಗಲಿದ್ದು , ಈ ಬಗ್ಗೆ ಕೆಲವು ಜಿಲ್ಲೆಗಳಿಗೆ ಅಪ್ಡೇಟ್ ಮಾಹಿತಿಯೂ ಕೂಡ ಬಂದಿರುವ ಪ್ರಕಾರ ಹಂತ ಹಂತವಾಗಿ ಹಣ ಜಮಾ ಆಗುತ್ತಿದೆ.

ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ :

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿದಂತಹ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ ಹಣ ಜಮಾ ಆಗಲಿದ್ದು ಇದರಲ್ಲಿ ಇದೀಗ ಕೆಲವೊಂದು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದೆ. ಅದರಂತೆ ಯಾವ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದೆ ಎಂಬುದನ್ನು ನೋಡುವುದಾದರೆ,

ಧಾರವಾಡ.

ಶಿವಮೊಗ್ಗ.

ವಿಜಯಪುರ.

ತುಮಕೂರು.

ಬೆಳಗಾವಿ.

ಬೆಂಗಳೂರು ನಗರ.

ರಾಮನಗರ.

ಬೆಂಗಳೂರು ಗ್ರಾಮಾಂತರ.

ದಕ್ಷಿಣ ಕನ್ನಡ.

ಕೊಪ್ಪಳ.

ಹಾವೇರಿ.

ತುಮಕೂರು.

ಉತ್ತರ ಕನ್ನಡ.

ಗದಗ.

ರಾಯಚೂರು.

ಬೀದರ್.

ಕೋಲಾರ.

ವಿಜಯನಗರ.

ಚಿತ್ರದುರ್ಗ.

ಬಳ್ಳಾರಿ.

ಮೈಸೂರು.

ಯಾದಗಿರಿ.

ಹಾಸನ.

ಹೀಗೆ ಇಷ್ಟು ಜಿಲ್ಲೆಗಳಿಗೆ ಮೊದಲ ಹಂತದಲ್ಲಿ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದೆ.

ಹಣ ಜಮಾ ಆಗಲು ಈ ಕೆಲಸ ಮಾಡಿ :

ಗೃಹಲಕ್ಷ್ಮಿ ಯೋಜನೆಯ ಹಣ ಇದುವರೆಗೂ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದೇ ಇದ್ದರೆ ಈ ಕೆಲಸ ಮಾಡುವುದರ ಮೂಲಕ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಆಧಾರ್ ಜೋಡಣೆಯನ್ನು ಹೆಚ್ಚಿನ ಮಹಿಳೆಯರು ಮಾಡಿಸಿರುವುದಿಲ್ಲ ಅದರ ಜೊತೆಗೆ ಬ್ಯಾಂಕಿಂಗ್ ಮಾಹಿತಿ ಸಮಸ್ಯೆ ರೇಷನ್ ಕಾರ್ಡ್ ಅಪ್ಡೇಟ್ ಈಕೆ ವೈ ಸಿ ಅಪ್ಡೇಟ್ ಸೇರಿದಂತೆ ಹಲವಾರು ಸಮಸ್ಯೆಗಳಿಂದಾಗಿ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿಲ್ಲ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಈ ಬಗ್ಗೆ ಮಾಹಿತಿ ನೀಡಿದ್ದು ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಕೂಡ ಸೂಚನೆಯನ್ನು ನೀಡಿದ್ದಾರೆ.

ಒಟ್ಟಾರೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಸುಮಾರು 22 ಜಿಲ್ಲೆಗಳಿಗೆ ವರ್ಗಾವಣೆಯಾಗಿದ್ದು ಇನ್ನೇನು ಕೆಲವೇ ಜಿಲ್ಲೆಗಳಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಯಾಗಬೇಕಿದೆ ಸರ್ಕಾರವು ಮಾರ್ಚ್ 31ರ ಒಳಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ

ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಲು ತಿಳಿಸಿ ಧನ್ಯವಾದಗಳು.

Post a Comment

Previous Post Next Post
CLOSE ADS
CLOSE ADS
×